logo
ಕನ್ನಡ ಸುದ್ದಿ  /  ಫೋಟೋ ಗ್ಯಾಲರಿ  /  ಸೆಮಿಫೈನಲ್ ಸನಿಹಕ್ಕೆ ಆಸ್ಟ್ರೇಲಿಯಾ, ಸಂಕಷ್ಟಕ್ಕೆ ಸಿಲುಕಿದ ಭಾರತ; ನ್ಯೂಜಿಲೆಂಡ್​ಗೆ ಸುವರ್ಣಾವಕಾಶ, ಸೆಮೀಸ್ ಲೆಕ್ಕಾಚಾರ ಹೀಗಿದೆ

ಸೆಮಿಫೈನಲ್ ಸನಿಹಕ್ಕೆ ಆಸ್ಟ್ರೇಲಿಯಾ, ಸಂಕಷ್ಟಕ್ಕೆ ಸಿಲುಕಿದ ಭಾರತ; ನ್ಯೂಜಿಲೆಂಡ್​ಗೆ ಸುವರ್ಣಾವಕಾಶ, ಸೆಮೀಸ್ ಲೆಕ್ಕಾಚಾರ ಹೀಗಿದೆ

Oct 12, 2024 09:41 AM IST

T20 World Cup 2024: ಐಸಿಸಿ ಮಹಿಳಾ ಟಿ20 ವಿಶ್ವಕಪ್ ಟೂರ್ನಿಯಲ್ಲಿ ಟೀಮ್ ಇಂಡಿಯಾ ಸೆಮಿಫೈನಲ್​ ಪ್ರವೇಶಿಸಬಹುದೇ? ಎ ಗುಂಪಿನಲ್ಲಿ ಯಾವ ತಂಡಕ್ಕೆ ಎಷ್ಟು ಅವಕಾಶ ಇದೆ? ಇಲ್ಲಿದೆ ವಿವರ.

  • T20 World Cup 2024: ಐಸಿಸಿ ಮಹಿಳಾ ಟಿ20 ವಿಶ್ವಕಪ್ ಟೂರ್ನಿಯಲ್ಲಿ ಟೀಮ್ ಇಂಡಿಯಾ ಸೆಮಿಫೈನಲ್​ ಪ್ರವೇಶಿಸಬಹುದೇ? ಎ ಗುಂಪಿನಲ್ಲಿ ಯಾವ ತಂಡಕ್ಕೆ ಎಷ್ಟು ಅವಕಾಶ ಇದೆ? ಇಲ್ಲಿದೆ ವಿವರ.
ಮಹಿಳಾ ಟಿ20 ವಿಶ್ವಕಪ್ ಟೂರ್ನಿಯ ಎ ಗುಂಪಿನಲ್ಲಿ ಪಾಕಿಸ್ತಾನ ತಂಡವನ್ನು ಮಣಿಸಿದ ಆಸ್ಟ್ರೇಲಿಯಾ, ಬಹುತೇಕ ಸೆಮಿಫೈನಲ್ ಪ್ರವೇಶಿಸಿದೆ. ಆದರೆ, ಸೋತ ಪಾಕಿಸ್ತಾನ ಬಹುತೇಕ ಸೆಮಿಫೈನಲ್​ನಿಂದ ಹೊರಬಿತ್ತು. ಆದರೆ ಎ ಗುಂಪಿನಲ್ಲಿ ಮತ್ತೊಂದು ಸೆಮಿಫೈನಲ್ ಸ್ಥಾನಕ್ಕೆ ಭಾರತ ಮತ್ತು ನ್ಯೂಜಿಲೆಂಡ್ ನಡುವೆ ತೀವ್ರ ಪೈಪೋಟಿ ಏರ್ಪಟ್ಟಿದೆ. ಅದರಲ್ಲೂ ಭಾರತ ಮಹಿಳಾ ತಂಡಕ್ಕೆ ಕಠಿಣ ಪರೀಕ್ಷೆ ಎಂದರೂ ತಪ್ಪಾಗಲ್ಲ. ಒಂದು ವೇಳೆ ಉಳಿದ ಪಂದ್ಯಗಳಲ್ಲಿ ಭಾರತ ಮತ್ತು ನ್ಯೂಜಿಲೆಂಡ್ ಗೆದ್ದರೂ ಆಸೀಸ್​​ ಹೊರ ಬೀಳುವ ಸಾಧ್ಯತೆ ಇದೆ. ಈಗಾಗಲೇ ಈ ಗುಂಪಿನಲ್ಲಿ ಶ್ರೀಲಂಕಾ ಹೊರಬಿದ್ದಿದೆ.
