logo
ಕನ್ನಡ ಸುದ್ದಿ  /  ಫೋಟೋ ಗ್ಯಾಲರಿ  /  ಹಾಸ್ಯ ವನ್ಯಜೀವಿ ಛಾಯಾಗ್ರಹಣ ಪ್ರಶಸ್ತಿ 2024: ಕಪ್ಪೆಯ ನಗು, ಸಿಕ್ಕಿಬಿದ್ದ ಅಳಿಲು, ಅವಿತ ಹುಲಿ; ಪ್ರಾಣಿಗಳ ಕಾಮಿಡಿ ಫೋಟೋಸ್‌ ನೋಡಿ ನಕ್ಕುಬಿಡಿ

ಹಾಸ್ಯ ವನ್ಯಜೀವಿ ಛಾಯಾಗ್ರಹಣ ಪ್ರಶಸ್ತಿ 2024: ಕಪ್ಪೆಯ ನಗು, ಸಿಕ್ಕಿಬಿದ್ದ ಅಳಿಲು, ಅವಿತ ಹುಲಿ; ಪ್ರಾಣಿಗಳ ಕಾಮಿಡಿ ಫೋಟೋಸ್‌ ನೋಡಿ ನಕ್ಕುಬಿಡಿ

Oct 13, 2024 04:35 PM IST

Comedy Wildlife Photography Awards 2024: ವನ್ಯಜೀವಿ ಛಾಯಾಗ್ರಹಕರ ಕ್ಯಾಮೆರಾ ಕಣ್ಣಲ್ಲಿ ಕೆಲವೊಮ್ಮೆ ಪ್ರಾಣಿ ಪಕ್ಷಿಗಳ ಉಲ್ಲಾಸಭರಿತ ಫೋಟೋಗಳು ಸೆರೆಯಾಗುತ್ತವೆ. ಕೆಲವೊಮ್ಮೆ ಪ್ರಾಣಿಗಳ ಕಾಮಿಡಿ, ಫನ್ನಿ ಕ್ಷಣಗಳಿಗೆ ಇದು ಸಾಕ್ಷಿಯಾಗುತ್ತವೆ. ಈ ವರ್ಷದ ಕಾಮಿಡಿ ವೈಲ್ಡ್‌ಲೈಫ್‌ ಫೋಟೋಗ್ರಫಿ ಪ್ರಶಸ್ತಿ ಪಡೆದ ಫೋಟೋಗಳು ಇಲ್ಲಿವೆ. ನೋಡಿ ನಕ್ಕುಬಿಡಿ.

  • Comedy Wildlife Photography Awards 2024: ವನ್ಯಜೀವಿ ಛಾಯಾಗ್ರಹಕರ ಕ್ಯಾಮೆರಾ ಕಣ್ಣಲ್ಲಿ ಕೆಲವೊಮ್ಮೆ ಪ್ರಾಣಿ ಪಕ್ಷಿಗಳ ಉಲ್ಲಾಸಭರಿತ ಫೋಟೋಗಳು ಸೆರೆಯಾಗುತ್ತವೆ. ಕೆಲವೊಮ್ಮೆ ಪ್ರಾಣಿಗಳ ಕಾಮಿಡಿ, ಫನ್ನಿ ಕ್ಷಣಗಳಿಗೆ ಇದು ಸಾಕ್ಷಿಯಾಗುತ್ತವೆ. ಈ ವರ್ಷದ ಕಾಮಿಡಿ ವೈಲ್ಡ್‌ಲೈಫ್‌ ಫೋಟೋಗ್ರಫಿ ಪ್ರಶಸ್ತಿ ಪಡೆದ ಫೋಟೋಗಳು ಇಲ್ಲಿವೆ. ನೋಡಿ ನಕ್ಕುಬಿಡಿ.
