logo
ಕನ್ನಡ ಸುದ್ದಿ  /  ಫೋಟೋ ಗ್ಯಾಲರಿ  /  ಪಾರ್ವತಿ ದೇವಿ ಮಹಾಗೌರಿಯಾಗಲು ಮಿಂದೆದ್ದ ಪುಣ್ಯನದಿ ಬಗ್ಗೆ ತಿಳ್ಕೊಂಡಿದ್ದೀರಾ... ನವರಾತ್ರಿ 8ನೇ ದಿನ ಪೂಜೆಗೆ ಮೊದಲು ತಿಳ್ಕೊಳ್ಳಿ..

ಪಾರ್ವತಿ ದೇವಿ ಮಹಾಗೌರಿಯಾಗಲು ಮಿಂದೆದ್ದ ಪುಣ್ಯನದಿ ಬಗ್ಗೆ ತಿಳ್ಕೊಂಡಿದ್ದೀರಾ... ನವರಾತ್ರಿ 8ನೇ ದಿನ ಪೂಜೆಗೆ ಮೊದಲು ತಿಳ್ಕೊಳ್ಳಿ..

Sep 28, 2024 12:08 PM IST

ಪಾರ್ವತಿ ದೇವಿಯ ಎಂಟನೇ ಅವತಾರ ಮಹಾಗೌರಿ. ನವರಾತ್ರಿಯ 8ನೇ ದಿನ ಪೂಜಿಸಲ್ಪಡುವ ದೇವಿ. ಒಂಬತ್ತು ರೂಪಗಳು ಮತ್ತು ಹತ್ತು ಮಹಾವಿದ್ಯೆಗಳು ಆದಿಶಕ್ತಿಯ ಅಂಶಗಳೆಂದು ದೇವಿ ಭಾಗವತ ಪುರಾಣ ವಿವರಿಸುತ್ತದೆ. ಮಹಾದೇವನ ಪತ್ನಿಯಾಗಿ ಮಹಾಗೌರಿ ಜೊತೆಗಿರುತ್ತಾಳೆ. ಪಾರ್ವತಿ ದೇವಿ ಮಹಾಗೌರಿಯಾಗುವುದಕ್ಕಾಗಿ ಮಿಂದೆದ್ದ ಪುಣ್ಯನದಿ ಬಗ್ಗೆ ಮತ್ತು ಇನ್ನಷ್ಟು ವಿಶೇಷಗಳನ್ನು ತಿಳಿಯೋಣ.

ನವರಾತ್ರಿಯ ಎಂಟನೇ ದಿನದಂದು ಮಹಾಗೌರಿಯನ್ನು ಪೂಜಿಸಲಾಗುತ್ತದೆ. ಕಾಳರಾತ್ರಿ ದೇವಿಗಿಂತ ಭಿನ್ನವಾಗಿ ಮಹಾಗೌರಿ ದೇವಿಯು ಶಾಂತ ಸ್ವಭಾವದಳು. ಭಕ್ತರಿಗೆ ಅಭಯದಾಯಿನಿಯಾಗಿ ಶಾಂತದೇವಿಯಾಗಿ ಕಾಣಿಸಿಕೊಂಡು ಪೂಜಿಸಲ್ಪಡುತ್ತಿದ್ದಾಳೆ. 
(1 / 10)

ಮಹಾಗೌರಿ ಚತುರ್ಭಜ ಹೊಂದಿದವಳು. ಬಲಗೈ ತನ್ನ ಭಕ್ತರಿಗೆ ರಕ್ಷಣೆ ನೀಡಲು ಅಭಯ ಮುದ್ರೆಯಲ್ಲಿದ್ದರೆ ಆಕೆಯ ಇನ್ನೊಂದು ಬಲಗೈ ತ್ರಿಶೂಲವನ್ನು ಹಿಡಿದುಕೊಂಡಿದೆ. ಆಕೆಯ ಎಡಗೈಯಲ್ಲಿ ಶಿವನ ಸಂಕೇತವಾದ ಡಮರು ಇದೆ. ಕೆಳಗಿನ ಎಡಗೈ ತನ್ನ ಭಕ್ತರಿಗೆ ಆಶೀರ್ವಾದವನ್ನು ನೀಡುತ್ತದೆ. 
(2 / 10)

