logo
ಕನ್ನಡ ಸುದ್ದಿ  /  ಫೋಟೋ ಗ್ಯಾಲರಿ  /  ಕತ್ತರಿ ಮೊಂಡಾಗಿದ್ಯಾ, ಪಾತ್ರೆ ತಳ ಸೀದು ಹೋಯ್ತಾ, ಡೈ ಹಚ್ಚುವಾಗ ಕೈಗಳು ಕಪ್ಪಾಗ್ತಿದ್ಯಾ; ಇವೆಲ್ಲದಕ್ಕೂ ಮನೆಯಲ್ಲೇ ಇದೆ ಪರಿಹಾರ

ಕತ್ತರಿ ಮೊಂಡಾಗಿದ್ಯಾ, ಪಾತ್ರೆ ತಳ ಸೀದು ಹೋಯ್ತಾ, ಡೈ ಹಚ್ಚುವಾಗ ಕೈಗಳು ಕಪ್ಪಾಗ್ತಿದ್ಯಾ; ಇವೆಲ್ಲದಕ್ಕೂ ಮನೆಯಲ್ಲೇ ಇದೆ ಪರಿಹಾರ

Sep 07, 2024 02:27 PM IST

ಯಾವುದೇ ಕೆಲಸ ಆದರೂ ಬೇಗ ಮುಗಿಸಿ ರೆಸ್ಟ್‌ ಮಾಡೋಣ ಅನ್ನೋದು ಎಲ್ಲಾ ಮಹಿಳೆಯರ ಆಂಬೋಣ. ಅದು ಗೃಹಿಣಿ ಆಗಿರಲಿ, ಕೆಲಸಕ್ಕೆ ಹೋಗುವವರಾಗಲಿ. ನಿಮ್ಮ ಪ್ರತಿದಿನದ ಕೆಲಸಗಳನ್ನು ಸುಲಭ ಮಾಡಲು ಇಲ್ಲಿ ಕೆಲವೊಂದು ಟಿಪ್ಸ್‌ ಇವೆ. 

ಕತ್ತರಿಸಿದ ನಿಂಬೆ ಹೋಳುಗಳನ್ನು ವೇಸ್ಟ್ ಮಾಡುವ ಬದಲಿಗೆ ಅದಕ್ಕೆ ಲವಂಗಗಳನ್ನು ಚುಚ್ಚಿ ಇಟ್ಟರೆ ಸಣ್ಣ ಸಣ್ಣ ಸೊಳ್ಳೆಗಳು ಬರುವುದಿಲ್ಲ. ಅಥವಾ ನಿಂಬೆ ಹೋಳುಗಳಿಗೆ ಬೇಕಿಂಗ್ ಸೋಡಾ ಹಾಕಿ ರೆಫ್ರಿಜರೆಟರ್‌ನಲ್ಲಿಟ್ಟರೆ ಒಳಗಿನ ದುರ್ವಾಸನೆ ಹೋಗುತ್ತದೆ. 
(1 / 8)

ಹೇರ್‌ ಡೈ ಹಚ್ಚುವಾಗ ಗ್ಲೌಸ್ ಹಾಕಿದರೂ ಒಮ್ಮೊಮ್ಮೆ ಕೈ ಕಪ್ಪಾಗುತ್ತವೆ. ಇದನ್ನು ತಡೆಯಲು ಮೊದಲು ಕೈಗಳಿಗೆ ವ್ಯಾಸಲಿನ್ ಹಚ್ಚಿಕೊಂಡು ನಂತರ ಗ್ಲೌಸ್ ಹಾಕಿದರೆ ಕೈ ಸ್ವಚ್ಛವಾಗಿರುತ್ತವೆ 
(2 / 8)

ಆರೆಂಜ್ ಜ್ಯೂಸ್ ಮಾಡೋಕೆ ಮಿಕ್ಸಿ ಅಥವಾ ಜ್ಯೂಸರ್ ಅವಶ್ಯಕತೆಯಿಲ್ಲ. ಕಿತ್ತಳೆ ಹಣ್ಣನ್ನು ಕತ್ತರಿಸಿ ಈ ವಿಸ್ಕರನ್ನು ಮಧ್ಯದಲ್ಲಿಟ್ಟು ಪ್ರೆಸ್ ಮಾಡುತ್ತಾ ತಿರುವಿದರೆ ಸಾಕು.
(3 / 8)

