ಕನ್ನಡ ಸುದ್ದಿ  /  ಫೋಟೋ ಗ್ಯಾಲರಿ  /  G20 Summit Pics: ಜಿ20 ಶೃಂಗ ಸಂಪನ್ನ, ಇನ್ನು ಬ್ರೆಜಿಲ್ ಅಧ್ಯಕ್ಷತೆ, ಭಾರತ ಮಂಟಪದಲ್ಲಿ ಸೆಲ್ಫಿಯಿಂದ ಹಿಡಿದು ನಾಯಕರ ಸ್ನೇಹ ಸೌಹಾರ್ದದ ನೆನಪು

G20 Summit Pics: ಜಿ20 ಶೃಂಗ ಸಂಪನ್ನ, ಇನ್ನು ಬ್ರೆಜಿಲ್ ಅಧ್ಯಕ್ಷತೆ, ಭಾರತ ಮಂಟಪದಲ್ಲಿ ಸೆಲ್ಫಿಯಿಂದ ಹಿಡಿದು ನಾಯಕರ ಸ್ನೇಹ ಸೌಹಾರ್ದದ ನೆನಪು

Sep 10, 2023 03:53 PM IST

ಮುಂದಿನ ಜಿ20 ಶೃಂಗ ಬ್ರೆಜಿಲ್‌ನಲ್ಲಿ ನಡೆಯಲಿದೆ. ದೆಹಲಿಯಲ್ಲಿ ಎರಡು ದಿನಗಳ ಜಿ20 ಶೃಂಗ ಇಂದು ಸಂಪನ್ನವಾಗಿದೆ. ಈ ಶೃಂಗ ವಿಶ್ವ ನಾಯಕರ ನಡುವಿನ ಸ್ನೇಹ ಸಂಬಂಧ, ಶಾಂತಿ ಸೌಹಾರ್ದದ ವೇದಿಕೆಯಾಗಿ ಮಾರ್ಪಟ್ಟದ್ದು ಗಮನಾರ್ಹ. ಅಧ್ಯಕ್ಷ ಸೆಲ್ಫಿಯಿಂದ ಹಿಡಿದು ಜಿ20 ನಾಯಕರ ಸ್ನೇಹ ಸೌಹಾರ್ದದ ಅಪರೂಪದ ಕ್ಷಣ ಪೋಟೋಗಳಲ್ಲಿ ಸೆರೆಯಾಗಿರುವುದು ಹೀಗೆ.

ಮುಂದಿನ ಜಿ20 ಶೃಂಗ ಬ್ರೆಜಿಲ್‌ನಲ್ಲಿ ನಡೆಯಲಿದೆ. ದೆಹಲಿಯಲ್ಲಿ ಎರಡು ದಿನಗಳ ಜಿ20 ಶೃಂಗ ಇಂದು ಸಂಪನ್ನವಾಗಿದೆ. ಈ ಶೃಂಗ ವಿಶ್ವ ನಾಯಕರ ನಡುವಿನ ಸ್ನೇಹ ಸಂಬಂಧ, ಶಾಂತಿ ಸೌಹಾರ್ದದ ವೇದಿಕೆಯಾಗಿ ಮಾರ್ಪಟ್ಟದ್ದು ಗಮನಾರ್ಹ. ಅಧ್ಯಕ್ಷ ಸೆಲ್ಫಿಯಿಂದ ಹಿಡಿದು ಜಿ20 ನಾಯಕರ ಸ್ನೇಹ ಸೌಹಾರ್ದದ ಅಪರೂಪದ ಕ್ಷಣ ಪೋಟೋಗಳಲ್ಲಿ ಸೆರೆಯಾಗಿರುವುದು ಹೀಗೆ.
