logo
ಕನ್ನಡ ಸುದ್ದಿ  /  ಫೋಟೋ ಗ್ಯಾಲರಿ  /  ಅಮೆರಿಕದಲ್ಲಿ ಓದುವ ಕನಸು ನಿಮ್ಮದಾ; ಯುಎಸ್‌ನ ಟಾಪ್ 10 ರಾಷ್ಟ್ರೀಯ ವಿಶ್ವವಿದ್ಯಾಲಯಗಳ ಪಟ್ಟಿ ಇಲ್ಲಿದೆ ನೋಡಿ

ಅಮೆರಿಕದಲ್ಲಿ ಓದುವ ಕನಸು ನಿಮ್ಮದಾ; ಯುಎಸ್‌ನ ಟಾಪ್ 10 ರಾಷ್ಟ್ರೀಯ ವಿಶ್ವವಿದ್ಯಾಲಯಗಳ ಪಟ್ಟಿ ಇಲ್ಲಿದೆ ನೋಡಿ

Sep 25, 2024 09:53 AM IST

US Best Colleges Rankings 2025: ಯುಎಸ್ ನ್ಯೂಸ್ ಮತ್ತು ವರ್ಲ್ಡ್ ರಿಪೋರ್ಟ್ ದೇಶದ ಅತ್ಯುತ್ತಮ ಕಾಲೇಜು ಶ್ರೇಯಾಂಕ ಪಟ್ಟಿ ಬಿಡುಗಡೆ ಮಾಡಿದೆ. ಅಮೆರಿಕದಲ್ಲಿ ಓದುವ ಆಸೆ-ಕನಸು ಹೊಂದಿರುವವರು ಯುನೈಟೆಡ್ ಸ್ಟೇಟ್‌ನ ಈ ಟಾಪ್‌ 10 ಉನ್ನತ ರಾಷ್ಟ್ರೀಯ ವಿಶ್ವವಿದ್ಯಾಲಯಗಳಲ್ಲಿ ಅಡ್ಮಿಶನ್‌ ಪಡೆಯಬಹುದು. ಅಗ್ರ 10 ಶ್ರೇಯಾಂಕ ಹೀಗಿವೆ.

  • US Best Colleges Rankings 2025: ಯುಎಸ್ ನ್ಯೂಸ್ ಮತ್ತು ವರ್ಲ್ಡ್ ರಿಪೋರ್ಟ್ ದೇಶದ ಅತ್ಯುತ್ತಮ ಕಾಲೇಜು ಶ್ರೇಯಾಂಕ ಪಟ್ಟಿ ಬಿಡುಗಡೆ ಮಾಡಿದೆ. ಅಮೆರಿಕದಲ್ಲಿ ಓದುವ ಆಸೆ-ಕನಸು ಹೊಂದಿರುವವರು ಯುನೈಟೆಡ್ ಸ್ಟೇಟ್‌ನ ಈ ಟಾಪ್‌ 10 ಉನ್ನತ ರಾಷ್ಟ್ರೀಯ ವಿಶ್ವವಿದ್ಯಾಲಯಗಳಲ್ಲಿ ಅಡ್ಮಿಶನ್‌ ಪಡೆಯಬಹುದು. ಅಗ್ರ 10 ಶ್ರೇಯಾಂಕ ಹೀಗಿವೆ.
ಬೆಸ್ಟ್ ಕಾಲೇಜ್ ಶ್ರೇಯಾಂಕ್ 2025ರ ರಾಷ್ಟ್ರೀಯ ವಿಶ್ವವಿದ್ಯಾಲಯಗಳ ಪಟ್ಟಿಯಲ್ಲಿ ಪ್ರಿನ್ಸ್ಟನ್ ವಿಶ್ವವಿದ್ಯಾಲಯ (Princeton University ಮೊದಲ ಸ್ಥಾನ ಪಡೆದುಕೊಂಡಿದೆ. ವಿಶ್ವವಿದ್ಯಾಲಯದ ಕ್ಯಾಂಪಸ್ ಗಾತ್ರವು 690 ಎಕರೆಗಳಾಗಿದ್ದು, ಸೆಮಿಸ್ಟರ್ ಆಧಾರಿತ ಶಿಕ್ಷಣ ನೀಡುತ್ತದೆ. ಇದನ್ನು 1746ರಲ್ಲಿ ಸ್ಥಾಪಿಸಲಾಯಿತು.
