logo
ಕನ್ನಡ ಸುದ್ದಿ  /  ಫೋಟೋ ಗ್ಯಾಲರಿ  /  ಬೇಸಿಗೆಯಲ್ಲಿ ಇವರು ಗುಬ್ಬಚ್ಚಿಗಳಿಗೆ ತಣ್ಣಗಿನ ಗೂಡು ನಿರ್ಮಿಸುತ್ತಾರೆ, ಗುಬ್ಬಚ್ಚಿಗೂ ಇವರ ಕಂಡರೆ ಪ್ರೀತಿ Photos

ಬೇಸಿಗೆಯಲ್ಲಿ ಇವರು ಗುಬ್ಬಚ್ಚಿಗಳಿಗೆ ತಣ್ಣಗಿನ ಗೂಡು ನಿರ್ಮಿಸುತ್ತಾರೆ, ಗುಬ್ಬಚ್ಚಿಗೂ ಇವರ ಕಂಡರೆ ಪ್ರೀತಿ photos

Apr 20, 2024 07:46 AM IST

ಒಳಿತು ಮಾಡಬೇಕು ಎನ್ನಿಸಿದರೆ ಹಲವು ಮಾರ್ಗ. ಸುರೇಶ್‌ ಶಿಕಾರಿಪುರ ಅವರು ಹಕ್ಕಿಗಳಿಗೆ ಮನೆಯಂಗಳದಲ್ಲಿಯೇ ತಣ್ಣನೆಯ ಗೂಡು ಕಟ್ಟಿ ಬೇಸಿಗೆ ಬವಣೆಯಿಂದ ಅವುಗಳನ್ನು ಪಾರು ಮಾಡುತ್ತಾರೆ. ಅವರ ಮನೆಯಂಗಳದಲ್ಲಿ ಚೀಂವ್‌ ಚೀಂಬ್‌ ಎನ್ನುವ ಶಬ್ದದ ಸಡಗರ. ಅದರ ಚಿತ್ರನೋಟ ಇಲ್ಲಿದೆ.

  • ಒಳಿತು ಮಾಡಬೇಕು ಎನ್ನಿಸಿದರೆ ಹಲವು ಮಾರ್ಗ. ಸುರೇಶ್‌ ಶಿಕಾರಿಪುರ ಅವರು ಹಕ್ಕಿಗಳಿಗೆ ಮನೆಯಂಗಳದಲ್ಲಿಯೇ ತಣ್ಣನೆಯ ಗೂಡು ಕಟ್ಟಿ ಬೇಸಿಗೆ ಬವಣೆಯಿಂದ ಅವುಗಳನ್ನು ಪಾರು ಮಾಡುತ್ತಾರೆ. ಅವರ ಮನೆಯಂಗಳದಲ್ಲಿ ಚೀಂವ್‌ ಚೀಂಬ್‌ ಎನ್ನುವ ಶಬ್ದದ ಸಡಗರ. ಅದರ ಚಿತ್ರನೋಟ ಇಲ್ಲಿದೆ.
ಈಗ ಗುಬ್ಬಿಗಳ ಸಂಖ್ಯೆಯೇ ಕಡಿಮೆಯಾಗಿದೆ. ಇರುವ ಗುಬ್ಬಿಗಳನ್ನು ಉಳಿಸಿಕೊಳ್ಳುವುದು ಸವಾಲೇ.  ಶಿವಮೊಗ್ಗ ಜಿಲ್ಲೆ ಶಿಕಾರಿಪುರದ ಸುರೇಶ್‌ ಅವರು ಪರಿಸರ ಪ್ರೇಮಿ. ತಮ್ಮ ಮನೆಯಂಗಳದಲ್ಲಿಯೇ ಪ್ರತಿ ವರ್ಷ ತಣ್ಣನೆಯ ಗೂಡನ್ನು ನಿರ್ಮಿಸಿ ಹಕ್ಕಿಗಳಿಗೆ ಆಶ್ರಯ ನೀಡುತ್ತಾರೆ.
(1 / 6)