ಸ್ವಲ್ಪ ಉಳಿಸಿರುವ ಟೂತ್‌ ಪೇಸ್ಟನ್ನು ಟ್ಯೂಬನ್ನು ನೀರಿನಲ್ಲಿ ನೆನೆಹಾಕಿ ನಂತರ ಆ ನೀರನ್ನು ಸಿಂಕ್ ತೊಳೆಯಲು ಬಳಸಬಹುದು, ಟ್ಯೂಬನ್ನು ತುದಿಯಲ್ಲಿ ಕತ್ತರಿಸಿ ಟೇಪ್ ಮೂಲಕ ನಲ್ಲಿಗೆ ಫಿಕ್ಸ್ ಮಾಡಿದರೆ ನೀರಿನ ರಭಸವನ್ನೂ ತಡೆಯಬಹುದು
(4 / 8)

ತಳ ಹಿಡಿದ ಪಾತ್ರೆಯನ್ನು ಸುಲಭವಾಗಿ ಕ್ಲೀನ್  ಮಾಡಲು ಟಿಪ್ಸ್ ಒಂದು ಚಮಚ ಡಿಶ್ ವಾಶ್  ಪುಡಿ, ಸ್ವಲ್ಪ ನೀರು ಹಾಕಿ ಸಣ್ಣ ಉರಿಯಲ್ಲಿ 5 ನಿಮಿಷ ಕುದಿಸಿ. ನಂತರ ನೀರು ತೆಗೆದು ಉಪ್ಪು, ಬೇಕಿಂಗ್_ ಸೋಡಾ ಹರಡಿ ಸ್ವಲ್ಪ ಸಮಯದ ನಂತರ ಸ್ಕ್ರಬ್ಬರ್‌ನಿಂದ ಉಜ್ಜಿ. 
(5 / 8)

ಮೊಂಡಾದ ಕತ್ತರಿಯನ್ನು ಸಾಣೆ ಹಿಡಿಸಲು ಮಾರ್ಕೆಟ್‌ವರೆಗೂ ಹೋಗಬೇಕಿಲ್ಲ. ಖಾಲಿ ಆದ ಮಾತ್ರೆ ಶೀಟ್‌ಗಳನ್ನು ಕತ್ತರಿಯಲ್ಲಿ ಒಂದೆರಡು ನಿಮಿಷ ಕತ್ತರಿಸಿದರೆ ಸಾಕು, ಕತ್ತರಿ ಹರಿತವಾಗುತ್ತದೆ.
(6 / 8)

ಕುಕ್ಕರ್ ಸೀಟಿ ಬಂದ ನಂತರ ಅದನ್ನು ಬೇಗ ತೆಗೆಯುವ ಸಂದರ್ಭವಿದ್ದರೆ ಹೀಗೆ ಮಾಡಿ. ಕುಕ್ಕರ್  ಮೇಲೆ ಒಂದು ಕಿಚನ್ ಟವೆಲ್ ಇಟ್ಟು ಸ್ವಲ್ಪ ನೀರು ಚಿಮುಕಿಸಿ. ಸಿಂಕ್  ಇಲ್ಲದವರು ಹೀಗೆ ಮಾಡಿದರೆ ಬಹಳ ಹೊತ್ತು ಕಾಯುವ ಅವಶ್ಯಕತೆಯಿಲ್ಲ.
(7 / 8)

ಬಳಸದಿರುವ ಪೆನ್‌ಗಳನ್ನು ಎಸೆಯುವ ಬದಲಿಗೆ ಅವುಗಳ ಕ್ಯಾಪ್‌ಗಳನ್ನು ಸಂಗ್ರಹಿಸಿಡಿ. ಬಟ್ಟೆ ಒಣ ಹಾಕಲು ನಿಮಗೆ ಕ್ಲಿಪ್‌ಗಳು ಇಲ್ಲದಿದ್ದರೂ ಪೆನ್ ಕ್ಯಾಪ್‌ಗಳನ್ನೇ ಬಟ್ಟೆ ಕ್ಲಿಪ್‌ಗಳಂತೆ ಬಳಸಬಹುದು.
(8 / 8)

    ಹಂಚಿಕೊಳ್ಳಲು ಲೇಖನಗಳು