logo
ಕನ್ನಡ ಸುದ್ದಿ  /  ಫೋಟೋ ಗ್ಯಾಲರಿ  /  G20 Leaders: ರಾಜ್‌ಘಾಟ್‌ನಲ್ಲಿ ಮಹಾತ್ಮ ಗಾಂಧಿ ಸಮಾಧಿಗೆ ಗೌರವ ಸಲ್ಲಿಸಿದ ಜಿ20 ನಾಯಕರು, ಇಲ್ಲಿವೆ ಅಪರೂಪದ ಕ್ಷಣಗಳ ಫೋಟೋಸ್

G20 leaders: ರಾಜ್‌ಘಾಟ್‌ನಲ್ಲಿ ಮಹಾತ್ಮ ಗಾಂಧಿ ಸಮಾಧಿಗೆ ಗೌರವ ಸಲ್ಲಿಸಿದ ಜಿ20 ನಾಯಕರು, ಇಲ್ಲಿವೆ ಅಪರೂಪದ ಕ್ಷಣಗಳ ಫೋಟೋಸ್

Sep 10, 2023 02:36 PM IST

ಭಾರತದ ರಾಜಧಾನಿ ನವದೆಹಲಿಯಲ್ಲಿ ನಡೆಯುತ್ತಿರುವ ಜಿ20 ಶೃಂಗ ಸಭೆಯಲ್ಲಿ ಭಾಗವಹಿಸಲು ಬಂದ ಜಿ20 ನಾಯಕರು ನಿಗದಿತ ವೇಳಾಪಟ್ಟಿಯಂತೆ ಇಂದು ಬೆಳಗ್ಗೆ ರಾಜ್‌ಘಾಟ್‌ಗೆ ತೆರಳಿ ಮಹಾತ್ಮ ಗಾಂಧಿ ಸಮಾಧಿಗೆ ಗೌರವ ನಮನ ಸಲ್ಲಿಸಿದರು. ಬಾಂಗ್ಲಾದೇಶದ ಪ್ರಧಾನಿ ಶೇರ್ಖ ಹಸೀನಾ, ಯುಎನ್‌ ಸೆಕ್ರೆಟರಿ ಜನರಲ್ ಗುಟೆರಸ್‌ ಮತ್ತು ಇತರರು ಬೇಗನೆ ರಾಜ್‌ಘಾಟ್‌ಗೆ ಆಗಮಿಸಿದ್ದರು.

ಭಾರತದ ರಾಜಧಾನಿ ನವದೆಹಲಿಯಲ್ಲಿ ನಡೆಯುತ್ತಿರುವ ಜಿ20 ಶೃಂಗ ಸಭೆಯಲ್ಲಿ ಭಾಗವಹಿಸಲು ಬಂದ ಜಿ20 ನಾಯಕರು ನಿಗದಿತ ವೇಳಾಪಟ್ಟಿಯಂತೆ ಇಂದು ಬೆಳಗ್ಗೆ ರಾಜ್‌ಘಾಟ್‌ಗೆ ತೆರಳಿ ಮಹಾತ್ಮ ಗಾಂಧಿ ಸಮಾಧಿಗೆ ಗೌರವ ನಮನ ಸಲ್ಲಿಸಿದರು. ಬಾಂಗ್ಲಾದೇಶದ ಪ್ರಧಾನಿ ಶೇರ್ಖ ಹಸೀನಾ, ಯುಎನ್‌ ಸೆಕ್ರೆಟರಿ ಜನರಲ್ ಗುಟೆರಸ್‌ ಮತ್ತು ಇತರರು ಬೇಗನೆ ರಾಜ್‌ಘಾಟ್‌ಗೆ ಆಗಮಿಸಿದ್ದರು.
