logo
ಕನ್ನಡ ಸುದ್ದಿ  /  ಫೋಟೋ ಗ್ಯಾಲರಿ  /  Hd Devegowda: 93ರ ಇಳಿ ವಯಸ್ಸಿನಲ್ಲೂ ಮಾಜಿ ಪ್ರಧಾನಿ ದೇವೇಗೌಡರೇ ಚನ್ನಪಟ್ಟಣ ಚುನಾವಣೆ ರಣ ಕಲಿ: ಹೇಗಿದೆ ಅವರ ಪ್ರಚಾರ ವೈಖರಿ

HD Devegowda: 93ರ ಇಳಿ ವಯಸ್ಸಿನಲ್ಲೂ ಮಾಜಿ ಪ್ರಧಾನಿ ದೇವೇಗೌಡರೇ ಚನ್ನಪಟ್ಟಣ ಚುನಾವಣೆ ರಣ ಕಲಿ: ಹೇಗಿದೆ ಅವರ ಪ್ರಚಾರ ವೈಖರಿ

Nov 10, 2024 10:20 AM IST

Hd Devegowda Politics: ಮಾಜಿ ಪ್ರಧಾನಿ ಎಚ್‌.ಡಿ.ದೇವೇಗೌಡರಿಗೇ ಈಗಲೂ ರಾಜಕೀಯ ಎಂದರೆ ವಯಸ್ಸು ಮೀರಿದ ಉತ್ಸಾಹ. 93ರ ವಯಸ್ಸಿನಲ್ಲೂ ಚನ್ನಪಟ್ಟಣ ವಿಧಾನಸಭೆ ಉಪಚುನಾವಣೆ ಅಖಾಡದಲ್ಲಿ ಅವರೇ ಸ್ಟಾರ್‌ ಕ್ಯಾಂಪೇನರ್‌. ಹೀಗಿದೆ ದೇವೇಗೌಡರ ಪ್ರಚಾರದ ಕ್ಷಣಗಳು.

  • Hd Devegowda Politics: ಮಾಜಿ ಪ್ರಧಾನಿ ಎಚ್‌.ಡಿ.ದೇವೇಗೌಡರಿಗೇ ಈಗಲೂ ರಾಜಕೀಯ ಎಂದರೆ ವಯಸ್ಸು ಮೀರಿದ ಉತ್ಸಾಹ. 93ರ ವಯಸ್ಸಿನಲ್ಲೂ ಚನ್ನಪಟ್ಟಣ ವಿಧಾನಸಭೆ ಉಪಚುನಾವಣೆ ಅಖಾಡದಲ್ಲಿ ಅವರೇ ಸ್ಟಾರ್‌ ಕ್ಯಾಂಪೇನರ್‌. ಹೀಗಿದೆ ದೇವೇಗೌಡರ ಪ್ರಚಾರದ ಕ್ಷಣಗಳು.
ಮಾಜಿ ಪ್ರಧಾನಿ ಎಚ್‌ ಡಿ ದೇವೇಗೌಡ ಅವರು ಆರು ದಶಕಗಳ ಸುಧೀರ್ಘ ರಾಜಕೀಯ ಪಯಣ ಹೊಂದಿದ್ದರೂ ಈಗಲೂ ಅವರಿಗೆ ಪ್ರಚಾರದ ಅಖಾಡಕ್ಕೆ ಇಳಿಯುವುದು ಎಂದರೆ ಎಲ್ಲಿಲ್ಲದ ಉಮೇದು. 
(1 / 9)

ಚನ್ನಪಟ್ಟಣ ವಿಧಾನಸಭಾ ಕ್ಷೇತ್ರದ ಉಪಚುನಾವಣೆಯಲ್ಲಿ ಎನ್‌ಡಿಎ ಅಭ್ಯರ್ಥಿ ನಿಖಿಲ್‌ ಕುಮಾರ್‌ ಪರ ಪ್ರಚಾರಕ್ಕೆ ಬಂದಾಗ ಹಿರಿಯರು ಪ್ರೀತಿಯಿಂದ ದೇವೇಗೌಡರನ್ನು ಅಭಿನಂದಿಸಿದರು. ಇದಕ್ಕೆ ಗೌಡರದ್ದು ನಗುವಿನ ಸ್ವಾಗತ.
(2 / 9)

ದೇವೇಗೌಡರು ಈ ವಯಸ್ಸಿನಲ್ಲೂ ಉತ್ಸಾಹ ಕಳೆದುಕೊಳ್ಳದೇ ಊರಿಗೆ ಬಂದಾಗ ಚನ್ನಪಟ್ಟಣದ ಮಹಿಳೆಯರು ಪ್ರೀತಿಯಿಂದ ಹಿರಿಯ ನಾಯಕನನ್ನು ಬರ ಮಾಡಿಕೊಂಡು ಆರತಿ ಮಾಡುವುದು ಎಲ್ಲೆಡೆ ಕಂಡು ಬರುತ್ತಿದೆ.
(3 / 9)

