logo
ಕನ್ನಡ ಸುದ್ದಿ  /  ಫೋಟೋ ಗ್ಯಾಲರಿ  /  ಗೌರಿ-ಗಣೇಶ ಹಬ್ಬಕ್ಕೆ ಗೆಜ್ಜೆವಸ್ತ್ರ ತಯಾರಿಸಬೇಕೆಂದಿದ್ದೀರಾ? ಆಕರ್ಷಕ ಹತ್ತಿಯ ಹಾರ ಮಾಡುವ ಐಡಿಯಾಗಳು ಇಲ್ಲಿವೆ

ಗೌರಿ-ಗಣೇಶ ಹಬ್ಬಕ್ಕೆ ಗೆಜ್ಜೆವಸ್ತ್ರ ತಯಾರಿಸಬೇಕೆಂದಿದ್ದೀರಾ? ಆಕರ್ಷಕ ಹತ್ತಿಯ ಹಾರ ಮಾಡುವ ಐಡಿಯಾಗಳು ಇಲ್ಲಿವೆ

Sep 06, 2024 12:12 PM IST

ಗೌರಿ–ಗಣೇಶ ಹಬ್ಬದಲ್ಲಿ ಗೆಜ್ಜೆವಸ್ತ್ರವೂ ಒಂದು ಆಕರ್ಷಣೆಯಾಗಿರುತ್ತೆ. ಮಾರುಕಟ್ಟೆಯಲ್ಲಿ ಗೆಜ್ಜೆವಸ್ತ್ರವನ್ನು ವಿವಿಧ ವಿನ್ಯಾಸಗಳಲ್ಲಿ ಕಾಣಬಹುದು. ಆದರೆ ಈ ಬಾರಿಯ ಗೌರಿ–ಗಣೇಶ ಹಬ್ಬಕ್ಕೆ ನೀವೇ ನಿಮ್ಮ ಕೈಯಾರೆ ಗೆಜ್ಜೆವಸ್ತ್ರ ತಯಾರಿಸಬೇಕೆಂದುಕೊಂಡಿದ್ದರೆ ನಿಮಗಾಗಿ ಒಂದಿಷ್ಟು ಐಡಿಯಾಗಳನ್ನು ಇಲ್ಲಿ ನೀಡಲಾಗಿದೆ.

  • ಗೌರಿ–ಗಣೇಶ ಹಬ್ಬದಲ್ಲಿ ಗೆಜ್ಜೆವಸ್ತ್ರವೂ ಒಂದು ಆಕರ್ಷಣೆಯಾಗಿರುತ್ತೆ. ಮಾರುಕಟ್ಟೆಯಲ್ಲಿ ಗೆಜ್ಜೆವಸ್ತ್ರವನ್ನು ವಿವಿಧ ವಿನ್ಯಾಸಗಳಲ್ಲಿ ಕಾಣಬಹುದು. ಆದರೆ ಈ ಬಾರಿಯ ಗೌರಿ–ಗಣೇಶ ಹಬ್ಬಕ್ಕೆ ನೀವೇ ನಿಮ್ಮ ಕೈಯಾರೆ ಗೆಜ್ಜೆವಸ್ತ್ರ ತಯಾರಿಸಬೇಕೆಂದುಕೊಂಡಿದ್ದರೆ ನಿಮಗಾಗಿ ಒಂದಿಷ್ಟು ಐಡಿಯಾಗಳನ್ನು ಇಲ್ಲಿ ನೀಡಲಾಗಿದೆ.