ರಾಜ್‌ಘಾಟ್ ತಲುಪಿದ ಜಿ20 ನಾಯಕರನ್ನು ಸ್ವಾಗತಿಸಿದ್ದು, ಮಹಾತ್ಮ ಗಾಂಧಿ ಅವರ ನನ್ನ ಬದುಕು ನನ್ನ ಸಂದೇಶ ಎಂಬ ನುಡಿಮುತ್ತು. ಬಾಂಗ್ಲಾ ದೇಶದ ಪ್ರಧಾನಿ ಶೇಖ್ ಹಸೀನಾ, ವಿಶ್ವಸಂಸ್ಥೆಯ ಸೆಕ್ರೆಟರಿ ಜನರಲ್‌ ಆಂಟೊನಿಯೋ ಗುಟೆರ್ರೆಸ್, ವಿಶ್ವ ಬ್ಯಾಂಕ್‌ನ ಅಜಯ್‌ ಬಂಗಾ ಮತ್ತು ಇತರೆ ನಾಯಕರು ಬೆಳಗ್ಗೆ ಬೇಗನೆ ರಾಜ್‌ಘಾಟ್ ತಲುಪಿದ್ದರು.
(1 / 8)
ರಾಜ್‌ಘಾಟ್ ತಲುಪಿದ ಜಿ20 ನಾಯಕರನ್ನು ಸ್ವಾಗತಿಸಿದ್ದು, ಮಹಾತ್ಮ ಗಾಂಧಿ ಅವರ ನನ್ನ ಬದುಕು ನನ್ನ ಸಂದೇಶ ಎಂಬ ನುಡಿಮುತ್ತು. ಬಾಂಗ್ಲಾ ದೇಶದ ಪ್ರಧಾನಿ ಶೇಖ್ ಹಸೀನಾ, ವಿಶ್ವಸಂಸ್ಥೆಯ ಸೆಕ್ರೆಟರಿ ಜನರಲ್‌ ಆಂಟೊನಿಯೋ ಗುಟೆರ್ರೆಸ್, ವಿಶ್ವ ಬ್ಯಾಂಕ್‌ನ ಅಜಯ್‌ ಬಂಗಾ ಮತ್ತು ಇತರೆ ನಾಯಕರು ಬೆಳಗ್ಗೆ ಬೇಗನೆ ರಾಜ್‌ಘಾಟ್ ತಲುಪಿದ್ದರು.(PTI)
ಭಾರತದ ಪ್ರಧಾನಿ ನರೇಂದ್ರ ಮೋದಿ ಮತ್ತು ಇತರೆ ವಿಶ್ವ ನಾಯಕರು ರಾಜ್‌ಘಾಟ್‌ನಲ್ಲಿ ಜೊತೆ ಜೊತೆಯಾಗಿ ಮಹತ್ಮಾ ಗಾಂಧಿ ಸಮಾಧಿ ಕಡೆಗೆ ತೆರೆಳಿದ್ದು ಗಮನಸೆಳೆಯಿತು.
(2 / 8)
ಭಾರತದ ಪ್ರಧಾನಿ ನರೇಂದ್ರ ಮೋದಿ ಮತ್ತು ಇತರೆ ವಿಶ್ವ ನಾಯಕರು ರಾಜ್‌ಘಾಟ್‌ನಲ್ಲಿ ಜೊತೆ ಜೊತೆಯಾಗಿ ಮಹತ್ಮಾ ಗಾಂಧಿ ಸಮಾಧಿ ಕಡೆಗೆ ತೆರೆಳಿದ್ದು ಗಮನಸೆಳೆಯಿತು.(PTI)
ಜಿ20 ಶೃಂಗದ ಕೊನೆಯ ದಿನವಾದ ಇಂದು ಭಾರತದ ಪ್ರಧಾನಿ ನರೇಂದ್ರ ಮೋದಿ ಮತ್ತು ಜಿ20 ನಾಯಕರು ರಾಜ್‌ಘಾಟ್‌ನಲ್ಲಿ ಮಹಾತ್ಮ ಗಾಂಧಿ ಸಮಾಧಿಯ ಮೂರು ಬದಿಗೆ ನಿಂತು ಪುಷ್ಪ ಗೌರವ ನಮನ ಸಲ್ಲಿಸಿದರು. ರಾಜ್‌ಘಾಟ್‌ನಲ್ಲಿ ನಡೆದ ಭಜನೆಯನ್ನೂ ಕೆಲಹೊತ್ತು ಆಲಿಸಿದರು. ಬಳಿಕ ಭಾರತ್ ಮಂಟಪದ ಕಡೆಗೆ ಹೆಜ್ಜೆಹಾಕಿದರು.