ಆರೋಗ್ಯ ಅಷ್ಟಾಗಿ ಸರಿಯಿಲ್ಲ. ದೈಹಿಕವಾಗಿ ಹಿಂದಿನಂತೆ ಗಟ್ಟಿ ಇಲ್ಲದೇ ಇದ್ದರೂ ಅವರ ಮಾತು, ರಾಜಕೀಯದ ನೆನಪುಗಳು ಗಟ್ಟಿಯಾಗಿವೆ. ಎದುರಾಳಿಗಳನ್ನು ಹಿಂದಿನ ಶೈಲಿಯ ಮಾತುಗಳಿಂದಲೇ ತಿವಿಯುತ್ತಿದ್ದಾರೆ ದೇವೇಗೌಡರು.
(4 / 9)

ದೇವೇಗೌಡರನ್ನು ಕಂಡರೆ ಹಿರಿಯರಿಗೆ ಅಭಿಮಾನ, ಚನ್ನಪಟ್ಟಣ ಕ್ಷೇತ್ರದ ಹಳ್ಳಿ ಹಳ್ಳಿಯಲ್ಲೂ ದೇವೇಗೌಡರು ಬಂದ ತಕ್ಷಣ ಕಂಡು ನಮಸ್ಕರಿಸುವವರ ಸಂಖ್ಯೆ ಅಧಿಕವಾಗಿದೆ.
(5 / 9)

ಯುವ ಸಮೂಹವೂ ದೇವೇಗೌಡರನ್ನು ಪ್ರೀತಿಸುವುದು ಬಿಟ್ಟಿಲ್ಲ.ಚನ್ನಪಟ್ಟಣ ಕೇತ್ರದ ಪ್ರಚಾರಕ್ಕೆ ಗೌಡರು ಬಂದಾಗ ಅಭಿಮಾನದಿಂದ ಆರತಿ ಎತ್ತಿ ಬರ ಮಾಡಿಕೊಳ್ಳುವುದು ಸಾಮಾನ್ಯವಾಗಿದೆ.
(6 / 9)

ನನ್ನ ರಾಜಕೀಯ ಜೀವನದಲ್ಲಿ ಏನೆಲ್ಲಾ ನೋಡಿದ್ದೇನೆ ಎಂದು ಹಳೆಯ ನೆನಪುಗಳೊಂದಿಗೆ ಈಗಿನ ರಾಜಕೀಯ ಸ್ಥಿತಿಗತಿ, ನಾಯಕರನ್ನು ಪ್ರಸ್ತಾಪಿಸುತ್ತಲೇ ಚನ್ನಪಟ್ಟಣ ಚುನಾವಣೆ ಕಣದಲ್ಲಿ ರಣೋತ್ಸಾಹ ತಂದಿದ್ದಾರೆ ದೇವೇಗೌಡರು.
(7 / 9)

ದೇವೇಗೌಡರು ಪ್ರತಿ ಹಳ್ಳಿಗೂ ಬಂದಾಗ ಉತ್ಸಾಹದಿಂದಲೇ ಪ್ರಚಾರ ಭಾಷಣ ಮಾಡುತ್ತಾರೆ. ರಾಜಕೀಯದಲ್ಲಿ ವಯಸ್ಸಿಗಿಂತ ಬೇಕಿರುವುದು ಉತ್ಸಾಹ ಎನ್ನುವುದನ್ನು ಅವರು ತೋರುತ್ತಿದ್ದಾರೆ. 
(8 / 9)

ಚನ್ನಪಟ್ಟಣ ಕ್ಷೇತ್ರ, ರಾಮನಗರ ಜಿಲ್ಲೆಗೆ ತಾವು ನೀಡಿದ ಕೊಡುಗೆಯನ್ನು ಪಟ್ಟಿ ಮಾಡಿಕೊಂಡು ಬಂದು ದೇವೇಗೌಡರು ಪ್ರಚಾರ ಸಭೆಯಲ್ಲಿ ಪ್ರಸ್ತಾಪಿಸುವುದನ್ನು ನೋಡಿದರೆ ಅವರ ನೆನಪು ಮಾತ್ರ ಗಟ್ಟಿಯಾಗಿದೆ ಎನ್ನುವುದು ತಿಳಿಯುತ್ತದೆ.
(9 / 9)

    ಹಂಚಿಕೊಳ್ಳಲು ಲೇಖನಗಳು