Comedy Wildlife Photography Awards 2024: ಪ್ರಾಣಿಗಳು ತಮ್ಮ ನೈಸರ್ಗಿಕ ಆವಾಸಸ್ಥಾನಗಳಲ್ಲಿ ತಮ್ಮದೇ ರೀತಿಯಲ್ಲಿ ಮೋಜು ಮಸ್ತಿ ಮಾಡುತ್ತ ಇರುತತವೆ. ದಟ್ಟವಾದ ಕಾಡುಗಳಲ್ಲಿ, ನೀರಲ್ಲಿ ಕೀಟಲೆ ಮಾಡುತ್ತ ಇರುತ್ತವೆ. ಪ್ರಾಣಿಗಳ ಗುಂಪಲ್ಲಿ ಮೋಜು, ಮಸ್ತಿ, ತಮಾಷೆ, ಕೀಟಲೆಗಳು ಇರುತ್ತವೆ. ಕೆಲವೊಮ್ಮೆ ಇಂತಹ ಅಪರೂಪದ ಕ್ಷಣಗಳು ಪ್ರತಿಭಾನ್ವಿತ ವನ್ಯಜೀವಿ ಛಾಯಾಗ್ರಾಹಕರ ಕ್ಯಾಮೆರಾದಲ್ಲಿ ಸೆರೆಯಾಗುತ್ತವೆ. ಪ್ರತಿವರ್ಷದಂತೆ ಈ ವರ್ಷವೂ Comedy Wildlife Photography Awards 2024 ಫೈನಲಿಸ್ಟ್‌ಗಳನ್ನು ಘೋಷಿಸಲಾಗಿದೆ. ಕಾಮಿಡಿ ವೈಲ್ಡ್‌ಲೈಫ್‌ ಸ್ಪರ್ಧೆಯ ಫೈನಲಿಸ್ಟ್‌ಗಳ ಫೋಟೋಗಳನ್ನು ಕಾಮಿಡಿ ವೈಲ್ಡ್‌ಲೈಪ್‌ ಫೋಟೋಗ್ರಫಿ ಸಂಸ್ಥೆ ಹಂಚಿಕೊಂಡಿದೆ. ನಾವಿಲ್ಲಿ ಕಾಮಿಡಿಯಾಗಿರುವ ಹತ್ತು ಫೋಟೋಗಳನ್ನು ಆಯ್ಕೆ ಮಾಡಿಕೊಂಡಿದ್ದೇವೆ.  
(1 / 11)
Comedy Wildlife Photography Awards 2024: ಪ್ರಾಣಿಗಳು ತಮ್ಮ ನೈಸರ್ಗಿಕ ಆವಾಸಸ್ಥಾನಗಳಲ್ಲಿ ತಮ್ಮದೇ ರೀತಿಯಲ್ಲಿ ಮೋಜು ಮಸ್ತಿ ಮಾಡುತ್ತ ಇರುತತವೆ. ದಟ್ಟವಾದ ಕಾಡುಗಳಲ್ಲಿ, ನೀರಲ್ಲಿ ಕೀಟಲೆ ಮಾಡುತ್ತ ಇರುತ್ತವೆ. ಪ್ರಾಣಿಗಳ ಗುಂಪಲ್ಲಿ ಮೋಜು, ಮಸ್ತಿ, ತಮಾಷೆ, ಕೀಟಲೆಗಳು ಇರುತ್ತವೆ. ಕೆಲವೊಮ್ಮೆ ಇಂತಹ ಅಪರೂಪದ ಕ್ಷಣಗಳು ಪ್ರತಿಭಾನ್ವಿತ ವನ್ಯಜೀವಿ ಛಾಯಾಗ್ರಾಹಕರ ಕ್ಯಾಮೆರಾದಲ್ಲಿ ಸೆರೆಯಾಗುತ್ತವೆ. ಪ್ರತಿವರ್ಷದಂತೆ ಈ ವರ್ಷವೂ Comedy Wildlife Photography Awards 2024 ಫೈನಲಿಸ್ಟ್‌ಗಳನ್ನು ಘೋಷಿಸಲಾಗಿದೆ. ಕಾಮಿಡಿ ವೈಲ್ಡ್‌ಲೈಫ್‌ ಸ್ಪರ್ಧೆಯ ಫೈನಲಿಸ್ಟ್‌ಗಳ ಫೋಟೋಗಳನ್ನು ಕಾಮಿಡಿ ವೈಲ್ಡ್‌ಲೈಪ್‌ ಫೋಟೋಗ್ರಫಿ ಸಂಸ್ಥೆ ಹಂಚಿಕೊಂಡಿದೆ. ನಾವಿಲ್ಲಿ ಕಾಮಿಡಿಯಾಗಿರುವ ಹತ್ತು ಫೋಟೋಗಳನ್ನು ಆಯ್ಕೆ ಮಾಡಿಕೊಂಡಿದ್ದೇವೆ.  (comedywildlifephoto.com)
ನನ್ನ ಸ್ಮೈಲ್‌ ಹೇಗಿದೆ?:  ಈ ಕಪ್ಪೆ ಈಗಷ್ಟೇ ಎಚ್ಚರಗೊಂಡು ಕ್ಯಾಮೆರಾಗೆ ನಗುಮುಖದಲ್ಲಿ ಫೋಟೋಜೆನಿಕ್ ಆಗಿ ಪೋಸ್‌ ನೀಡಿದೆ. 
(2 / 11)
ನನ್ನ ಸ್ಮೈಲ್‌ ಹೇಗಿದೆ?:  ಈ ಕಪ್ಪೆ ಈಗಷ್ಟೇ ಎಚ್ಚರಗೊಂಡು ಕ್ಯಾಮೆರಾಗೆ ನಗುಮುಖದಲ್ಲಿ ಫೋಟೋಜೆನಿಕ್ ಆಗಿ ಪೋಸ್‌ ನೀಡಿದೆ. 
ದೇವರೇ ಕಾಪಾಡಪ್ಪ: ಈ ನೀರುನಾಯಿ ಪ್ರಾರ್ಥನೆಯ ಭಂಗಿಯಲ್ಲಿ ಕೈಗಳನ್ನು ಇಟ್ಟುಕೊಂಡು ಆಧ್ಯಾತ್ಮಿಕ ಮನಸ್ಥಿತಿಯಲ್ಲಿ ಇರುವಂತೆ ಕಾಣಿಸುತ್ತದೆ. 
(3 / 11)
ದೇವರೇ ಕಾಪಾಡಪ್ಪ: ಈ ನೀರುನಾಯಿ ಪ್ರಾರ್ಥನೆಯ ಭಂಗಿಯಲ್ಲಿ ಕೈಗಳನ್ನು ಇಟ್ಟುಕೊಂಡು ಆಧ್ಯಾತ್ಮಿಕ ಮನಸ್ಥಿತಿಯಲ್ಲಿ ಇರುವಂತೆ ಕಾಣಿಸುತ್ತದೆ. (comedywildlifephoto.com)
ಎಂಥ ಜೋಕ್‌ ಮಾಡಿದ್ದಿ ಮಾರ್ರೆ: ಎರಡು ಸೀಲ್‌ಗಳು ಕಾಮಿಡಿ ಕೇಳಿ ನಗುತ್ತಿರುವಂತೆ ಕಾಣುತ್ತಿದೆಯಲ್ವೆ? 
