logo
ಕನ್ನಡ ಸುದ್ದಿ  /  ಫೋಟೋ ಗ್ಯಾಲರಿ  /  ಚರ್ಮದ ಆರೋಗ್ಯದಿಂದ ತೂಕ ನಿರ್ವಹಣೆಯವರೆಗೆ: ಹೆಚ್ಚು ನೀರು ಸೇವನೆಯ ಪ್ರಯೋಜನಗಳಿವು

ಚರ್ಮದ ಆರೋಗ್ಯದಿಂದ ತೂಕ ನಿರ್ವಹಣೆಯವರೆಗೆ: ಹೆಚ್ಚು ನೀರು ಸೇವನೆಯ ಪ್ರಯೋಜನಗಳಿವು

Oct 13, 2024 06:30 PM IST

ನೀರು ಜೀವನಕ್ಕೆ ಬಹಳ ಅವಶ್ಯಕವಾಗಿದೆ. ಆರೋಗ್ಯವನ್ನು ಕಾಪಾಡಿಕೊಳ್ಳುವಲ್ಲಿ ನೀರು ನಿರ್ಣಾಯಕ ಪಾತ್ರವನ್ನು ವಹಿಸುತ್ತದೆ. ದೇಹದ ಉಷ್ಣತೆಯನ್ನು ನಿಯಂತ್ರಿಸುವುದು, ಜೀರ್ಣಕ್ರಿಯೆಗೆ ಸಹಾಯ ಮಾಡುವುದು ಮತ್ತು ಪೋಷಕಾಂಶಗಳ ಹೀರಿಕೊಳ್ಳುವಿಕೆಯನ್ನು ಬೆಂಬಲಿಸುವುದು ಸೇರಿದಂತೆ ನೀರಿನ ಪ್ರಯೋಜನ ಹಲವು.

ನೀರು ಜೀವನಕ್ಕೆ ಬಹಳ ಅವಶ್ಯಕವಾಗಿದೆ. ಆರೋಗ್ಯವನ್ನು ಕಾಪಾಡಿಕೊಳ್ಳುವಲ್ಲಿ ನೀರು ನಿರ್ಣಾಯಕ ಪಾತ್ರವನ್ನು ವಹಿಸುತ್ತದೆ. ದೇಹದ ಉಷ್ಣತೆಯನ್ನು ನಿಯಂತ್ರಿಸುವುದು, ಜೀರ್ಣಕ್ರಿಯೆಗೆ ಸಹಾಯ ಮಾಡುವುದು ಮತ್ತು ಪೋಷಕಾಂಶಗಳ ಹೀರಿಕೊಳ್ಳುವಿಕೆಯನ್ನು ಬೆಂಬಲಿಸುವುದು ಸೇರಿದಂತೆ ನೀರಿನ ಪ್ರಯೋಜನ ಹಲವು.
ಉತ್ತಮ ಆರೋಗ್ಯಕ್ಕಾಗಿ ಹೆಚ್ಚೆಚ್ಚು ನೀರು ಕುಡಿಯುವುದು ಬಹಳ ಮುಖ್ಯ. ಪ್ರತಿದಿನ ಕನಿಷ್ಠ 8 ಲೋಟ ನೀರು ಕುಡಿಯಬೇಕು. ದೇಹವನ್ನು ಹೈಡ್ರೀಕರಿಸಿಕೊಳ್ಳಲು ಸಾಕಷ್ಟು ನೀರು ಕುಡಿಯಬೇಕು. ಚರ್ಮದ ಆರೋಗ್ಯವನ್ನು ಸುಧಾರಿಸುವುದರಿಂದ ಶಕ್ತಿಯ ಮಟ್ಟವನ್ನು ಹೆಚ್ಚಿಸಲು, ಅರಿವಿನ ಕಾರ್ಯವನ್ನು ಹೆಚ್ಚಿಸಲು ಹಾಗೂ ನಿರ್ಜಲೀಕರಣವನ್ನು ತಡೆಯಲು ಸಹಾಯ ಮಾಡುತ್ತದೆ. ನೀರು ಕುಡಿಯುವುದರಿಂದ ಹಲವಾರು ಪ್ರಯೋಜನಗಳಿವೆ. ಇಲ್ಲಿ ಏಳು ಪ್ರಯೋಜನಗಳ ಬಗ್ಗೆ ಮಾಹಿತಿ ನೀಡಲಾಗಿದೆ.