(1 / 10)
ಬೆಸ್ಟ್ ಕಾಲೇಜ್ ಶ್ರೇಯಾಂಕ್ 2025ರ ರಾಷ್ಟ್ರೀಯ ವಿಶ್ವವಿದ್ಯಾಲಯಗಳ ಪಟ್ಟಿಯಲ್ಲಿ ಪ್ರಿನ್ಸ್ಟನ್ ವಿಶ್ವವಿದ್ಯಾಲಯ (Princeton University ಮೊದಲ ಸ್ಥಾನ ಪಡೆದುಕೊಂಡಿದೆ. ವಿಶ್ವವಿದ್ಯಾಲಯದ ಕ್ಯಾಂಪಸ್ ಗಾತ್ರವು 690 ಎಕರೆಗಳಾಗಿದ್ದು, ಸೆಮಿಸ್ಟರ್ ಆಧಾರಿತ ಶಿಕ್ಷಣ ನೀಡುತ್ತದೆ. ಇದನ್ನು 1746ರಲ್ಲಿ ಸ್ಥಾಪಿಸಲಾಯಿತು.(Coutesy/Princeton University)
ಅಮೆರಿಕದ ಕೇಂಬ್ರಿಡ್ಜ್‌ನಲ್ಲಿರುವ ಮ್ಯಾಸಚೂಸೆಟ್ಸ್ ಇನ್ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ (The Massachusetts Institute of Technology in Cambridge) ಉನ್ನತ ರಾಷ್ಟ್ರೀಯ ವಿಶ್ವವಿದ್ಯಾಲಯಗಳ ಪಟ್ಟಿಯಲ್ಲಿ ಎರಡನೇ ಸ್ಥಾನದಲ್ಲಿದೆ. ಕ್ಯಾಂಪಸ್ ಗಾತ್ರವು 168 ಎಕರೆಗಳು. ಈ ಸಂಸ್ಥೆಯು ಅರ್ಥಶಾಸ್ತ್ರ, ಜೀವಶಾಸ್ತ್ರ, ರಸಾಯನಶಾಸ್ತ್ರ, ಭೂ ವಿಜ್ಞಾನ, ಭೌತಶಾಸ್ತ್ರ ಮತ್ತು ಗಣಿತಶಾಸ್ತ್ರ ಕೋರ್ಸ್‌ಗಳಿಗೆ ಜನಪ್ರಿಯವಾಗಿದೆ.
(2 / 10)
ಅಮೆರಿಕದ ಕೇಂಬ್ರಿಡ್ಜ್‌ನಲ್ಲಿರುವ ಮ್ಯಾಸಚೂಸೆಟ್ಸ್ ಇನ್ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ (The Massachusetts Institute of Technology in Cambridge) ಉನ್ನತ ರಾಷ್ಟ್ರೀಯ ವಿಶ್ವವಿದ್ಯಾಲಯಗಳ ಪಟ್ಟಿಯಲ್ಲಿ ಎರಡನೇ ಸ್ಥಾನದಲ್ಲಿದೆ. ಕ್ಯಾಂಪಸ್ ಗಾತ್ರವು 168 ಎಕರೆಗಳು. ಈ ಸಂಸ್ಥೆಯು ಅರ್ಥಶಾಸ್ತ್ರ, ಜೀವಶಾಸ್ತ್ರ, ರಸಾಯನಶಾಸ್ತ್ರ, ಭೂ ವಿಜ್ಞಾನ, ಭೌತಶಾಸ್ತ್ರ ಮತ್ತು ಗಣಿತಶಾಸ್ತ್ರ ಕೋರ್ಸ್‌ಗಳಿಗೆ ಜನಪ್ರಿಯವಾಗಿದೆ.(Getty Images/File)
ಉನ್ನತ ರಾಷ್ಟ್ರೀಯ ವಿಶ್ವವಿದ್ಯಾಲಯಗಳಲ್ಲಿ ಹಾರ್ವರ್ಡ್ ವಿಶ್ವವಿದ್ಯಾಲಯವು ಮೂರನೇ ಸ್ಥಾನದಲ್ಲಿದೆ. ಇದು ಬರೋಬ್ಬರಿ 5,667 ಎಕರೆ ಕ್ಯಾಂಪಸ್ ಗಾತ್ರವನ್ನು ಹೊಂದಿದೆ. ವಿಶ್ವವಿದ್ಯಾಲಯವು ಸೆಮಿಸ್ಟರ್ ಆಧಾರಿತ ಶೈಕ್ಷಣಿಕ ಕ್ಯಾಲೆಂಡರ್ ಅನುಸರಿಸುತ್ತದೆ.