ಗೌರಿ ಗಣೇಶ ಹಬ್ಬ ಬಂದೇ ಬಿಟ್ಟಿತು. ಮನೆ ಮಂದಿಯೆಲ್ಲಾ ಹಬ್ಬದ ತಯಾರಿಯಲ್ಲಿ ನಿರತರಾಗಿರುವುದನ್ನು ಕಾಣಬಹುದು. ಹಬ್ಬಕ್ಕೆ ಚಕ್ಕುಲಿ, ಕೋಡಬಳೆ, ಲಾಡುಗಳ ತಯಾರಿಯ ಜೊತೆಗೆ ಗೌರಿ ಗಣಪನನ್ನು ಬರಮಾಡಿಕೊಳ್ಳಲು ಮಂಟಪ, ಹೂವು, ರಂಗೋಲಿಗಳ ಭರ್ಜರಿ ತಯಾರಿ ನಡೆಯುತ್ತಿದೆ. ಗೌರಿ–ಗಣೇಶನ ಅಲಂಕಾರದಲ್ಲಿ ಗೆಜ್ಜೆವಸ್ತ್ರವನ್ನು ಸಹ ಕಾಣಬಹುದು. ದೇವರಿಗೆ ಅರ್ಪಿಸುವ ವಸ್ತುಗಳಲ್ಲಿ ಗೆಜ್ಜೆವಸ್ತ್ರವೂ ಒಂದು. ದೇವರಿಗೆ ಗೆಜ್ಜೆವಸ್ತ್ರ ಅರ್ಪಿಸುವುದರಿಂದ ಜನ್ಮಜನ್ಮಾಂತರದ ಪಾಪಗಳಿಂದ ಮುಕ್ತರಾಗಬಹುದು ಎಂದು ಹೇಳಲಾಗುತ್ತದೆ. 
(1 / 5)
ಗೌರಿ ಗಣೇಶ ಹಬ್ಬ ಬಂದೇ ಬಿಟ್ಟಿತು. ಮನೆ ಮಂದಿಯೆಲ್ಲಾ ಹಬ್ಬದ ತಯಾರಿಯಲ್ಲಿ ನಿರತರಾಗಿರುವುದನ್ನು ಕಾಣಬಹುದು. ಹಬ್ಬಕ್ಕೆ ಚಕ್ಕುಲಿ, ಕೋಡಬಳೆ, ಲಾಡುಗಳ ತಯಾರಿಯ ಜೊತೆಗೆ ಗೌರಿ ಗಣಪನನ್ನು ಬರಮಾಡಿಕೊಳ್ಳಲು ಮಂಟಪ, ಹೂವು, ರಂಗೋಲಿಗಳ ಭರ್ಜರಿ ತಯಾರಿ ನಡೆಯುತ್ತಿದೆ. ಗೌರಿ–ಗಣೇಶನ ಅಲಂಕಾರದಲ್ಲಿ ಗೆಜ್ಜೆವಸ್ತ್ರವನ್ನು ಸಹ ಕಾಣಬಹುದು. ದೇವರಿಗೆ ಅರ್ಪಿಸುವ ವಸ್ತುಗಳಲ್ಲಿ ಗೆಜ್ಜೆವಸ್ತ್ರವೂ ಒಂದು. ದೇವರಿಗೆ ಗೆಜ್ಜೆವಸ್ತ್ರ ಅರ್ಪಿಸುವುದರಿಂದ ಜನ್ಮಜನ್ಮಾಂತರದ ಪಾಪಗಳಿಂದ ಮುಕ್ತರಾಗಬಹುದು ಎಂದು ಹೇಳಲಾಗುತ್ತದೆ. (Pinterest)
ದೇವರಿಗೆ ಅರ್ಪಿಸುವ ಹತ್ತಿಯ ಹಾರಕ್ಕೆ ಗೆಜ್ಜೆವಸ್ತ್ರ ಎಂದು ಕರೆಯುತ್ತಾರೆ. ಸಾಮಾನ್ಯವಾಗಿ ಗೌರಿಗೆ ಹದಿನಾರು ಎಳೆ ಗೆಜ್ಜೆವಸ್ತ್ರ ಅರ್ಪಿಸಿದರೆ, ಗಣೇಶನಿಗೆ ಇಪ್ಪತ್ತೊಂದು ಎಳೆಯ ಗೆಜ್ಜೆವಸ್ತ್ರ ಅರ್ಪಿಸಲಾಗುತ್ತಿತ್ತು. ಆದರೆ ಈಗ ಅದರಲ್ಲಿ ಅನೇಕ ಹೊಸ ಬಗೆಯ ವಿನ್ಯಾಸಗಳನ್ನು ಕಾಣಬಹುದಾಗಿದೆ. 