(1 / 5)
ಮಹಿಳಾ ಟಿ20 ವಿಶ್ವಕಪ್ ಟೂರ್ನಿಯ ಎ ಗುಂಪಿನಲ್ಲಿ ಪಾಕಿಸ್ತಾನ ತಂಡವನ್ನು ಮಣಿಸಿದ ಆಸ್ಟ್ರೇಲಿಯಾ, ಬಹುತೇಕ ಸೆಮಿಫೈನಲ್ ಪ್ರವೇಶಿಸಿದೆ. ಆದರೆ, ಸೋತ ಪಾಕಿಸ್ತಾನ ಬಹುತೇಕ ಸೆಮಿಫೈನಲ್​ನಿಂದ ಹೊರಬಿತ್ತು. ಆದರೆ ಎ ಗುಂಪಿನಲ್ಲಿ ಮತ್ತೊಂದು ಸೆಮಿಫೈನಲ್ ಸ್ಥಾನಕ್ಕೆ ಭಾರತ ಮತ್ತು ನ್ಯೂಜಿಲೆಂಡ್ ನಡುವೆ ತೀವ್ರ ಪೈಪೋಟಿ ಏರ್ಪಟ್ಟಿದೆ. ಅದರಲ್ಲೂ ಭಾರತ ಮಹಿಳಾ ತಂಡಕ್ಕೆ ಕಠಿಣ ಪರೀಕ್ಷೆ ಎಂದರೂ ತಪ್ಪಾಗಲ್ಲ. ಒಂದು ವೇಳೆ ಉಳಿದ ಪಂದ್ಯಗಳಲ್ಲಿ ಭಾರತ ಮತ್ತು ನ್ಯೂಜಿಲೆಂಡ್ ಗೆದ್ದರೂ ಆಸೀಸ್​​ ಹೊರ ಬೀಳುವ ಸಾಧ್ಯತೆ ಇದೆ. ಈಗಾಗಲೇ ಈ ಗುಂಪಿನಲ್ಲಿ ಶ್ರೀಲಂಕಾ ಹೊರಬಿದ್ದಿದೆ.(AP)
ಪಾಕ್ ವಿರುದ್ಧ 9 ವಿಕೆಟ್​ಗಳ ಭರ್ಜರಿ ಗೆಲುವಿನೊಂದಿಗೆ ಅಗ್ರಸ್ಥಾನದಲ್ಲಿ ಮುಂದುವರೆದಿರುವ ಆಸ್ಟ್ರೇಲಿಯಾ, ತನ್ನ ಮುಂದಿನ ಪಂದ್ಯದಲ್ಲಿ ಭಾರತ ತಂಡವನ್ನು ಎದುರಿಸಲಿದೆ. ಆಸೀಸ್​ಗೆ ಇದು ಔಪಚಾರಿಕ ಪಂದ್ಯವಾದರೂ, ಭಾರತಕ್ಕೆ ಗೆಲುವು ಅನಿವಾರ್ಯ. ಜೊತೆಗೆ ಬೃಹತ್ ಅಂತರದ ಗೆಲುವು ಕೂಡ ಬೇಕಾಗಿದೆ. ಒಂದು ವೇಳೆ ಭಾರತ ವಿರುದ್ಧ ಆಸೀಸ್ ಭಾರಿ ಅಂತರದಿಂದ ಸೋತರೆ ಮಾತ್ರ ಟಿ20 ವಿಶ್ವಕಪ್​ನಿಂದ ಹೊರಗುಳಿಯುವ ಸಾಧ್ಯತೆ ಹೆಚ್ಚಿದೆ. ಒಂದು ವೇಳೆ ಕಡಿಮೆ ಅಂತರದಿಂದ ಸೋತರೂ ಆಸೀಸ್​ ಸೆಮೀಸ್​ಗೆ ಲಗ್ಗೆ ಹಾಕಲಿದೆ. ಪ್ರಸ್ತುತ ಆಸೀಸ್​ ಆಡಿದ 3ರಲ್ಲಿ 3 ಗೆದ್ದು 6 ಅಂಕಗಳೊಂದಿಗೆ 2.786 ನೆಟ್ ರನ್ ರೇಟ್ ಹೊಂದಿದ್ದು, ಅಗ್ರಸ್ಥಾನ ಪಡೆದಿದೆ.
