logo
ಕನ್ನಡ ಸುದ್ದಿ  /  ಫೋಟೋ ಗ್ಯಾಲರಿ  /  ಚಳಿಗಾಲ ಎಂದು ಅತಿ ಹೆಚ್ಚು ಶುಂಠಿ ಸೇವನೆ ಮಾಡುತ್ತಿದ್ದೀರಾ: ಈ ಅಡ್ಡಪರಿಣಾಮ ಉಂಟಾಗಬಹುದು ಇರಲಿ ಎಚ್ಚರ

ಚಳಿಗಾಲ ಎಂದು ಅತಿ ಹೆಚ್ಚು ಶುಂಠಿ ಸೇವನೆ ಮಾಡುತ್ತಿದ್ದೀರಾ: ಈ ಅಡ್ಡಪರಿಣಾಮ ಉಂಟಾಗಬಹುದು ಇರಲಿ ಎಚ್ಚರ

Nov 27, 2024 12:06 PM IST

ಚಳಿಗಾಲದಲ್ಲಿ ರೋಗನಿರೋಧಕ ಶಕ್ತಿ ಹೆಚ್ಚಿಸಲು ಕೆಲವರು ಅತಿಯಾಗಿ ಶುಂಠಿಯನ್ನು ಸೇವನೆ ಮಾಡುತ್ತಾರೆ. ಆದರೆ ಅತಿಯಾಗಿ ಸೇವಿಸುವುದರಿಂದ ಅಡ್ಡಪರಿಣಾಮಗಳು ಉಂಟಾಗುತ್ತವೆ. ಚಳಿಗಾಲ ಅಥವಾ ಬೇಸಿಗೆಯಾಗಿರಲಿ, ಹೆಚ್ಚು ಶುಂಠಿಯನ್ನು ಸೇವಿಸುವುದರಿಂದ ಆರೋಗ್ಯಕ್ಕೆ ಪ್ರಯೋಜನವಾಗುವುದಿಲ್ಲ ಎಂಬುದು ನಿಮಗೆ ಗೊತ್ತೇ? ಇಲ್ಲಿದೆ ಮಾಹಿತಿ.

ಚಳಿಗಾಲದಲ್ಲಿ ರೋಗನಿರೋಧಕ ಶಕ್ತಿ ಹೆಚ್ಚಿಸಲು ಕೆಲವರು ಅತಿಯಾಗಿ ಶುಂಠಿಯನ್ನು ಸೇವನೆ ಮಾಡುತ್ತಾರೆ. ಆದರೆ ಅತಿಯಾಗಿ ಸೇವಿಸುವುದರಿಂದ ಅಡ್ಡಪರಿಣಾಮಗಳು ಉಂಟಾಗುತ್ತವೆ. ಚಳಿಗಾಲ ಅಥವಾ ಬೇಸಿಗೆಯಾಗಿರಲಿ, ಹೆಚ್ಚು ಶುಂಠಿಯನ್ನು ಸೇವಿಸುವುದರಿಂದ ಆರೋಗ್ಯಕ್ಕೆ ಪ್ರಯೋಜನವಾಗುವುದಿಲ್ಲ ಎಂಬುದು ನಿಮಗೆ ಗೊತ್ತೇ? ಇಲ್ಲಿದೆ ಮಾಹಿತಿ.
