logo
ಕನ್ನಡ ಸುದ್ದಿ  /  ಫೋಟೋ ಗ್ಯಾಲರಿ  /  Income Tax Benefits On Home Loan: ಗೃಹಸಾಲ ಪಡೆಯುವಾಗ ಹಲವು ಲಕ್ಷ ರೂ. ಆದಾಯ ತೆರಿಗೆ ವಿನಾಯಿತಿ ಪಡೆಯಲು ಬಯಸುವಿರಾ? ಇಲ್ಲಿದೆ ಮಾಹಿತಿ

Income Tax Benefits on Home Loan: ಗೃಹಸಾಲ ಪಡೆಯುವಾಗ ಹಲವು ಲಕ್ಷ ರೂ. ಆದಾಯ ತೆರಿಗೆ ವಿನಾಯಿತಿ ಪಡೆಯಲು ಬಯಸುವಿರಾ? ಇಲ್ಲಿದೆ ಮಾಹಿತಿ

Nov 30, 2022 09:04 PM IST

ಮೊದಲ ಬಾರಿ ಅಫರ್ಡೆಬಲ್‌ ವಸತಿ ಖರೀದಿಸುವವರು ಆದಾಯ ತೆರಿಗೆ ಕಡಿತ ಪ್ರಯೋಜನ ಪಡೆಯಲು 80ಇಇ ಮತ್ತು 80ಇಇಎ ಎಂಬ ಎರಡು ಸೆಕ್ಷನ್‌ಗಳು ನೆರವಾಗುತ್ತವೆ. ಸೆಕ್ಷನ್‌ 80ಇಇಎ ಕುರಿತು ಬಹುತೇಕರಲ್ಲಿ ಇರಬಹುದಾದ ಪ್ರಶ್ನೆಗಳಿಗೆ ಉತ್ತರ ಇಲ್ಲಿದೆ.

  • ಮೊದಲ ಬಾರಿ ಅಫರ್ಡೆಬಲ್‌ ವಸತಿ ಖರೀದಿಸುವವರು ಆದಾಯ ತೆರಿಗೆ ಕಡಿತ ಪ್ರಯೋಜನ ಪಡೆಯಲು 80ಇಇ ಮತ್ತು 80ಇಇಎ ಎಂಬ ಎರಡು ಸೆಕ್ಷನ್‌ಗಳು ನೆರವಾಗುತ್ತವೆ. ಸೆಕ್ಷನ್‌ 80ಇಇಎ ಕುರಿತು ಬಹುತೇಕರಲ್ಲಿ ಇರಬಹುದಾದ ಪ್ರಶ್ನೆಗಳಿಗೆ ಉತ್ತರ ಇಲ್ಲಿದೆ.
80ಇಇಎ  ಸೆಕ್ಷನ್‌ ಜಾರಿಯಾದದ್ದು ಯಾವಾಗ?:  ಮೊದಲ ಬಾರಿ ಮನೆ ಖರೀದಿಸುವವರು ಗೃಹಸಾಲದ ಮೇಲೆ ಪಾವತಿಸುವ ಬಡ್ಡಿದರದ ಮೇಲೆ ಹಣ ಉಳಿತಾಯ ಮಾಡಲು ಅನುವಾಗುವಂತೆ 2019ರ ಬಜೆಟ್‌ನಲ್ಲಿ ಮೊದಲ ಬಾರಿಗೆ ಸೆಕ್ಷನ್‌ 80ಇಇಎ ಪರಿಚಯಿಸಲಾಗಿತ್ತು.
(1 / 11)

ಎಷ್ಟು ತೆರಿಗೆ ಕಡಿತ ದೊರಕಲಿದೆ?: ಸೆಕ್ಷನ್‌ 80ಇಇಎಯಡಿ ಪ್ರತಿವರ್ಷ 1.50 ಲಕ್ಷ ರೂ.ವರೆಗೆ ತೆರಿಗೆ ಕಡಿತ ಪ್ರಯೋಜನ ಪಡೆಯಬಹುದು. ಇದು ಸೆಕ್ಷನ್‌ 24(ಬಿ)ಯಡಿ 2 ಲಕ್ಷ ರೂ. ವಿನಾಯಿತಿ ಪಡೆದ ಬಳಿಕ ಪಡೆಯಬಹುದಾದ ಅವಕಾಶವಾಗಿದೆ.
(2 / 11)