(2 / 5)
ಪಾಕ್ ವಿರುದ್ಧ 9 ವಿಕೆಟ್​ಗಳ ಭರ್ಜರಿ ಗೆಲುವಿನೊಂದಿಗೆ ಅಗ್ರಸ್ಥಾನದಲ್ಲಿ ಮುಂದುವರೆದಿರುವ ಆಸ್ಟ್ರೇಲಿಯಾ, ತನ್ನ ಮುಂದಿನ ಪಂದ್ಯದಲ್ಲಿ ಭಾರತ ತಂಡವನ್ನು ಎದುರಿಸಲಿದೆ. ಆಸೀಸ್​ಗೆ ಇದು ಔಪಚಾರಿಕ ಪಂದ್ಯವಾದರೂ, ಭಾರತಕ್ಕೆ ಗೆಲುವು ಅನಿವಾರ್ಯ. ಜೊತೆಗೆ ಬೃಹತ್ ಅಂತರದ ಗೆಲುವು ಕೂಡ ಬೇಕಾಗಿದೆ. ಒಂದು ವೇಳೆ ಭಾರತ ವಿರುದ್ಧ ಆಸೀಸ್ ಭಾರಿ ಅಂತರದಿಂದ ಸೋತರೆ ಮಾತ್ರ ಟಿ20 ವಿಶ್ವಕಪ್​ನಿಂದ ಹೊರಗುಳಿಯುವ ಸಾಧ್ಯತೆ ಹೆಚ್ಚಿದೆ. ಒಂದು ವೇಳೆ ಕಡಿಮೆ ಅಂತರದಿಂದ ಸೋತರೂ ಆಸೀಸ್​ ಸೆಮೀಸ್​ಗೆ ಲಗ್ಗೆ ಹಾಕಲಿದೆ. ಪ್ರಸ್ತುತ ಆಸೀಸ್​ ಆಡಿದ 3ರಲ್ಲಿ 3 ಗೆದ್ದು 6 ಅಂಕಗಳೊಂದಿಗೆ 2.786 ನೆಟ್ ರನ್ ರೇಟ್ ಹೊಂದಿದ್ದು, ಅಗ್ರಸ್ಥಾನ ಪಡೆದಿದೆ.(AP)
ನ್ಯೂಜಿಲೆಂಡ್ ತನ್ನ ಮುಂದಿನ ಎರಡು ಪಂದ್ಯಗಳಲ್ಲಿ ಗೆದ್ದರೆ ಸೆಮಿಫೈನಲ್​ಗೆ ಪ್ರವೇಶಿಸುವುದು ಖಚಿತ. ಆದರೆ, ನ್ಯೂಜಿಲೆಂಡ್ ಒಂದು ಪಂದ್ಯ ಸೋತು, ಒಂದು ಪಂದ್ಯ ಗೆದ್ದರೆ ಭಾರತ ತನ್ನ ಮುಂದಿನ ಪಂದ್ಯದಲ್ಲಿ ಸೋತರೂ ಸೆಮೀಸ್​ಗೆ ಅವಕಾಶ ಇರಲಿದೆ. ಆದರೆ ನೆಟ್​ರನ್​ ರೇಟ್ ಕಿವೀಸ್​ಗಿಂತ ಮುಂದಿರಬೇಕಾಗುತ್ತದೆ. ನ್ಯೂಜಿಲೆಂಡ್ ಎರಡೂ ಪಂದ್ಯಗಳನ್ನು ಸೋತರೆ, ಸೆಮೀಸ್ ಕನಸು ಭಗ್ನಗೊಳ್ಳಲಿದೆ. ಆದರೆ ಕಿವೀಸ್ ತನ್ನ ಮುಂದಿನ ಎರಡು ಪಂದ್ಯಗಳನ್ನು ಸೋಲುವುದು ಬಹುತೇಕ ಕಷ್ಟ ಎಂದೇ ಹೇಳಲಾಗುತ್ತಿದೆ. ಭಾರತ ತಂಡದ ಸೆಮಿಫೈನಲ್ ಭವಿಷ್ಯ ನ್ಯೂಜಿಲೆಂಡ್ ಫಲಿತಾಂಶಗಳ ಮೇಲೆ ನಿಂತಿದೆ,