(4 / 11)
ಎಂಥ ಜೋಕ್‌ ಮಾಡಿದ್ದಿ ಮಾರ್ರೆ: ಎರಡು ಸೀಲ್‌ಗಳು ಕಾಮಿಡಿ ಕೇಳಿ ನಗುತ್ತಿರುವಂತೆ ಕಾಣುತ್ತಿದೆಯಲ್ವೆ? (comedywildlifephoto.com)
ಏನ್ರೀ ಚಚ್ಚಿ ಬಿಡ್ತಿನಿ : ಹೆಂಡತಿಗೆ ಗಂಡ ಭಯಪಡುವುದು ಪ್ರಾಣಿ ಜಗತ್ತಿನಲ್ಲೂ ಇರುವಂತೆ ಇದೆ. ಸಿಂಹದ ಕಿವಿಯಲ್ಲಿ ಸಿಂಹಿಣಿ ಜೋರಾಗಿ, ಕೋಪದಿಂದ ಏನೋ ಹೇಳ್ತಾ ಇದ್ದಾಳೆ. ಅಯ್ಯೋ ಇವಳದ್ದು ಇದ್ದದ್ದೇ, ಕಿವಿ ತಮಟೆ ಸಿಡಿಯದಿದ್ರೆ ಸಾಕು ಎಂದು ಸಿಂಹ ಮನಸ್ಸಿನಲ್ಲಿ ಅಂದುಕೊಳ್ಳುತ್ತಿರಬಹುದು.
(5 / 11)
ಏನ್ರೀ ಚಚ್ಚಿ ಬಿಡ್ತಿನಿ : ಹೆಂಡತಿಗೆ ಗಂಡ ಭಯಪಡುವುದು ಪ್ರಾಣಿ ಜಗತ್ತಿನಲ್ಲೂ ಇರುವಂತೆ ಇದೆ. ಸಿಂಹದ ಕಿವಿಯಲ್ಲಿ ಸಿಂಹಿಣಿ ಜೋರಾಗಿ, ಕೋಪದಿಂದ ಏನೋ ಹೇಳ್ತಾ ಇದ್ದಾಳೆ. ಅಯ್ಯೋ ಇವಳದ್ದು ಇದ್ದದ್ದೇ, ಕಿವಿ ತಮಟೆ ಸಿಡಿಯದಿದ್ರೆ ಸಾಕು ಎಂದು ಸಿಂಹ ಮನಸ್ಸಿನಲ್ಲಿ ಅಂದುಕೊಳ್ಳುತ್ತಿರಬಹುದು.(comedywildlifephoto.com)
ನಿಮಗೆ ನಗು, ನನಗೆ ಪ್ರಾಣ ಸಂಕಟ: ಪೊಟರೆಯೊಳಗೆ ನುಸುಳಿದ ಅಳಿಲು ಸಿಕ್ಕಿಹಾಕಿಕೊಂಡಿದೆ.  
(6 / 11)
ನಿಮಗೆ ನಗು, ನನಗೆ ಪ್ರಾಣ ಸಂಕಟ: ಪೊಟರೆಯೊಳಗೆ ನುಸುಳಿದ ಅಳಿಲು ಸಿಕ್ಕಿಹಾಕಿಕೊಂಡಿದೆ.  (comedywildlifephoto.com)
ಕಣ್ಣಾಮುಚ್ಚೆ ಕಾಡೆಗೂಡೆ: ಇದು ಹುಲಿಯ ಬೇಟೆಯಾಡುವ ತಂತ್ರ. ಆದರೆ, ಛಾಯಾಗ್ರಾಹಕನ ಕ್ಯಾಮೆರಾದಲ್ಲಿ ಸೆರೆಯಾದ ಬಳಿಕ ಹುಲಿ ಮರದ ಹಿಂದೆ ಅಡಗಿ ಕಣ್ಣಾಮುಚ್ಚೆ ಕಾಡೆಗೂಡೆ ಆಡುವಂತೆ ಕಾಣಿಸುತ್ತದೆ. 