ಭಾರತದ ಆತಿಥ್ಯದಲ್ಲಿ ಜಿ20 ಶೃಂಗ ಸಂಪನ್ನಗೊಳ್ಳುವ ವೇಳೆ, ಮುಂದಿನ ಶೃಂಗ ನಡೆಸುವ ಹೊಣೆಗಾರಿಕೆ ಮತ್ತು ಜಿ20 ಅಧ್ಯಕ್ಷತೆಯ ಹೊಣೆಗಾರಿಕೆಯನ್ನು ಭಾರತದ ಪ್ರಧಾನಿ ನರೇಂದ್ರ ಮೋದಿ ಬ್ರೆಜಿಲ್ ಅಧ್ಯಕ್ಷ ಲೂಯಿಜ್‌ ಇನಾಸಿಯೊ ಡ ಸಿಲ್ವಾ ಅವರಿಗೆ ಹಸ್ತಾಂತರಿಸಿದರು.
(1 / 11)
ಭಾರತದ ಆತಿಥ್ಯದಲ್ಲಿ ಜಿ20 ಶೃಂಗ ಸಂಪನ್ನಗೊಳ್ಳುವ ವೇಳೆ, ಮುಂದಿನ ಶೃಂಗ ನಡೆಸುವ ಹೊಣೆಗಾರಿಕೆ ಮತ್ತು ಜಿ20 ಅಧ್ಯಕ್ಷತೆಯ ಹೊಣೆಗಾರಿಕೆಯನ್ನು ಭಾರತದ ಪ್ರಧಾನಿ ನರೇಂದ್ರ ಮೋದಿ ಬ್ರೆಜಿಲ್ ಅಧ್ಯಕ್ಷ ಲೂಯಿಜ್‌ ಇನಾಸಿಯೊ ಡ ಸಿಲ್ವಾ ಅವರಿಗೆ ಹಸ್ತಾಂತರಿಸಿದರು.(PTI)
ಜಿ20 ಶೃಂಗದ ಅವಿಸ್ಮರಣೀಯ ಕ್ಷಣಗಳ ಪೈಕಿ ಇದೂ ಒಂದು. ಸೌದಿ ಅರೇಬಿಯಾ ಮತ್ತು ಅಮೆರಿಕ ಸಂಬಂಧ ಕಳೆದ ಒಂದೂವರೆ ವರ್ಷದಿಂದ ಭಿನ್ನಮತಕ್ಕೆ ತಿರುಗಿತ್ತು. ಹಿಂದಿನ ಭೇಟಿ ವೇಳೆ ಅಮೆರಿಕ ಅಧ್ಯಕ್ಷ ಜೋ ಬಿಡೆನ್ ಮತ್ತು ಸೌದಿ ಅರೇಬಿಯಾದ ಪ್ರಧಾನಿ, ಕ್ರೌನ್‌ ಪ್ರಿನ್ಸ್‌ ಮೊಹಮ್ಮದ್ ಬಿನ್ ಸಲ್ಮಾನ್‌ ಪರಸ್ಪರ ಅಸಹಜ ವರ್ತನೆ ತೋರಿದ್ದರು. ಆದರೆ ದೆಹಲಿಯಲ್ಲಿ ಹಾಗಾಗಲಿಲ್ಲ. ಇಬ್ಬರೂ ಪರಸ್ಪರ ಸೌಹಾರ್ದಯುತವಾಗಿ ನಡೆದುಕೊಂಡು, ಹಸ್ತಲಾಘವ ಮಾಡುತ್ತಿದ್ದಂತೆ ಆತಿಥೇಯ ರಾಷ್ಟ್ರವಾದ ಭಾರತದ ಪ್ರಧಾನಿ ನರೇಂದ್ರ ಮೋದಿ ಅವರಿಬ್ಬರ ಶೇಕ್‌ಹ್ಯಾಂಡ್‌ ಅನ್ನು ಬಿಗಿಗೊಳಿಸಿದರು.
