logo
ಕನ್ನಡ ಸುದ್ದಿ  /  ಫೋಟೋ ಗ್ಯಾಲರಿ  /  Flying Car: ದುಬೈನಲ್ಲಿ ಮೊದಲ ಬಾರಿಗೆ ಚೀನೀ ಹಾರುವ ಕಾರಿನ ಹಾರಾಟ!; ಟ್ಯಾಕ್ಸಿಯಾಗಿ ಬಳಕೆ ಸಾಧ್ಯತೆ; ಇಲ್ಲಿವೆ ಫೋಟೋಸ್‌

Flying Car: ದುಬೈನಲ್ಲಿ ಮೊದಲ ಬಾರಿಗೆ ಚೀನೀ ಹಾರುವ ಕಾರಿನ ಹಾರಾಟ!; ಟ್ಯಾಕ್ಸಿಯಾಗಿ ಬಳಕೆ ಸಾಧ್ಯತೆ; ಇಲ್ಲಿವೆ ಫೋಟೋಸ್‌

Oct 12, 2022 12:54 PM IST

Flying Car: ನಾವು ನಿಧಾನವಾಗಿ ಅಂತಾರಾಷ್ಟ್ರೀಯ ಮಾರುಕಟ್ಟೆಯನ್ನು ಒಂದೊಂದಾಗಿ ಪ್ರವೇಶಿಸುತ್ತಿದ್ದೇವೆ. ನಾವು ದುಬೈ ಅನ್ನು ಇದಕ್ಕಾಗಿ ಆರಿಸಿದ್ದೇವೆ. ಏಕೆಂದರೆ ದುಬೈ ವಿಶ್ವದ ಹೊಸ ನಗರವಾಗಿದೆ ಎಂದು Xpeng Aerohutನ ಮ್ಯಾನೇಜರ್ Mingguan Qiu ಹೇಳಿದ್ದಾರೆ. 

  • Flying Car: ನಾವು ನಿಧಾನವಾಗಿ ಅಂತಾರಾಷ್ಟ್ರೀಯ ಮಾರುಕಟ್ಟೆಯನ್ನು ಒಂದೊಂದಾಗಿ ಪ್ರವೇಶಿಸುತ್ತಿದ್ದೇವೆ. ನಾವು ದುಬೈ ಅನ್ನು ಇದಕ್ಕಾಗಿ ಆರಿಸಿದ್ದೇವೆ. ಏಕೆಂದರೆ ದುಬೈ ವಿಶ್ವದ ಹೊಸ ನಗರವಾಗಿದೆ ಎಂದು Xpeng Aerohutನ ಮ್ಯಾನೇಜರ್ Mingguan Qiu ಹೇಳಿದ್ದಾರೆ. 
ಚೀನಾದ ಎಲೆಕ್ಟ್ರಿಕ್ ವಾಹನ ತಯಾರಕ ಎಕ್ಸ್‌ಪೆಂಗ್ ಇಂಕ್ ಹಾರುವ ಕಾರನ್ನು ರಚಿಸಿದೆ. ಈ ಕಾರು ತನ್ನ ಮೊದಲ ಸಾರ್ವಜನಿಕ ಹಾರಾಟವನ್ನು ಮಾಡಿದೆ.
(1 / 8)
ಚೀನಾದ ಎಲೆಕ್ಟ್ರಿಕ್ ವಾಹನ ತಯಾರಕ ಎಕ್ಸ್‌ಪೆಂಗ್ ಇಂಕ್ ಹಾರುವ ಕಾರನ್ನು ರಚಿಸಿದೆ. ಈ ಕಾರು ತನ್ನ ಮೊದಲ ಸಾರ್ವಜನಿಕ ಹಾರಾಟವನ್ನು ಮಾಡಿದೆ.(AFP)
ದುಬೈನಲ್ಲಿ ಈ ಹಾರುವ ಕಾರು ತನ್ನ ಮೊದಲ ಹಾರಾಟ ನಡೆಸಿ, ಜಗತ್ತಿಗೆ ಪರಿಚಯಿಸಲ್ಪಟ್ಟಿದೆ. ಎಕ್ಸ್‌ಪೆಂಗ್ ಇಂಕ್ ಅಂತರಾಷ್ಟ್ರೀಯ ಮಾರುಕಟ್ಟೆಯಲ್ಲಿ ಇಲೆಕ್ಟ್ರಿಕ್ ವಿಮಾನವನ್ನು ತಯಾರಿಸುವುದಕ್ಕಾಗಿ ಕೆಲಸ ಮಾಡುತ್ತಿದೆ.
