logo
ಕನ್ನಡ ಸುದ್ದಿ  /  ಫೋಟೋ ಗ್ಯಾಲರಿ  /  Flying Ants: ರೆಕ್ಕೆ ಇರುವೆಗಳು, ಕೀಟಗಳಿಂದ ಭಾರತ Vs ಸೌತ್ ಆಫ್ರಿಕಾ 3ನೇ ಟಿ20 ಸ್ಥಗಿತ, ಇಲ್ಲಿವೆ ಪ್ಲೇಯಿಂಗ್ ಆಂಟ್ಸ್ ಫೋಟೋಸ್

Flying Ants: ರೆಕ್ಕೆ ಇರುವೆಗಳು, ಕೀಟಗಳಿಂದ ಭಾರತ vs ಸೌತ್ ಆಫ್ರಿಕಾ 3ನೇ ಟಿ20 ಸ್ಥಗಿತ, ಇಲ್ಲಿವೆ ಪ್ಲೇಯಿಂಗ್ ಆಂಟ್ಸ್ ಫೋಟೋಸ್

Nov 14, 2024 10:05 AM IST

ನವೆಂಬರ್ 13ರ ಬುಧವಾರ ಸೆಂಚುರಿಯನ್‌ನ ಸೂಪರ್‌ಸ್ಪೋರ್ಟ್ ಪಾರ್ಕ್‌ನಲ್ಲಿ ನಡೆದ 3ನೇ ಟಿ20ಐ ಸಮಯದಲ್ಲಿ ರೆಕ್ಕೆ ಇರುವೆಗಳು ಬೃಹತ್ ಪ್ರಮಾಣದಲ್ಲಿ ಕಾಣಿಸಿಕೊಂಡ ಹಿನ್ನೆಲೆಯಲ್ಲಿ ಕೆಲವೊತ್ತು ಪಂದ್ಯವನ್ನು ಸ್ಥಗಿತಗೊಳಿಸಲಾಯಿತು.

  • ನವೆಂಬರ್ 13ರ ಬುಧವಾರ ಸೆಂಚುರಿಯನ್‌ನ ಸೂಪರ್‌ಸ್ಪೋರ್ಟ್ ಪಾರ್ಕ್‌ನಲ್ಲಿ ನಡೆದ 3ನೇ ಟಿ20ಐ ಸಮಯದಲ್ಲಿ ರೆಕ್ಕೆ ಇರುವೆಗಳು ಬೃಹತ್ ಪ್ರಮಾಣದಲ್ಲಿ ಕಾಣಿಸಿಕೊಂಡ ಹಿನ್ನೆಲೆಯಲ್ಲಿ ಕೆಲವೊತ್ತು ಪಂದ್ಯವನ್ನು ಸ್ಥಗಿತಗೊಳಿಸಲಾಯಿತು.
ನವೆಂಬರ್ 13ರಂದು ಸೆಂಚುರಿಯನ್‌ನ ಸೂಪರ್‌ಸ್ಪೋರ್ಟ್‌ನಲ್ಲಿ ಭಾರತ ಮತ್ತು ಸೌತ್ ಆಫ್ರಿಕಾ ನಡುವಿನ ಮೂರನೇ ಟಿ20ಐ ಪಂದ್ಯವು ಕೆಲಹೊತ್ತು ಸ್ಥಗಿತಗೊಂಡಿತ್ತು. ಹೌದು, ರೆಕ್ಕೆ ಇರುವೆಗಳು ಮತ್ತು ಕೀಟಗಳಿಂದ ಪಂದ್ಯವನ್ನು ಅರ್ಧಗಂಟೆ ಕಾಲ ಸ್ಥಗಿತ ಮಾಡಲಾಗಿತ್ತು.
