logo
ಕನ್ನಡ ಸುದ್ದಿ  /  ಫೋಟೋ ಗ್ಯಾಲರಿ  /  ಧಾರಾಕಾರ ಮಳೆಗೆ ಕೋಲ್ಕತ ವಿಮಾನ ನಿಲ್ದಾಣ ಜಲಾವೃತ, ವಿಮಾನ ಯಾನ ಮೊಟಕು, ಇಲ್ಲಿದೆ ಚಿತ್ರನೋಟ

ಧಾರಾಕಾರ ಮಳೆಗೆ ಕೋಲ್ಕತ ವಿಮಾನ ನಿಲ್ದಾಣ ಜಲಾವೃತ, ವಿಮಾನ ಯಾನ ಮೊಟಕು, ಇಲ್ಲಿದೆ ಚಿತ್ರನೋಟ

Aug 03, 2024 04:28 PM IST

ಧಾರಾಕಾರ ಮಳೆಗೆ ಕೋಲ್ಕತ್ತ ವಿಮಾನ ನಿಲ್ಧಾಣ ಜಲಾವೃತವಾಯಿತು. ನೇತಾಜಿ ಸುಭಾಷ್ ಚಂದ್ರ ಬೋಸ್ ಅಂತರಾಷ್ಟ್ರೀಯ ವಿಮಾನ ನಿಲ್ದಾಣದ ರನ್‌ವೇಯಲ್ಲಿ ನೀರು ನಿಂತ ಕಾರಣ ವಿಮಾನ ಯಾನ ಮೊಟಕುಗೊಂಡಿತು. ನಿರಂತರ ಸುರಿಯುತ್ತಿರುವ ಮಳೆಯ ನಂತರ ಕೋಲ್ಕತ ನಗರ ಮತ್ತು ಹತ್ತಿರದ ಜಿಲ್ಲೆಗಳಲ್ಲಿ ಪ್ರವಾಹ ಪರಿಸ್ಥಿತಿ ನಿರ್ಮಾಣವಾಗಿತ್ತು. ಇದರ ಚಿತ್ರನೋಟ. 

ಮಳೆ ನೀರು ತುಂಬಿಕೊಂಡ ಕಾರಣ  ಕೋಲ್ಕತದ ನೇತಾಜಿ ಸುಭಾಷ್ ಚಂದ್ರ ಬೋಸ್ ಅಂತರಾಷ್ಟ್ರೀಯ ವಿಮಾನ ನಿಲ್ದಾಣದ ಇಂದು ನೀರ ಮೇಲಿನ ವಿಮಾನ ನಿಲ್ದಾಣದಂತೆ ಗೋಚರಿಸಿತು. 
(1 / 6)

ಭಾರೀ ಮಳೆಯಿಂದಾಗಿ ಕೋಲ್ಕತ್ತಾ, ಹೌರಾ, ಸಾಲ್ಟ್ ಲೇಕ್ ಮತ್ತು ಬ್ಯಾರಕ್‌ಪುರದಲ್ಲಿ ಜಲಾವೃತವಾಗಿದೆ. ದಿನವಿಡೀ ಪರಿಸ್ಥಿತಿ ಮುಂದುವರಿಯಲಿದೆ ಎಂದು ಭಾರತೀಯ ಹವಾಮಾನ ಇಲಾಖೆ (ಐಎಂಡಿ) ಹೇಳಿದೆ. ವಿಮಾನ ನಿಲ್ಧಾಣದ ನೀರು ಹೊರ ಹಾಕುವ ಕೆಲಸ ಪ್ರಗತಿಯಲ್ಲಿದ್ದು, ವಿಮಾನ ಯಾನ ಮರುಸ್ಥಾಪಿಸುವ ಪ್ರಯತ್ನ ಮುಂದುವರಿದಿದೆ.
(2 / 6)

ಸೋಷಿಯಲ್ ಮೀಡಿಯಾಗಳಲ್ಲಿ ವಿಮಾನ ನಿಲ್ದಾಣದ ಪರಿಸ್ಥಿತಿಯ ಫೋಟೋ, ವಿಡಿಯೋಗಳು ವೈರಲ್ ಆಗಿದೆ. ಕೆಲವರು ಕೋಲ್ಕತ ಸಮುದ್ರ ವಿಮಾನ ನಿಲ್ಧಾಣದಿಂದ ವಿಮಾನ ಹತ್ತಿ ಒಡಿಶಾದ ಕಟಕ್‌ಗೆ ಬಂದೆ ಎಂದು ಕಾಮೆಂಟ್ ಮಾಡಿರುವುದು ಕಂಡುಬಂತು.
(3 / 6)

ಮಳೆ ನೀರು ನಿಂತ ವಿಮಾನ ನಿಲ್ದಾಣದಲ್ಲಿ ವಿಮಾನಗಳ ಸ್ಥಿತಿಗತಿಯ ನೋಟ.
(4 / 6)
ಮಳೆ ನೀರು ನಿಂತ ವಿಮಾನ ನಿಲ್ದಾಣದಲ್ಲಿ ವಿಮಾನಗಳ ಸ್ಥಿತಿಗತಿಯ ನೋಟ.
ಮಳೆ ನೀರು ಚರಂಡಿ ವ್ಯವಸ್ಥೆ ಸರಿಯಾಗಿ ಕೆಲಸ ಮಾಡದ ಕಾರಣ ಮತ್ತು ಹೆಚ್ಚುವರಿ ಮಳೆ ಬಿದ್ದ ಕಾರಣ ವಿಮಾನ ನಿಲ್ಧಾಣದೊಳಕ್ಕೆ ನೀರು ನುಗ್ಗಿದ್ದರಿಂದ ಈ ಸಮಸ್ಯೆ ಉಂಟಾಯಿತು.
(5 / 6)

ದಿನದ ಅಂತ್ಯಕ್ಕೆ ವಿಮಾನ ನಿಲ್ದಾಣದ ರನ್‌ವೇನಲ್ಲಿದ್ದ ನೀರನ್ನು ಹೊರಹಾಕುವಲ್ಲಿ ಅಧಿಕಾರಿಗಳು ಯಶಸ್ವಿಯಾಗಿದ್ದು, ಶೀಘ್ರವೇ ವಿಮಾನ ಯಾನ ಮರುಸ್ಥಾಪನೆಯಾಗುವ ನಿರೀಕ್ಷೆ ಇದೆ ಎಂದು ಮೂಲಗಳು ತಿಳಿಸಿವೆ.
(6 / 6)

    ಹಂಚಿಕೊಳ್ಳಲು ಲೇಖನಗಳು