(3 / 10)
ಉನ್ನತ ರಾಷ್ಟ್ರೀಯ ವಿಶ್ವವಿದ್ಯಾಲಯಗಳಲ್ಲಿ ಹಾರ್ವರ್ಡ್ ವಿಶ್ವವಿದ್ಯಾಲಯವು ಮೂರನೇ ಸ್ಥಾನದಲ್ಲಿದೆ. ಇದು ಬರೋಬ್ಬರಿ 5,667 ಎಕರೆ ಕ್ಯಾಂಪಸ್ ಗಾತ್ರವನ್ನು ಹೊಂದಿದೆ. ವಿಶ್ವವಿದ್ಯಾಲಯವು ಸೆಮಿಸ್ಟರ್ ಆಧಾರಿತ ಶೈಕ್ಷಣಿಕ ಕ್ಯಾಲೆಂಡರ್ ಅನುಸರಿಸುತ್ತದೆ.(Unsplash )
ಸ್ಟ್ಯಾನ್ಫೋರ್ಡ್ ವಿಶ್ವವಿದ್ಯಾಲಯವು (Stanford University) ನಾಲ್ಕನೇ ಅತ್ಯುತ್ತಮ ರಾಷ್ಟ್ರೀಯ ವಿಶ್ವವಿದ್ಯಾಲಯವಾಗಿ ಸ್ಥಾನ ಪಡೆದಿದೆ. ಇದು ಬರೋಬ್ಬರಿ 8,180 ಎಕರೆಗಳಷ್ಟು ವಿಸ್ತಾರವಾದ ಕ್ಯಾಂಪಸ್ ಹೊಂದಿದೆ. ವಿಶ್ವವಿದ್ಯಾಲಯವು ಕ್ವಾರ್ಟರ್ ಆಧಾರಿತ ಶೈಕ್ಷಣಿಕ ಕ್ಯಾಲೆಂಡರ್ ಒಳಗೊಂಡಿದೆ.
(4 / 10)
ಸ್ಟ್ಯಾನ್ಫೋರ್ಡ್ ವಿಶ್ವವಿದ್ಯಾಲಯವು (Stanford University) ನಾಲ್ಕನೇ ಅತ್ಯುತ್ತಮ ರಾಷ್ಟ್ರೀಯ ವಿಶ್ವವಿದ್ಯಾಲಯವಾಗಿ ಸ್ಥಾನ ಪಡೆದಿದೆ. ಇದು ಬರೋಬ್ಬರಿ 8,180 ಎಕರೆಗಳಷ್ಟು ವಿಸ್ತಾರವಾದ ಕ್ಯಾಂಪಸ್ ಹೊಂದಿದೆ. ವಿಶ್ವವಿದ್ಯಾಲಯವು ಕ್ವಾರ್ಟರ್ ಆಧಾರಿತ ಶೈಕ್ಷಣಿಕ ಕ್ಯಾಲೆಂಡರ್ ಒಳಗೊಂಡಿದೆ.(X)
ಯೇಲ್/ಯಾಲೆ ವಿಶ್ವವಿದ್ಯಾಲಯವು (Yale University) ಅಮೆರಿಕದ ಉನ್ನತ ರಾಷ್ಟ್ರೀಯ ವಿಶ್ವವಿದ್ಯಾಲಯಗಳ ಪಟ್ಟಿಯಲ್ಲಿ ಐದನೇ ಸ್ಥಾನದಲ್ಲಿದೆ. ವಿಶ್ವವಿದ್ಯಾಲಯದ ಕ್ಯಾಂಪಸ್ ಗಾತ್ರವು 1,108 ಎಕರೆಗಳು.