(1 / 8)
ನವೆಂಬರ್ 13ರಂದು ಸೆಂಚುರಿಯನ್‌ನ ಸೂಪರ್‌ಸ್ಪೋರ್ಟ್‌ನಲ್ಲಿ ಭಾರತ ಮತ್ತು ಸೌತ್ ಆಫ್ರಿಕಾ ನಡುವಿನ ಮೂರನೇ ಟಿ20ಐ ಪಂದ್ಯವು ಕೆಲಹೊತ್ತು ಸ್ಥಗಿತಗೊಂಡಿತ್ತು. ಹೌದು, ರೆಕ್ಕೆ ಇರುವೆಗಳು ಮತ್ತು ಕೀಟಗಳಿಂದ ಪಂದ್ಯವನ್ನು ಅರ್ಧಗಂಟೆ ಕಾಲ ಸ್ಥಗಿತ ಮಾಡಲಾಗಿತ್ತು.(AFP)
ದಕ್ಷಿಣ ಆಫ್ರಿಕಾದ ಇನ್ನಿಂಗ್ಸ್‌ನ ಮೊದಲ ಓವರ್‌ನ ರೆಕ್ಕೆ ಇರುವೆಗಳು ದೊಡ್ಡ ಮಟ್ಟದಲ್ಲಿ ಕಾಣಿಸಿಕೊಂಡ ಕಾರಣ ಆಟ ನಿಲ್ಲಿಸಲಾಗಿತ್ತು. ಅರ್ಷದೀಪ್ ಸಿಂಗ್ ಮೊದಲ ಓವರ್​ ಬೌಲಿಂಗ್ ಮಾಡುವ ವೇಳೆ ರೆಕ್ಕೆ ಇರುವೆಗಳು ಅಡ್ಡಿಪಡಿಸಿದವು. ಆದರೂ ಓವರ್​ ಮುಗಿಸಿದರು.
(2 / 8)
ದಕ್ಷಿಣ ಆಫ್ರಿಕಾದ ಇನ್ನಿಂಗ್ಸ್‌ನ ಮೊದಲ ಓವರ್‌ನ ರೆಕ್ಕೆ ಇರುವೆಗಳು ದೊಡ್ಡ ಮಟ್ಟದಲ್ಲಿ ಕಾಣಿಸಿಕೊಂಡ ಕಾರಣ ಆಟ ನಿಲ್ಲಿಸಲಾಗಿತ್ತು. ಅರ್ಷದೀಪ್ ಸಿಂಗ್ ಮೊದಲ ಓವರ್​ ಬೌಲಿಂಗ್ ಮಾಡುವ ವೇಳೆ ರೆಕ್ಕೆ ಇರುವೆಗಳು ಅಡ್ಡಿಪಡಿಸಿದವು. ಆದರೂ ಓವರ್​ ಮುಗಿಸಿದರು.(REUTERS)
ಆ ಬಳಿಕ ಎರಡನೇ ಓವರ್​ ಎಸೆಯಲು ಒಂದ ಹಾರ್ದಿಕ್ ಬೌಲಿಂಗ್ ಮಾಡಲು ವಿಚಲಿತರಾದರು. ರೆಕ್ಕೆ ಇರುವೆಗಳ ಪ್ರಮಾಣ ವಿಪರೀತವಾದ ಕಾರಣ ಅಂಪೈರ್​​ಗಳು ಪಂದ್ಯ ಸ್ಥಗಿತದ ನಿರ್ಧಾರಕ್ಕೆ ಬಂದರು. 220 ರನ್‌ಗಳ ಗುರಿ ಬೆನ್ನಟ್ಟಿದ ಆಫ್ರಿಕಾ ಆ ಸಮಯದಲ್ಲಿ 7 ರನ್ ಗಳಿಸಿತ್ತು.
