logo
ಕನ್ನಡ ಸುದ್ದಿ  /  ಫೋಟೋ ಗ್ಯಾಲರಿ  /  Egg Bonda Recipe: ಈ ಮಳೆಯ ಚಳಿಗೆ ಬಿಸಿಬಿಸಿ ಎಗ್‌ ಬೋಂಡಾ ತಿಂದ್ರೆ ಹೇಗಿರುತ್ತೆ? ಮೊಟ್ಟೆ ಪ್ರಿಯರಿಗಿದೋ ಗರಿಗರಿ ಮೊಟ್ಟೆ ಬೋಂಡಾ ರೆಸಿಪಿ

Egg Bonda Recipe: ಈ ಮಳೆಯ ಚಳಿಗೆ ಬಿಸಿಬಿಸಿ ಎಗ್‌ ಬೋಂಡಾ ತಿಂದ್ರೆ ಹೇಗಿರುತ್ತೆ? ಮೊಟ್ಟೆ ಪ್ರಿಯರಿಗಿದೋ ಗರಿಗರಿ ಮೊಟ್ಟೆ ಬೋಂಡಾ ರೆಸಿಪಿ

Jul 21, 2024 04:08 PM IST

Egg Bonda Recipe: ಮಳೆಗಾಲದಲ್ಲಿ ಹಪ್ಪಳ ಸೆಂಡಿಗೆ ಮಾತ್ರವಲ್ಲದೆ ಬಜ್ಜಿ ಪಕೋಡ ಬೋಂಡಾ ತಿಂದ್ರೆ ವಾಹ್‌ ಎನಿಸುತ್ತದೆ. ಮೊಟ್ಟೆ ಪ್ರಿಯರಂತೂ ಮೊಟ್ಟೆ ಬೋಂಡಾ (ಎಗ್‌ ಪಕೋಡ) ತಿನ್ನಲು ಬಯಸಬಹುದು. ಎಗ್‌ ಬೋಂಡ ಮಾಡೋದು ತುಂಬಾ ಸುಲಭ. ಎಗ್‌ ಬೋಂಡಾ/ ಎಗ್‌ ಪಕೋಡ ಮಾಡುವ ಸರಳ ವಿಧಾನ ಇಲ್ಲಿದೆ.

  • Egg Bonda Recipe: ಮಳೆಗಾಲದಲ್ಲಿ ಹಪ್ಪಳ ಸೆಂಡಿಗೆ ಮಾತ್ರವಲ್ಲದೆ ಬಜ್ಜಿ ಪಕೋಡ ಬೋಂಡಾ ತಿಂದ್ರೆ ವಾಹ್‌ ಎನಿಸುತ್ತದೆ. ಮೊಟ್ಟೆ ಪ್ರಿಯರಂತೂ ಮೊಟ್ಟೆ ಬೋಂಡಾ (ಎಗ್‌ ಪಕೋಡ) ತಿನ್ನಲು ಬಯಸಬಹುದು. ಎಗ್‌ ಬೋಂಡ ಮಾಡೋದು ತುಂಬಾ ಸುಲಭ. ಎಗ್‌ ಬೋಂಡಾ/ ಎಗ್‌ ಪಕೋಡ ಮಾಡುವ ಸರಳ ವಿಧಾನ ಇಲ್ಲಿದೆ.
Egg bonda, Egg Pakoda, Egg Pakora Recipe: ಮಕ್ಕಳಿಂದ ಹಿರಿಯವರೆಗೆ ಮೊಟ್ಟೆ ಆರೋಗ್ಯಕರ ಆಹಾರ. ಒಂದು ಮೊಟ್ಟೆಯಲ್ಲಿ 77 ಕ್ಯಾಲೋರಿ ಇರುತ್ತದೆ. ಇದರಲ್ಲಿ 6 ಗ್ರಾಂ ಅತ್ಯಧಿಕ ಗುಣಮಟ್ಟದ ಪ್ರೋಟೀನ್‌ ಇರುತ್ತದೆ. ಐರನ್‌, ವಿಟಮಿನ್‌, ಮಿನರಲ್ಸ್‌, ಕೋರ್ಬೊನಯ್ಡ್ಸ್‌ ಇತ್ಯಾದಿ ಅಗತ್ಯ ಪೋಷಕಾಂಶಗಳು ಇರುತ್ತವೆ. ಈ ಮೊಟ್ಟೆಯನ್ನ ಈ ಮಳೆಗಾಲದಲ್ಲಿ ಬಿಸಿಬಿಸಿ ಬೋಂಡ/ ಬಿಸಿ ಪಕೋಡ ಮಾಡಲು ಬಯಸುವವರಿಗೆ ಇಲ್ಲಿದೆ ಎಗ್‌ ಬೋಂಡಾ ರೆಸಿಪಿ. 
(1 / 9)
Egg bonda, Egg Pakoda, Egg Pakora Recipe: ಮಕ್ಕಳಿಂದ ಹಿರಿಯವರೆಗೆ ಮೊಟ್ಟೆ ಆರೋಗ್ಯಕರ ಆಹಾರ. ಒಂದು ಮೊಟ್ಟೆಯಲ್ಲಿ 77 ಕ್ಯಾಲೋರಿ ಇರುತ್ತದೆ. ಇದರಲ್ಲಿ 6 ಗ್ರಾಂ ಅತ್ಯಧಿಕ ಗುಣಮಟ್ಟದ ಪ್ರೋಟೀನ್‌ ಇರುತ್ತದೆ. ಐರನ್‌, ವಿಟಮಿನ್‌, ಮಿನರಲ್ಸ್‌, ಕೋರ್ಬೊನಯ್ಡ್ಸ್‌ ಇತ್ಯಾದಿ ಅಗತ್ಯ ಪೋಷಕಾಂಶಗಳು ಇರುತ್ತವೆ. ಈ ಮೊಟ್ಟೆಯನ್ನ ಈ ಮಳೆಗಾಲದಲ್ಲಿ ಬಿಸಿಬಿಸಿ ಬೋಂಡ/ ಬಿಸಿ ಪಕೋಡ ಮಾಡಲು ಬಯಸುವವರಿಗೆ ಇಲ್ಲಿದೆ ಎಗ್‌ ಬೋಂಡಾ ರೆಸಿಪಿ. (Photos: Praveen Chandra)
ಎಗ್‌ಬೋಂಡಾ ಮಾಡುವುದು ತುಂಬಾ ಸುಲಭ. ಇದಕ್ಕೆ ಹಾಕುವ ಪದಾರ್ಥಗಳಲ್ಲಿ ಬದಲಾವಣೆಗಳನ್ನು ನಿಮ್ಮ ಟೇಸ್ಟ್‌ಗೆ ತಕ್ಕಂತೆ ಮಾಡಬಹುದು. ಆದರೆ, ಇಲ್ಲಿ ತಿಳಿಸುವ ವಿಧಾನದ ಮೂಲಕ ಮಾಡಿದರೆ ಮೊಟ್ಟೆಗೆ ಮಸಾಲ ಚೆನ್ನಾಗಿ ಅಂಟಿಕೊಳ್ಳುತ್ತದೆ. ಜತೆಗೆ, ತಿನ್ನಲು ರುಚಿಕರವಾಗಿರುತ್ತದೆ. 
(2 / 9)

ಎಗ್‌ ಬೋಂಡ ಮಾಡಲು ಬೇಕಾಗುವ ಸಾಮಾಗ್ರಿಗಳು: 8 ಮೊಟ್ಟೆ (ನಿಮಗೆ ಬೇಕಾದ್ದಷ್ಟು), 1 ಕಪ್‌ ಕಡಲೆ ಹಿಟ್ಟು (ಸುಮಾರು 200 ಗ್ರಾಂ), ಅಕ್ಕಿ ಹಿಟ್ಟು - ನಾಲ್ಕು ಟೇಬಲ್‌ ಸ್ಪೂನ್‌, ರುಚಿಗೆ ತಕ್ಕಷ್ಟು ಉಪ್ಪು, ಒಂದು ಚಮಚ ಮೆಣಸಿನ ಪುಡಿ, ಅರ್ಧ ಚಮಚ ಜೀರಿಗೆ, ಅರ್ಧ ಚಮಚ ಅರಶಿನ, ಅರ್ಧ ಚಮಚ ಕರಿಮೆಣಸಿನ ಪುಡಿ, ಅರ್ಧ ಚಮಚ ಶುಂಠಿ ಬೆಳ್ಳುಳ್ಳಿ ಪೇಸ್ಟ್‌, ಬೋಂಡ ಮಾಡಲು ಎಣ್ಣೆ.
(3 / 9)

