logo
ಕನ್ನಡ ಸುದ್ದಿ  /  ಫೋಟೋ ಗ್ಯಾಲರಿ  /  ಟಿ20 ವಿಶ್ವಕಪ್​ ಆವೃತ್ತಿಯೊಂದರಲ್ಲಿ ಅತ್ಯಧಿಕ ವಿಕೆಟ್; ವಿಶ್ವದಾಖಲೆ ನಿರ್ಮಿಸಿದ ಅರ್ಷದೀಪ್ ಸಿಂಗ್

ಟಿ20 ವಿಶ್ವಕಪ್​ ಆವೃತ್ತಿಯೊಂದರಲ್ಲಿ ಅತ್ಯಧಿಕ ವಿಕೆಟ್; ವಿಶ್ವದಾಖಲೆ ನಿರ್ಮಿಸಿದ ಅರ್ಷದೀಪ್ ಸಿಂಗ್

Jun 30, 2024 08:30 AM IST

Arshdeep Singh: ಟಿ20 ವಿಶ್ವಕಪ್ 2024 ಟೂರ್ನಿಯ ಫೈನಲ್ ಪಂದ್ಯದಲ್ಲಿ ಸೌತ್ ಆಫ್ರಿಕಾ ವಿರುದ್ಧ ಪ್ರಮುಖ 2 ವಿಕೆಟ್ ಪಡೆದ ಭಾರತದ ವೇಗಿ ಅರ್ಷದೀಪ್ ಸಿಂಗ್ ವಿಶ್ವದಾಖಲೆ ನಿರ್ಮಿಸಿದ್ದಾರೆ.