(1 / 9)
ಉತ್ತಮ ಆರೋಗ್ಯಕ್ಕಾಗಿ ಹೆಚ್ಚೆಚ್ಚು ನೀರು ಕುಡಿಯುವುದು ಬಹಳ ಮುಖ್ಯ. ಪ್ರತಿದಿನ ಕನಿಷ್ಠ 8 ಲೋಟ ನೀರು ಕುಡಿಯಬೇಕು. ದೇಹವನ್ನು ಹೈಡ್ರೀಕರಿಸಿಕೊಳ್ಳಲು ಸಾಕಷ್ಟು ನೀರು ಕುಡಿಯಬೇಕು. ಚರ್ಮದ ಆರೋಗ್ಯವನ್ನು ಸುಧಾರಿಸುವುದರಿಂದ ಶಕ್ತಿಯ ಮಟ್ಟವನ್ನು ಹೆಚ್ಚಿಸಲು, ಅರಿವಿನ ಕಾರ್ಯವನ್ನು ಹೆಚ್ಚಿಸಲು ಹಾಗೂ ನಿರ್ಜಲೀಕರಣವನ್ನು ತಡೆಯಲು ಸಹಾಯ ಮಾಡುತ್ತದೆ. ನೀರು ಕುಡಿಯುವುದರಿಂದ ಹಲವಾರು ಪ್ರಯೋಜನಗಳಿವೆ. ಇಲ್ಲಿ ಏಳು ಪ್ರಯೋಜನಗಳ ಬಗ್ಗೆ ಮಾಹಿತಿ ನೀಡಲಾಗಿದೆ.(Canva)
ಚರ್ಮದ ಆರೋಗ್ಯ: ಸಾಕಷ್ಟು ನೀರು ಸೇವನೆಯು ದೇಹವನ್ನು ಹೈಡ್ರೀಕರಿಸುವುದು ಮಾತ್ರವಲ್ಲದೆ ಚರ್ಮದ ಕಾಳಜಿಗೂ ಉತ್ತಮವಾಗಿದೆ. ಇದು ತೇವಾಂಶದ ಮಟ್ಟವನ್ನು ಸುಧಾರಿಸುತ್ತದೆ, ಶುಷ್ಕತೆಯ ನೋಟವನ್ನು ಕಡಿಮೆ ಮಾಡುತ್ತದೆ ಮತ್ತು ಆರೋಗ್ಯಕರ, ಕಾಂತಿಯುತ ಮೈಬಣ್ಣವನ್ನು ಉತ್ತೇಜಿಸುತ್ತದೆ.