(5 / 10)
ಯೇಲ್/ಯಾಲೆ ವಿಶ್ವವಿದ್ಯಾಲಯವು (Yale University) ಅಮೆರಿಕದ ಉನ್ನತ ರಾಷ್ಟ್ರೀಯ ವಿಶ್ವವಿದ್ಯಾಲಯಗಳ ಪಟ್ಟಿಯಲ್ಲಿ ಐದನೇ ಸ್ಥಾನದಲ್ಲಿದೆ. ವಿಶ್ವವಿದ್ಯಾಲಯದ ಕ್ಯಾಂಪಸ್ ಗಾತ್ರವು 1,108 ಎಕರೆಗಳು.(AP)
ಅತ್ಯುತ್ತಮ ರಾಷ್ಟ್ರೀಯ ವಿಶ್ವವಿದ್ಯಾಲಯಗಳಲ್ಲಿ ಆರನೇ ಸ್ಥಾನದಲ್ಲಿ ಕ್ಯಾಲಿಫೋರ್ನಿಯಾ ಇನ್ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ (California Institute of Technology) ಇದೆ. ವಿಶ್ವವಿದ್ಯಾಲಯದ ಕ್ಯಾಂಪಸ್ ಗಾತ್ರವು 124 ಎಕರೆಗಳು.
(6 / 10)
ಅತ್ಯುತ್ತಮ ರಾಷ್ಟ್ರೀಯ ವಿಶ್ವವಿದ್ಯಾಲಯಗಳಲ್ಲಿ ಆರನೇ ಸ್ಥಾನದಲ್ಲಿ ಕ್ಯಾಲಿಫೋರ್ನಿಯಾ ಇನ್ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ (California Institute of Technology) ಇದೆ. ವಿಶ್ವವಿದ್ಯಾಲಯದ ಕ್ಯಾಂಪಸ್ ಗಾತ್ರವು 124 ಎಕರೆಗಳು.(Unsplash)
ಆರನೇ ಸ್ಥಾನದಲ್ಲಿರುವ ಡ್ಯೂಕ್ ವಿಶ್ವವಿದ್ಯಾಲಯವಿದೆ (Duke University. ಡರ್ಹಾಮ್‌ನಲ್ಲಿರುವ ಈ ಕ್ಯಾಂಪಸ್ 8,693 ಎಕರೆ ವ್ಯಾಪಿಸಿದೆ.
(7 / 10)
ಆರನೇ ಸ್ಥಾನದಲ್ಲಿರುವ ಡ್ಯೂಕ್ ವಿಶ್ವವಿದ್ಯಾಲಯವಿದೆ (Duke University. ಡರ್ಹಾಮ್‌ನಲ್ಲಿರುವ ಈ ಕ್ಯಾಂಪಸ್ 8,693 ಎಕರೆ ವ್ಯಾಪಿಸಿದೆ.(Shutterstock)
ಜಾನ್ ಹಾಪ್ಕಿನ್ಸ್ ವಿಶ್ವವಿದ್ಯಾಲಯವು (John Hopkins University) ಅತ್ಯುತ್ತಮ ರಾಷ್ಟ್ರೀಯ ವಿಶ್ವವಿದ್ಯಾಲಯಗಳ ಪಟ್ಟಿಯಲ್ಲಿ ಆರನೇ ಸ್ಥಾನವನ್ನು ಹಂಚಿಕೊಂಡಿದೆ. ಇದು 140 ಎಕರೆ ಕ್ಯಾಂಪಸ್‌ ಹೊಂದಿದೆ.
