logo
ಕನ್ನಡ ಸುದ್ದಿ  /  ಫೋಟೋ ಗ್ಯಾಲರಿ  /  Ganesh Chaturthi 2022: ಪೇಟ, ಹಾರ ತೆಗೆದಿಟ್ಟು ಗಣೇಶೋತ್ಸವಕ್ಕೆ ರಾಗಿಣಿ, ರಚನಾ ರೆಡಿ!

Ganesh Chaturthi 2022: ಪೇಟ, ಹಾರ ತೆಗೆದಿಟ್ಟು ಗಣೇಶೋತ್ಸವಕ್ಕೆ ರಾಗಿಣಿ, ರಚನಾ ರೆಡಿ!

Aug 30, 2022 09:26 AM IST

ಯಾವುದೇ ಹಬ್ಬ ಬಂದರೂ ಸಿನಿಮಾ ಸೆಲೆಬ್ರಿಟಿಗಳೇನು ಮಾಡ್ತಾರೆ ಎಂಬ ಕುತೂಹಲ ಇದ್ದೇ ಇದೆ. ಸ್ಯಾಂಡಲ್‌ವುಡ್ ತಾರೆಗಳಾದ ರಾಗಿಣಿ ದ್ವಿವೇದಿ ಮತ್ತು ರಚನಾ ಇಂದರ್ ಈ ಸಲ ಗೌರಿ ಗಣೇಶ ಹಬ್ಬಕ್ಕೆ ಮುಂಚಿತವಾಗಿ ಪರಿಸರ ಸ್ನೇಹಿ ಗಣೇಶನನ್ನೇ ಪೂಜಿಸಿ ಎಂಬ ಸಂದೇಶ ನೀಡಿದ್ದಾರೆ. ಈ ಕಾರ್ಯಕ್ರಮದ ಸಂಭ್ರಮದ ಕೆಲವು ಕ್ಷಣಗಳು ಇಲ್ಲಿರುವ ಫೋಟೋಗಳಲ್ಲಿ ದಾಖಲಾಗಿದೆ.. 

  • ಯಾವುದೇ ಹಬ್ಬ ಬಂದರೂ ಸಿನಿಮಾ ಸೆಲೆಬ್ರಿಟಿಗಳೇನು ಮಾಡ್ತಾರೆ ಎಂಬ ಕುತೂಹಲ ಇದ್ದೇ ಇದೆ. ಸ್ಯಾಂಡಲ್‌ವುಡ್ ತಾರೆಗಳಾದ ರಾಗಿಣಿ ದ್ವಿವೇದಿ ಮತ್ತು ರಚನಾ ಇಂದರ್ ಈ ಸಲ ಗೌರಿ ಗಣೇಶ ಹಬ್ಬಕ್ಕೆ ಮುಂಚಿತವಾಗಿ ಪರಿಸರ ಸ್ನೇಹಿ ಗಣೇಶನನ್ನೇ ಪೂಜಿಸಿ ಎಂಬ ಸಂದೇಶ ನೀಡಿದ್ದಾರೆ. ಈ ಕಾರ್ಯಕ್ರಮದ ಸಂಭ್ರಮದ ಕೆಲವು ಕ್ಷಣಗಳು ಇಲ್ಲಿರುವ ಫೋಟೋಗಳಲ್ಲಿ ದಾಖಲಾಗಿದೆ.. 
