logo
ಕನ್ನಡ ಸುದ್ದಿ  /  ಫೋಟೋ ಗ್ಯಾಲರಿ  /  Holi 2024: ಕರ್ನಾಟಕದಲ್ಲಿ ಹೋಳಿ ಜೋರು, ಹೀಗಿತ್ತು ಬಣ್ಣದ ಸಡಗರ Photos

Holi 2024: ಕರ್ನಾಟಕದಲ್ಲಿ ಹೋಳಿ ಜೋರು, ಹೀಗಿತ್ತು ಬಣ್ಣದ ಸಡಗರ photos

Mar 25, 2024 03:19 PM IST

ಕರ್ನಾಟಕದಲ್ಲಿ ಹೋಳಿ ಸಡಗರ ಜೋರಾಗಿದೆ. ಉತ್ತರ ಕರ್ನಾಟಕದಲ್ಲಂತೂ ಬಣ್ಣದ ಹಬ್ಬವನ್ನು ವಯಸ್ಸಿನ ಬೇಧವಿಲ್ಲವೇ ಆಚರಿಸುತ್ತಿರುವುದು ವಿಶೇಷ. ಇಲ್ಲಿದೇ ಸಂಭ್ರಮದ ಚಿತ್ರನೋಟ.

  • ಕರ್ನಾಟಕದಲ್ಲಿ ಹೋಳಿ ಸಡಗರ ಜೋರಾಗಿದೆ. ಉತ್ತರ ಕರ್ನಾಟಕದಲ್ಲಂತೂ ಬಣ್ಣದ ಹಬ್ಬವನ್ನು ವಯಸ್ಸಿನ ಬೇಧವಿಲ್ಲವೇ ಆಚರಿಸುತ್ತಿರುವುದು ವಿಶೇಷ. ಇಲ್ಲಿದೇ ಸಂಭ್ರಮದ ಚಿತ್ರನೋಟ.
ಮಂತ್ರಾಲಯದಲ್ಲಿ ಬಣ್ಣದ ಹಬ್ಬದ ಸಂತಸ. ಶ್ರೀ ಸುಬುದೇಂದ್ರ ತೀರ್ಥ ಸ್ವಾಮೀಜಿ ಅವರು ಸೋಮವಾರ ಬೆಳಿಗ್ಗೆಯೇ ಭಕ್ತರಿಗೆ ಬಣ್ಣದ ಸಿಂಚನ ಮಾಡಿ ಹಬ್ಬಕ್ಕೆ ಚಾಲನೆ ನೀಡಿದರು.
(1 / 9)

ಬಾಗಲಕೋಟೆಯಲ್ಲಿ ಹೋಳಿ ಎಂದರೆ ಅದೇನೋ ಸಡಗರ, ಖುಷಿ. ಹಳೆ ಊರಿನಲ್ಲಿ ಬಣ್ಣದ ಹೋಳಿಯಲ್ಲಿ ಮಕ್ಕಳು ಮಿಂದೆದ್ದರು.
(2 / 9)

ವಿಜಯಪುರ ಜಿಲ್ಲೆ ತಾಳೀಕೋಟಿ ಪಟ್ಟಣದಲ್ಲಿ ಯುವಕರು ಹಲಗೆ ಬಾರಿಸುವ ಮೂಲಕ ಹೋಳಿ ಹಬ್ಬವನ್ನು ಬರ ಮಾಡಿಕೊಂಡರು.
(3 / 9)

ಹುಬ್ಬಳ್ಳಿ ಮಹಾನಗರದಲ್ಲಿ ಹೋಳಿ ಅಂಗವಾಗಿ ಕೂರಿಸಲಾಗಿದ್ದ ಕಾಮಣ್ಣನ ಮೂರ್ತಿಗೆ ಕೇಂದ್ರ ಸಚಿವ ಪ್ರಹ್ಲಾದ ಜೋಶಿ ನಮಸ್ಕರಿಸಿದರು.
(4 / 9)

ಬೆಳಗಾವಿಯ ಗಲ್ಲಿ ಗಲ್ಲಿಗಳಲ್ಲಿ ವಿಭಿನ್ನ ಬಣ್ಣ ಹಚ್ಚಿದ ಮಕ್ಕಳು ಗಮನ ಸೆಳೆದರು
(5 / 9)
ಬೆಳಗಾವಿಯ ಗಲ್ಲಿ ಗಲ್ಲಿಗಳಲ್ಲಿ ವಿಭಿನ್ನ ಬಣ್ಣ ಹಚ್ಚಿದ ಮಕ್ಕಳು ಗಮನ ಸೆಳೆದರು(ಚಿತ್ರ: ಬಡಿಗೇರ್‌)
ಬೆಳಗಾವಿ ಜಿಲ್ಲೆಯ ಸವದತ್ತಿಯಲ್ಲಿ ಶಾಸಕ ವೈದ್ಯ ಅವರೊಂದಿಗೆ ಗೆಳೆಯರು ಹೋಳಿ ಆಡಿ ಸಂತಸಪಟ್ಟರು,
(6 / 9)

ಬೆಂಗಳೂರು ನಗರದಲ್ಲೂ ಮಕ್ಕಳು ಬಣ್ಣವನ್ನು ಪರಸ್ಪರ ಹಚ್ಚುವ ಮೂಲಕ ಸಂಭ್ರಮದಿಂದ ಹೋಳಿ ಹಬ್ಬ ಸ್ವಾಗತಿಸಿದರು.
(7 / 9)

ದಾವಣಗೆರೆಯಲ್ಲಿ ಕಾಲೇಜು ವಿದ್ಯಾರ್ಥಿಗಳ ಹೋಳಿ ಕಲರವ ಜೋರು. ಅವರ ಉತ್ಸಾಹದೊಂದಿಗೆ ಜತೆಯಾದವರು ಲೋಕಸಭೆ ಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿಯಾಗಿರುವ ಗಾಯತ್ರಿ ಸಿದ್ದೇಶ್ವರ್.‌
(8 / 9)

ಕಲಬುರಗಿ ನಗರದಲ್ಲಿ ಹೋಳಿ ಅಂಗವಾಗಿ ಯುವಕರು ಮೆರವಣಿಗೆ ನಡೆಸಿದರು. ಬಣ್ಣವನ್ನು ಆಡಿ ಹಬ್ಬದ ಖುಷಿಯನ್ನು ಆಚರಿಸಿದರು.
(9 / 9)

    ಹಂಚಿಕೊಳ್ಳಲು ಲೇಖನಗಳು