(8 / 10)
ಜಾನ್ ಹಾಪ್ಕಿನ್ಸ್ ವಿಶ್ವವಿದ್ಯಾಲಯವು (John Hopkins University) ಅತ್ಯುತ್ತಮ ರಾಷ್ಟ್ರೀಯ ವಿಶ್ವವಿದ್ಯಾಲಯಗಳ ಪಟ್ಟಿಯಲ್ಲಿ ಆರನೇ ಸ್ಥಾನವನ್ನು ಹಂಚಿಕೊಂಡಿದೆ. ಇದು 140 ಎಕರೆ ಕ್ಯಾಂಪಸ್‌ ಹೊಂದಿದೆ.(Twitter/@JohnsHopkins)
ನಾರ್ತ್ ವೆಸ್ಟರ್ನ್ ವಿಶ್ವವಿದ್ಯಾಲಯ (Northwestern University) ಕೂಡಾ ಉನ್ನತ ರಾಷ್ಟ್ರೀಯ ವಿಶ್ವವಿದ್ಯಾಲಯಗಳ ಉನ್ನತ ಪಟ್ಟಿಯಲ್ಲಿ ಆರನೇ ಸ್ಥಾನದಲ್ಲಿದೆ. ಕ್ಯಾಂಪಸ್ ಗಾತ್ರವು 231 ಎಕರೆಗಳಿಗೆ ವಿಸ್ತರಿಸಿದೆ.
(9 / 10)
ನಾರ್ತ್ ವೆಸ್ಟರ್ನ್ ವಿಶ್ವವಿದ್ಯಾಲಯ (Northwestern University) ಕೂಡಾ ಉನ್ನತ ರಾಷ್ಟ್ರೀಯ ವಿಶ್ವವಿದ್ಯಾಲಯಗಳ ಉನ್ನತ ಪಟ್ಟಿಯಲ್ಲಿ ಆರನೇ ಸ್ಥಾನದಲ್ಲಿದೆ. ಕ್ಯಾಂಪಸ್ ಗಾತ್ರವು 231 ಎಕರೆಗಳಿಗೆ ವಿಸ್ತರಿಸಿದೆ.(northwestern.edu)
1740ರಲ್ಲಿ ಸ್ಥಾಪನೆಯಾದ ಪೆನ್ಸಿಲ್ವೇನಿಯಾ ವಿಶ್ವವಿದ್ಯಾಲಯವು (University of Pennsylvania) 299 ಎಕರೆ ಕ್ಯಾಂಪಸ್ ಹೊಂದಿದೆ. 2023ರ ಅಂತ್ಯದ ವೇಳೆಗೆ ವಿಶ್ವವಿದ್ಯಾಲಯವು ಒಟ್ಟು 9,995 ಪದವಿಪೂರ್ವ ದಾಖಲಾತಿಯನ್ನು ಹೊಂದಿದೆ.
(10 / 10)
1740ರಲ್ಲಿ ಸ್ಥಾಪನೆಯಾದ ಪೆನ್ಸಿಲ್ವೇನಿಯಾ ವಿಶ್ವವಿದ್ಯಾಲಯವು (University of Pennsylvania) 299 ಎಕರೆ ಕ್ಯಾಂಪಸ್ ಹೊಂದಿದೆ. 2023ರ ಅಂತ್ಯದ ವೇಳೆಗೆ ವಿಶ್ವವಿದ್ಯಾಲಯವು ಒಟ್ಟು 9,995 ಪದವಿಪೂರ್ವ ದಾಖಲಾತಿಯನ್ನು ಹೊಂದಿದೆ.(Shutterstock)

    ಹಂಚಿಕೊಳ್ಳಲು ಲೇಖನಗಳು