ಬೆಂಗಳೂರಿನಲ್ಲಿ ಸರ್ಕಾರೇತರ ಸಂಸ್ಥೆಯೊಂದು ಗಣೇಶ ಚತುರ್ಥಿಗೆ ಮುಂಚಿತವಾಗಿ ಪರಿಸರಸ್ನೇಹಿ ಗಣೇಶನನ್ನು ಪೂಜಿಸುವುದನ್ನು ಉತ್ತೇಜಿಸುವುದಕ್ಕಾಗಿ ಆಯೋಜಿಸಿದ ಕಾರ್ಯಕ್ರಮದಲ್ಲಿ ರಾಗಿಣಿ ದ್ವಿವೇದಿ ಕಾಣಿಸಿಕೊಂಡಿರುವುದು ಹೀಗೆ.   (PTI Photo/Shailendra Bhojak)
(1 / 5)
ಬೆಂಗಳೂರಿನಲ್ಲಿ ಸರ್ಕಾರೇತರ ಸಂಸ್ಥೆಯೊಂದು ಗಣೇಶ ಚತುರ್ಥಿಗೆ ಮುಂಚಿತವಾಗಿ ಪರಿಸರಸ್ನೇಹಿ ಗಣೇಶನನ್ನು ಪೂಜಿಸುವುದನ್ನು ಉತ್ತೇಜಿಸುವುದಕ್ಕಾಗಿ ಆಯೋಜಿಸಿದ ಕಾರ್ಯಕ್ರಮದಲ್ಲಿ ರಾಗಿಣಿ ದ್ವಿವೇದಿ ಕಾಣಿಸಿಕೊಂಡಿರುವುದು ಹೀಗೆ.   (PTI Photo/Shailendra Bhojak)(PTI)
ಬೆಂಗಳೂರಿನಲ್ಲಿ ಗಣೇಶ ಚತುರ್ಥಿ ಹಬ್ಬದ ಮುನ್ನ ಭಾನುವಾರ ಸ್ಯಾಂಡಲ್‌ವುಡ್‌ ಬೆಡಗಿ ರಾಗಿಣಿ ದ್ವಿವೇದಿ ಅವರು ಪರಿಸರ ಸ್ನೇಹಿ ಗಣೇಶ ಮೂರ್ತಿ ತಯಾರಿಸುವ ಪ್ರಯತ್ನ ನಡೆಸಿದರು. ಅವರು ಎನ್‌ಜಿಒ ಒಂದು ಆಯೋಜಿಸಿದ್ದ ಪರಿಸರ ಸ್ನೇಹಿ ಗಣೇಶನನ್ನು ಪೂಜಿಸುವುದನ್ನು ಉತ್ತೇಜಿಸುವ ಕಾರ್ಯಕ್ರಮದಲ್ಲಿ ಭಾಗವಹಿಸುತ್ತ ಈ ಪ್ರಯತ್ನ ನಡೆಸಿದ್ದರು. (PTI Photo/Shailendra Bhojak)
(2 / 5)
ಬೆಂಗಳೂರಿನಲ್ಲಿ ಗಣೇಶ ಚತುರ್ಥಿ ಹಬ್ಬದ ಮುನ್ನ ಭಾನುವಾರ ಸ್ಯಾಂಡಲ್‌ವುಡ್‌ ಬೆಡಗಿ ರಾಗಿಣಿ ದ್ವಿವೇದಿ ಅವರು ಪರಿಸರ ಸ್ನೇಹಿ ಗಣೇಶ ಮೂರ್ತಿ ತಯಾರಿಸುವ ಪ್ರಯತ್ನ ನಡೆಸಿದರು. ಅವರು ಎನ್‌ಜಿಒ ಒಂದು ಆಯೋಜಿಸಿದ್ದ ಪರಿಸರ ಸ್ನೇಹಿ ಗಣೇಶನನ್ನು ಪೂಜಿಸುವುದನ್ನು ಉತ್ತೇಜಿಸುವ ಕಾರ್ಯಕ್ರಮದಲ್ಲಿ ಭಾಗವಹಿಸುತ್ತ ಈ ಪ್ರಯತ್ನ ನಡೆಸಿದ್ದರು. (PTI Photo/Shailendra Bhojak)(PTI)
