logo
ಕನ್ನಡ ಸುದ್ದಿ  /  ಫೋಟೋ ಗ್ಯಾಲರಿ  /  ಮನೆ ಮುಂದೆ ಸಿಂಗಾರ ಮಾಡಲು ಲೇಟೆಸ್ಟ್ ರಂಗೋಲಿ ಡಿಸೈನ್‌ಗಳನ್ನು ನೋಡುತ್ತಿದ್ದೀರಾ, ಈ ಆಯ್ಕೆಗಳು ನಿಮಗೆ ಇಷ್ಟವಾಗಬಹುದು ಗಮನಿಸಿ

ಮನೆ ಮುಂದೆ ಸಿಂಗಾರ ಮಾಡಲು ಲೇಟೆಸ್ಟ್ ರಂಗೋಲಿ ಡಿಸೈನ್‌ಗಳನ್ನು ನೋಡುತ್ತಿದ್ದೀರಾ, ಈ ಆಯ್ಕೆಗಳು ನಿಮಗೆ ಇಷ್ಟವಾಗಬಹುದು ಗಮನಿಸಿ

Sep 08, 2024 02:29 PM IST

ಹಿಂದೂಗಳಲ್ಲಿ ರಂಗೋಲಿಗೆ ವಿಶೇಷ ಮಹತ್ವವಿದೆ. ಹಬ್ಬ ಹರಿದಿನಗಳಲ್ಲಿ ಮಾತ್ರವಲ್ಲ, ಪ್ರತಿನಿತ್ಯ ಮನೆ ಮುಂದೆ ರಂಗೋಲಿ ಬಿಡಿಸುವ ಕ್ರಮ ಬಹುತೇಕ ಕಡೆಗಳಲ್ಲಿದೆ. ರಂಗೋಲಿಯನ್ನು ಶುಭ ಸಂಕೇತ ಎಂದು ಪರಿಗಣಿಸಲಾಗುತ್ತದೆ. ನೀವು ಲೇಟೆಸ್ಟ್ ರಂಗೋಲಿ ಡಿಸೈನ್‌ಗಾಗಿ ನೋಡುತ್ತಿದ್ದರೆ, ಇಲ್ಲಿದೆ ನಿಮಗಾಗಿ ಒಂದಿಷ್ಟು ಐಡಿಯಾಗಳು.

  • ಹಿಂದೂಗಳಲ್ಲಿ ರಂಗೋಲಿಗೆ ವಿಶೇಷ ಮಹತ್ವವಿದೆ. ಹಬ್ಬ ಹರಿದಿನಗಳಲ್ಲಿ ಮಾತ್ರವಲ್ಲ, ಪ್ರತಿನಿತ್ಯ ಮನೆ ಮುಂದೆ ರಂಗೋಲಿ ಬಿಡಿಸುವ ಕ್ರಮ ಬಹುತೇಕ ಕಡೆಗಳಲ್ಲಿದೆ. ರಂಗೋಲಿಯನ್ನು ಶುಭ ಸಂಕೇತ ಎಂದು ಪರಿಗಣಿಸಲಾಗುತ್ತದೆ. ನೀವು ಲೇಟೆಸ್ಟ್ ರಂಗೋಲಿ ಡಿಸೈನ್‌ಗಾಗಿ ನೋಡುತ್ತಿದ್ದರೆ, ಇಲ್ಲಿದೆ ನಿಮಗಾಗಿ ಒಂದಿಷ್ಟು ಐಡಿಯಾಗಳು.
ಈಗಷ್ಟೇ ಗಣೇಶನ ಹಬ್ಬ ಮುಗಿದಿದೆ. ಹಾಗಂತ ಸಂಭ್ರಮ ಮುಗಿಯಿತು ಎಂದಲ್ಲ. ಇನ್ನೂ ಹಲವು ಹಬ್ಬಗಳು ಸಾಲು ಸಾಲಾಗಿ ಬರುತ್ತವೆ. ನವರಾತ್ರಿ, ದಸರಾ, ದೀಪಾವಳಿ ಹಬ್ಬದ ಸಮಯದಲ್ಲಿ ನೀವು ಮನೆ ಮುಂದೆ ವಿಶೇಷವಾದ ರಂಗೋಲಿ ಹಾಕುವ ಪ್ಲಾನ್ ಇದ್ದು, ಲೇಟೆಸ್ಟ್ ಡಿಸೈನ್‌ಗಾಗಿ ನೋಡುತ್ತಿದ್ದರೆ ಇಲ್ಲಿದೆ ನಿಮಗಾಗಿ ಒಂದಿಷ್ಟು ಆಯ್ಕೆಗಳು. ಪ್ರತಿದಿನ ರಂಗೋಲಿ ಬಿಡಿಸುವವರು ಈ ಡಿಸೈನ್‌ ಆಯ್ಕೆಗಳನ್ನು ಒಮ್ಮೆ ಗಮನಿಸಬಹುದು. ಇದರಲ್ಲಿರುವ ಡಿಸೈನ್‌ ಆಯ್ಕೆ ಮಾಡಿಕೊಂಡು ಮನೆಯ ಮುಂಬಾಗಿಲನ್ನು ಸಿಂಗರಿಸಿ.  
(1 / 8)