ಶುಂಠಿಯ ಅತಿಯಾದ ಸೇವನೆಯು ಆರೋಗ್ಯಕ್ಕೆ ಹಾನಿ ಮಾಡುತ್ತದೆ: ತರಕಾರಿಗಳ ರುಚಿಯನ್ನು ಹೆಚ್ಚಿಸುವುದರಿಂದ ಹಿಡಿದು ಚಹಾ ರುಚಿ ದ್ವಿಗುಣಗೊಳಿಸುವವರೆಗೆ ಜನರು ಶುಂಠಿಯನ್ನು ಹಲವು ವಿಧಗಳಲ್ಲಿ ಬಳಸುತ್ತಾರೆ. ಶುಂಠಿಯು ಬೆಚ್ಚಗಾಗುವ ಪರಿಣಾಮವನ್ನು ಹೊಂದಿದೆ ಎಂದು, ಅನೇಕ ಬಾರಿ ಜನರು ಚಳಿಗಾಲ ಬಂದ ತಕ್ಷಣ ಹೆಚ್ಚು ಸೇವಿಸಲು ಪ್ರಾರಂಭಿಸುತ್ತಾರೆ. ಆದರೆ, ಶುಂಠಿಯನ್ನು ಅತಿಯಾಗಿ ಸೇವಿಸುವುದರಿಂದ ಆರೋಗ್ಯಕ್ಕೆ ಪ್ರಯೋಜನವಾಗುವುದಕ್ಕಿಂತ ಹಾನಿಯುಂಟಾಗುತ್ತದೆ.
(1 / 8)
ಶುಂಠಿಯ ಅತಿಯಾದ ಸೇವನೆಯು ಆರೋಗ್ಯಕ್ಕೆ ಹಾನಿ ಮಾಡುತ್ತದೆ: ತರಕಾರಿಗಳ ರುಚಿಯನ್ನು ಹೆಚ್ಚಿಸುವುದರಿಂದ ಹಿಡಿದು ಚಹಾ ರುಚಿ ದ್ವಿಗುಣಗೊಳಿಸುವವರೆಗೆ ಜನರು ಶುಂಠಿಯನ್ನು ಹಲವು ವಿಧಗಳಲ್ಲಿ ಬಳಸುತ್ತಾರೆ. ಶುಂಠಿಯು ಬೆಚ್ಚಗಾಗುವ ಪರಿಣಾಮವನ್ನು ಹೊಂದಿದೆ ಎಂದು, ಅನೇಕ ಬಾರಿ ಜನರು ಚಳಿಗಾಲ ಬಂದ ತಕ್ಷಣ ಹೆಚ್ಚು ಸೇವಿಸಲು ಪ್ರಾರಂಭಿಸುತ್ತಾರೆ. ಆದರೆ, ಶುಂಠಿಯನ್ನು ಅತಿಯಾಗಿ ಸೇವಿಸುವುದರಿಂದ ಆರೋಗ್ಯಕ್ಕೆ ಪ್ರಯೋಜನವಾಗುವುದಕ್ಕಿಂತ ಹಾನಿಯುಂಟಾಗುತ್ತದೆ.(shutterstock)
ಅಲರ್ಜಿಗಳು: ಶುಂಠಿಯ ಅತಿಯಾದ ಸೇವನೆಯು ಕೆಲವೊಮ್ಮೆ ಜನರಲ್ಲಿ ಅಲರ್ಜಿಯ ಸಮಸ್ಯೆಗಳನ್ನು ಹೆಚ್ಚಿಸುತ್ತದೆ. ಇದರಿಂದಾಗಿ ಚರ್ಮದ ದದ್ದು, ತುರಿಕೆ ಮತ್ತು ಗಂಟಲು ಅಲರ್ಜಿ ಸಮಸ್ಯೆಗಳು ಉಂಟಾಗಬಹುದು.
(2 / 8)
ಅಲರ್ಜಿಗಳು: ಶುಂಠಿಯ ಅತಿಯಾದ ಸೇವನೆಯು ಕೆಲವೊಮ್ಮೆ ಜನರಲ್ಲಿ ಅಲರ್ಜಿಯ ಸಮಸ್ಯೆಗಳನ್ನು ಹೆಚ್ಚಿಸುತ್ತದೆ. ಇದರಿಂದಾಗಿ ಚರ್ಮದ ದದ್ದು, ತುರಿಕೆ ಮತ್ತು ಗಂಟಲು ಅಲರ್ಜಿ ಸಮಸ್ಯೆಗಳು ಉಂಟಾಗಬಹುದು.(shutterstock)
ವಾಕರಿಕೆ: ಶುಂಠಿಯು ದೇಹವನ್ನು ಬೆಚ್ಚಗೆ ಇರಿಸುತ್ತದೆ. ಆದರೆ, ಇದರ ಅತಿಯಾದ ಸೇವನೆಯು ಅತಿಸಾರ ಮತ್ತು ವಾಂತಿಯಂತಹ ಸಮಸ್ಯೆಗಳನ್ನು ಉಂಟುಮಾಡಬಹುದು.