ತನ್ನ ಕಠಿಣ ತಪಸ್ಸಿನಿಂದ, ಅವಳು ಗೌರ ವರ್ಣವನ್ನು ಅಂದರೆ ಸುಂದರ ಮೈಬಣ್ಣ ಪಡೆದಳು. ತನ್ನ ಲೌಕಿಕ ರೂಪದಲ್ಲಿ, ಮಹಾಗೌರಿ ದೇವಿಯು ತುಂಬಾ ಪ್ರಕಾಶಮಾನವಾದ, ಶಾಂತ, ಬಿಳಿ ಮೈಬಣ್ಣ ಮತ್ತು ಬಿಳಿ ಬಟ್ಟೆಗಳನ್ನು ಧರಿಸಿದ್ದಾಳೆ. ಅವಳು ಹಾಡುಗಾರಿಕೆ ಮತ್ತು ಸಂಗೀತವನ್ನು ಇಷ್ಟಪಡುತ್ತಾಳೆ. ಬಿಳಿ ವೃಷಭ ಮಹಾಗೌರಿಯ ವಾಹನ. 
(3 / 10)

ಶಿವನನ್ನು ಸಂಗಾತಿಯನ್ನಾಗಿ ಪಡೆಯುವುದಕ್ಕಾಗಿ ಪಾರ್ವತಿ ತಪಸ್ಸು ಮಾಡಿದಾಗ, ಆ ಕಠಿಣ ತಪಸ್ಸಿಗೆ ಮೆಚ್ಚಿ ಶಿವನು ಪ್ರತ್ಯಕ್ಷನಾಗುತ್ತಾನೆ. ಹಲವಾರು ವರ್ಷದ ತಪಸ್ಸಿನ ಕಾರಣ ಆಕೆಯ ಶರೀರ ಮಸುಕಾಗಿತ್ತು. ಆಕೆಯ ಮೇಲೆ ಶಿವನು ಗಂಗಾ ಜಲವನ್ನು ಸುರಿದ ಕಾರಣ ಆಕೆಯ ಶರೀರಕ್ಕೆ ಹೊಸ ಹೊಳಪು ಸಿಕ್ಕು ಗೌರ ವರ್ಣ ಪಡೆದಳು. ಆಕೆಯನ್ನು ಮಹಾಗೌರಿ ಎಂದು ಹೆಸರಿಸಿದ್ದಾಗಿ ಐತಿಹ್ಯವಿದೆ. 
(4 / 10)

ಇನ್ನೊಂದು ಪುರಾಣ ಕಥೆಯ ಪ್ರಕಾರ, ಶುಂಭ ಮತ್ತು ನಿಶುಂಭ ಎಂಬ ರಾಕ್ಷಸರನ್ನು ಪಾರ್ವತಿ ದೇವಿಯ ಕನ್ಯಾ, ಅವಿವಾಹಿತ ರೂಪದಿಂದ ಸಾಧ್ಯ ಎಂದು ದೇವತೆಗಳು ನಿರ್ಧರಿಸಿದ್ದರು. ಬ್ರಹ್ಮ ದೇವನ ಸಲಹೆ ಪ್ರಕಾರ ಶಿವನು ವಿನಾ ಕಾರಣ ಪಾರ್ವತಿ ದೇವಿಯನ್ನು "ಕಾಳಿ" ಎಂದು ಪದೇಪದೆ ಅಪಹಾಸ್ಯ ಮಾಡಿದ್ದ. ಇದರಿಂದ ಕೋಪಗೊಂಡ ಪಾರ್ವತಿ ಚಿನ್ನದ ಮೈಬಣ್ಣ ಪಡೆಯಲು ಬ್ರಹ್ಮದೇವನ ತಪಸ್ಸು ಮಾಡಿದಳು.
(5 / 10)

ಕಠಿಣ ತಪಸ್ಸಿನ ಫಲವಾಗಿ ಬ್ರಹ್ಮದೇವನು ಪಾರ್ವತಿ ದೇವಿ ಎದುರು ಪ್ರತ್ಯಕ್ಷನಾಗಿ ಏನು ಎಂದು ವಿಚಾರಿಸಿದ. ಅದಕ್ಕೆ ಪಾರ್ವತಿ ದೇವಿಯು ತನಗೆ ಚಿನ್ನದ ಮೈಬಣ್ಣ ನೀಡುವಂತೆ ಕೋರುತ್ತಾಳೆ. ಆದರೆ, ಬ್ರಹ್ಮದೇವನು ಆ ವರ ನೀಡಲು ಅಡ್ಡಿ ಇದ್ದು, ಅದನ್ನು ನಿವಾರಿಸುವಂತೆ ಕೋರುತ್ತಾನೆ. 
(6 / 10)