ಅವರು ಹಕ್ಕಿಗಳಿಗೆ ರೂಪಿಸುವುದು ತೆಂಗಿನ ಮೊಟ್ಟೆಯ ಗೂಡು. ಆನ್ ಲೈನ್ ಮಾರುಕಟ್ಟೆಯಲ್ಲಿ ಹಕ್ಕಿಗಳ ಗೂಡುಗಳನ್ನ ಸರ್ಚ್ ಮಾಡುವಾಗ ಒಮ್ಮೆ ತೆಂಗಿನ ಕರಟದಲ್ಲಿ ಮಾಡಿದ್ದ ಗೂಡುಗಳನ್ನು ಕಂಡೆ. ಒಂದು ಕರಟದ ಗೂಡಿಗೆ ಬರೋಬ್ಬರಿ ಒಂದು ಸಾವಿರ ರೂಪಾಯಿ ಬೆಲೆ ಇತ್ತು. ಅಬ್ಬೋ... ಇಷ್ಟಕ್ಕೆ ಸಾವಿರ ರೂಪಾಯಿ ಬೆಲೆಯಾ? ಇದನ್ನ ನಾನೇ ಮಾಡಬಹುದಲ್ಲ ಅನ್ನಿಸಿತು. ಇದಕ್ಕಿಂತ ವಿಭಿನ್ನವಾಗಿ ವಿಶೇಷವಾಗಿ ಸುಸಜ್ಜಿತವಾಗಿ ಸುರಕ್ಷಿತವಾಗಿ ಇರುವ ಗುಬ್ಬಿ ಗೂಡನ್ನ ಮಾಡಬಹುದಲ್ಲ ಅಂತ ಅನ್ನಿಸಿತು ಎನ್ನುವುದು ಸುರೇಶ್‌ ವಿವರಣೆ.
(2 / 6)

ರಟದ ಬದಲಿಗೆ ತೆಂಗಿನ ಕಾಯಿನ ನಾರ್ಸಿಪ್ಪೆಯೇ ಇನ್ನೂ ಸೂಕ್ತ ಅನ್ನಿಸಿತು. ಮನೆಯಲ್ಲಿ ಎರಡು ದೊಡ್ಡ ಒಣಗಿದ್ದ ತೆಂಗಿನ ಕಾಯಿಗಳಿದ್ದವು. ಗರಗಸದಿಂದ ಎರಡು ಹೋಳಾಗಿ ಸೀಳಿ ಒಳಗಿನ ಕೊಬ್ಬರಿ ಕರಟ ಎಲ್ಲ ತೆಗೆದು ಉಳಿದ ಸಿಪ್ಪೆಯ ದಪ್ಪ ತಿರುಳನ್ನು ಕೆರೆದು ಕೆರೆದು ವಿಶಾಲವಾದ ಗುಂಡಿ ಮಾಡಿದೆ. ಎರಡು ಹೋಳುಗಳನ್ನೂ ಹಾಗೇ ಮಾಡಿ ಫಿವಿಕಾಲ್ ಹಾಕಿ ಜೋಡಿಸಿದೆ. ನಂತರ ಸೂಕ್ತ ಜಾಗದಲ್ಲಿ ಎರಡು ರಂದ್ರ ಕೊರೆದು ತುದಿಯಲ್ಲಿ ಮತ್ತೊಂದು ರಂಧ್ರ ಕೊರೆದು ಗಟ್ಟಿ ದಾರದಲ್ಲಿ ಪೋಣಿಸಿ ಗುಬ್ಬಿಗಳು ಸರಾಗವಾಗಿ ಬಂದು ಕೂರಲು ಎರಡು ಸ್ಕ್ರೂಗಳನ್ನು ತಿರುಪಿ ನಮ್ಮ ಪೋರ್ಟಿಕಾದ ಮೂಲೆಗೆ ತಲೆ ಕೆಳಗು ಮಾಡಿ ನೇತು ಹಾಕಿದೆ ಎನ್ನುವುದು ಸುರೇಶ್‌ ಅವರ ಅನುಭವ ಕಥನ.
(3 / 6)

ಆನ್ ಲೈನ್ ಮಾರುಕಟ್ಟೆಯ ಆ ದುಬಾರಿ ಗೂಡಿಗಿಂತ ಅದನ್ನೂ ಮೀರಿಸುವ ನಾಚಿಸುವ ಈ ಗೂಡು ನನಗೆ ತುಂಬ ಇಷ್ಟದ ಗೂಡು. ಪರಿಸರ ಪ್ರಿಯರು ಮನೆಯ ಹಿತ್ತಿಲಿನ ಮರದಲ್ಲೊ, ಮಂಡಿಯಿಂದಲೋ, ತಮ್ಮ ತೋಟದಿಂದಲೋ ದೊಡ್ಡ ಇಲ್ಲವೆ ಮಧ್ಯಮ ಗಾತ್ರದ ಒಣ ತೆಂಗಿನ ಕಾಯಿ ತಂದು ತಜಿಬಿಜಿಯಾಗದಂತೆ ನೀಟಾಗಿ ಸೀಳಿ ಸುಲಭವಾಗಿ ಇಂತ ಗೂಡನ್ನು ಕಡಿಮೆ ಖರ್ಚಿನಲ್ಲಿ ತಯಾರಿಸಬಹುದು.
(4 / 6)