(3 / 8)
ವಾಕರಿಕೆ: ಶುಂಠಿಯು ದೇಹವನ್ನು ಬೆಚ್ಚಗೆ ಇರಿಸುತ್ತದೆ. ಆದರೆ, ಇದರ ಅತಿಯಾದ ಸೇವನೆಯು ಅತಿಸಾರ ಮತ್ತು ವಾಂತಿಯಂತಹ ಸಮಸ್ಯೆಗಳನ್ನು ಉಂಟುಮಾಡಬಹುದು.(Shutterstock)
ಚರ್ಮಕ್ಕೆ ಸಂಬಂಧಿಸಿದ ಸಮಸ್ಯೆಗಳು: ಶುಂಠಿಯ ಅತಿಯಾದ ಸೇವನೆಯು ಚರ್ಮಕ್ಕೆ ಸಂಬಂಧಿಸಿದ ಸಮಸ್ಯೆಗಳನ್ನು ಹೆಚ್ಚಿಸುತ್ತದೆ. ಶುಂಠಿಯಲ್ಲಿ ಕೆಲವು ರಾಸಾಯನಿಕಗಳಿದ್ದು ಕೆಲವರ ತ್ವಚೆಯನ್ನು ಕೆರಳಿಸಬಹುದು. ಅಂತಹವರಿಗೆ ಶುಂಠಿಯನ್ನು ಅತಿಯಾಗಿ ಸೇವಿಸುವುದರಿಂದ ಚರ್ಮದ ಸಮಸ್ಯೆ ಉಂಟಾಗುತ್ತದೆ. ಇದರಿಂದ ಕಣ್ಣು ಕೆಂಪಾಗುವುದು, ಉಸಿರಾಟಕ್ಕೆ ತೊಂದರೆ, ತುರಿಕೆ, ತುಟಿ ಊದಿಕೊಳ್ಳುವುದು, ಕಣ್ಣುಗಳಲ್ಲಿ ತುರಿಕೆ ಮತ್ತು ಗಂಟಲಿನಲ್ಲಿ ಅಸ್ವಸ್ಥತೆ ಇತ್ಯಾದಿ ಕಾಣಿಸಿಕೊಳ್ಳಬಹುದು.
(4 / 8)
ಚರ್ಮಕ್ಕೆ ಸಂಬಂಧಿಸಿದ ಸಮಸ್ಯೆಗಳು: ಶುಂಠಿಯ ಅತಿಯಾದ ಸೇವನೆಯು ಚರ್ಮಕ್ಕೆ ಸಂಬಂಧಿಸಿದ ಸಮಸ್ಯೆಗಳನ್ನು ಹೆಚ್ಚಿಸುತ್ತದೆ. ಶುಂಠಿಯಲ್ಲಿ ಕೆಲವು ರಾಸಾಯನಿಕಗಳಿದ್ದು ಕೆಲವರ ತ್ವಚೆಯನ್ನು ಕೆರಳಿಸಬಹುದು. ಅಂತಹವರಿಗೆ ಶುಂಠಿಯನ್ನು ಅತಿಯಾಗಿ ಸೇವಿಸುವುದರಿಂದ ಚರ್ಮದ ಸಮಸ್ಯೆ ಉಂಟಾಗುತ್ತದೆ. ಇದರಿಂದ ಕಣ್ಣು ಕೆಂಪಾಗುವುದು, ಉಸಿರಾಟಕ್ಕೆ ತೊಂದರೆ, ತುರಿಕೆ, ತುಟಿ ಊದಿಕೊಳ್ಳುವುದು, ಕಣ್ಣುಗಳಲ್ಲಿ ತುರಿಕೆ ಮತ್ತು ಗಂಟಲಿನಲ್ಲಿ ಅಸ್ವಸ್ಥತೆ ಇತ್ಯಾದಿ ಕಾಣಿಸಿಕೊಳ್ಳಬಹುದು.(Shutterstock)