(2 / 11)
ಜಿ20 ಶೃಂಗದ ಅವಿಸ್ಮರಣೀಯ ಕ್ಷಣಗಳ ಪೈಕಿ ಇದೂ ಒಂದು. ಸೌದಿ ಅರೇಬಿಯಾ ಮತ್ತು ಅಮೆರಿಕ ಸಂಬಂಧ ಕಳೆದ ಒಂದೂವರೆ ವರ್ಷದಿಂದ ಭಿನ್ನಮತಕ್ಕೆ ತಿರುಗಿತ್ತು. ಹಿಂದಿನ ಭೇಟಿ ವೇಳೆ ಅಮೆರಿಕ ಅಧ್ಯಕ್ಷ ಜೋ ಬಿಡೆನ್ ಮತ್ತು ಸೌದಿ ಅರೇಬಿಯಾದ ಪ್ರಧಾನಿ, ಕ್ರೌನ್‌ ಪ್ರಿನ್ಸ್‌ ಮೊಹಮ್ಮದ್ ಬಿನ್ ಸಲ್ಮಾನ್‌ ಪರಸ್ಪರ ಅಸಹಜ ವರ್ತನೆ ತೋರಿದ್ದರು. ಆದರೆ ದೆಹಲಿಯಲ್ಲಿ ಹಾಗಾಗಲಿಲ್ಲ. ಇಬ್ಬರೂ ಪರಸ್ಪರ ಸೌಹಾರ್ದಯುತವಾಗಿ ನಡೆದುಕೊಂಡು, ಹಸ್ತಲಾಘವ ಮಾಡುತ್ತಿದ್ದಂತೆ ಆತಿಥೇಯ ರಾಷ್ಟ್ರವಾದ ಭಾರತದ ಪ್ರಧಾನಿ ನರೇಂದ್ರ ಮೋದಿ ಅವರಿಬ್ಬರ ಶೇಕ್‌ಹ್ಯಾಂಡ್‌ ಅನ್ನು ಬಿಗಿಗೊಳಿಸಿದರು.(AP)
ಆಸ್ಟ್ರೇಲಿಯಾದ ಪ್ರಧಾನಿ ಆಂಟನಿ ಅಲ್ಬಾನೀಸ್‌ ಮತ್ತು ಅವರ ಸಂಗಾತಿ ಜೋಡಿ ಹೇಡನ್‌ ಭಾರತದ ಪ್ರಧಾನಿ ನರೇಂದ್ರ ಮೋದಿ ಅವರ ಜತೆಗೆ ಸೆಲ್ಫಿ ತಗೊಂಡರು. ಭಾರತ ಮಂಟಪದಲ್ಲಿ ಭಾರತದ ರಾಷ್ಟ್ರಪತಿ ದ್ರೌಪದಿ ಮುರ್ಮು ಅವರು ನಿನ್ನೆ (ಸೆ.9) ಏರ್ಪಡಿಸಿದ್ದ ಔತಣಕೂಟದ ಸಂದರ್ಭ ಇದು.