ಪರಿಸರಸ್ನೇಹಿ ಗಣೇಶನನ್ನೇ ಈ ಸಲ ಪೂಜಿಸಲು ಮರೆಯಬೇಡಿ ಎಂದು ನಟಿ ರಾಗಿಣಿ ದ್ವಿವೇದಿ ಬೆಂಗಳೂರಿನಲ್ಲಿ ಗಣೇಶ ಚತುರ್ಥಿ ಹಬ್ಬದ ಮುನ್ನ ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸಿದರು. ಪರಿಸರ ಸ್ನೇಹಿ ಗಣೇಶನ ವಿಗ್ರಹದೊಂದಿಗೆ ಅವರು ಪೋಸ್‌ ನೀಡಿದ್ದು ಹೀಗೆ. (PTI Photo/Shailendra Bhojak)
(3 / 5)
ಪರಿಸರಸ್ನೇಹಿ ಗಣೇಶನನ್ನೇ ಈ ಸಲ ಪೂಜಿಸಲು ಮರೆಯಬೇಡಿ ಎಂದು ನಟಿ ರಾಗಿಣಿ ದ್ವಿವೇದಿ ಬೆಂಗಳೂರಿನಲ್ಲಿ ಗಣೇಶ ಚತುರ್ಥಿ ಹಬ್ಬದ ಮುನ್ನ ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸಿದರು. ಪರಿಸರ ಸ್ನೇಹಿ ಗಣೇಶನ ವಿಗ್ರಹದೊಂದಿಗೆ ಅವರು ಪೋಸ್‌ ನೀಡಿದ್ದು ಹೀಗೆ. (PTI Photo/Shailendra Bhojak)(PTI)
ಬೆಂಗಳೂರಿನಲ್ಲಿ ಭಾರತೀ ನಗರ ರೆಸಿಡೆಂಟ್ಸ್‌ ಫಾರಂ ಭಾನುವಾರ ಆಯೋಜಿಸಿದ್ದ ಈ ಕಾರ್ಯಕ್ರಮದಲ್ಲಿ ನಟಿಮಣಿಯರಾದ ರಾಗಿಣಿ ದ್ವಿವೇದಿ ಮತ್ತು ರಚನಾ ಇಂದರ್‌ ಮಣ್ಣಿನ ಗಣೇಶನ ವಿಗ್ರಹಗಳನ್ನು ಅಲ್ಲಿನ ನಿವಾಸಿಗಳಿಗೆ ವಿತರಿಸಿದರು. (ANI Photo)
(4 / 5)
ಬೆಂಗಳೂರಿನಲ್ಲಿ ಭಾರತೀ ನಗರ ರೆಸಿಡೆಂಟ್ಸ್‌ ಫಾರಂ ಭಾನುವಾರ ಆಯೋಜಿಸಿದ್ದ ಈ ಕಾರ್ಯಕ್ರಮದಲ್ಲಿ ನಟಿಮಣಿಯರಾದ ರಾಗಿಣಿ ದ್ವಿವೇದಿ ಮತ್ತು ರಚನಾ ಇಂದರ್‌ ಮಣ್ಣಿನ ಗಣೇಶನ ವಿಗ್ರಹಗಳನ್ನು ಅಲ್ಲಿನ ನಿವಾಸಿಗಳಿಗೆ ವಿತರಿಸಿದರು. (ANI Photo)(Shashidhar Byrappa)
ಬೆಂಗಳೂರಿನಲ್ಲಿ ಭಾರತೀ ನಗರ ರೆಸಿಡೆಂಟ್ಸ್‌ ಫಾರಂ ಭಾನುವಾರ ಆಯೋಜಿಸಿದ್ದ ಈ ಕಾರ್ಯಕ್ರಮದಲ್ಲಿ ನಟಿಮಣಿಯರಾದ ರಾಗಿಣಿ ದ್ವಿವೇದಿ ಮತ್ತು ರಚನಾ ಇಂದರ್‌  ಅಲ್ಲಿನ ನಿವಾಸಿಗಳಿಗೆ ಮಣ್ಣಿನ ಗಣೇಶನ ವಿಗ್ರಹಗಳನ್ನು ವಿತರಿಸಿದರು. ಇದೇ ಸಂದರ್ಭದಲ್ಲಿ ಸುದ್ದಿಗಾರರ ಜತೆಗೆ ಮಾತನಾಡಿದ ರಾಗಿಣಿ ದ್ವಿವೇದಿ, ಗಣಪತಿ ಅಂದರೆ ಅಚ್ಚುಮೆಚ್ಚು. ನನ್ನ ಜೀವನದುದ್ದಕ್ಕೂ ಗಣೇಶ ಚತುರ್ಥಿ ಹಬ್ಬವನ್ನು ಆಚರಿಸಿದ್ದೇನೆ, ಆನಂದಿಸಿದ್ದೇನೆ, ಮಣ್ಣಿನ ಗಣೇಶನನ್ನು ಪೂಜಿಸಬೇಕು ಎಂಬುದರ ಬಗ್ಗೆ ಜಾಗೃತಿ ಮೂಡಿಸುವ ಕೆಲಸ ಖುಷಿ ಕೊಟ್ಟಿದೆ. ಸಾರ್ವಜನಿಕರ ಸ್ಪಂದನೆಯೂ ಪೂರಕವಾಗಿದ್ದು, ಸಂಘಟಕರು ಅದನ್ನು ಮಕ್ಕಳಿಗೆ ನೀಡುತ್ತಾರೆ. ನಮ್ಮ ಸಂಪ್ರದಾಯವನ್ನು ಮಾತ್ರ ಆಚರಿಸುವುದು ಆದರೆ ಅದನ್ನು ಸೂಕ್ತವಾದ ರೀತಿಯಲ್ಲಿ ಮಾಡುವ ತಿಳಿವಳಿಕೆ ಮಕ್ಕಳಲ್ಲಿ ಮೂಡುತ್ತಿರುವುದು ಕೂಡ ಉತ್ತಮ ಬೆಳವಣಿಗೆ ಎಂದ ಹೇಳಿದರು. (PTI Photo/Shailendra Bhojak)
(5 / 5)
ಬೆಂಗಳೂರಿನಲ್ಲಿ ಭಾರತೀ ನಗರ ರೆಸಿಡೆಂಟ್ಸ್‌ ಫಾರಂ ಭಾನುವಾರ ಆಯೋಜಿಸಿದ್ದ ಈ ಕಾರ್ಯಕ್ರಮದಲ್ಲಿ ನಟಿಮಣಿಯರಾದ ರಾಗಿಣಿ ದ್ವಿವೇದಿ ಮತ್ತು ರಚನಾ ಇಂದರ್‌  ಅಲ್ಲಿನ ನಿವಾಸಿಗಳಿಗೆ ಮಣ್ಣಿನ ಗಣೇಶನ ವಿಗ್ರಹಗಳನ್ನು ವಿತರಿಸಿದರು. ಇದೇ ಸಂದರ್ಭದಲ್ಲಿ ಸುದ್ದಿಗಾರರ ಜತೆಗೆ ಮಾತನಾಡಿದ ರಾಗಿಣಿ ದ್ವಿವೇದಿ, ಗಣಪತಿ ಅಂದರೆ ಅಚ್ಚುಮೆಚ್ಚು. ನನ್ನ ಜೀವನದುದ್ದಕ್ಕೂ ಗಣೇಶ ಚತುರ್ಥಿ ಹಬ್ಬವನ್ನು ಆಚರಿಸಿದ್ದೇನೆ, ಆನಂದಿಸಿದ್ದೇನೆ, ಮಣ್ಣಿನ ಗಣೇಶನನ್ನು ಪೂಜಿಸಬೇಕು ಎಂಬುದರ ಬಗ್ಗೆ ಜಾಗೃತಿ ಮೂಡಿಸುವ ಕೆಲಸ ಖುಷಿ ಕೊಟ್ಟಿದೆ. ಸಾರ್ವಜನಿಕರ ಸ್ಪಂದನೆಯೂ ಪೂರಕವಾಗಿದ್ದು, ಸಂಘಟಕರು ಅದನ್ನು ಮಕ್ಕಳಿಗೆ ನೀಡುತ್ತಾರೆ. ನಮ್ಮ ಸಂಪ್ರದಾಯವನ್ನು ಮಾತ್ರ ಆಚರಿಸುವುದು ಆದರೆ ಅದನ್ನು ಸೂಕ್ತವಾದ ರೀತಿಯಲ್ಲಿ ಮಾಡುವ ತಿಳಿವಳಿಕೆ ಮಕ್ಕಳಲ್ಲಿ ಮೂಡುತ್ತಿರುವುದು ಕೂಡ ಉತ್ತಮ ಬೆಳವಣಿಗೆ ಎಂದ ಹೇಳಿದರು. (PTI Photo/Shailendra Bhojak)(PTI)

    ಹಂಚಿಕೊಳ್ಳಲು ಲೇಖನಗಳು