(2 / 9)
ಚರ್ಮದ ಆರೋಗ್ಯ: ಸಾಕಷ್ಟು ನೀರು ಸೇವನೆಯು ದೇಹವನ್ನು ಹೈಡ್ರೀಕರಿಸುವುದು ಮಾತ್ರವಲ್ಲದೆ ಚರ್ಮದ ಕಾಳಜಿಗೂ ಉತ್ತಮವಾಗಿದೆ. ಇದು ತೇವಾಂಶದ ಮಟ್ಟವನ್ನು ಸುಧಾರಿಸುತ್ತದೆ, ಶುಷ್ಕತೆಯ ನೋಟವನ್ನು ಕಡಿಮೆ ಮಾಡುತ್ತದೆ ಮತ್ತು ಆರೋಗ್ಯಕರ, ಕಾಂತಿಯುತ ಮೈಬಣ್ಣವನ್ನು ಉತ್ತೇಜಿಸುತ್ತದೆ.(freepik)
ಹೈಡ್ರೇಟೆಡ್ ಮಾಡಲು ಸಹಕಾರಿ: ಸಾಕಷ್ಟು ನೀರಿನ ಸೇವನೆಯು ದೇಹವನ್ನು ಹೈಡ್ರೇಟೆಡ್ ಮಾಡಲು ಸಹಕಾರಿಯಾಗಿದೆ. ಬೆವರು ಮತ್ತು ಉಸಿರಾಟವನ್ನು ಸುಗಮಗೊಳಿಸುವ ಮೂಲಕ ದೇಹದ ಉಷ್ಣತೆಯನ್ನು ಕಾಪಾಡಿಕೊಳ್ಳಲು ಸಹಾಯ ಮಾಡುತ್ತದೆ. 
(3 / 9)
ಹೈಡ್ರೇಟೆಡ್ ಮಾಡಲು ಸಹಕಾರಿ: ಸಾಕಷ್ಟು ನೀರಿನ ಸೇವನೆಯು ದೇಹವನ್ನು ಹೈಡ್ರೇಟೆಡ್ ಮಾಡಲು ಸಹಕಾರಿಯಾಗಿದೆ. ಬೆವರು ಮತ್ತು ಉಸಿರಾಟವನ್ನು ಸುಗಮಗೊಳಿಸುವ ಮೂಲಕ ದೇಹದ ಉಷ್ಣತೆಯನ್ನು ಕಾಪಾಡಿಕೊಳ್ಳಲು ಸಹಾಯ ಮಾಡುತ್ತದೆ. (freepik)
ಸುಧಾರಿತ ಜೀರ್ಣಕ್ರಿಯೆ: ಹೆಚ್ಚು ನೀರು ಸೇವನೆಯಿಂದ ಜೀರ್ಣಕ್ರಿಯೆ ಪ್ರಕ್ರಿಯೆಯನ್ನು ಸರಾಗಗೊಳಿಸುತ್ತದೆ. ಅಲ್ಲದೆ, ಇದು ದೇಹಕ್ಕೆ ಅಗತ್ಯವಾದ ಪೋಷಕಾಂಶಗಳನ್ನು ಹೀರಿಕೊಳ್ಳಲು ಸುಲಭವಾಗುತ್ತದೆ. ಮಲಬದ್ಧತೆಯಂತಹ ಜೀರ್ಣಕಾರಿ ಸಮಸ್ಯೆಗಳನ್ನು ತಡೆಯಲು ಸಹಕಾರಿಯಾಗಿದೆ.
(4 / 9)
ಸುಧಾರಿತ ಜೀರ್ಣಕ್ರಿಯೆ: ಹೆಚ್ಚು ನೀರು ಸೇವನೆಯಿಂದ ಜೀರ್ಣಕ್ರಿಯೆ ಪ್ರಕ್ರಿಯೆಯನ್ನು ಸರಾಗಗೊಳಿಸುತ್ತದೆ. ಅಲ್ಲದೆ, ಇದು ದೇಹಕ್ಕೆ ಅಗತ್ಯವಾದ ಪೋಷಕಾಂಶಗಳನ್ನು ಹೀರಿಕೊಳ್ಳಲು ಸುಲಭವಾಗುತ್ತದೆ. ಮಲಬದ್ಧತೆಯಂತಹ ಜೀರ್ಣಕಾರಿ ಸಮಸ್ಯೆಗಳನ್ನು ತಡೆಯಲು ಸಹಕಾರಿಯಾಗಿದೆ.(Canva)
ಆಯಾಸ ನಿವಾರಿಸಲು ಸಹಕಾರಿ: ದೇಹದಲ್ಲಿ ಶಕ್ತಿ ತುಂಬಲು ಹೆಚ್ಚು ನೀರು ಸೇವನೆ ಮಾಡುವುದು ಅತ್ಯಗತ್ಯ. ದೇಹವನ್ನು ಹೈಡ್ರೀಕರಿಸುವುದರಿಂದ ಆಯಾಸವನ್ನು ಎದುರಿಸಲು ಸಹಾಯ ಮಾಡುತ್ತದೆ. ಇದು ದಿನವಿಡೀ ಉಲ್ಲಾಸಭರಿತವಾಗಿರಲು ಮತ್ತು ಗಮನ ಕೇಂದ್ರೀಕರಿಸಲು ಅನುವು ಮಾಡಿಕೊಡುತ್ತದೆ.