ಮೊದಲಿಗೆ ಎಂಟು ಮೊಟ್ಟೆ ಬೇಯಿಸಿಟ್ಟುಕೊಳ್ಳಿ. ಬೇಯಿಸಿದ ಮೊಟ್ಟೆಯನ್ನು ಸಿಪ್ಪೆ ತೆಗೆದು ಅರ್ಧ ಅರ್ಧ ಭಾಗ ಕಟ್‌ ಮಾಡಿಟ್ಟುಕೊಳ್ಳಿ.
(4 / 9)
ಮೊದಲಿಗೆ ಎಂಟು ಮೊಟ್ಟೆ ಬೇಯಿಸಿಟ್ಟುಕೊಳ್ಳಿ. ಬೇಯಿಸಿದ ಮೊಟ್ಟೆಯನ್ನು ಸಿಪ್ಪೆ ತೆಗೆದು ಅರ್ಧ ಅರ್ಧ ಭಾಗ ಕಟ್‌ ಮಾಡಿಟ್ಟುಕೊಳ್ಳಿ.
ಈಗ ಒಂದು ಪಾತ್ರೆಯಲ್ಲಿ ಮಸಲಾ ರೆಡಿ ಮಾಡಿ. ಮೇಲೆ ತಿಳಿಸಿದ ಸಾಮಾಗ್ರಿಗಳನ್ನೆಲ್ಲ ಸ್ವಲ್ಪ ನೀರು ಹಾಕಿ ಚೆನ್ನಾಗಿ ಕಲಸಿ. ಗಂಟು ಇರದಂತೆ ಚೆನ್ನಾಗಿ ಕಲಸಿ. ದೋಸೆ ಹಿಟ್ಟಿನಂತೆ ಹದವಾದ ಮಿಶ್ರಣ ರೆಡಿಯಾಗಲಿ. 
(5 / 9)
ಈಗ ಒಂದು ಪಾತ್ರೆಯಲ್ಲಿ ಮಸಲಾ ರೆಡಿ ಮಾಡಿ. ಮೇಲೆ ತಿಳಿಸಿದ ಸಾಮಾಗ್ರಿಗಳನ್ನೆಲ್ಲ ಸ್ವಲ್ಪ ನೀರು ಹಾಕಿ ಚೆನ್ನಾಗಿ ಕಲಸಿ. ಗಂಟು ಇರದಂತೆ ಚೆನ್ನಾಗಿ ಕಲಸಿ. ದೋಸೆ ಹಿಟ್ಟಿನಂತೆ ಹದವಾದ ಮಿಶ್ರಣ ರೆಡಿಯಾಗಲಿ. 
ಈ ರೀತಿ ಹಿಟ್ಟು ರೆಡಿ ಮಾಡಿಟ್ಟು ಒಂದು ಹದಿನೈದು ನಿಮಿಷ ತೆಗೆದಿಡಿ. ಇದಾದ ಬಳಿಕ ಬೋಂಡಾ ಮಾಡಲು ರೆಡಿಯಾಗಿ. ಮೊಟ್ಟೆಯನ್ನು ಅದ್ದಿ ಬಿಸಿಬಿಸಿ ಎಣ್ಣೆ ಹಾಕುವ ಸಮಯ.
(6 / 9)
ಈ ರೀತಿ ಹಿಟ್ಟು ರೆಡಿ ಮಾಡಿಟ್ಟು ಒಂದು ಹದಿನೈದು ನಿಮಿಷ ತೆಗೆದಿಡಿ. ಇದಾದ ಬಳಿಕ ಬೋಂಡಾ ಮಾಡಲು ರೆಡಿಯಾಗಿ. ಮೊಟ್ಟೆಯನ್ನು ಅದ್ದಿ ಬಿಸಿಬಿಸಿ ಎಣ್ಣೆ ಹಾಕುವ ಸಮಯ.
ಎಣ್ಣೆ ಸರಿಯಾಗಿ ಬಿಸಿಯಾಗಲಿ. ಮೊಟ್ಟೆಯನ್ನು ಮಿಶ್ರಣದಲ್ಲಿ ಅದ್ದಿ ಬಿಸಿಬಿಸಿ ಎಣ್ಣೆಗೆ ಹಾಕುತ್ತ ಬನ್ನಿ. ಮೀಡಿಯಂ ಬೆಂಕಿಯಲ್ಲಿ ತುಸು ಬೆಂದರೆ ಸಾಕು. ಈ ರೀತಿ ಎಂಟು ಮೊಟ್ಟೆಯಲ್ಲಿ ಹದಿನಾರು ಮೊಟ್ಟೆ ಬೋಂಡಾ ರೆಡಿಯಾಗುತ್ತದೆ. ಮೊಟ್ಟೆ ಪೀಸ್‌ಗಳು ಮುಗಿದವು, ಮಸಲಾ ಉಳಿಯಿತೇ? ಚಿಂತಿಸಬೇಡಿ.
(7 / 9)