  • Arshdeep Singh: ಟಿ20 ವಿಶ್ವಕಪ್ 2024 ಟೂರ್ನಿಯ ಫೈನಲ್ ಪಂದ್ಯದಲ್ಲಿ ಸೌತ್ ಆಫ್ರಿಕಾ ವಿರುದ್ಧ ಪ್ರಮುಖ 2 ವಿಕೆಟ್ ಪಡೆದ ಭಾರತದ ವೇಗಿ ಅರ್ಷದೀಪ್ ಸಿಂಗ್ ವಿಶ್ವದಾಖಲೆ ನಿರ್ಮಿಸಿದ್ದಾರೆ.
ಬಾರ್ಬಡೋಸ್​​ನ ಕೆನ್ಸಿಂಗ್ಟನ್​ ಓವಲ್​​ನಲ್ಲಿ ನಡೆದ ಟಿ20 ವಿಶ್ವಕಪ್ 2024ರ ಫೈನಲ್​​ನಲ್ಲಿ ಸೌತ್ ಆಫ್ರಿಕಾ ವಿರುದ್ಧ ಎರಡು ವಿಕೆಟ್ ಪಡೆದ ವೇಗಿ ಅರ್ಷದೀಪ್ ಸಿಂಗ್ ವಿಶ್ವದಾಖಲೆ ನಿರ್ಮಿಸಿದ್ದಾರೆ.
(1 / 7)
ಬಾರ್ಬಡೋಸ್​​ನ ಕೆನ್ಸಿಂಗ್ಟನ್​ ಓವಲ್​​ನಲ್ಲಿ ನಡೆದ ಟಿ20 ವಿಶ್ವಕಪ್ 2024ರ ಫೈನಲ್​​ನಲ್ಲಿ ಸೌತ್ ಆಫ್ರಿಕಾ ವಿರುದ್ಧ ಎರಡು ವಿಕೆಟ್ ಪಡೆದ ವೇಗಿ ಅರ್ಷದೀಪ್ ಸಿಂಗ್ ವಿಶ್ವದಾಖಲೆ ನಿರ್ಮಿಸಿದ್ದಾರೆ.(AFP)
ಸೌತ್ ಆಫ್ರಿಕಾ ವಿರುದ್ಧ ಭಾರತ 7 ರನ್​ಗಳ ರೋಚಕ ಗೆಲುವು ಸಾಧಿಸಿ 2ನೇ ಬಾರಿಗೆ ಟಿ20 ವಿಶ್ವಕಪ್ ಗೆದ್ದ ಸಾಧನೆ ಮಾಡಿದೆ. 2013ರ ನಂತರ ಐಸಿಸಿ ಟ್ರೋಫಿ ಜಯಿಸಿದೆ. 2011ರ ನಂತರ ವಿಶ್ವಕಪ್ ಗೆಲುವು ಕಂಡಿದೆ.
(2 / 7)
ಸೌತ್ ಆಫ್ರಿಕಾ ವಿರುದ್ಧ ಭಾರತ 7 ರನ್​ಗಳ ರೋಚಕ ಗೆಲುವು ಸಾಧಿಸಿ 2ನೇ ಬಾರಿಗೆ ಟಿ20 ವಿಶ್ವಕಪ್ ಗೆದ್ದ ಸಾಧನೆ ಮಾಡಿದೆ. 2013ರ ನಂತರ ಐಸಿಸಿ ಟ್ರೋಫಿ ಜಯಿಸಿದೆ. 2011ರ ನಂತರ ವಿಶ್ವಕಪ್ ಗೆಲುವು ಕಂಡಿದೆ.(AFP)
ಅರ್ಷದೀಪ್​ ಸಿಂಗ್ ಅವರು ಫೈನಲ್​​ನಲ್ಲಿ 4 ಓವರ್​​​ಗಳಲ್ಲಿ 20 ರನ್ ಬಿಟ್ಟುಕೊಟ್ಟು 2 ವಿಕೆಟ್ ಪಡೆದಿದ್ದಾರೆ. ಇದರೊಂದಿಗೆ ಟಿ20 ವಿಶ್ವಕಪ್ ಆವೃತ್ತಿಯೊಂದರಲ್ಲಿ ಹೆಚ್ಚು ವಿಕೆಟ್ ಪಡೆದಿದ್ದಾರೆ.
(3 / 7)
ಅರ್ಷದೀಪ್​ ಸಿಂಗ್ ಅವರು ಫೈನಲ್​​ನಲ್ಲಿ 4 ಓವರ್​​​ಗಳಲ್ಲಿ 20 ರನ್ ಬಿಟ್ಟುಕೊಟ್ಟು 2 ವಿಕೆಟ್ ಪಡೆದಿದ್ದಾರೆ. ಇದರೊಂದಿಗೆ ಟಿ20 ವಿಶ್ವಕಪ್ ಆವೃತ್ತಿಯೊಂದರಲ್ಲಿ ಹೆಚ್ಚು ವಿಕೆಟ್ ಪಡೆದಿದ್ದಾರೆ.(PTI)
ಟಿ20 ವಿಶ್ವಕಪ್ ಆವೃತ್ತಿಯೊಂದರಲ್ಲಿ ಅತಿ ಹೆಚ್ಚು ವಿಕೆಟ್ ಪಡೆದ ಬೌಲರ್​​ಗಳಲ್ಲಿ ಅಫ್ಘಾನಿಸ್ತಾನದ ಫಜಲ್ಹಕ್ ಫಾರೂಕಿ, ಅರ್ಷದೀಪ್ ತಲಾ 17 ವಿಕೆಟ್ ಪಡೆದು ಜಂಟಿ ವಿಶ್ವದಾಖಲೆ ಬರೆದಿದ್ದಾರೆ.
(4 / 7)
ಟಿ20 ವಿಶ್ವಕಪ್ ಆವೃತ್ತಿಯೊಂದರಲ್ಲಿ ಅತಿ ಹೆಚ್ಚು ವಿಕೆಟ್ ಪಡೆದ ಬೌಲರ್​​ಗಳಲ್ಲಿ ಅಫ್ಘಾನಿಸ್ತಾನದ ಫಜಲ್ಹಕ್ ಫಾರೂಕಿ, ಅರ್ಷದೀಪ್ ತಲಾ 17 ವಿಕೆಟ್ ಪಡೆದು ಜಂಟಿ ವಿಶ್ವದಾಖಲೆ ಬರೆದಿದ್ದಾರೆ.(PTI)