ಮಧುಮೇಹ: ಶುಂಠಿಯ ಅತಿಯಾದ ಸೇವನೆಯು ಮಧುಮೇಹ ರೋಗಿಗಳಿಗೆ ಹಾನಿಕಾರಕವಾಗಿದೆ. ನೀವು ಮಧುಮೇಹದ ಔಷಧಿಗಳನ್ನು ತೆಗೆದುಕೊಳ್ಳುತ್ತಿದ್ದರೆ ಹೆಚ್ಚುವರಿ ಶುಂಠಿಯನ್ನು ಸೇವಿಸುವುದು ಉತ್ತಮವಲ್ಲ. ಏಕೆಂದರೆ ಶುಂಠಿ ತಿಂದರೆ ರಕ್ತದಲ್ಲಿನ ಸಕ್ಕರೆ ಅಂಶವು ಕಡಿಮೆಯಾಗುತ್ತದೆ. ಇದನ್ನು ಹೈಪೊಗ್ಲಿಸಿಮಿಯಾ ಎಂದು ಕರೆಯಲಾಗುತ್ತದೆ.
(5 / 8)
ಮಧುಮೇಹ: ಶುಂಠಿಯ ಅತಿಯಾದ ಸೇವನೆಯು ಮಧುಮೇಹ ರೋಗಿಗಳಿಗೆ ಹಾನಿಕಾರಕವಾಗಿದೆ. ನೀವು ಮಧುಮೇಹದ ಔಷಧಿಗಳನ್ನು ತೆಗೆದುಕೊಳ್ಳುತ್ತಿದ್ದರೆ ಹೆಚ್ಚುವರಿ ಶುಂಠಿಯನ್ನು ಸೇವಿಸುವುದು ಉತ್ತಮವಲ್ಲ. ಏಕೆಂದರೆ ಶುಂಠಿ ತಿಂದರೆ ರಕ್ತದಲ್ಲಿನ ಸಕ್ಕರೆ ಅಂಶವು ಕಡಿಮೆಯಾಗುತ್ತದೆ. ಇದನ್ನು ಹೈಪೊಗ್ಲಿಸಿಮಿಯಾ ಎಂದು ಕರೆಯಲಾಗುತ್ತದೆ.(Shutterstock)
ನಿರ್ಜಲೀಕರಣ: ಶುಂಠಿಯ ಬೆಚ್ಚಗಿನ ಗುಣದಿಂದಾಗಿ ಇದನ್ನು ಅತಿಯಾಗಿ ಸೇವಿಸುವುದರಿಂದ ದೇಹದ ಉಷ್ಣತೆಯನ್ನು ಹೆಚ್ಚಿಸಬಹುದು. ಇದರಿಂದಾಗಿ ವ್ಯಕ್ತಿಯು ಹೆಚ್ಚು ಬೆವರಲು ಪ್ರಾರಂಭಿಸುತ್ತಾನೆ/ಳೆ ಮತ್ತು ದೇಹದಲ್ಲಿ ನೀರಿನ ಕೊರತೆ ಉಂಟಾಗಬಹುದು. ಇದರಿಂದಾಗಿ ನಿರ್ಜಲೀಕರಣ ಸಮಸ್ಯೆ ಉಂಟಾಗಬಹುದು.
