logo
ಕನ್ನಡ ಸುದ್ದಿ  /  ಫೋಟೋ ಗ್ಯಾಲರಿ  /  Himachal Snow Fall: ಹಿಮಾಚಲ ಪ್ರದೇಶದಲ್ಲೀಗ ಹಿಮಪಾತದ ವೈಭವ, ಶಿಮ್ಲಾ, ಮನಾಲಿಯಲ್ಲಿ ಪ್ರವಾಸಿಗರ ಖುಷಿಯ ನೋಟ ಹೀಗಿದೆ Photos

Himachal Snow Fall: ಹಿಮಾಚಲ ಪ್ರದೇಶದಲ್ಲೀಗ ಹಿಮಪಾತದ ವೈಭವ, ಶಿಮ್ಲಾ, ಮನಾಲಿಯಲ್ಲಿ ಪ್ರವಾಸಿಗರ ಖುಷಿಯ ನೋಟ ಹೀಗಿದೆ photos

Feb 05, 2024 08:34 PM IST

ಉತ್ತರ ಭಾರತದ ಪ್ರಮುಖ ಪ್ರವಾಸಿ ರಾಜ್ಯ ಹಿಮಾಚಲ ಪ್ರದೇಶದಲ್ಲಿ ಈಗ ಹಿಮಪಾತದ ಸಂತಸ. ಎಲ್ಲಿ ನೋಡಿದರೂ ಹಿಮ ಬೆಳ್ಳಿ ನೊರೆಯಂತೆ ಬೀಳುತ್ತಲೇ ಇದೆ. ಈ ವೈಭವವನ್ನು ಕಣ್ತುಂಬಿಕೊಳ್ಳಲು ಪ್ರವಾಸಿಗರು ನಾನಾ ಭಾಗಗಳಿಂದ ಆಗಮಿಸುತ್ತಾರೆ. ಈ ವರ್ಷವೂ ಹಿಮಪಾತದ ಪ್ರವಾಸೋದ್ಯಮ ಚುರುಕುಗೊಂಡಿದೆ. ಇದರ ಚಿತ್ರ ನೋಟ ಇಲ್ಲಿದೆ.

  • ಉತ್ತರ ಭಾರತದ ಪ್ರಮುಖ ಪ್ರವಾಸಿ ರಾಜ್ಯ ಹಿಮಾಚಲ ಪ್ರದೇಶದಲ್ಲಿ ಈಗ ಹಿಮಪಾತದ ಸಂತಸ. ಎಲ್ಲಿ ನೋಡಿದರೂ ಹಿಮ ಬೆಳ್ಳಿ ನೊರೆಯಂತೆ ಬೀಳುತ್ತಲೇ ಇದೆ. ಈ ವೈಭವವನ್ನು ಕಣ್ತುಂಬಿಕೊಳ್ಳಲು ಪ್ರವಾಸಿಗರು ನಾನಾ ಭಾಗಗಳಿಂದ ಆಗಮಿಸುತ್ತಾರೆ. ಈ ವರ್ಷವೂ ಹಿಮಪಾತದ ಪ್ರವಾಸೋದ್ಯಮ ಚುರುಕುಗೊಂಡಿದೆ. ಇದರ ಚಿತ್ರ ನೋಟ ಇಲ್ಲಿದೆ.
ಹಿಮಹೊದ್ದ ರಾಜ್ಯ ಹಿಮಾಚಲ ಪ್ರದೇಶದಲ್ಲೀಗ ಹಿಮದ ಸ್ವಗತ. ಎರಡು ವರ್ಷದ ಬಳಿಕ ಹಿಮಾಚಲಪ್ರದೇಶದಲ್ಲಿ ಭಾರೀ  ಹಿಮಪಾತ ಕಾಣಸಿಕೊಂಡಿದೆ. ಮೂರ್ನಾಲ್ಕು ದಿನಗಳಿಂದ  ಹಿಮಪಾತ​ ಆಗುತ್ತಿದ್ದು ಕೂಡು ಮುಂದುವರೆದು ರಸ್ತೆಗಳೂ ಹಿಮದಿಂದ ಆವೃತ್ತವಾಗಿವೆ. ಸುಮಾರು 700ಕ್ಕೂ ಹೆಚ್ಚಿನ ರಸ್ತೆಗಳಲ್ಲಿ ಹಿಮ ಬಿದ್ದು ರಸ್ತೆ ಸಂಚಾರವೇ ಬಂದ್‌ ಆಗಿವೆ.
(1 / 7)

ಹಿಮಾಚಲ ಪ್ರದೇಶದಲ್ಲಿ ಹಿಮ ಬಿದ್ದ ಮಾಹಿತಿ ತಿಳಿದು ಪ್ರವಾಸಿಗರು ಆ ಖುಷಿ ಅನುಭವಿಸಲು ಕುಟುಂಬ ಸಮೇತ ಆಗಮಿಸುತ್ತಿದ್ದಾರೆ. ಯುವತಿಯೊಬ್ಬರು ಹಿಮಕ್ಕೆ ಮೈಯೊಡ್ಡಿ ಸುಖ ಕಂಡ ಈ ಕ್ಷಣ.
(2 / 7)