(3 / 8)
ಆ ಬಳಿಕ ಎರಡನೇ ಓವರ್​ ಎಸೆಯಲು ಒಂದ ಹಾರ್ದಿಕ್ ಬೌಲಿಂಗ್ ಮಾಡಲು ವಿಚಲಿತರಾದರು. ರೆಕ್ಕೆ ಇರುವೆಗಳ ಪ್ರಮಾಣ ವಿಪರೀತವಾದ ಕಾರಣ ಅಂಪೈರ್​​ಗಳು ಪಂದ್ಯ ಸ್ಥಗಿತದ ನಿರ್ಧಾರಕ್ಕೆ ಬಂದರು. 220 ರನ್‌ಗಳ ಗುರಿ ಬೆನ್ನಟ್ಟಿದ ಆಫ್ರಿಕಾ ಆ ಸಮಯದಲ್ಲಿ 7 ರನ್ ಗಳಿಸಿತ್ತು.(REUTERS)
ರೆಕ್ಕೆ ಇರುವೆಗಳನ್ನು ಮತ್ತು ಕೀಟಗಳನ್ನು ಓಡಿಸಲು ಗ್ರೌಂಡ್‌ಸ್ಟಾಫ್ ವ್ಯಾಕ್ಯೂಮ್ ಕ್ಲೀನರ್‌ಗಳನ್ನು ಬಳಸಬೇಕಾಯಿತು. ಸುಮಾರು ಅರ್ಧಗಂಟೆ ಸ್ಥಗಿತದ ನಂತರ ಆಟಗಾರರು ಮೈದಾನಕ್ಕೆ ಮರಳಿದರು. ಆ ಬಳಿಕ ಯಾವುದೇ ತೊಂದರೆ ಆಗಲಿಲ್ಲ.
(4 / 8)
ರೆಕ್ಕೆ ಇರುವೆಗಳನ್ನು ಮತ್ತು ಕೀಟಗಳನ್ನು ಓಡಿಸಲು ಗ್ರೌಂಡ್‌ಸ್ಟಾಫ್ ವ್ಯಾಕ್ಯೂಮ್ ಕ್ಲೀನರ್‌ಗಳನ್ನು ಬಳಸಬೇಕಾಯಿತು. ಸುಮಾರು ಅರ್ಧಗಂಟೆ ಸ್ಥಗಿತದ ನಂತರ ಆಟಗಾರರು ಮೈದಾನಕ್ಕೆ ಮರಳಿದರು. ಆ ಬಳಿಕ ಯಾವುದೇ ತೊಂದರೆ ಆಗಲಿಲ್ಲ.(AFP)
ಸೌತ್ ಆಫ್ರಿಕಾದಲ್ಲಿ ಕೀಟಗಳ ಕಾರಣದಿಂದ ಪಂದ್ಯ ನಿಂತಿದ್ದು ಇದೇ ಮೊದಲಲ್ಲ. 2017ರಲ್ಲಿ ಶ್ರೀಲಂಕಾ ವಿರುದ್ಧದ ಪಂದ್ಯದಲ್ಲೂ ಸುಮಾರು ಒಂದು ಗಂಟೆ ಆಟ ನಿಂತಿತ್ತು. 
(5 / 8)
ಸೌತ್ ಆಫ್ರಿಕಾದಲ್ಲಿ ಕೀಟಗಳ ಕಾರಣದಿಂದ ಪಂದ್ಯ ನಿಂತಿದ್ದು ಇದೇ ಮೊದಲಲ್ಲ. 2017ರಲ್ಲಿ ಶ್ರೀಲಂಕಾ ವಿರುದ್ಧದ ಪಂದ್ಯದಲ್ಲೂ ಸುಮಾರು ಒಂದು ಗಂಟೆ ಆಟ ನಿಂತಿತ್ತು. (REUTERS)
ಸೌತ್ ಆಫ್ರಿಕಾ ವಿರುದ್ಧದ ಮೂರನೇ ಪಂದ್ಯದಲ್ಲಿ ಟೀಮ್ ಇಂಡಿಯಾ 11 ರನ್​ಗಳಿಂದ ರೋಚಕ ಗೆಲುವು ಸಾಧಿಸಿತು. ಇದರೊಂದಿಗೆ ನಾಲ್ಕು ಪಂದ್ಯಗಳ ಸರಣಿಯಲ್ಲಿ 2-1ರಲ್ಲಿ ಮುನ್ನಡೆ ಪಡೆದಿದೆ. ಅಂತಿಮ ಹಾಗೂ ಕೊನೆಯ ಟಿ20ಐ ಪಂದ್ಯ ನವೆಂಬರ್ 15ರಂದು ನಡೆಯಲಿದೆ.