(2 / 8)
ದುಬೈನಲ್ಲಿ ಈ ಹಾರುವ ಕಾರು ತನ್ನ ಮೊದಲ ಹಾರಾಟ ನಡೆಸಿ, ಜಗತ್ತಿಗೆ ಪರಿಚಯಿಸಲ್ಪಟ್ಟಿದೆ. ಎಕ್ಸ್‌ಪೆಂಗ್ ಇಂಕ್ ಅಂತರಾಷ್ಟ್ರೀಯ ಮಾರುಕಟ್ಟೆಯಲ್ಲಿ ಇಲೆಕ್ಟ್ರಿಕ್ ವಿಮಾನವನ್ನು ತಯಾರಿಸುವುದಕ್ಕಾಗಿ ಕೆಲಸ ಮಾಡುತ್ತಿದೆ.(REUTERS)
X2 ಎರಡು ಆಸನಗಳ ವಿದ್ಯುತ್ ಲಂಬವಾದ ಟೇಕ್ ಆಫ್ ಮತ್ತು ಲ್ಯಾಂಡಿಂಗ್ ಆಗಬಲ್ಲ ಹಾರುವ ಕಾರಾಗಿದೆ. ಈ ವಾಹನವು 8 ಪ್ರೊಪೆಲ್ಲರ್‌ಗಳನ್ನು ಹೊಂದಿದೆ, ಅದರ ನಾಲ್ಕು ಮೂಲೆಗಳಲ್ಲಿ ಪ್ರತಿ ಎರಡು ಪ್ರೊಪೆಲ್ಲರ್‌ಗಳನ್ನು ಹೊಂದಿದ್ದು, ಅದನ್ನು ಗಾಳಿಯಲ್ಲಿ ಮೇಲೆತ್ತುತ್ತದೆ.
(3 / 8)
X2 ಎರಡು ಆಸನಗಳ ವಿದ್ಯುತ್ ಲಂಬವಾದ ಟೇಕ್ ಆಫ್ ಮತ್ತು ಲ್ಯಾಂಡಿಂಗ್ ಆಗಬಲ್ಲ ಹಾರುವ ಕಾರಾಗಿದೆ. ಈ ವಾಹನವು 8 ಪ್ರೊಪೆಲ್ಲರ್‌ಗಳನ್ನು ಹೊಂದಿದೆ, ಅದರ ನಾಲ್ಕು ಮೂಲೆಗಳಲ್ಲಿ ಪ್ರತಿ ಎರಡು ಪ್ರೊಪೆಲ್ಲರ್‌ಗಳನ್ನು ಹೊಂದಿದ್ದು, ಅದನ್ನು ಗಾಳಿಯಲ್ಲಿ ಮೇಲೆತ್ತುತ್ತದೆ.(REUTERS)
ದುಬೈನಲ್ಲಿ ಸೋಮವಾರ ಮಾನವರಹಿತ ಕಾರನ್ನು ಪರೀಕ್ಷಿಸಲಾಯಿತು. 90 ನಿಮಿಷಗಳ ಕಾಲ ಹಾರಾಟ ನಡೆಸಿದ ನಂತರ, ಈ ಕಾರಿನ ತಯಾರಕರು ಮುಂದಿನ ಆವೃತ್ತಿಯ ಹಾರುವ ಕಾರಿನಲ್ಲಿ ಇದು ಮುಖ್ಯ ಎಂದು ಹೇಳಿದರು.