ಹಿಮಾಚಲ ಪ್ರದೇಶಕ್ಕೆ ಹಿಮಪಾತವನ್ನು ಅರಸಿ ಬರುತ್ತಿದ್ದ ಪ್ರವಾಸಿಗರಿಗೆ ನಿರಾಸೆಯಾಗುವ ಸನ್ನಿವೇಶ ಕಂಡು ಬರುತ್ತಲೇ ಇತ್ತು.. ಇದರಿಂದ ಪ್ರವಾಸಿ ಸ್ಥಳಗಳಿಗೆ ಬರುವ ಪ್ರವಾಸಿಗರ ಸಂಖ್ಯೆ ತೀರಾ ಕಡಿಮೆಯಾಗಿತ್ತು. ಈ ಬಾರಿ ಹಿಮಪಾತದಿಂದಾಗಿ ರಾಜ್ಯಕ್ಕೆ ಭೇಟಿ ಕೊಡುವ ಪ್ರವಾಸಿಗರು ಸಂಖ್ಯೆ ಹೆಚ್ಚಾಗಿದೆ. ಹಿಮಪಾತ ತಾಣಗಳನ್ನು ಹುಡುಕಿಕೊಂಡೇ ಹಲವರು ಬರುತ್ತಿದ್ದಾರೆ.
(3 / 7)

ಹಿಮಪಾತದ ಖುಷಿಯ ನಡುವೆ ಅಲ್ಲಲ್ಲಿ ತೊಂದರೆಗಳೂ ಆಗುತ್ತಿವೆ. ಬಸ್‌ಗಳು ಹಿಮಪಾತಕ್ಕೆ ಸಿಲುಕುತ್ತಿವೆ. ಹಿಮಾಚಲ ಪ್ರದೇಶದಲ್ಲಿ ಚಂಬಾ ಜಿಲ್ಲೆಯಲ್ಲಿ 163, ಶಿಮ್ಲಾದಲ್ಲಿ 250, ಲಾಹೌಲ್ ಸ್ಪಿತಿಯಲ್ಲಿ 139, ಕುಲು ಮತ್ತು ಇತರ ಜಿಲ್ಲೆಗಳಲ್ಲಿ 67 ರಸ್ತೆಗಳ ಸಂಚಾರಕ್ಕೆ ನಿರ್ಬಂಧ ಹೇರಲಾಗಿದೆ. 
(4 / 7)
ಹಿಮಪಾತದ ಖುಷಿಯ ನಡುವೆ ಅಲ್ಲಲ್ಲಿ ತೊಂದರೆಗಳೂ ಆಗುತ್ತಿವೆ. ಬಸ್‌ಗಳು ಹಿಮಪಾತಕ್ಕೆ ಸಿಲುಕುತ್ತಿವೆ. ಹಿಮಾಚಲ ಪ್ರದೇಶದಲ್ಲಿ ಚಂಬಾ ಜಿಲ್ಲೆಯಲ್ಲಿ 163, ಶಿಮ್ಲಾದಲ್ಲಿ 250, ಲಾಹೌಲ್ ಸ್ಪಿತಿಯಲ್ಲಿ 139, ಕುಲು ಮತ್ತು ಇತರ ಜಿಲ್ಲೆಗಳಲ್ಲಿ 67 ರಸ್ತೆಗಳ ಸಂಚಾರಕ್ಕೆ ನಿರ್ಬಂಧ ಹೇರಲಾಗಿದೆ. (him bus)
ಹಿಮಾಚಲ ಪ್ರದೇಶದಲ್ಲಿ ಕೆಲ ದಿನಗಳ ಹಿಂದೆ ಮಳೆ, ಬಳಿಕ ಬಹುಕಾಲ ಒಣಹವೆ ಇತ್ತು. ಸುದೀರ್ಘ ಕಾಯುವಿಕೆಯ ಬಳಿಕ ಮಳೆಯ ಜತೆಗೆ ಹಿಮಪಾತವೂ ಸುರಿಯುತ್ತಿದೆ. ರಾಜ್ಯದ ಎತ್ತರದ ಪ್ರದೇಶಗಳಲ್ಲಿನ ಪರ್ವತಗಳು ಸಂಪೂರ್ಣವಾಗಿ ಬಿಳಿ ಹಿಮದಿಂದ ಕಂಗೊಳಿಸುತ್ತಿವೆ. ಎತ್ತರದ ಕಣಿವೆಗಳು ಬೆಳ್ಳಿಯಂತೆ ಹೊಳೆಯುತ್ತಿರುವುದು ಕಂಡು ಬಂದಿದೆ. 
(5 / 7)

ಹಿಮಾಚಲ ಪ್ರದೇಶದಲ್ಲಿ ಈ ವರ್ಷ  ಹಿಮಪಾತದಿಂದಾಗಿ 2200ಕ್ಕೂ ಅಧಿಕ ವಿದ್ಯುತ್​ ಟ್ರಾನ್ಸ್‌ಫಾರ್ಮರ್‌ಗಳು ಹಾನಿಗೊಳಗಾಗಿವೆ. ಇದರಿಂದ ಹಲವು ಗ್ರಾಮಗಳಲ್ಲಿ ವಿದ್ಯುತ್​ ಕಡಿತಗೊಂಡು ಸ್ಥಳೀಯರು ಹಾಗೂ ಪ್ರವಾಸಿಗರು ಅಲ್ಲಲ್ಲಿ ತೊಂದರೆಗೂ ಒಳಗಾಗಿದ್ದಾರೆ.
(6 / 7)

ಹಿಮಾಚಲ ಪ್ರದೇಶದಲ್ಲಿ ಪ್ರಕೃತಿ ಹುಟ್ಟು ಹಾಕಿದ ಈ ವೈಭವವನ್ನು ನೋಡಲು ಜನ ಎಲ್ಲ ಅಡೆತಡೆಗಳನ್ನು ಹೊರತುಪಡಿಸಿ ವೀಕ್ಷಿಸಲು ಆಗಮಿಸುತ್ತಿದ್ದಾರೆ.ಇದು ಇನ್ನೂ ಕೆಲವು ದಿನ ಮುಂದುವರೆಯಲಿದೆ. 
(7 / 7)

    ಹಂಚಿಕೊಳ್ಳಲು ಲೇಖನಗಳು