ಮನೆಯಲ್ಲಿ ಆಲೂಗಡ್ಡೆ ಅಥವಾ ಬಾಳೆಕಾಯಿ ಇದ್ದರೆ ಅದನ್ನು ಸ್ಲೈಸ್‌ ಮಾಡಿ ಇದೇ ಮಸಲಾಕ್ಕೆ ಅದ್ದಿ ಫ್ರೈ ಮಾಡಿ. ಆಲೂ ಬೋಂಡ ಅಥವಾ ಬಾಳೆಕಾಯಿ ಬೋಂಡವನ್ನೂ ಇದರಲ್ಲೇ ಮಾಡಬಹುದು. ದೊಣ್ಣೆ ಮೆಣಸಿನಕಾಯಿ ಇದ್ದರೆ ಮೆಣಸಿನ ಕಾಯಿ ಬಜ್ಜಿ ಮಾಡಬಹುದು.
(8 / 9)
ಮನೆಯಲ್ಲಿ ಆಲೂಗಡ್ಡೆ ಅಥವಾ ಬಾಳೆಕಾಯಿ ಇದ್ದರೆ ಅದನ್ನು ಸ್ಲೈಸ್‌ ಮಾಡಿ ಇದೇ ಮಸಲಾಕ್ಕೆ ಅದ್ದಿ ಫ್ರೈ ಮಾಡಿ. ಆಲೂ ಬೋಂಡ ಅಥವಾ ಬಾಳೆಕಾಯಿ ಬೋಂಡವನ್ನೂ ಇದರಲ್ಲೇ ಮಾಡಬಹುದು. ದೊಣ್ಣೆ ಮೆಣಸಿನಕಾಯಿ ಇದ್ದರೆ ಮೆಣಸಿನ ಕಾಯಿ ಬಜ್ಜಿ ಮಾಡಬಹುದು.
ಈ ಮಳೆಗಾಲದಲ್ಲಿ ಚಳಿಚಳಿ ಗಾಳಿಯ ನಡುವೆ ಈ ಬೋಂಡವನ್ನು ಬಿಸಿಬಿಸಿಯಾಗಿ ತಿಂದರೆ ವಾಹ್‌ ಎಣಿಸಬಹುದು. ಮೇಲೆ ತಿಳಿಸಿದ ಪಾಕ ವಿಧಾನದ ಬದಲು ಅದಕ್ಕೆ ತುಸು ಕೊತ್ತಂಬರಿ ಸೊಪ್ಪು, ಕರಿಬೇವಿನ ಸೊಪ್ಪನ್ನೂ ಕಟ್‌ ಮಾಡಿ ಹಾಕಬಹುದು. ನಿಮ್ಮ ಫ್ಲೇವರ್‌, ನಿಮ್ಮ ರುಚಿಗೆ ತಕ್ಕಂತೆ ರೆಸಿಪಿ ಮಾಡಿಕೊಳ್ಳಬಹುದು. 
(9 / 9)
ಈ ಮಳೆಗಾಲದಲ್ಲಿ ಚಳಿಚಳಿ ಗಾಳಿಯ ನಡುವೆ ಈ ಬೋಂಡವನ್ನು ಬಿಸಿಬಿಸಿಯಾಗಿ ತಿಂದರೆ ವಾಹ್‌ ಎಣಿಸಬಹುದು. ಮೇಲೆ ತಿಳಿಸಿದ ಪಾಕ ವಿಧಾನದ ಬದಲು ಅದಕ್ಕೆ ತುಸು ಕೊತ್ತಂಬರಿ ಸೊಪ್ಪು, ಕರಿಬೇವಿನ ಸೊಪ್ಪನ್ನೂ ಕಟ್‌ ಮಾಡಿ ಹಾಕಬಹುದು. ನಿಮ್ಮ ಫ್ಲೇವರ್‌, ನಿಮ್ಮ ರುಚಿಗೆ ತಕ್ಕಂತೆ ರೆಸಿಪಿ ಮಾಡಿಕೊಳ್ಳಬಹುದು. (Boy in Pic: Avyukth)

    ಹಂಚಿಕೊಳ್ಳಲು ಲೇಖನಗಳು