logo
ಕನ್ನಡ ಸುದ್ದಿ  /  ಫೋಟೋ ಗ್ಯಾಲರಿ  /  ಬಾರ್ಡರ್ ಗವಾಸ್ಕರ್ ಟ್ರೋಫಿಯಲ್ಲಿ ಅತಿ ಹೆಚ್ಚು ಶತಕ ಸಿಡಿಸಿದ ಟಾಪ್-5 ಆಟಗಾರರು; ಸಚಿನ್ ಹಿಂದಿಕ್ಕಲು ಸ್ಮಿತ್-ಕೊಹ್ಲಿ ನಡುವೆ ಪೈಪೋಟಿ

ಬಾರ್ಡರ್ ಗವಾಸ್ಕರ್ ಟ್ರೋಫಿಯಲ್ಲಿ ಅತಿ ಹೆಚ್ಚು ಶತಕ ಸಿಡಿಸಿದ ಟಾಪ್-5 ಆಟಗಾರರು; ಸಚಿನ್ ಹಿಂದಿಕ್ಕಲು ಸ್ಮಿತ್-ಕೊಹ್ಲಿ ನಡುವೆ ಪೈಪೋಟಿ

Nov 12, 2024 09:45 PM IST

Border Gavaskar Trophy: ಭಾರತ ತಂಡ ಮತ್ತು ಆಸ್ಟ್ರೇಲಿಯಾ ನಡುವಿನ ಬಾರ್ಡರ್-ಗವಾಸ್ಕರ್ ಟ್ರೋಫಿ (BGT) ಟೆಸ್ಟ್ ಸರಣಿ ನವೆಂಬರ್ 22 ರಿಂದ ಪ್ರಾರಂಭವಾಗಲಿದೆ. ಈ ಸರಣಿಯಲ್ಲಿ ಐದು ಪಂದ್ಯಗಳು ನಡೆಯಲಿವೆ. ಈ ಹಿನ್ನೆಲೆಯಲ್ಲಿ ಬಿಜಿಟಿ ಸರಣಿಯಲ್ಲಿ ಅತಿ ಹೆಚ್ಚು ಶತಕ ಸಿಡಿಸಿದ ಟಾಪ್​-5 ಆಟಗಾರರ ಪಟ್ಟಿ ಇಲ್ಲಿದೆ ನೋಡಿ.