(3 / 11)
ಆಸ್ಟ್ರೇಲಿಯಾದ ಪ್ರಧಾನಿ ಆಂಟನಿ ಅಲ್ಬಾನೀಸ್‌ ಮತ್ತು ಅವರ ಸಂಗಾತಿ ಜೋಡಿ ಹೇಡನ್‌ ಭಾರತದ ಪ್ರಧಾನಿ ನರೇಂದ್ರ ಮೋದಿ ಅವರ ಜತೆಗೆ ಸೆಲ್ಫಿ ತಗೊಂಡರು. ಭಾರತ ಮಂಟಪದಲ್ಲಿ ಭಾರತದ ರಾಷ್ಟ್ರಪತಿ ದ್ರೌಪದಿ ಮುರ್ಮು ಅವರು ನಿನ್ನೆ (ಸೆ.9) ಏರ್ಪಡಿಸಿದ್ದ ಔತಣಕೂಟದ ಸಂದರ್ಭ ಇದು.(PTI)
ಇಟಲಿಯ ಪ್ರಧಾನಿ ಜಿಯೋರ್ಜಿಯಾ ಮೆಲೋನಿ ನವದೆಹಲಿಗೆ ಆಗಮಿಸಿ ಭಾರತ ಮಂಟಪಕ್ಕೆ ಬಂದಾಗ ಅವರನ್ನು ಭಾರತದ ಪ್ರಧಾನಿ ನರೇಂದ್ರ ಮೋದಿ ಬರಮಾಡಿಕೊಂಡ ಕ್ಷಣ. ಜಿ20 ಮೂಲಕ ಭಾರತ ಜಾರಿಗೊಳಿಸುತ್ತಿರುವ ಉಪಕ್ರಮವಾದ ಗ್ಲೋಬಲ್ ಬಯೋಫ್ಯೂಯೆಲ್‌ ಅಲಯನ್ಸ್‌ ಮತ್ತು ಇಂಡಿಯಾ- ಮಿಡ್ಲ್‌ಈಸ್ಟ್ ಯುರೋಪ್ ಎಕನಾಮಿಕ್ ಕಾರಿಡಾರ್ ಪಾಲುದಾರಿಕೆಯಲ್ಲೂ ಇಟಲಿ ಪಾಲುದಾರ ರಾಷ್ಟ್ರವಾಗಿದೆ.
(4 / 11)
ಇಟಲಿಯ ಪ್ರಧಾನಿ ಜಿಯೋರ್ಜಿಯಾ ಮೆಲೋನಿ ನವದೆಹಲಿಗೆ ಆಗಮಿಸಿ ಭಾರತ ಮಂಟಪಕ್ಕೆ ಬಂದಾಗ ಅವರನ್ನು ಭಾರತದ ಪ್ರಧಾನಿ ನರೇಂದ್ರ ಮೋದಿ ಬರಮಾಡಿಕೊಂಡ ಕ್ಷಣ. ಜಿ20 ಮೂಲಕ ಭಾರತ ಜಾರಿಗೊಳಿಸುತ್ತಿರುವ ಉಪಕ್ರಮವಾದ ಗ್ಲೋಬಲ್ ಬಯೋಫ್ಯೂಯೆಲ್‌ ಅಲಯನ್ಸ್‌ ಮತ್ತು ಇಂಡಿಯಾ- ಮಿಡ್ಲ್‌ಈಸ್ಟ್ ಯುರೋಪ್ ಎಕನಾಮಿಕ್ ಕಾರಿಡಾರ್ ಪಾಲುದಾರಿಕೆಯಲ್ಲೂ ಇಟಲಿ ಪಾಲುದಾರ ರಾಷ್ಟ್ರವಾಗಿದೆ.(AFP)
ಅಮೆರಿಕ ಅಧ್ಯಕ್ಷ ಜೋ ಬಿಡೆನ್ ಮತ್ತು ಭಾರತದ ಪ್ರಧಾನಿ ನರೇಂದ್ರ ಮೋದಿ ಅವರ ನಡುವಿನ ಸ್ನೇಹ ವಿಶ್ವಾಸ ಜಿ20 ಶೃಂಗದಲ್ಲಿ ಹಲವೆಡೆ ಹೈಲೈಟ್ ಆಗಿತ್ತು.
(5 / 11)
ಅಮೆರಿಕ ಅಧ್ಯಕ್ಷ ಜೋ ಬಿಡೆನ್ ಮತ್ತು ಭಾರತದ ಪ್ರಧಾನಿ ನರೇಂದ್ರ ಮೋದಿ ಅವರ ನಡುವಿನ ಸ್ನೇಹ ವಿಶ್ವಾಸ ಜಿ20 ಶೃಂಗದಲ್ಲಿ ಹಲವೆಡೆ ಹೈಲೈಟ್ ಆಗಿತ್ತು.(PTI)
ಬ್ರಿಟಿಷ್‌ ಪ್ರಧಾನಿ ರಿಷಿ ಸುನಕ್ ಮತ್ತು ಭಾರತದ ಪ್ರಧಾನಿ ನರೇಂದ್ರ ಮೋದಿ ನಡುವಿನ ಆಪ್ತ ಒಡನಾಟ ಹಲವೆಡೆ ಗಮನಸೆಳೆಯಿತು.