(3 / 8)
ಜಿ20 ಶೃಂಗದ ಕೊನೆಯ ದಿನವಾದ ಇಂದು ಭಾರತದ ಪ್ರಧಾನಿ ನರೇಂದ್ರ ಮೋದಿ ಮತ್ತು ಜಿ20 ನಾಯಕರು ರಾಜ್‌ಘಾಟ್‌ನಲ್ಲಿ ಮಹಾತ್ಮ ಗಾಂಧಿ ಸಮಾಧಿಯ ಮೂರು ಬದಿಗೆ ನಿಂತು ಪುಷ್ಪ ಗೌರವ ನಮನ ಸಲ್ಲಿಸಿದರು. ರಾಜ್‌ಘಾಟ್‌ನಲ್ಲಿ ನಡೆದ ಭಜನೆಯನ್ನೂ ಕೆಲಹೊತ್ತು ಆಲಿಸಿದರು. ಬಳಿಕ ಭಾರತ್ ಮಂಟಪದ ಕಡೆಗೆ ಹೆಜ್ಜೆಹಾಕಿದರು.(PTI)
ಭಾರತದ ಪ್ರಧಾನಮಂತ್ರಿ ನರೇಂದ್ರ ಮೋದಿ, ಅಮೆರಿಕ ಅಧ್ಯಕ್ಷ ಜೋ ಬಿಡನ್, ಬ್ರೆಜಿಲ್ ಅಧ್ಯಕ್ಷ ಲೂಯಿಜ್ ಇನಾಸಿಯೊ ಲುಲಾ ಡಾ ಸಿಲ್ವಾ ಮತ್ತು ಇಂಡೋನೇಷ್ಯಾ ಅಧ್ಯಕ್ಷ ಜೋಕೊ ವಿಡೋಡೊ ಅವರು ಹೊಸ ಜಿ20 ಶೃಂಗಸಭೆಯ ಅಂತಿಮ ದಿನ ರಾಜ್‌ಘಾಟ್‌ನಲ್ಲಿ ಮಹಾತ್ಮ ಗಾಂಧಿ ಸಮಾಧಿಗೆ ಪುಷ್ಪ ನಮನ ಸಲ್ಲಿಸಿದ ಸಂದರ್ಭ.
(4 / 8)
ಭಾರತದ ಪ್ರಧಾನಮಂತ್ರಿ ನರೇಂದ್ರ ಮೋದಿ, ಅಮೆರಿಕ ಅಧ್ಯಕ್ಷ ಜೋ ಬಿಡನ್, ಬ್ರೆಜಿಲ್ ಅಧ್ಯಕ್ಷ ಲೂಯಿಜ್ ಇನಾಸಿಯೊ ಲುಲಾ ಡಾ ಸಿಲ್ವಾ ಮತ್ತು ಇಂಡೋನೇಷ್ಯಾ ಅಧ್ಯಕ್ಷ ಜೋಕೊ ವಿಡೋಡೊ ಅವರು ಹೊಸ ಜಿ20 ಶೃಂಗಸಭೆಯ ಅಂತಿಮ ದಿನ ರಾಜ್‌ಘಾಟ್‌ನಲ್ಲಿ ಮಹಾತ್ಮ ಗಾಂಧಿ ಸಮಾಧಿಗೆ ಪುಷ್ಪ ನಮನ ಸಲ್ಲಿಸಿದ ಸಂದರ್ಭ.(PTI)
ರಾಜ್‌ಘಾಟ್‌ನಲ್ಲಿ ಮಹತ್ಮಾಗಾಂಧಿ ಸಮಾಧಿಗೆ ಗೌರವ ನಮನ ಸಲ್ಲಿಸುವ ಸಂದರ್ಭದಲ್ಲಿ ಅಮೆರಿಕ ಅಧ್ಯಕ್ಷ ಜೋ ಬಿಡೆನ್‌ ಮತ್ತು ಬ್ರಿಟಿಷ್ ಪ್ರಧಾನಿ ರಿಷಿ ಸುನಕ್‌ ಆಪ್ತ ಮಾತುಕತೆ.