  • Border Gavaskar Trophy: ಭಾರತ ತಂಡ ಮತ್ತು ಆಸ್ಟ್ರೇಲಿಯಾ ನಡುವಿನ ಬಾರ್ಡರ್-ಗವಾಸ್ಕರ್ ಟ್ರೋಫಿ (BGT) ಟೆಸ್ಟ್ ಸರಣಿ ನವೆಂಬರ್ 22 ರಿಂದ ಪ್ರಾರಂಭವಾಗಲಿದೆ. ಈ ಸರಣಿಯಲ್ಲಿ ಐದು ಪಂದ್ಯಗಳು ನಡೆಯಲಿವೆ. ಈ ಹಿನ್ನೆಲೆಯಲ್ಲಿ ಬಿಜಿಟಿ ಸರಣಿಯಲ್ಲಿ ಅತಿ ಹೆಚ್ಚು ಶತಕ ಸಿಡಿಸಿದ ಟಾಪ್​-5 ಆಟಗಾರರ ಪಟ್ಟಿ ಇಲ್ಲಿದೆ ನೋಡಿ.
ಬಾರ್ಡರ್-ಗವಾಸ್ಕರ್ ಟ್ರೋಫಿಯಲ್ಲಿ ಅತಿ ಹೆಚ್ಚು ಶತಕ ಸಿಡಿಸಿದ ಆಟಗಾರ ಸಚಿನ್ ತೆಂಡೂಲ್ಕರ್​. ದಿಗ್ಗಜ ಬ್ಯಾಟರ್​ 34 ಟೆಸ್ಟ್​​ಗಳಲ್ಲಿ 9 ಶತಕ ಗಳಿಸಿದ್ದಾರೆ. ಇದೀಗ ಈ ದಾಖಲೆ ಮುರಿಯಲು ವಿರಾಟ್ ಕೊಹ್ಲಿ ಮತ್ತು ಸ್ಟೀವ್ ಸ್ಮಿತ್ ಸಜ್ಜಾಗಿದ್ದಾರೆ.
(1 / 5)
ಬಾರ್ಡರ್-ಗವಾಸ್ಕರ್ ಟ್ರೋಫಿಯಲ್ಲಿ ಅತಿ ಹೆಚ್ಚು ಶತಕ ಸಿಡಿಸಿದ ಆಟಗಾರ ಸಚಿನ್ ತೆಂಡೂಲ್ಕರ್​. ದಿಗ್ಗಜ ಬ್ಯಾಟರ್​ 34 ಟೆಸ್ಟ್​​ಗಳಲ್ಲಿ 9 ಶತಕ ಗಳಿಸಿದ್ದಾರೆ. ಇದೀಗ ಈ ದಾಖಲೆ ಮುರಿಯಲು ವಿರಾಟ್ ಕೊಹ್ಲಿ ಮತ್ತು ಸ್ಟೀವ್ ಸ್ಮಿತ್ ಸಜ್ಜಾಗಿದ್ದಾರೆ.(ICC)
ಭಾರತದ ಸ್ಟಾರ್ ಬ್ಯಾಟ್ಸ್‌ಮನ್ ವಿರಾಟ್ ಕೊಹ್ಲಿ ಅವರು ಆಸ್ಟ್ರೇಲಿಯಾ ವಿರುದ್ಧ 24 ಟೆಸ್ಟ್‌ಗಳಲ್ಲಿ 8 ಶತಕ ಗಳಿಸಿ ಎರಡನೇ ಸ್ಥಾನದಲ್ಲಿದ್ದಾರೆ. ಈಗ ಮುಂಬರುವ ಸರಣಿಯಲ್ಲಿ ಇನ್ನೆರಡು ಶತಕ ಸಿಡಿಸಿ ಅಗ್ರಸ್ಥಾನಕ್ಕೆ ಪ್ರವೇಶಿಸಲು ಕಾತರರಾಗಿದ್ದಾರೆ.
(2 / 5)
ಭಾರತದ ಸ್ಟಾರ್ ಬ್ಯಾಟ್ಸ್‌ಮನ್ ವಿರಾಟ್ ಕೊಹ್ಲಿ ಅವರು ಆಸ್ಟ್ರೇಲಿಯಾ ವಿರುದ್ಧ 24 ಟೆಸ್ಟ್‌ಗಳಲ್ಲಿ 8 ಶತಕ ಗಳಿಸಿ ಎರಡನೇ ಸ್ಥಾನದಲ್ಲಿದ್ದಾರೆ. ಈಗ ಮುಂಬರುವ ಸರಣಿಯಲ್ಲಿ ಇನ್ನೆರಡು ಶತಕ ಸಿಡಿಸಿ ಅಗ್ರಸ್ಥಾನಕ್ಕೆ ಪ್ರವೇಶಿಸಲು ಕಾತರರಾಗಿದ್ದಾರೆ.(ANI)