(6 / 11)
ಬ್ರಿಟಿಷ್‌ ಪ್ರಧಾನಿ ರಿಷಿ ಸುನಕ್ ಮತ್ತು ಭಾರತದ ಪ್ರಧಾನಿ ನರೇಂದ್ರ ಮೋದಿ ನಡುವಿನ ಆಪ್ತ ಒಡನಾಟ ಹಲವೆಡೆ ಗಮನಸೆಳೆಯಿತು.(10 Downing Street twitter)
ಭಾರತ ನಾರಿಯಂತೆ ಕಂಗೊಳಿಸಿದ ಜಪಾನ್ ಪ್ರಧಾನಿ ಫುಮಿಯೋ ಕಿಷಿಂದಾ ಅವರ ಪತ್ನಿ ಯುಕೊ ಕಿಶಿಂದಾ ಅವರು ಭಾರತದ ರಾಷ್ಟ್ರಪತಿ ದ್ರೌಪದಿ ಮುರ್ಮು ಮತ್ತು ಭಾರತದ ಪ್ರಧಾನಿ ನರೇಂದ್ರ ಮೋದಿ ಅವರ ಜತೆಗೆ ಔತಣಕೂಟದ ಸಂದರ್ಭ.
(7 / 11)
ಭಾರತ ನಾರಿಯಂತೆ ಕಂಗೊಳಿಸಿದ ಜಪಾನ್ ಪ್ರಧಾನಿ ಫುಮಿಯೋ ಕಿಷಿಂದಾ ಅವರ ಪತ್ನಿ ಯುಕೊ ಕಿಶಿಂದಾ ಅವರು ಭಾರತದ ರಾಷ್ಟ್ರಪತಿ ದ್ರೌಪದಿ ಮುರ್ಮು ಮತ್ತು ಭಾರತದ ಪ್ರಧಾನಿ ನರೇಂದ್ರ ಮೋದಿ ಅವರ ಜತೆಗೆ ಔತಣಕೂಟದ ಸಂದರ್ಭ.(ANI)
ಅತ್ಯಂತ ವಿರಳ ವಿದ್ಯಮಾನದಲ್ಲಿ ಅಮೆರಿಕ ಅಧ್ಯಕ್ಷ ಜೋ ಬಿಡೆನ್‌ ಬಾಂಗ್ಲಾದೇಶದ ಪ್ರಧಾನಿ ಶೇಖ್ ಹಸೀನಾ ಮತ್ತು ಅವರ ಪುತ್ರಿ ಸಜ್ಮಾ ವಾಜೆದ್ ಜತೆಗೆ ಸೆಲ್ಫಿ ತೆಗೆಸಿಕೊಂಡರು. ಇದು ಜಿ20 ಶೃಂಗದ ಮೊದಲ ದಿನದ ವೈರಲ್ ಫೋಟೋ.
(8 / 11)
ಅತ್ಯಂತ ವಿರಳ ವಿದ್ಯಮಾನದಲ್ಲಿ ಅಮೆರಿಕ ಅಧ್ಯಕ್ಷ ಜೋ ಬಿಡೆನ್‌ ಬಾಂಗ್ಲಾದೇಶದ ಪ್ರಧಾನಿ ಶೇಖ್ ಹಸೀನಾ ಮತ್ತು ಅವರ ಪುತ್ರಿ ಸಜ್ಮಾ ವಾಜೆದ್ ಜತೆಗೆ ಸೆಲ್ಫಿ ತೆಗೆಸಿಕೊಂಡರು. ಇದು ಜಿ20 ಶೃಂಗದ ಮೊದಲ ದಿನದ ವೈರಲ್ ಫೋಟೋ.(Awami League Twitter)
ಅರ್ಜೆಂಟೀನಾ ಅಧ್ಯಕ್ಷ ಅಲ್ಬರ್ಟೊ ಫೆರ್ನಾಂಡೆಸ್‌, ದಕ್ಷಿಣ ಆಫ್ರಿಕಾ ಅಧ್ಯಕ್ಷ ಸಿರಿಲ್‌ ರಾಮಫೋಸಾ ಜತೆಗೆ ಭಾರತದ ಪ್ರಧಾನಿ ನರೇಂದ್ರ ಮೋದಿ. ಇದು ಕೂಡ ಶನಿವಾರ ಗಮನ ಸೆಳೆದ ಫೋಟೋ.