(5 / 8)
ರಾಜ್‌ಘಾಟ್‌ನಲ್ಲಿ ಮಹತ್ಮಾಗಾಂಧಿ ಸಮಾಧಿಗೆ ಗೌರವ ನಮನ ಸಲ್ಲಿಸುವ ಸಂದರ್ಭದಲ್ಲಿ ಅಮೆರಿಕ ಅಧ್ಯಕ್ಷ ಜೋ ಬಿಡೆನ್‌ ಮತ್ತು ಬ್ರಿಟಿಷ್ ಪ್ರಧಾನಿ ರಿಷಿ ಸುನಕ್‌ ಆಪ್ತ ಮಾತುಕತೆ.(PTI)
ರಾಜ್‌ಘಾಟ್‌ನಲ್ಲಿ ಅಮೆರಿಕ ಅಧ್ಯಕ್ಷ ಜೋ ಬಿಡೆನ್ ಮತ್ತು ಭಾರತದ ಪ್ರಧಾನಿ ನರೇಂದ್ರ ಮೋದಿ ಅವರ ನಡುವೆ ಕಿರುಮಾತುಕತೆ ನಡೆದ ಸಂದರ್ಭ. 
(6 / 8)
ರಾಜ್‌ಘಾಟ್‌ನಲ್ಲಿ ಅಮೆರಿಕ ಅಧ್ಯಕ್ಷ ಜೋ ಬಿಡೆನ್ ಮತ್ತು ಭಾರತದ ಪ್ರಧಾನಿ ನರೇಂದ್ರ ಮೋದಿ ಅವರ ನಡುವೆ ಕಿರುಮಾತುಕತೆ ನಡೆದ ಸಂದರ್ಭ. (AP)
ರಾಜ್‌ಘಾಟ್‌ನಲ್ಲಿ ಬ್ರಿಟಿಷ್ ಪ್ರಧಾನಿ ರಿಷಿ ಸುನಕ್‌, ಭಾರತದ ಪ್ರಧಾನಿ ನರೇಂದ್ರ ಮೋದಿ ಮತ್ತು ಅಮೆರಿಕ ಅಧ್ಯಕ್ಷ ಜೋ ಬಿಡೆನ್‌ ಜತೆಯಾಗಿ ಹೆಜ್ಜೆ ಹಾಕಿದರು.
(7 / 8)
ರಾಜ್‌ಘಾಟ್‌ನಲ್ಲಿ ಬ್ರಿಟಿಷ್ ಪ್ರಧಾನಿ ರಿಷಿ ಸುನಕ್‌, ಭಾರತದ ಪ್ರಧಾನಿ ನರೇಂದ್ರ ಮೋದಿ ಮತ್ತು ಅಮೆರಿಕ ಅಧ್ಯಕ್ಷ ಜೋ ಬಿಡೆನ್‌ ಜತೆಯಾಗಿ ಹೆಜ್ಜೆ ಹಾಕಿದರು.(PTI)
ಅಮೆರಿಕ ಅಧ್ಯಕ್ಷ ಜೋ ಬಿಡೆನ್ ಮತ್ತು ಭಾರತದ ಪ್ರಧಾನಿ ನರೇಂದ್ರ ಮೋದಿ ಸೇರಿದಂತೆ ಜಿ20 ನಾಯಕರ ನಡುವಿನ ಸ್ನೇಹ ಸಂಬಂಧಕ್ಕೆ ಈ ಶೃಂಗ ವೇದಿಕೆಯಾಗಿರುವುದು ಗಮನಸೆಳೆಯಿತು.
(8 / 8)
ಅಮೆರಿಕ ಅಧ್ಯಕ್ಷ ಜೋ ಬಿಡೆನ್ ಮತ್ತು ಭಾರತದ ಪ್ರಧಾನಿ ನರೇಂದ್ರ ಮೋದಿ ಸೇರಿದಂತೆ ಜಿ20 ನಾಯಕರ ನಡುವಿನ ಸ್ನೇಹ ಸಂಬಂಧಕ್ಕೆ ಈ ಶೃಂಗ ವೇದಿಕೆಯಾಗಿರುವುದು ಗಮನಸೆಳೆಯಿತು.(PTI)

    ಹಂಚಿಕೊಳ್ಳಲು ಲೇಖನಗಳು