(5 / 9)
ಆಯಾಸ ನಿವಾರಿಸಲು ಸಹಕಾರಿ: ದೇಹದಲ್ಲಿ ಶಕ್ತಿ ತುಂಬಲು ಹೆಚ್ಚು ನೀರು ಸೇವನೆ ಮಾಡುವುದು ಅತ್ಯಗತ್ಯ. ದೇಹವನ್ನು ಹೈಡ್ರೀಕರಿಸುವುದರಿಂದ ಆಯಾಸವನ್ನು ಎದುರಿಸಲು ಸಹಾಯ ಮಾಡುತ್ತದೆ. ಇದು ದಿನವಿಡೀ ಉಲ್ಲಾಸಭರಿತವಾಗಿರಲು ಮತ್ತು ಗಮನ ಕೇಂದ್ರೀಕರಿಸಲು ಅನುವು ಮಾಡಿಕೊಡುತ್ತದೆ.(freepik)
ಮೂತ್ರಪಿಂಡದ ಆರೋಗ್ಯಕ್ಕೆ ಸಹಕಾರಿ: ಮೂತ್ರಪಿಂಡದ ಆರೋಗ್ಯಕ್ಕೆ ನೀರು ಅತ್ಯಗತ್ಯ. ದೇಹದಿಂದ ತ್ಯಾಜ್ಯ ಮತ್ತು ಟಾಕ್ಸಿನ್ ಅನ್ನು ಹೊರಹಾಕಲು ಸಹಾಯ ಮಾಡುತ್ತದೆ. ಇದು ಮೂತ್ರಪಿಂಡದ ಕಲ್ಲುಗಳು ಮತ್ತು ಮೂತ್ರದ ಸೋಂಕನ್ನು ತಡೆಯಲು ಸಹಾಯ ಮಾಡುತ್ತದೆ.
(6 / 9)
ಮೂತ್ರಪಿಂಡದ ಆರೋಗ್ಯಕ್ಕೆ ಸಹಕಾರಿ: ಮೂತ್ರಪಿಂಡದ ಆರೋಗ್ಯಕ್ಕೆ ನೀರು ಅತ್ಯಗತ್ಯ. ದೇಹದಿಂದ ತ್ಯಾಜ್ಯ ಮತ್ತು ಟಾಕ್ಸಿನ್ ಅನ್ನು ಹೊರಹಾಕಲು ಸಹಾಯ ಮಾಡುತ್ತದೆ. ಇದು ಮೂತ್ರಪಿಂಡದ ಕಲ್ಲುಗಳು ಮತ್ತು ಮೂತ್ರದ ಸೋಂಕನ್ನು ತಡೆಯಲು ಸಹಾಯ ಮಾಡುತ್ತದೆ.(Canva)
ಅರಿವಿನ ಕಾರ್ಯ: ಸಾಕಷ್ಟು ನೀರು ಸೇವನೆಯಿಂದ ಸುಧಾರಿತ ಏಕಾಗ್ರತೆ, ಸ್ಮರಣೆ ಮತ್ತು ಮನಸ್ಥಿತಿಯ ಸ್ಥಿರತೆಗೆ ಸಂಬಂಧಿಸಿದೆ. ಇದು ಅರಿವಿನ ಕಾರ್ಯಕ್ಷಮತೆ ಮತ್ತು ಮಾನಸಿಕ ಸ್ಪಷ್ಟತೆಯನ್ನು ಹೆಚ್ಚಿಸಲು ಸಹಾಯ ಮಾಡುತ್ತದೆ.