ಯಾರು ಕ್ಲೇಮ್‌ ಮಾಡಬಹುದು?: ಮೊದಲ ಬಾರಿಗೆ 45 ಲಕ್ಷ ರೂ.ಗಿಂತ ಕಡಿಮೆ ದರದ ಅಫರ್ಡೆಬಲ್‌ ಮನೆ ಖರೀದಿಸುವವರು ಈ ಸೆಕ್ಷನ್‌ನಡಿ ತೆರಿಗೆ ಪ್ರಯೋಜನ ಪಡೆಯಬಹುದು. ಈ ರೀತಿ ಕ್ಲೇಮ್‌ ಮಾಡುವವರು ಬೇರೆ ಯಾವುದೇ ರೆಸಿಡೆನ್ಶಿಯಲ್‌ ಪ್ರಾಪರ್ಟಿ ಹೊಂದಿರಬಾರದು.
(3 / 11)
ಯಾರು ಕ್ಲೇಮ್‌ ಮಾಡಬಹುದು?: ಮೊದಲ ಬಾರಿಗೆ 45 ಲಕ್ಷ ರೂ.ಗಿಂತ ಕಡಿಮೆ ದರದ ಅಫರ್ಡೆಬಲ್‌ ಮನೆ ಖರೀದಿಸುವವರು ಈ ಸೆಕ್ಷನ್‌ನಡಿ ತೆರಿಗೆ ಪ್ರಯೋಜನ ಪಡೆಯಬಹುದು. ಈ ರೀತಿ ಕ್ಲೇಮ್‌ ಮಾಡುವವರು ಬೇರೆ ಯಾವುದೇ ರೆಸಿಡೆನ್ಶಿಯಲ್‌ ಪ್ರಾಪರ್ಟಿ ಹೊಂದಿರಬಾರದು.(PTI)
ಅಫರ್ಡೆಬಲ್‌ ಹೌಸಿಂಗ್‌ ಎಂದರೇನು?: ಸೆಕ್ಷನ್‌ 80ಇಇಎ ಬರುವ ಮೊದಲು 50 ಲಕ್ಷ ರೂ.ವರೆಗಿನ ಮನೆಗಳನ್ನು ಅಫರ್ಡೆಬಲ್‌ ಹೋಮ್‌ ಎಂದು ಪರಿಗಣಿಸಲಾಗಿತ್ತು. ಆದಾಯ ತೆರಿಗೆ ಕಾನೂನಿಗೆ 2019ರ ಸೆಪ್ಟೆಂಬರ್‌ 1ರಂದು 80ಇಇಎ ಸೆಕ್ಷನ್‌ ಸೇರಿಸಿದ ಬಳಿಕ 45 ಲಕ್ಷ ರೂ.ಗಿಂತ ಕಡಿಮೆ ದರದ ಮನೆಗಳನ್ನು ಮಾತ್ರ ಅಫರ್ಡೆಬಲ್‌ ಹೌಸ್‌ ಎಂದು ಪರಿಗಣಿಸಲಾಗುತ್ತದೆ.
(4 / 11)

ಯಾರು ಮೊದಲ ಬಾರಿಗೆ ಮನೆ ಖರೀದಿದಾರರು?: ಗೃಹಸಾಲಕ್ಕೆ ಅರ್ಜಿ ಸಲ್ಲಿಸುವಾಗ ತನ್ನ ಹೆಸರಿನಲ್ಲಿ ಬೇರೆ ಯಾವುದೇ ಪ್ರಾಪರ್ಟಿಯನ್ನು ಹೊಂದಿರದೆ ಇರುವವರನ್ನು ಮೊದಲ ಬಾರಿ ಮನೆ ಖರೀದಿದಾರರು ಎಂದು ಪರಿಗಣಿಸಲಾಗುತ್ತದೆ. ತೆರಿಗೆ ಲೆಕ್ಕಾಚಾರದ ಉದ್ದೇಶಕ್ಕಾಗಿ ಸಿಂಗಲ್‌/ಮದುವೆಯಾಗದ ಉದ್ಯೋಗಿಗಳನ್ನೂ ಪ್ರತ್ಯೇಕ ವ್ಯಕ್ತಿ ಎಂದೇ ಪರಿಗಣಿಸಲಾಗುತ್ತದೆ. ಹೀಗಾಗಿ, ಮದುವೆಯಾಗದ ಉದ್ಯೋಗಿಯ  ತಂದೆತಾಯಿ ಸ್ವಂತ ಪ್ರಾಪರ್ಟಿ ಹೊಂದಿದ್ದರೆ ಆ ಪ್ರಾಪರ್ಟಿಯನ್ನು ಆ ವ್ಯಕ್ತಿಯದೆಂದು ಪರಿಗಣಿಸಲಾಗುವುದಿಲ್ಲ. ಆ ವ್ಯಕ್ತಿಯನ್ನು ಫಸ್ಟ್‌ ಟೈಮ್‌ ಮನೆ ಖರೀದಿದಾರ ಎಂದೇ ಪರಿಗಣಿಸಲಾಗುತ್ತದೆ.
(5 / 11)

ತೆರಿಗೆ ಕಡಿತ ಯಾವ ಮೊತ್ತಕ್ಕೆ ಅನ್ವಯವಾಗುತ್ತದೆ?: ಗೃಹಸಾಲದ ಬಡ್ಡಿದರದ ಪಾವತಿಗೆ ಪ್ರತಿಯಾಗಿ ಮಾತ್ರ ಕ್ಲೇಮ್‌ ಮಾಡಲು ಅವಕಾಶವಿದೆ.
(6 / 11)

