logo
ಕನ್ನಡ ಸುದ್ದಿ  /  ಫೋಟೋ ಗ್ಯಾಲರಿ  /  Vitamin D Deficiency: ಆಗಾಗ ಕಾಯಿಲೆ ಬೀಳುತ್ತಿದ್ದೀರಾ, ಆಯಾಸ ಹೆಚ್ಚಾಗಿರುವುದೇ, ಬೆನ್ನುನೋವಿದೆಯೇ? ವಿಟಮಿನ್‌ ಡಿ ಕೊರತೆಯ ಸೂಚನೆಗಳಿವು

Vitamin d deficiency: ಆಗಾಗ ಕಾಯಿಲೆ ಬೀಳುತ್ತಿದ್ದೀರಾ, ಆಯಾಸ ಹೆಚ್ಚಾಗಿರುವುದೇ, ಬೆನ್ನುನೋವಿದೆಯೇ? ವಿಟಮಿನ್‌ ಡಿ ಕೊರತೆಯ ಸೂಚನೆಗಳಿವು

Nov 18, 2024 06:54 PM IST

vitamin d deficiency symptoms: ದೇಹದಲ್ಲಿ ವಿಟಮಿನ್‌ ಡಿ ಕೊರತೆಯಾದಾಗ ಹಲವು ರೋಗಲಕ್ಷಣಗಳು ಕಾಣಿಸುತ್ತವೆ. ಅತಿಯಾಗಿ ಆಯಾಸವಾಗುವುದು, ಪದೇಪದೇ ಕಾಯಿಲೆ ಬೀಳುವುದು ಸೇರಿದಂತೆ ವಿಟಮಿನ್‌ ಡಿ ಕೊರತೆಯನ್ನು ಸೂಚಿಸುವ ಲಕ್ಷಣಗಳ ಬಗ್ಗೆ ತಿಳಿಯಿರಿ.

  • vitamin d deficiency symptoms: ದೇಹದಲ್ಲಿ ವಿಟಮಿನ್‌ ಡಿ ಕೊರತೆಯಾದಾಗ ಹಲವು ರೋಗಲಕ್ಷಣಗಳು ಕಾಣಿಸುತ್ತವೆ. ಅತಿಯಾಗಿ ಆಯಾಸವಾಗುವುದು, ಪದೇಪದೇ ಕಾಯಿಲೆ ಬೀಳುವುದು ಸೇರಿದಂತೆ ವಿಟಮಿನ್‌ ಡಿ ಕೊರತೆಯನ್ನು ಸೂಚಿಸುವ ಲಕ್ಷಣಗಳ ಬಗ್ಗೆ ತಿಳಿಯಿರಿ.
vitamin d deficiency symptoms: ನಮ್ಮ ದೇಹದಲ್ಲಿ ವಿಟಮಿನ್‌ ಡಿ ಕೊರತೆಯಾದರೆ ನಮ್ಮ ರೋಗ ನಿರೋಧಕ ಶಕ್ತಿ ಕುಂಠಿತವಾಗುತ್ತದೆ. ಖಿನ್ನತೆ, ಆತಂಕದಂತಹ ಹಲವು ರೋಗಲಕ್ಷಣಗಳನ್ನು ನೀಡುತ್ತದೆ. ನಿಮ್ಮ ದೇಹದಲ್ಲಿ ವಿಟಮಿನ್‌ ಡಿ ಕಡಿಮೆ ಇದೆ ಎಂದು ಸೂಚಿಸುವ ಸಾಮಾನ್ಯ ಲಕ್ಷಣಗಳು ಮತ್ತು ಚಿಹ್ನೆಗಳ ವಿವರ ಇಲ್ಲಿ ನೀಡಲಾಗಿದೆ.
(1 / 9)

ಆಗಾಗ ಅನಾರೋಗ್ಯಕ್ಕೆ ಒಳಗಾಗುತ್ತಿದ್ದರೆ, ಸಣ್ಣ ಸೋಂಕಿನಿಂದ ಕಾಯಿಲೆಗೆ ತುತ್ತಾಗುತ್ತಿದ್ದರೆ ನಿಮ್ಮ ದೇಹದಲ್ಲಿ ವಿಟಮಿನ್‌ ಡಿ ಕೊರತೆ ಇದೆ ಎಂದರ್ಥ. 
(2 / 9)

ವಿಟಮಿನ್‌ ಡಿ ಕೊರತೆಯಿಂದ ಆಯಾಸ, ಸುಸ್ತಾಗುವಂತಹ ಲಕ್ಷಣಗಳು ಕಾಣಿಸುತ್ತವೆ. ಹಲವಾರು ಅಧ್ಯಯನಗಳು ವಿಟಮಿನ್ ಡಿ ಕೊರತೆಯಿರುವ ವ್ಯಕ್ತಿಗಳಲ್ಲಿ ಖಿನ್ನತೆ ಹೆಚ್ಚಿರುವುದನ್ನು ಕಂಡುಕೊಂಡಿವೆ. 
(3 / 9)