ಫಾರೂಕಿ ಟಿ20 ವಿಶ್ವಕಪ್​​ ಸೆಮಿಫೈನಲ್​​ನಲ್ಲಿ ದಕ್ಷಿಣ ಆಫ್ರಿಕಾ ವಿರುದ್ಧ 1 ವಿಕೆಟ್ ಪಡೆದರು. ಇದರೊಂದಿಗೆ ಅವರು ಶ್ರೀಲಂಕಾದ ವನಿಂದು ಹಸರಂಗ ಅವರನ್ನು ಹಿಂದಿಕ್ಕಿ ಟಿ20 ವಿಶ್ವಕಪ್​​ನ ಒಂದೇ ಆವೃತ್ತಿಯಲ್ಲಿ ಅತಿ ಹೆಚ್ಚು ವಿಕೆಟ್ ಪಡೆದ ಬೌಲರ್ ಎಂಬ ಹೆಗ್ಗಳಿಕೆಗೆ ಪಾತ್ರರಾದರು.
(5 / 7)
ಫಾರೂಕಿ ಟಿ20 ವಿಶ್ವಕಪ್​​ ಸೆಮಿಫೈನಲ್​​ನಲ್ಲಿ ದಕ್ಷಿಣ ಆಫ್ರಿಕಾ ವಿರುದ್ಧ 1 ವಿಕೆಟ್ ಪಡೆದರು. ಇದರೊಂದಿಗೆ ಅವರು ಶ್ರೀಲಂಕಾದ ವನಿಂದು ಹಸರಂಗ ಅವರನ್ನು ಹಿಂದಿಕ್ಕಿ ಟಿ20 ವಿಶ್ವಕಪ್​​ನ ಒಂದೇ ಆವೃತ್ತಿಯಲ್ಲಿ ಅತಿ ಹೆಚ್ಚು ವಿಕೆಟ್ ಪಡೆದ ಬೌಲರ್ ಎಂಬ ಹೆಗ್ಗಳಿಕೆಗೆ ಪಾತ್ರರಾದರು.(ICC - X )
2021ರ ಟಿ20 ವಿಶ್ವಕಪ್​​ನಲ್ಲಿ ಹಸರಂಗ 8 ಪಂದ್ಯಗಳಲ್ಲಿ 16 ವಿಕೆಟ್​ಗಳನ್ನು ಪಡೆದರು. 2024ರ ಟಿ20 ವಿಶ್ವಕಪ್​ನಲ್ಲಿ ಫಾರೂಕಿ 8 ಪಂದ್ಯಗಳಲ್ಲಿ 17 ವಿಕೆಟ್​​ಗಳನ್ನು ಪಡೆದರು. ಇದೀಗ ಅರ್ಷದೀಪ್ ಸಹ 8 ಪಂದ್ಯಗಳಲ್ಲಿ 17 ವಿಕೆಟ್ ಪಡೆದು ಜಂಟಿ ವಿಶ್ವದಾಖಲೆ ಬರೆದರು.
(6 / 7)
2021ರ ಟಿ20 ವಿಶ್ವಕಪ್​​ನಲ್ಲಿ ಹಸರಂಗ 8 ಪಂದ್ಯಗಳಲ್ಲಿ 16 ವಿಕೆಟ್​ಗಳನ್ನು ಪಡೆದರು. 2024ರ ಟಿ20 ವಿಶ್ವಕಪ್​ನಲ್ಲಿ ಫಾರೂಕಿ 8 ಪಂದ್ಯಗಳಲ್ಲಿ 17 ವಿಕೆಟ್​​ಗಳನ್ನು ಪಡೆದರು. ಇದೀಗ ಅರ್ಷದೀಪ್ ಸಹ 8 ಪಂದ್ಯಗಳಲ್ಲಿ 17 ವಿಕೆಟ್ ಪಡೆದು ಜಂಟಿ ವಿಶ್ವದಾಖಲೆ ಬರೆದರು.(BCCI-X)
ಫಾರೂಕಿ ಮತ್ತು ಅರ್ಷದೀಪ್ ಟಿ20 ವಿಶ್ವಕಪ್​ ಆವೃತ್ತಿಯೊಂದರಲ್ಲಿ ಹೆಚ್ಚು ವಿಕೆಟ್ ಪಡೆದ ವಿಶ್ವದಾಖಲೆಯನ್ನು ಹಂಚಿಕೊಂಡಿದ್ದಾರೆ. ಭಾರತದ ಜಸ್ಪ್ರೀತ್ ಬುಮ್ರಾ (8 ಪಂದ್ಯಗಳಲ್ಲಿ 15 ವಿಕೆಟ್) ಮತ್ತು ದಕ್ಷಿಣ ಆಫ್ರಿಕಾದ ಅನ್ರಿಚ್ ನೋಕಿಯಾ (9 ಪಂದ್ಯಗಳಲ್ಲಿ 15 ವಿಕೆಟ್) ನಂತರದ ಸ್ಥಾನಗಳಲ್ಲಿದ್ದಾರೆ.
(7 / 7)
ಫಾರೂಕಿ ಮತ್ತು ಅರ್ಷದೀಪ್ ಟಿ20 ವಿಶ್ವಕಪ್​ ಆವೃತ್ತಿಯೊಂದರಲ್ಲಿ ಹೆಚ್ಚು ವಿಕೆಟ್ ಪಡೆದ ವಿಶ್ವದಾಖಲೆಯನ್ನು ಹಂಚಿಕೊಂಡಿದ್ದಾರೆ. ಭಾರತದ ಜಸ್ಪ್ರೀತ್ ಬುಮ್ರಾ (8 ಪಂದ್ಯಗಳಲ್ಲಿ 15 ವಿಕೆಟ್) ಮತ್ತು ದಕ್ಷಿಣ ಆಫ್ರಿಕಾದ ಅನ್ರಿಚ್ ನೋಕಿಯಾ (9 ಪಂದ್ಯಗಳಲ್ಲಿ 15 ವಿಕೆಟ್) ನಂತರದ ಸ್ಥಾನಗಳಲ್ಲಿದ್ದಾರೆ.(AP)

    ಹಂಚಿಕೊಳ್ಳಲು ಲೇಖನಗಳು