(2 / 5)
ದೇವರಿಗೆ ಅರ್ಪಿಸುವ ಹತ್ತಿಯ ಹಾರಕ್ಕೆ ಗೆಜ್ಜೆವಸ್ತ್ರ ಎಂದು ಕರೆಯುತ್ತಾರೆ. ಸಾಮಾನ್ಯವಾಗಿ ಗೌರಿಗೆ ಹದಿನಾರು ಎಳೆ ಗೆಜ್ಜೆವಸ್ತ್ರ ಅರ್ಪಿಸಿದರೆ, ಗಣೇಶನಿಗೆ ಇಪ್ಪತ್ತೊಂದು ಎಳೆಯ ಗೆಜ್ಜೆವಸ್ತ್ರ ಅರ್ಪಿಸಲಾಗುತ್ತಿತ್ತು. ಆದರೆ ಈಗ ಅದರಲ್ಲಿ ಅನೇಕ ಹೊಸ ಬಗೆಯ ವಿನ್ಯಾಸಗಳನ್ನು ಕಾಣಬಹುದಾಗಿದೆ. (Pinterest)
ದೂರದಿಂದ ನೋಡಿದರೆ ಮುತ್ತಿನ ಹಾರದಂತೆ ಕಂಗೊಳಿಸುವ ಗೆಜ್ಜೆವಸ್ತ್ರಗಳು ಕಣ್ಮನ ಸೆಳೆಯುತ್ತವೆ. ಗಜ್ಜೆವಸ್ತ್ರಗಳಲ್ಲಿ ಮಲ್ಲಿಗೆ, ಗುಲಾಬಿ, ಮಾವಿನ ಎಲೆ, ಪಾರಿಜಾತ ಮುಂತಾದ ವಿನ್ಯಾಸಗಳು ಬಹಳ ಜನಪ್ರಿಯವಾಗಿವೆ. 
(3 / 5)
ದೂರದಿಂದ ನೋಡಿದರೆ ಮುತ್ತಿನ ಹಾರದಂತೆ ಕಂಗೊಳಿಸುವ ಗೆಜ್ಜೆವಸ್ತ್ರಗಳು ಕಣ್ಮನ ಸೆಳೆಯುತ್ತವೆ. ಗಜ್ಜೆವಸ್ತ್ರಗಳಲ್ಲಿ ಮಲ್ಲಿಗೆ, ಗುಲಾಬಿ, ಮಾವಿನ ಎಲೆ, ಪಾರಿಜಾತ ಮುಂತಾದ ವಿನ್ಯಾಸಗಳು ಬಹಳ ಜನಪ್ರಿಯವಾಗಿವೆ. (Pinterest)
ದೇವರ ಪೂಜೆಗೆ ಬಳಸಲಾಗುವ ಕಲಾತ್ಮಕ ಗೆಜ್ಜೆವಸ್ತ್ರ ತಯಾರಿಸಲು ಬೊಯ್ಲಡ್‌ ಕಾಟನ್‌ ಬಳಸಲಾಗುತ್ತದೆ. ಫೆವಿಕಲ್‌, ಕತ್ತರಿ, ಬಣ್ಣ ಬಣ್ಣದ ಸ್ಟಿಕ್ಕರ್‌, ದಪ್ಪ ಪೇಪರ್‌ (ಒರಿಗಾಮಿ ಪೇಪರ್‌), ವುಲನ್‌ ಇದ್ದರೆ ಸಾಕು. ಹತ್ತಿಯ ಎಳೆಗಳನ್ನು ನೀಟಾಗಿ ಒಂದೇ ಅಳತೆಗೆ ಕತ್ತರಿಸಿ. ಅದನ್ನು ದುಂಡಾಗಿ ಕತ್ತರಿಸಿ ಚಿಕ್ಕ ಒರಿಗಾಮಿ ಪೇಪರ್‌ ಮೇಲೆ ಫೆವಿಕಲ್‌ ಸಹಾಯದಿಂದ ಅಂಟಿಸಿ, ನಿಮ್ಮಿಷ್ಟದ ಹೂವಿನ ಆಕೃತಿ ವಿನ್ಯಾಸಗೊಳಿಸಿ. ಅವುಗಳನ್ನು ವುಲನ್‌ ದಾರದ ಮೇಲೆ ಅಂಟಿಸಿ. ಅದಕ್ಕೆ ಬಣ್ಣ ಬಣ್ಣದ ಸ್ಟಿಕ್ಕರ್‌ ಅನ್ನು ಅಂಟಿಸಿ. 