(7 / 11)
ಕಣ್ಣಾಮುಚ್ಚೆ ಕಾಡೆಗೂಡೆ: ಇದು ಹುಲಿಯ ಬೇಟೆಯಾಡುವ ತಂತ್ರ. ಆದರೆ, ಛಾಯಾಗ್ರಾಹಕನ ಕ್ಯಾಮೆರಾದಲ್ಲಿ ಸೆರೆಯಾದ ಬಳಿಕ ಹುಲಿ ಮರದ ಹಿಂದೆ ಅಡಗಿ ಕಣ್ಣಾಮುಚ್ಚೆ ಕಾಡೆಗೂಡೆ ಆಡುವಂತೆ ಕಾಣಿಸುತ್ತದೆ. (comedywildlifephoto.com)
ನೆಲದ ಮೇಲೆ ಬಿದ್ದುಬಿದ್ದು ನಗೋದಂದ್ರೆ ಇದೇ ತಾನೇ? 
(8 / 11)
ನೆಲದ ಮೇಲೆ ಬಿದ್ದುಬಿದ್ದು ನಗೋದಂದ್ರೆ ಇದೇ ತಾನೇ? (comedywildlifephoto.com)
ನನ್ನನ್ನೂ ಕರ್ಕೊಂಡು ಹೋಗ್ರೋ: ಛಾಯಾಗ್ರಹಕ ಈ ಚಿತ್ರಕ್ಕೆ "ಐ ವಿಲ್‌ ಕಮ್‌" ಎಂಬ ಶೀರ್ಷಿಕೆ ನೀಡಿದ್ದಾರೆ.
(9 / 11)
ನನ್ನನ್ನೂ ಕರ್ಕೊಂಡು ಹೋಗ್ರೋ: ಛಾಯಾಗ್ರಹಕ ಈ ಚಿತ್ರಕ್ಕೆ "ಐ ವಿಲ್‌ ಕಮ್‌" ಎಂಬ ಶೀರ್ಷಿಕೆ ನೀಡಿದ್ದಾರೆ.(comedywildlifephoto.com)
ಮತ್ತೆ ಸೋಮವಾರ: ಭಾನುವಾರ ರಜೆ ಮುಗಿಸಿ ಸೋಮವಾರ ಆಫೀಸ್‌ಗೆ, ಸ್ಕೂಲ್‌ಗೆ ಹೋಗುವಾಗ ಬೇಸರದ ಮುಖ ಮಾಡ್ತಿವಲ್ವ? ಈ ಪ್ರಾಣಿಯೂ ಅದೇ ರೀತಿಯ ಮುಖಭಾವ ಹೊಂದಿದೆ.
(10 / 11)
ಮತ್ತೆ ಸೋಮವಾರ: ಭಾನುವಾರ ರಜೆ ಮುಗಿಸಿ ಸೋಮವಾರ ಆಫೀಸ್‌ಗೆ, ಸ್ಕೂಲ್‌ಗೆ ಹೋಗುವಾಗ ಬೇಸರದ ಮುಖ ಮಾಡ್ತಿವಲ್ವ? ಈ ಪ್ರಾಣಿಯೂ ಅದೇ ರೀತಿಯ ಮುಖಭಾವ ಹೊಂದಿದೆ.(comedywildlifephoto.com)
ನಾಳೆ ಏನಾಗುತ್ತೋ ಏನೋ, ಟೆನ್ಷನ್‌ ಆಗ್ತಿದೆ : ಚಿಂಪಾಂಜಿ ಕಾಡಿನಲ್ಲಿ ಕುಳಿತು ಗಾಢವಾದ ಯೋಚನೆಯಲ್ಲಿ ಮಗ್ನವಾಗಿದೆ. 
(11 / 11)
ನಾಳೆ ಏನಾಗುತ್ತೋ ಏನೋ, ಟೆನ್ಷನ್‌ ಆಗ್ತಿದೆ : ಚಿಂಪಾಂಜಿ ಕಾಡಿನಲ್ಲಿ ಕುಳಿತು ಗಾಢವಾದ ಯೋಚನೆಯಲ್ಲಿ ಮಗ್ನವಾಗಿದೆ. 

    ಹಂಚಿಕೊಳ್ಳಲು ಲೇಖನಗಳು