(6 / 8)
ಸೌತ್ ಆಫ್ರಿಕಾ ವಿರುದ್ಧದ ಮೂರನೇ ಪಂದ್ಯದಲ್ಲಿ ಟೀಮ್ ಇಂಡಿಯಾ 11 ರನ್​ಗಳಿಂದ ರೋಚಕ ಗೆಲುವು ಸಾಧಿಸಿತು. ಇದರೊಂದಿಗೆ ನಾಲ್ಕು ಪಂದ್ಯಗಳ ಸರಣಿಯಲ್ಲಿ 2-1ರಲ್ಲಿ ಮುನ್ನಡೆ ಪಡೆದಿದೆ. ಅಂತಿಮ ಹಾಗೂ ಕೊನೆಯ ಟಿ20ಐ ಪಂದ್ಯ ನವೆಂಬರ್ 15ರಂದು ನಡೆಯಲಿದೆ.(AFP)
ಈ ಪಂದ್ಯದಲ್ಲಿ ಟಾಸ್ ಸೋತು ಮೊದಲು ಬ್ಯಾಟಿಂಗ್ ನಡೆಸಿದ ಭಾರತ ತನ್ನ ನಿಗದಿತ 20 ಓವರ್​ಗಳಲ್ಲಿ 6 ವಿಕೆಟ್ ನಷ್ಟಕ್ಕೆ 219 ರನ್ ಪೇರಿಸಿತು. ತಿಲಕ್ ವರ್ಮಾ 56 ಎಸೆತಗಳಲ್ಲಿ 8 ಬೌಂಡರಿ, 7 ಸಿಕ್ಸರ್ ಸಹಿತ ಅಜೇಯ 107 ರನ್ ಬಾರಿಸಿದರು. ಅಭಿಷೇಕ್ ಶರ್ಮಾ 50 ರನ್ ಸಿಡಿಸಿದರು.
(7 / 8)
ಈ ಪಂದ್ಯದಲ್ಲಿ ಟಾಸ್ ಸೋತು ಮೊದಲು ಬ್ಯಾಟಿಂಗ್ ನಡೆಸಿದ ಭಾರತ ತನ್ನ ನಿಗದಿತ 20 ಓವರ್​ಗಳಲ್ಲಿ 6 ವಿಕೆಟ್ ನಷ್ಟಕ್ಕೆ 219 ರನ್ ಪೇರಿಸಿತು. ತಿಲಕ್ ವರ್ಮಾ 56 ಎಸೆತಗಳಲ್ಲಿ 8 ಬೌಂಡರಿ, 7 ಸಿಕ್ಸರ್ ಸಹಿತ ಅಜೇಯ 107 ರನ್ ಬಾರಿಸಿದರು. ಅಭಿಷೇಕ್ ಶರ್ಮಾ 50 ರನ್ ಸಿಡಿಸಿದರು.(ANI)
220 ರನ್​ಗಳ ಗುರಿ ಬೆನ್ನಟ್ಟಿದ ದಕ್ಷಿಣ ಆಫ್ರಿಕಾ, ತನ್ನ ನಿಗದಿತ 20 ಓವರ್​​ಗಳಲ್ಲಿ 7 ವಿಕೆಟ್ ನಷ್ಟಕ್ಕೆ 208 ರನ್ ಗಳಿಸಿತು. ಮಾರ್ಕೋ ಜಾನ್ಸನ್ ವೇಗದ ಅರ್ಧಶತಕದ ಹೋರಾಟದ ನಡುವೆಯೂ 11 ರನ್​ಗಳಿಂದ ಸೋಲು ಕಂಡಿತು.
(8 / 8)
220 ರನ್​ಗಳ ಗುರಿ ಬೆನ್ನಟ್ಟಿದ ದಕ್ಷಿಣ ಆಫ್ರಿಕಾ, ತನ್ನ ನಿಗದಿತ 20 ಓವರ್​​ಗಳಲ್ಲಿ 7 ವಿಕೆಟ್ ನಷ್ಟಕ್ಕೆ 208 ರನ್ ಗಳಿಸಿತು. ಮಾರ್ಕೋ ಜಾನ್ಸನ್ ವೇಗದ ಅರ್ಧಶತಕದ ಹೋರಾಟದ ನಡುವೆಯೂ 11 ರನ್​ಗಳಿಂದ ಸೋಲು ಕಂಡಿತು.(REUTERS)

    ಹಂಚಿಕೊಳ್ಳಲು ಲೇಖನಗಳು