ನಿಮ್ಮ ಮನೆಯ ನೆಲಹಾಸು ಬಿಳಿಯಾಗಿದ್ದರೆ ನೀವು ಗಾಢ ಬಣ್ಣಗಳಿಂದ ರಂಗೋಲಿಯನ್ನು ಬಿಡಿಸಬಹುದು. ಅದರ ಸುತ್ತಲಿನ ಬಿಳಿ ಬಣ್ಣದ ಹುಂಡು ಇರಿಸುವುದರಿಂದ ಸುಂದರವಾಗಿ ಕಾಣುತ್ತದೆ. ಹೂ ಹಾಗೂ ಎಲೆ ಚಿತ್ತಾರವಿರುವ ಈ ರಂಗೋಲಿ ಸರಳವಾಗಿದ್ದರೂ ಸುಂದರವಾಗಿ ಕಾಣುತ್ತದೆ. 
(2 / 8)

ನಿಮ್ಮ ಮನೆಯ ಅಂಗಳದ ಅಂದವನ್ನು ಹೆಚ್ಚಿಸಲು ನೀವು ಈ ವಿನ್ಯಾಸವನ್ನು ಮಾಡಬಹುದು. ನೀವು ಅದರ ಸುತ್ತಲೂ ದೀಪಗಳನ್ನು ಹಚ್ಚಿ ಇಡುವುದರಿಂದ ಅಂದ ಇಮ್ಮಡಿಯಾಗುತ್ತದೆ. 
(3 / 8)

ವಿವಿಧ ಬಣ್ಣಗಳಿಂದ ಹೂವಿನ ಆಕಾರದ ರಂಗೋಲಿ ಬಿಡಿಸಿ, ಇದು ತುಂಬಾ ಚೆನ್ನಾಗಿ ಕಾಣುತ್ತದೆ. ಈ ವಿನ್ಯಾಸದ ಮಧ್ಯದಲ್ಲಿ ದೊಡ್ಡ ದೀಪವನ್ನು ಇರಿಸಿ. ಇದು ಹಬ್ಬದ ದಿನಕ್ಕೆ ಹೇಳಿ ಮಾಡಿಸಿದ ರಂಗೋಲಿ. ಇದರ ಸುತ್ತಲೂ ಕೂಡ ದೀಪವನ್ನು ಇರಿಸಬಹುದು. 
(4 / 8)