 ಯಾವ ಕೆಟಗರಿಗೆ ಇದು ಅನ್ವಯವಾಗುತ್ತದೆ?: ವೈಯಕ್ತಿಕವಾಗಿ ಖರೀದಿಸುವವರಿಗೆ ಮಾತ್ರ ಈ ಸೆಕ್ಷನ್‌ನಡಿ ತೆರಿಗೆ ಕಡಿತದ ಪ್ರಯೋಜನ ದೊರಕಲಿದೆ. ಅಂದರೆ, ಕಂಪನಿಗಳು, ಹಿಂದು ಅವಿಭಕ್ತ ಕುಟುಂಬ ಇತ್ಯಾದಿಗಳು ತೆರಿಗೆ ಕಡಿತ ಪ್ರಯೋಜನವನ್ನು ಕ್ಲೇಮ್‌ ಮಾಡುವಂತೆ ಇಲ್ಲ. ಬ್ಯಾಂಕ್‌ನಿಂದ ಪಡೆದ ಸಾಲಕ್ಕೆ ಮಾತ್ರ ಅನ್ವಯವಾಗುತ್ತದೆ. ಸ್ನೇಹಿತರಿಂದ, ಕುಟುಂಬ ಸದಸ್ಯರಿಂದ ಪಡೆದ ಸಾಲ ಲೆಕ್ಕಕ್ಕಿಲ್ಲ.
(7 / 11)

ಯಾವ ಬಗೆಯ ಪ್ರಾಪರ್ಟಿಗಳಿಗೆ ಅನ್ವಯವಾಗುತ್ತದೆ?: ರೆಸಿಡೆನ್ಶಿಯಲ್‌ ಹೌಸ್‌ ಪ್ರಾಪರ್ಟಿ ಖರೀದಿದಾರರು ಮಾತ್ರ ಈ ಪ್ರಯೋಜನ ಪಡೆಯಬಹುದು. ಮರು ನಿರ್ಮಾಣ, ರಿಪೇರಿ, ಮೇಂಟೆನ್ಸ್‌ನಲ್ಲಿರುವ ಪ್ರಾಪರ್ಟಿ ಇತ್ಯಾದಿಗಳಿಗೆ ಇದು ಅನ್ವಯವಾಗದು.
(8 / 11)

80ಇಇ ಸೆಕ್ಷನ್‌ನಡಿ ಕ್ಲೇಮ್‌ ಮಾಡಿದವರು 80ಇಇಎ ಕ್ಲೇಮ್‌ ಮಾಡಬಹುದಾ?: ಸೆಕ್ಷನ್‌ 80ಇಇಯಡಿ ತೆರಿಗೆ ಕಡಿತ ಕ್ಲೇಮ್‌ ಮಾಡಿದವರು ಸೆಕ್ಷನ್‌ 80ಇಇಎಯಡಿ ತೆರಿಗೆ ಕಡಿತ ಕ್ಲೇಮ್‌ ಮಾಡುವಂತೆ ಇಲ್ಲ.
(9 / 11)

ಕಾರ್ಪೆಟ್‌ ಏರಿಯಾ ಲಿಮಿಟ್‌ ಎಷ್ಟಿದೆ?: ಫೈನಾನ್ಸ್‌ ಬಿಲ್‌ ಪ್ರಕಾರ, ಈ ಸೆಕ್ಷನ್‌ನಡಿ ಕ್ಲೇಮ್‌ ಮಾಡಲು ಮನೆಯು ಮೆಟ್ರೊಪಾಲಿಟನ್‌ ನಗರದಲ್ಲಿದ್ದರೆ ಕಾರ್ಪೆಟ್‌ ಪ್ರದೇಶವು 645 ಚದರಡಿ ಅಥವಾ 60 ಚದರ ಮೀಟರ್‌ಗಿಂತ ಹೆಚ್ಚಿರಬಾರದು. ಇತರೆ ನಗರಗಳಲ್ಲಿ ಕಾರ್ಪೆಟ್‌ ಏರಿಯಾ ಮಿತಿ 968 ಚದರಡಿ ಅಥವಾ 90 ಚದರ ಮೀಟರ್‌ ಮಿತಿ ನಿಗದಿಪಡಿಸಲಾಗಿದೆ.
(10 / 11)

ಜಂಟಿ ಮಾಲೀಕರು ಪ್ರತ್ಯೇಕವಾಗಿ  ಕ್ಲೇಮ್‌ ಮಾಡಬಹುದೇ?: ಜಂಟಿ ಮಾಲೀಕರು ಸಹ ಖರೀದಿದಾರರಾಗಿದ್ದರೆ ಈ ಸೆಕ್ಷನ್‌ನಡಿ ಪ್ರತಿಯೊಬ್ಬರೂ 1.50 ಲಕ್ಷ ರೂ.ವರೆಗೆ ತೆರಿಗೆ ಕಡಿತ ಪ್ರಯೋಜನ ಪಡೆಯಬಹುದು
(11 / 11)

    ಹಂಚಿಕೊಳ್ಳಲು ಲೇಖನಗಳು