(4 / 8)
ದುಬೈನಲ್ಲಿ ಸೋಮವಾರ ಮಾನವರಹಿತ ಕಾರನ್ನು ಪರೀಕ್ಷಿಸಲಾಯಿತು. 90 ನಿಮಿಷಗಳ ಕಾಲ ಹಾರಾಟ ನಡೆಸಿದ ನಂತರ, ಈ ಕಾರಿನ ತಯಾರಕರು ಮುಂದಿನ ಆವೃತ್ತಿಯ ಹಾರುವ ಕಾರಿನಲ್ಲಿ ಇದು ಮುಖ್ಯ ಎಂದು ಹೇಳಿದರು.(REUTERS)
ನಾವು ನಿಧಾನವಾಗಿ ಅಂತಾರಾಷ್ಟ್ರೀಯ ಮಾರುಕಟ್ಟೆಯನ್ನು ಒಂದೊಂದಾಗಿ ಪ್ರವೇಶಿಸುತ್ತಿದ್ದೇವೆ. ನಾವು ದುಬೈ ಅನ್ನು ಇದಕ್ಕಾಗಿ ಆರಿಸಿದ್ದೇವೆ. ಏಕೆಂದರೆ ದುಬೈ ವಿಶ್ವದ ಹೊಸ ನಗರವಾಗಿದೆ ಎಂದು Xpeng Aerohutನ ಮ್ಯಾನೇಜರ್ Mingguan Qiu ಹೇಳಿದ್ದಾರೆ.
(5 / 8)
ನಾವು ನಿಧಾನವಾಗಿ ಅಂತಾರಾಷ್ಟ್ರೀಯ ಮಾರುಕಟ್ಟೆಯನ್ನು ಒಂದೊಂದಾಗಿ ಪ್ರವೇಶಿಸುತ್ತಿದ್ದೇವೆ. ನಾವು ದುಬೈ ಅನ್ನು ಇದಕ್ಕಾಗಿ ಆರಿಸಿದ್ದೇವೆ. ಏಕೆಂದರೆ ದುಬೈ ವಿಶ್ವದ ಹೊಸ ನಗರವಾಗಿದೆ ಎಂದು Xpeng Aerohutನ ಮ್ಯಾನೇಜರ್ Mingguan Qiu ಹೇಳಿದ್ದಾರೆ.(REUTERS)
ಹಾರುವ ಕಾರಿನ ಸುಧಾರಿತ ಆವೃತ್ತಿಯನ್ನು ಕಂಪನಿಯು ಶೀಘ್ರದಲ್ಲೇ ಬಿಡುಗಡೆ ಮಾಡಲಿದೆ. ಹಾರಾಟದ ಹೊರತಾಗಿ, ಕಾರನ್ನು ರಸ್ತೆಯಲ್ಲೂ ಓಡಿಸಬಹುದು. ಪ್ರಸ್ತುತ, X2 ಕಾರು ಮಾತ್ರ ಹಾರಬಲ್ಲದು.