ನೀವು ಸರಳ ರಂಗೋಲಿ ಡಿಸೈನ್ ಹುಡುಕುತ್ತಿದ್ದರೆ ಈ ರೀತಿಯ ರಂಗೋಲಿಯನ್ನು ಆಯ್ಕೆ ಮಾಡಬಹುದು. ಇದನ್ನು 4 ರಿಂದ 5 ಬಣ್ಣಗಳಲ್ಲಿ ಪೂರ್ಣಗೊಳಿಸಬಹುದು. ಬಿಡಿಸಲು ಸುಲಭ. ಇದನ್ನು ಪ್ರತಿನಿತ್ಯ ಮನೆಯಲ್ಲಿ ಬಿಡಿಸಲು ಆಯ್ಕೆ ಮಾಡಬಹುದು. 
(5 / 8)

ನೀವು ಈ ಹೂವಿನ ವಿನ್ಯಾಸವನ್ನು ಬಣ್ಣಗಳೊಂದಿಗೆ ಮಾಡಬಹುದು. ಈ ರಂಗೋಲಿ ಬಿಡುಸುವುದು ಕೂಡ ತುಂಬಾ  ಸುಲಭ. ನೀವು ಅದನ್ನು ಬಾಗಿಲಿನ ಬಳಿಯೂ ಮಾಡಬಹುದು. ದೇವರ ಕೋಣೆಯ ಮುಂದೆಯೂ ಈ ಡಿಸೈನ್ ಬಿಡಿಸಬಹುದು.
(6 / 8)

ವಿವಿಧ ಬಣ್ಣಗಳಿಂದ ಈ ಸುಂದರ ರಂಗೋಲಿಯನ್ನು ಮೂಡಿಸಬಹುದು. ಇದು ನೋಡಲು ಬಹಳ ಸುಂದರವಾಗಿದೆ. ಇದನ್ನು ಬಿಡಿಸಲು ಕಷ್ಟ ಏನಲ್ಲಾ. ಇದು ಅಂಗಳಕ್ಕೆ ಸಂಪೂರ್ಣವಾಗಿ ಅದ್ಭುತ ನೋಟವನ್ನು ನೀಡುತ್ತದೆ. ಬಹುವರ್ಣದ ಈ ರಂಗೋಲಿ ವಿನ್ಯಾಸವು ಹಬ್ಬದ ದಿನಕ್ಕೆ ಹೇಳಿ ಮಾಡಿಸಿದ್ದು. 
(7 / 8)
ವಿವಿಧ ಬಣ್ಣಗಳಿಂದ ಈ ಸುಂದರ ರಂಗೋಲಿಯನ್ನು ಮೂಡಿಸಬಹುದು. ಇದು ನೋಡಲು ಬಹಳ ಸುಂದರವಾಗಿದೆ. ಇದನ್ನು ಬಿಡಿಸಲು ಕಷ್ಟ ಏನಲ್ಲಾ. ಇದು ಅಂಗಳಕ್ಕೆ ಸಂಪೂರ್ಣವಾಗಿ ಅದ್ಭುತ ನೋಟವನ್ನು ನೀಡುತ್ತದೆ. ಬಹುವರ್ಣದ ಈ ರಂಗೋಲಿ ವಿನ್ಯಾಸವು ಹಬ್ಬದ ದಿನಕ್ಕೆ ಹೇಳಿ ಮಾಡಿಸಿದ್ದು. (All Photo Credit: Shutterstocks)
ಆಹಾರ, ಆರೋಗ್ಯ, ಫ್ಯಾಷನ್‌, ರಿಲೇಷನ್‌ಶಿಪ್‌ , ಪೇರೆಂಟಿಂಗ್‌ ಸಂಬಂಧಿಸಿದ ಲೇಖನಗಳಿಗಾಗಿ ಹಿಂದೂಸ್ತಾನ್‌ ಟೈಮ್ಸ್‌ ಕನ್ನಡ ಲೈಫ್‌ಸ್ಟೈಲ್‌ ಪುಟಕ್ಕೆ ಭೇಟಿ ನೀಡಿ 
(8 / 8)

    ಹಂಚಿಕೊಳ್ಳಲು ಲೇಖನಗಳು