(3 / 5)
ನ್ಯೂಜಿಲೆಂಡ್ ತನ್ನ ಮುಂದಿನ ಎರಡು ಪಂದ್ಯಗಳಲ್ಲಿ ಗೆದ್ದರೆ ಸೆಮಿಫೈನಲ್​ಗೆ ಪ್ರವೇಶಿಸುವುದು ಖಚಿತ. ಆದರೆ, ನ್ಯೂಜಿಲೆಂಡ್ ಒಂದು ಪಂದ್ಯ ಸೋತು, ಒಂದು ಪಂದ್ಯ ಗೆದ್ದರೆ ಭಾರತ ತನ್ನ ಮುಂದಿನ ಪಂದ್ಯದಲ್ಲಿ ಸೋತರೂ ಸೆಮೀಸ್​ಗೆ ಅವಕಾಶ ಇರಲಿದೆ. ಆದರೆ ನೆಟ್​ರನ್​ ರೇಟ್ ಕಿವೀಸ್​ಗಿಂತ ಮುಂದಿರಬೇಕಾಗುತ್ತದೆ. ನ್ಯೂಜಿಲೆಂಡ್ ಎರಡೂ ಪಂದ್ಯಗಳನ್ನು ಸೋತರೆ, ಸೆಮೀಸ್ ಕನಸು ಭಗ್ನಗೊಳ್ಳಲಿದೆ. ಆದರೆ ಕಿವೀಸ್ ತನ್ನ ಮುಂದಿನ ಎರಡು ಪಂದ್ಯಗಳನ್ನು ಸೋಲುವುದು ಬಹುತೇಕ ಕಷ್ಟ ಎಂದೇ ಹೇಳಲಾಗುತ್ತಿದೆ. ಭಾರತ ತಂಡದ ಸೆಮಿಫೈನಲ್ ಭವಿಷ್ಯ ನ್ಯೂಜಿಲೆಂಡ್ ಫಲಿತಾಂಶಗಳ ಮೇಲೆ ನಿಂತಿದೆ,(AP)
ಮತ್ತೊಂದೆಡೆ ಭಾರತ ತಂಡವು ಸೆಮಿಫೈನಲ್ ಪ್ರವೇಶಿಸುವುದು ಅಷ್ಟು ಸುಲಭವಲ್ಲ. ಏಕೆಂದರೆ ಆಸೀಸ್ ವಿರುದ್ಧ ಕೇವಲ ಗೆಲ್ಲುವುದು ಮಾತ್ರವಲ್ಲ, ಬೃಹತ್ ಗೆಲುವು ಕೂಡ ಬೇಕಾಗಿದೆ. ನ್ಯೂಜಿಲೆಂಡ್ ಎರಡಕ್ಕೆ ಎರಡೂ ಗೆದ್ದರೂ ನೆಟ್​​ರನ್​ರೇಟ್​ ಭಾರತಕ್ಕಿಂತ ಕಡಿಮೆ ಇರಬೇಕು. ಮತ್ತೊಂದೆಡೆ ಆಸೀಸ್ ಗೆದ್ದರೂ ಅಥವಾ ಕಡಿಮೆ ಅಂತರದಲ್ಲಿ ಸೋತರೂ ಸೆಮೀಸ್ ಟಿಕೆಟ್ ಖಚಿತಪಡಿಸಿಕೊಳ್ಳಲಿದೆ. ಮತ್ತೊಂದೆಡೆ ಕಿವೀಸ್ ಒಂದು ಗೆಲುವು, ಒಂದು ಸೋಲು ಕಂಡರೂ ಭಾರತಕ್ಕಿಂತ ನೆಟ್​ರನ್ ರೇಟ್​ ಕಡಿಮೆ ಇರಬೇಕು, ಆಗ ಭಾರತ ತನ್ನ ಮುಂದಿನ ಪಂದ್ಯದಲ್ಲಿ ಸೋತರೂ ಸೆಮೀಸ್​ಗೇರಲಿದೆ.