(7 / 9)
ಅರಿವಿನ ಕಾರ್ಯ: ಸಾಕಷ್ಟು ನೀರು ಸೇವನೆಯಿಂದ ಸುಧಾರಿತ ಏಕಾಗ್ರತೆ, ಸ್ಮರಣೆ ಮತ್ತು ಮನಸ್ಥಿತಿಯ ಸ್ಥಿರತೆಗೆ ಸಂಬಂಧಿಸಿದೆ. ಇದು ಅರಿವಿನ ಕಾರ್ಯಕ್ಷಮತೆ ಮತ್ತು ಮಾನಸಿಕ ಸ್ಪಷ್ಟತೆಯನ್ನು ಹೆಚ್ಚಿಸಲು ಸಹಾಯ ಮಾಡುತ್ತದೆ.(Canva)
ತೂಕ ನಿರ್ವಹಣೆ: ಊಟಕ್ಕೆ ಮುಂಚೆ ನೀರು ಕುಡಿಯುವುದರಿಂದ ಹೊಟ್ಟೆ ತುಂಬಿದ ಅನುಭವ ನೀಡುತ್ತದೆ. ಇದು ಹಸಿವನ್ನು ನಿಯಂತ್ರಿಸಲು ಮತ್ತು ಕ್ಯಾಲೋರಿ ಸೇವನೆಯನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ. ತೂಕ ನಿರ್ವಹಣೆಗೂ ನೀರು ಸೇವನೆಯು ಸಹಕಾರಿಯಾಗಿದೆ.
(8 / 9)
ತೂಕ ನಿರ್ವಹಣೆ: ಊಟಕ್ಕೆ ಮುಂಚೆ ನೀರು ಕುಡಿಯುವುದರಿಂದ ಹೊಟ್ಟೆ ತುಂಬಿದ ಅನುಭವ ನೀಡುತ್ತದೆ. ಇದು ಹಸಿವನ್ನು ನಿಯಂತ್ರಿಸಲು ಮತ್ತು ಕ್ಯಾಲೋರಿ ಸೇವನೆಯನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ. ತೂಕ ನಿರ್ವಹಣೆಗೂ ನೀರು ಸೇವನೆಯು ಸಹಕಾರಿಯಾಗಿದೆ.(Canva)
ಆಹಾರ, ಆರೋಗ್ಯ, ಫ್ಯಾಷನ್‌, ರಿಲೇಷನ್‌ಶಿಪ್‌ , ಪೇರೆಂಟಿಂಗ್‌ ಸಂಬಂಧಿಸಿದ ಲೇಖನಗಳಿಗಾಗಿ ಹಿಂದೂಸ್ತಾನ್‌ ಟೈಮ್ಸ್‌ ಕನ್ನಡ ಲೈಫ್‌ಸ್ಟೈಲ್‌ ಪುಟಕ್ಕೆ ಭೇಟಿ ನೀಡಿ
(9 / 9)
ಆಹಾರ, ಆರೋಗ್ಯ, ಫ್ಯಾಷನ್‌, ರಿಲೇಷನ್‌ಶಿಪ್‌ , ಪೇರೆಂಟಿಂಗ್‌ ಸಂಬಂಧಿಸಿದ ಲೇಖನಗಳಿಗಾಗಿ ಹಿಂದೂಸ್ತಾನ್‌ ಟೈಮ್ಸ್‌ ಕನ್ನಡ ಲೈಫ್‌ಸ್ಟೈಲ್‌ ಪುಟಕ್ಕೆ ಭೇಟಿ ನೀಡಿ

    ಹಂಚಿಕೊಳ್ಳಲು ಲೇಖನಗಳು