ವಿಟಮಿನ್ ಡಿ ಕೊರತೆ ಇರುವವರಲ್ಲಿ ದೌರ್ಬಲ್ಯ, ನೋವು, ಸ್ನಾಯುವಿನ ಮೇಲೆ ಒತ್ತಡದಂತಹ ರೋಗಲಕ್ಷಣಗಳು ಕಾಣಿಸಿಕೊಳ್ಳಬಹುದು.
(4 / 9)

ವಿಟಮಿನ್‌ ಡಿ ಕೊರತೆಯಿಂದ ಬೆನ್ನು ನೋವು ಉಂಟಾಗುತ್ತದೆ. ಸ್ನಾಯು ಬಲ ಕಡಿಮೆಯಾದ ಸಂದರ್ಭದಲ್ಲಿ ನಿಮ್ಮ ಬೆನ್ನು ಮತ್ತು ಕತ್ತಿನ ಸ್ನಾಯುಗಳ ಮೇಲೆ ಹೆಚ್ಚಿನ ಒತ್ತಡವನ್ನು ಉಂಟುಮಾಡಬಹುದು. ಇದು ಬೆನ್ನುನೋವಿಗೆ ಕಾರಣವಾಗಬಹುದು. 
(5 / 9)

ವಿಟಮಿನ್‌ ಡಿ ಕೊರತೆಯಿಂದ ಮೂಳೆಗಳು ಮೃದುವಾಗಬಹುದು. ಇದರಿಂದ ಮೂಳೆ ಸಾಂದ್ರತೆ ಕಡಿಮೆಯಾಗಬಹುದು. ಆಸ್ಟಿಯೊಪೊರೋಸಿಸ್ ಮತ್ತು ಮೂಳೆ ಮುರಿತಗಳ ಅಪಾಯ ಹೆಚ್ಚಿರುತ್ತದೆ. 
(6 / 9)

ವಿಟಮಿನ್ ಡಿ ಹೊಸ ಕೂದಲಿನ ಬೆಳವಣಿಗೆ ಸೇರಿದಂತೆ ಕೂದಲಿನ ಆರೋಗ್ಯದಲ್ಲಿ ಮಹತ್ವದ ಪಾತ್ರ ವಹಿಸುತ್ತದೆ. ವಿಟಮಿನ್‌ ಡಿ ಕೊರತೆಯಾದರೆ ಕೂದಲಿನ ಬೆಳವಣಿಗೆ ಕಡಿಮೆಯಾಗುತ್ತದೆ. ಕೂದಲು ಉದುರುವಿಕೆಗೂ ಕಾರಣವಾಗುತ್ತದೆ. 
(7 / 9)

ವಿಟಮಿನ್ ಡಿ ಕೊರತೆಯು ದೇಹದ ತೂಕ ಹೆಚ್ಚಾಗಲು ಕಾರಣವಾಗಬಹುದು. ಶಸ್ತ್ರಚಿಕಿತ್ಸೆ ಅಥವಾ ಗಾಯಗೊಂಡ ನಂತರ ಆ ಗಾಯ ತಡವಾಗಿಕೂಡ ವಿಟಮಿನ್‌ ಡಿ ಕೊರತೆ ಇರುವುದನ್ನು ಸೂಚಿಸುತ್ತದೆ. 
(8 / 9)

ವಿಟಮಿನ್ ಡಿ ಚರ್ಮದ ಪ್ರತಿರಕ್ಷಣಾ ವ್ಯವಸ್ಥೆಯ ಮೇಲೆ ಪ್ರಭಾವ ಬೀರುತ್ತದೆ. ಎಸ್ಜಿಮಾವು ಚರ್ಮದ ಉರಿಯೂತ, ಕಿರಿಕಿರಿ ಮತ್ತು ಊತ ಮುಂತಾದವುಗಳಿಗೆ ಕಾರಣವಾಗುತ್ತದೆ. ನಿಮ್ಮ ದೇಹದಲ್ಲಿ ಈ  ಚಿಹ್ನೆಗಳು ಅಥವಾ ರೋಗಲಕ್ಷಣಗಳು ಇದ್ದರೆ ತಜ್ಞ ವೈದ್ಯರ ನೆರವು ಪಡೆದು ವಿಟಮಿನ್‌ಡಿ ಪರೀಕ್ಷೆ ಮಾಡಿಕೊಳ್ಳಿ.
(9 / 9)

    ಹಂಚಿಕೊಳ್ಳಲು ಲೇಖನಗಳು