(4 / 5)
ಮತ್ತೊಂದೆಡೆ ಭಾರತ ತಂಡವು ಸೆಮಿಫೈನಲ್ ಪ್ರವೇಶಿಸುವುದು ಅಷ್ಟು ಸುಲಭವಲ್ಲ. ಏಕೆಂದರೆ ಆಸೀಸ್ ವಿರುದ್ಧ ಕೇವಲ ಗೆಲ್ಲುವುದು ಮಾತ್ರವಲ್ಲ, ಬೃಹತ್ ಗೆಲುವು ಕೂಡ ಬೇಕಾಗಿದೆ. ನ್ಯೂಜಿಲೆಂಡ್ ಎರಡಕ್ಕೆ ಎರಡೂ ಗೆದ್ದರೂ ನೆಟ್​​ರನ್​ರೇಟ್​ ಭಾರತಕ್ಕಿಂತ ಕಡಿಮೆ ಇರಬೇಕು. ಮತ್ತೊಂದೆಡೆ ಆಸೀಸ್ ಗೆದ್ದರೂ ಅಥವಾ ಕಡಿಮೆ ಅಂತರದಲ್ಲಿ ಸೋತರೂ ಸೆಮೀಸ್ ಟಿಕೆಟ್ ಖಚಿತಪಡಿಸಿಕೊಳ್ಳಲಿದೆ. ಮತ್ತೊಂದೆಡೆ ಕಿವೀಸ್ ಒಂದು ಗೆಲುವು, ಒಂದು ಸೋಲು ಕಂಡರೂ ಭಾರತಕ್ಕಿಂತ ನೆಟ್​ರನ್ ರೇಟ್​ ಕಡಿಮೆ ಇರಬೇಕು, ಆಗ ಭಾರತ ತನ್ನ ಮುಂದಿನ ಪಂದ್ಯದಲ್ಲಿ ಸೋತರೂ ಸೆಮೀಸ್​ಗೇರಲಿದೆ.(AP)
ಭಾರತ ತಂಡವು ತನ್ನ ಮುಂದಿನ ಪಂದ್ಯದಲ್ಲಿ ಆಸ್ಟ್ರೇಲಿಯಾ ವಿರುದ್ಧ ಸೆಣಸಾಟ ನಡೆಸಲಿದೆ. ನ್ಯೂಜಿಲೆಂಡ್ ತಂಡವು ಶ್ರೀಲಂಕಾ ಮತ್ತು ಪಾಕಿಸ್ತಾನ ತಂಡಗಳ ವಿರುದ್ಧ ಕಾದಾಟ ನಡೆಸಲಿದೆ.
(5 / 5)
ಭಾರತ ತಂಡವು ತನ್ನ ಮುಂದಿನ ಪಂದ್ಯದಲ್ಲಿ ಆಸ್ಟ್ರೇಲಿಯಾ ವಿರುದ್ಧ ಸೆಣಸಾಟ ನಡೆಸಲಿದೆ. ನ್ಯೂಜಿಲೆಂಡ್ ತಂಡವು ಶ್ರೀಲಂಕಾ ಮತ್ತು ಪಾಕಿಸ್ತಾನ ತಂಡಗಳ ವಿರುದ್ಧ ಕಾದಾಟ ನಡೆಸಲಿದೆ.(AP)

    ಹಂಚಿಕೊಳ್ಳಲು ಲೇಖನಗಳು