ಶುಂಭ- ನಿಶುಂಭ ಎಂಬ ರಾಕ್ಷಸರ ಸಂಹಾರ ಆಗಬೇಕು ಎಂಬುದನ್ನು ಬ್ರಹ್ಮ ದೇವನು ಪಾರ್ವತಿ ದೇವಿಗೆ ವಿವರಿಸಿದ. ಚಿನ್ನದ ಮೈ ಬಣ್ಣ ಪಡೆಯುವ ಮೊದಲು ಆ ಕೆಲಸ ಮುಗಿಸುವುದಕ್ಕೆ ಪಾರ್ವತಿ ದೇವಿ ಹೊರಟಳು.
(7 / 10)

ಇದರಂತೆ ಆಕೆ ಪವಿತ್ರ ಗಂಗಾನದಿಗೆ ಹೋಗಿ ಪುಣ್ಯ ಸ್ನಾನ ಮಾಡಿದಳು ಅಲ್ಲಿ ಮಿಂದೆದ್ದು ಬಂದ ಪಾರ್ವತಿಯ ಕಪ್ಪು ವರ್ಣ ಹೋಗಿ ಚಿನ್ನದ ಬಣ್ಣ ಬಂದಿತ್ತು. ಬಿಳಿ ಉಡುಪು ಧರಿಸಿ ಗೌರವರ್ಣದೊಂದಿಗೆ ಕಂಗೊಳಿಸಿದ್ದಳು. ಹಾಗೆ ಪಾರ್ವತಿ ದೇವಿ ಮಹಾಗೌರಿಯಾದಳು ಎಂಬ ಉಲ್ಲೇಖ ಪುರಾಣದಲ್ಲಿದೆ. 
(8 / 10)

ಮಹಾಗೌರಿಯು 'ಮೂಲ ಭಾವ'ವನ್ನು ಪ್ರತಿನಿಧಿಸುತ್ತಾಳೆ. ಆಕೆಯನ್ನು ಪೂಜಿಸುವುದರಿಂದ ಶರೀರದಲ್ಲಿರುವ ಸೋಮ ಚಕ್ರವು ಜಾಗೃತವಾಗುತ್ತದೆ. ರಾಹು ಗ್ರಹವನ್ನು ಮಹಾಗೌರಿ ದೇವಿಯು ಆಳುತ್ತಾಳೆ, ಆದ್ದರಿಂದ ಮಹಾಗೌರಿಯನ್ನು ಆರಾಧಿಸುವ ಮೂಲಕ ರಾಹು ಗ್ರಹದ ಎಲ್ಲಾ ಅಡೆತಡೆಗಳು ಮತ್ತು ಋಣಾತ್ಮಕ ಪರಿಣಾಮಗಳನ್ನು ನಿವಾರಿಸಬಹುದು. ಮಹಾ ಗೌರಿ ದೇವಿಯು ದಯೆ ಮತ್ತು ನೈತಿಕತೆಯನ್ನು ಸಂಕೇತಿಸುತ್ತಿದ್ದು, ಆಕೆಯ ಆರಾಧನೆಯ ಮೂಲಕ ಪಾಪಮುಕ್ತಿ ಮತ್ತು ಮೋಕ್ಷಕ್ಕೆ ದಾರಿ ಉಂಟಾಗುತ್ತದೆ ಎಂಬುದು ನಂಬಿಕೆ.
(9 / 10)

ಮಹಾಗೌರಿಯ ಆರಾಧನೆಗೆ ಬಳಸಬಹುದಾದ ಪ್ರಾರ್ಥನಾ ಮಂತ್ರ: ಶ್ವೇತೇ ವೃಷೇ ಸಮಾರೂಢಾ ಶ್ವೇತಾಂಬರಧರಾ ಶುಚಿಃ ।ಮಹಾಗೌರೀ ಶುಭಂ ದದ್ಯಾನ್ಮಹಾದೇವಪ್ರಮೋದದಾ ॥
(10 / 10)

    ಹಂಚಿಕೊಳ್ಳಲು ಲೇಖನಗಳು