(6 / 8)
ಹಾರುವ ಕಾರಿನ ಸುಧಾರಿತ ಆವೃತ್ತಿಯನ್ನು ಕಂಪನಿಯು ಶೀಘ್ರದಲ್ಲೇ ಬಿಡುಗಡೆ ಮಾಡಲಿದೆ. ಹಾರಾಟದ ಹೊರತಾಗಿ, ಕಾರನ್ನು ರಸ್ತೆಯಲ್ಲೂ ಓಡಿಸಬಹುದು. ಪ್ರಸ್ತುತ, X2 ಕಾರು ಮಾತ್ರ ಹಾರಬಲ್ಲದು.(REUTERS)
ಹೊಸ ಆವೃತ್ತಿಯಲ್ಲಿ ಜನರು ಯಾವಾಗ ಬೇಕಾದರೂ ವಾಹನ ಚಲಾಯಿಸಬಹುದು ಎಂದು ಕಂಪನಿ ಹೇಳಿದೆ. ರಸ್ತೆಯ ಅಂತ್ಯದ ನಂತರ, ಅವರು ಹಾರಾಟ ನಡೆಸಲು ಮತ್ತು ತಮ್ಮ ಪ್ರಯಾಣವನ್ನು ಆನಂದಿಸಲು ಸಾಧ್ಯವಿದೆ. ಇಂಡಿಲಿಕೇಟ್ ಡ್ರೈವಿಂಗ್ ಮೋಡ್‌ನ ಸಹಾಯದಿಂದ ಯಾರಾದರೂ ಈ ಕಾರನ್ನು ಓಡಿಸಬಹುದು.
(7 / 8)
ಹೊಸ ಆವೃತ್ತಿಯಲ್ಲಿ ಜನರು ಯಾವಾಗ ಬೇಕಾದರೂ ವಾಹನ ಚಲಾಯಿಸಬಹುದು ಎಂದು ಕಂಪನಿ ಹೇಳಿದೆ. ರಸ್ತೆಯ ಅಂತ್ಯದ ನಂತರ, ಅವರು ಹಾರಾಟ ನಡೆಸಲು ಮತ್ತು ತಮ್ಮ ಪ್ರಯಾಣವನ್ನು ಆನಂದಿಸಲು ಸಾಧ್ಯವಿದೆ. ಇಂಡಿಲಿಕೇಟ್ ಡ್ರೈವಿಂಗ್ ಮೋಡ್‌ನ ಸಹಾಯದಿಂದ ಯಾರಾದರೂ ಈ ಕಾರನ್ನು ಓಡಿಸಬಹುದು.(REUTERS)
Xpeng ಕಂಪನಿಯು 2013 ರಲ್ಲಿ 15 ಸಾವಿರ ಮಾನವರಹಿತ ವಿಮಾನಗಳನ್ನು ಯಶಸ್ವಿಯಾಗಿ ಪೂರ್ಣಗೊಳಿಸಿದೆ. ಇಲ್ಲಿಯವರೆಗೆ ಇದು ರೆಡ್ ಡಾಟ್ ಪ್ರಶಸ್ತಿ, IF ಪ್ರಶಸ್ತಿ, IDEA ವಿನ್ಯಾಸ ಪ್ರಶಸ್ತಿ ಸೇರಿದಂತೆ ಎಂಜಿನಿಯರಿಂಗ್‌ಗಾಗಿ ಹಲವು ಕೈಗಾರಿಕಾ ವಿನ್ಯಾಸ ಪ್ರಶಸ್ತಿಗಳನ್ನು ಗೆದ್ದಿದೆ.
(8 / 8)
Xpeng ಕಂಪನಿಯು 2013 ರಲ್ಲಿ 15 ಸಾವಿರ ಮಾನವರಹಿತ ವಿಮಾನಗಳನ್ನು ಯಶಸ್ವಿಯಾಗಿ ಪೂರ್ಣಗೊಳಿಸಿದೆ. ಇಲ್ಲಿಯವರೆಗೆ ಇದು ರೆಡ್ ಡಾಟ್ ಪ್ರಶಸ್ತಿ, IF ಪ್ರಶಸ್ತಿ, IDEA ವಿನ್ಯಾಸ ಪ್ರಶಸ್ತಿ ಸೇರಿದಂತೆ ಎಂಜಿನಿಯರಿಂಗ್‌ಗಾಗಿ ಹಲವು ಕೈಗಾರಿಕಾ ವಿನ್ಯಾಸ ಪ್ರಶಸ್ತಿಗಳನ್ನು ಗೆದ್ದಿದೆ.(REUTERS)

    ಹಂಚಿಕೊಳ್ಳಲು ಲೇಖನಗಳು