ಅತಿ ಹೆಚ್ಚು ಹಿಟ್ ಗಳಿಸಿದ ಆಟಗಾರರ ಪಟ್ಟಿಯಲ್ಲಿ ನಂಬರ್ 1 ಸ್ಥಾನಕ್ಕೇರಲು ಆಸ್ಟ್ರೇಲಿಯಾದ ಏಸ್ ಬ್ಯಾಟ್ಸ್‌ಮನ್ ಸ್ಟೀವ್ ಸ್ಮಿತ್ ಮತ್ತು ಕೊಹ್ಲಿ ನಡುವೆ ಹೋರಾಟ ನಡೆಯಲಿದೆ. ಸ್ಮಿತ್ 18 ಟೆಸ್ಟ್​​ಗಳಲ್ಲಿ 8 ಶತಕ ಸಿಡಿಸಿದ್ದು, ಜಂಟಿ 2ನೇ ಸ್ಥಾನ ಪಡೆದಿದ್ದಾರೆ.
(3 / 5)
ಅತಿ ಹೆಚ್ಚು ಹಿಟ್ ಗಳಿಸಿದ ಆಟಗಾರರ ಪಟ್ಟಿಯಲ್ಲಿ ನಂಬರ್ 1 ಸ್ಥಾನಕ್ಕೇರಲು ಆಸ್ಟ್ರೇಲಿಯಾದ ಏಸ್ ಬ್ಯಾಟ್ಸ್‌ಮನ್ ಸ್ಟೀವ್ ಸ್ಮಿತ್ ಮತ್ತು ಕೊಹ್ಲಿ ನಡುವೆ ಹೋರಾಟ ನಡೆಯಲಿದೆ. ಸ್ಮಿತ್ 18 ಟೆಸ್ಟ್​​ಗಳಲ್ಲಿ 8 ಶತಕ ಸಿಡಿಸಿದ್ದು, ಜಂಟಿ 2ನೇ ಸ್ಥಾನ ಪಡೆದಿದ್ದಾರೆ.(X)
ಆಸ್ಟ್ರೇಲಿಯಾದ ಮಾಜಿ ನಾಯಕ ರಿಕಿ ಪಾಂಟಿಂಗ್ ಅವರು 29 ಟೆಸ್ಟ್ ಪಂದ್ಯಗಳಲ್ಲಿ 8 ಶತಕಗಳನ್ನು ಗಳಿಸಿದ್ದು, 4ನೇ ಸ್ಥಾನದಲ್ಲಿದ್ದಾರೆ. ಅವರು ತಮ್ಮ ಕೊನೆಯ ಅಂತಾರಾಷ್ಟ್ರೀಯ ಪಂದ್ಯವನ್ನು 2012 ರಲ್ಲಿ ಆಡಿದ್ದರು.
(4 / 5)
ಆಸ್ಟ್ರೇಲಿಯಾದ ಮಾಜಿ ನಾಯಕ ರಿಕಿ ಪಾಂಟಿಂಗ್ ಅವರು 29 ಟೆಸ್ಟ್ ಪಂದ್ಯಗಳಲ್ಲಿ 8 ಶತಕಗಳನ್ನು ಗಳಿಸಿದ್ದು, 4ನೇ ಸ್ಥಾನದಲ್ಲಿದ್ದಾರೆ. ಅವರು ತಮ್ಮ ಕೊನೆಯ ಅಂತಾರಾಷ್ಟ್ರೀಯ ಪಂದ್ಯವನ್ನು 2012 ರಲ್ಲಿ ಆಡಿದ್ದರು.(X)
ಆಸ್ಟ್ರೇಲಿಯಾದ ಮಾಜಿ ಬ್ಯಾಟ್ಸ್‌ಮನ್ ಮೈಕಲ್ ಕ್ಲಾರ್ಕ್ ಈ ಪಟ್ಟಿಯಲ್ಲಿ 5ನೇ ಸ್ಥಾನದಲ್ಲಿದ್ದಾರೆ. ಅವರು ಭಾರತದ ವಿರುದ್ಧ 22 ಟೆಸ್ಟ್‌ಗಳಲ್ಲಿ 7 ಶತಕ ಗಳಿಸಿದ್ದಾರೆ.
(5 / 5)
ಆಸ್ಟ್ರೇಲಿಯಾದ ಮಾಜಿ ಬ್ಯಾಟ್ಸ್‌ಮನ್ ಮೈಕಲ್ ಕ್ಲಾರ್ಕ್ ಈ ಪಟ್ಟಿಯಲ್ಲಿ 5ನೇ ಸ್ಥಾನದಲ್ಲಿದ್ದಾರೆ. ಅವರು ಭಾರತದ ವಿರುದ್ಧ 22 ಟೆಸ್ಟ್‌ಗಳಲ್ಲಿ 7 ಶತಕ ಗಳಿಸಿದ್ದಾರೆ.(ICC)

    ಹಂಚಿಕೊಳ್ಳಲು ಲೇಖನಗಳು