(4 / 5)
ದೇವರ ಪೂಜೆಗೆ ಬಳಸಲಾಗುವ ಕಲಾತ್ಮಕ ಗೆಜ್ಜೆವಸ್ತ್ರ ತಯಾರಿಸಲು ಬೊಯ್ಲಡ್‌ ಕಾಟನ್‌ ಬಳಸಲಾಗುತ್ತದೆ. ಫೆವಿಕಲ್‌, ಕತ್ತರಿ, ಬಣ್ಣ ಬಣ್ಣದ ಸ್ಟಿಕ್ಕರ್‌, ದಪ್ಪ ಪೇಪರ್‌ (ಒರಿಗಾಮಿ ಪೇಪರ್‌), ವುಲನ್‌ ಇದ್ದರೆ ಸಾಕು. ಹತ್ತಿಯ ಎಳೆಗಳನ್ನು ನೀಟಾಗಿ ಒಂದೇ ಅಳತೆಗೆ ಕತ್ತರಿಸಿ. ಅದನ್ನು ದುಂಡಾಗಿ ಕತ್ತರಿಸಿ ಚಿಕ್ಕ ಒರಿಗಾಮಿ ಪೇಪರ್‌ ಮೇಲೆ ಫೆವಿಕಲ್‌ ಸಹಾಯದಿಂದ ಅಂಟಿಸಿ, ನಿಮ್ಮಿಷ್ಟದ ಹೂವಿನ ಆಕೃತಿ ವಿನ್ಯಾಸಗೊಳಿಸಿ. ಅವುಗಳನ್ನು ವುಲನ್‌ ದಾರದ ಮೇಲೆ ಅಂಟಿಸಿ. ಅದಕ್ಕೆ ಬಣ್ಣ ಬಣ್ಣದ ಸ್ಟಿಕ್ಕರ್‌ ಅನ್ನು ಅಂಟಿಸಿ. (Pinterest)
ಈ ಬಾರಿಯ ಗೌರಿ–ಗಣೇಶ ಹಬ್ಬಕ್ಕೆ ಆಕರ್ಷಕ ರೀತಿಯಲ್ಲಿ ಗೆಜ್ಜೆವಸ್ತ್ರ ತಯಾರಿಸಿ. ನಿಮ್ಮ ಮನೆಯ ಗೌರಿ–ಗಣಪನನ್ನು ಸುಂದರವಾಗಿ ಅಲಂಕರಿಸಿ.
(5 / 5)
ಈ ಬಾರಿಯ ಗೌರಿ–ಗಣೇಶ ಹಬ್ಬಕ್ಕೆ ಆಕರ್ಷಕ ರೀತಿಯಲ್ಲಿ ಗೆಜ್ಜೆವಸ್ತ್ರ ತಯಾರಿಸಿ. ನಿಮ್ಮ ಮನೆಯ ಗೌರಿ–ಗಣಪನನ್ನು ಸುಂದರವಾಗಿ ಅಲಂಕರಿಸಿ.(Pinterest)

    ಹಂಚಿಕೊಳ್ಳಲು ಲೇಖನಗಳು