(9 / 11)
ಅರ್ಜೆಂಟೀನಾ ಅಧ್ಯಕ್ಷ ಅಲ್ಬರ್ಟೊ ಫೆರ್ನಾಂಡೆಸ್‌, ದಕ್ಷಿಣ ಆಫ್ರಿಕಾ ಅಧ್ಯಕ್ಷ ಸಿರಿಲ್‌ ರಾಮಫೋಸಾ ಜತೆಗೆ ಭಾರತದ ಪ್ರಧಾನಿ ನರೇಂದ್ರ ಮೋದಿ. ಇದು ಕೂಡ ಶನಿವಾರ ಗಮನ ಸೆಳೆದ ಫೋಟೋ.(Alberto Fernández Twitter)
ಫ್ರೆಂಚ್ ಅಧ್ಯಕ್ಷ ಇಮ್ಯಾನುವೆಲ್ ಮ್ಯಾಕ್ರನ್‌ ಮತ್ತು ಭಾರತದ ಪ್ರಧಾನಿ ನರೇಂದ್ರ ಮೋದಿ ಅವರ ನಡುವೆ ಶನಿವಾರ ನಡೆದ ಆಪ್ತ ಮಾತುಕತೆ. 
(10 / 11)
ಫ್ರೆಂಚ್ ಅಧ್ಯಕ್ಷ ಇಮ್ಯಾನುವೆಲ್ ಮ್ಯಾಕ್ರನ್‌ ಮತ್ತು ಭಾರತದ ಪ್ರಧಾನಿ ನರೇಂದ್ರ ಮೋದಿ ಅವರ ನಡುವೆ ಶನಿವಾರ ನಡೆದ ಆಪ್ತ ಮಾತುಕತೆ. (Narendra Modi Instagram)
ಇಂಟರ್‌ನ್ಯಾಷನಲ್ ಮಾನಿಟರಿ ಫಂಡ್‌ನ ಡೆಪ್ಯುಟಿ ಮ್ಯಾನೇಜಿಂಗ್ ಡೈರೆಕ್ಟರ್ ಗೀತಾ ಗೋಪಿನಾಥ್‌ ಅವರು ಭಾರತದ ಪ್ರಧಾನಿ ನರೇಂದ್ರ ಮೋದಿ ಜತೆಗೆ ಔತಣಕೂಟದ ಸಂದರ್ಭದಲ್ಲಿ ಕಾಣಿಸಿಕೊಂಡರು. 
(11 / 11)
ಇಂಟರ್‌ನ್ಯಾಷನಲ್ ಮಾನಿಟರಿ ಫಂಡ್‌ನ ಡೆಪ್ಯುಟಿ ಮ್ಯಾನೇಜಿಂಗ್ ಡೈರೆಕ್ಟರ್ ಗೀತಾ ಗೋಪಿನಾಥ್‌ ಅವರು ಭಾರತದ ಪ್ರಧಾನಿ ನರೇಂದ್ರ ಮೋದಿ ಜತೆಗೆ ಔತಣಕೂಟದ ಸಂದರ್ಭದಲ್ಲಿ ಕಾಣಿಸಿಕೊಂಡರು. (PTI)

    ಹಂಚಿಕೊಳ್ಳಲು ಲೇಖನಗಳು