(6 / 8)
ನಿರ್ಜಲೀಕರಣ: ಶುಂಠಿಯ ಬೆಚ್ಚಗಿನ ಗುಣದಿಂದಾಗಿ ಇದನ್ನು ಅತಿಯಾಗಿ ಸೇವಿಸುವುದರಿಂದ ದೇಹದ ಉಷ್ಣತೆಯನ್ನು ಹೆಚ್ಚಿಸಬಹುದು. ಇದರಿಂದಾಗಿ ವ್ಯಕ್ತಿಯು ಹೆಚ್ಚು ಬೆವರಲು ಪ್ರಾರಂಭಿಸುತ್ತಾನೆ/ಳೆ ಮತ್ತು ದೇಹದಲ್ಲಿ ನೀರಿನ ಕೊರತೆ ಉಂಟಾಗಬಹುದು. ಇದರಿಂದಾಗಿ ನಿರ್ಜಲೀಕರಣ ಸಮಸ್ಯೆ ಉಂಟಾಗಬಹುದು.(Shutterstock)
ಶುಂಠಿಯಲ್ಲಿರುವ ಕೆಲವು ಪೋಷಕಾಂಶಗಳು ದೇಹದಲ್ಲಿ ರಕ್ತ ಹೆಪ್ಪುಗಟ್ಟುವಿಕೆಯನ್ನು ತಡೆಯುತ್ತದೆ, ಆದರೆ ನೀವು ಈಗಾಗಲೇ ಯಾವುದೇ ರಕ್ತ ತೆಳುಗೊಳಿಸುವ ಔಷಧಿಯನ್ನು ತೆಗೆದುಕೊಳ್ಳುತ್ತಿದ್ದರೆ, ಶುಂಠಿಯನ್ನು ಸೇವಿಸುವ ಮೊದಲು ನಿಮ್ಮ ವೈದ್ಯರನ್ನು ಸಂಪರ್ಕಿಸುವುದು ಸೂಕ್ತ.
(7 / 8)
ಶುಂಠಿಯಲ್ಲಿರುವ ಕೆಲವು ಪೋಷಕಾಂಶಗಳು ದೇಹದಲ್ಲಿ ರಕ್ತ ಹೆಪ್ಪುಗಟ್ಟುವಿಕೆಯನ್ನು ತಡೆಯುತ್ತದೆ, ಆದರೆ ನೀವು ಈಗಾಗಲೇ ಯಾವುದೇ ರಕ್ತ ತೆಳುಗೊಳಿಸುವ ಔಷಧಿಯನ್ನು ತೆಗೆದುಕೊಳ್ಳುತ್ತಿದ್ದರೆ, ಶುಂಠಿಯನ್ನು ಸೇವಿಸುವ ಮೊದಲು ನಿಮ್ಮ ವೈದ್ಯರನ್ನು ಸಂಪರ್ಕಿಸುವುದು ಸೂಕ್ತ.(Shutterstock)
ಆಹಾರ, ಆರೋಗ್ಯ, ಫ್ಯಾಷನ್‌, ರಿಲೇಷನ್‌ಶಿಪ್‌ , ಪೇರೆಂಟಿಂಗ್‌ ಸಂಬಂಧಿಸಿದ ಲೇಖನಗಳಿಗಾಗಿ ಹಿಂದೂಸ್ತಾನ್‌ ಟೈಮ್ಸ್‌ ಕನ್ನಡ ಲೈಫ್‌ಸ್ಟೈಲ್‌ ಪುಟಕ್ಕೆ ಭೇಟಿ ನೀಡಿ 
(8 / 8)
ಆಹಾರ, ಆರೋಗ್ಯ, ಫ್ಯಾಷನ್‌, ರಿಲೇಷನ್‌ಶಿಪ್‌ , ಪೇರೆಂಟಿಂಗ್‌ ಸಂಬಂಧಿಸಿದ ಲೇಖನಗಳಿಗಾಗಿ ಹಿಂದೂಸ್ತಾನ್‌ ಟೈಮ್ಸ್‌ ಕನ್ನಡ ಲೈಫ್‌ಸ್ಟೈಲ್‌ ಪುಟಕ್ಕೆ ಭೇಟಿ ನೀಡಿ 

    ಹಂಚಿಕೊಳ್ಳಲು ಲೇಖನಗಳು