ಮರು ದಿನವೇ ಗುಬ್ಬಿಗಳು ಈ ವಿಚಿತ್ರ ವಿಶೇಷ ತೆಂಗಿನಕಾಯಿಯ ಸುತ್ತ ಪರೀಕ್ಷಿಸ ತೊಡಗಿದವು. ಒಂದರೆಡು ಮೂರು ದಿನ ಹೊರಗೆ ಸುತ್ತಾಡಿ ನಂತರ ನಿಧಾನಕ್ಕೆ ಒಳಗೆ ಹೋಗಿ ಬರುವುದು ಸ್ವಲ್ಪ ಅಲ್ಲೇ ಕೂರುವುದು ನಡೆಯಿತು. ನಂತರ ಒಂದೆರೆಡು ವಾರಕ್ಕೆ ನೆಲೆ ಕಂಡುಕೊಂಡ ಅವು ಹುಲ್ಲು ಕಡ್ಡಿ ಕಸಾದಿಗಳ ತಂದು ಸಂಸಾರ ಶುರುವಿಟ್ಟವು. ಬಾಡಿಗೆ ಮನೆಯಲ್ಲಿ ಕಟ್ಟಿದ್ದ ಗೂಡು ಯಶಸ್ಸು ಕಂಡಮೇಲೆ ನಮ್ಮ ಸ್ವಂತ ಹೊಸ ಮನೆಗೆ ಒಕ್ಕಲಾದ ಮೇಲೆ ಇಲ್ಲಿದೆಯಲ್ಲ ಈ ಗೂಡು ಮಾಡಿದೆ. ಇದೂ ಪವಾಡ ಎನ್ನುವಂತೆ ಕಟ್ಟಿದ ಮಾರನೇ ದಿನವೇ ಗುಬ್ಬಿಗಳ ಚಲನವಲನ ಶುರುವಾಯಿತು. ಈಗ ಇಲ್ಲಿ ಗೂಡು ಕಾಳು ನೀರು ನೆರಳು ಹುಳ ಹುಪ್ಪಟೆ ಹಣ್ಣುಗಳಿಗೆ ಬರವಿಲ್ಲ ಎನ್ನುತ್ತಾರೆ ಸುರೇಶ್‌.
(5 / 6)

ದಿನವಿಡೀ ಚಿಲಿಪಿಲಿ. ಈಗ ಎರಡು ಬೀಡು ಮರಿ ಮಾಡಿದ್ದಾವೆ‌. ಇದು ನನ್ನ ಸಣ್ಣ ಸಂತೋಷ ಅಲ್ಲ ದೊಡ್ಡ ಸಂತೋಷ. ನನ್ನ ಅನೇಕ ಪ್ರಯತ್ನಗಳು ನಿಷ್ಪಲ ಗೊಂಡಮೇಲೆ ಆಶ್ಚರ್ಯವೆನ್ನುವಂತೆ ಫಲಿಸಿದ ಆನಂದ ಇದು. ಶಾಲೆಯಲ್ಲಿ ಓದಿದ ಪಕ್ಷಿಪ್ರೇಮಿ ಸಲೀಮ್ ಅಲಿ ಅವರ ಕುರಿತ ಲೇಖನ, ತೇಜಸ್ವಿಯವರ 'ಸುಷ್ಮಿತಾ ಮತ್ತು ಹಕ್ಕಿಮರಿ' ಕತೆ ಇವುಗಳೇ ನನಗೆ ಮೊದಲ ಪ್ರೇರಣೆ. ನಂತರ ತೇಜಸ್ವಿ ಅವರ ಪುಸ್ತಕಗಳು, ಕಾರಂತರ ಹಕ್ಕಿಗಳ ಕುರಿತ ಪುಸ್ತಕಗಳು ಉಂಟು ಮಾಡಿದ ಪರಿಣಾಮವೇ ನನ್ನ ಇಂತಹ ಪ್ರಯೋಗಗಳಿಗೆ ಕಾರಣ ಎನ್ನುವುದು ಸುರೇಶ್‌ ನೀಡುವ ಕಾರಣ.
(6 / 6)

    ಹಂಚಿಕೊಳ್ಳಲು ಲೇಖನಗಳು