logo
ಕನ್ನಡ ಸುದ್ದಿ  /  ಫೋಟೋ ಗ್ಯಾಲರಿ  /  Ayodhya Ram Mandir: ಅಯೋಧ್ಯೆ ನೂತನ ರಾಮಮಂದಿರದಲ್ಲಿ ಸೋರಿಕೆ ಆತಂಕ, ತಜ್ಞರು ಹೇಳಿದ್ದೇನು Photos

Ayodhya Ram mandir: ಅಯೋಧ್ಯೆ ನೂತನ ರಾಮಮಂದಿರದಲ್ಲಿ ಸೋರಿಕೆ ಆತಂಕ, ತಜ್ಞರು ಹೇಳಿದ್ದೇನು photos

Jun 26, 2024 11:06 AM IST

ಭಾರತೀಯರ ಬಹು ವರ್ಷಗಳ ಕನಸಿನ ರಾಮಮಂದಿರ ಅಯೋಧ್ಯೆಯಲ್ಲಿ( Ayodhya Ram mandir) ನಿರ್ಮಾಣವಾದರೂ ಮೊದಲ ಮಳೆಗೆ ಅಲ್ಲಲ್ಲಿ ಸೋರಿಕೆ ಕಂಡು ಬಂದಿರುವುದು ಚರ್ಚೆಗೆ ಗ್ರಾಸವಾಗಿದೆ. 

  • ಭಾರತೀಯರ ಬಹು ವರ್ಷಗಳ ಕನಸಿನ ರಾಮಮಂದಿರ ಅಯೋಧ್ಯೆಯಲ್ಲಿ( Ayodhya Ram mandir) ನಿರ್ಮಾಣವಾದರೂ ಮೊದಲ ಮಳೆಗೆ ಅಲ್ಲಲ್ಲಿ ಸೋರಿಕೆ ಕಂಡು ಬಂದಿರುವುದು ಚರ್ಚೆಗೆ ಗ್ರಾಸವಾಗಿದೆ. 
ಶತಮಾನಗಳಷ್ಟು ಹಳೆಯದಾದ ಉತ್ತರ ಪ್ರದೇಶದ ಅಯೋಧ್ಯೆ ರಾಮಮಂದಿರಕ್ಕೆ ಈಗ ಹೊಸ ರೂಪ ನೀಡಲಾಗಿದೆ. ಅದೂ ಭವ್ಯ ಕಟ್ಟಡವೊಂದು ನಿರ್ಮಾಣವಾಗಿದೆ. 
(1 / 6)

ಸುಪ್ರೀಂಕೋರ್ಟ್‌ ನೀಡಿದ ತೀರ್ಮಾನದಂತೆ 1800 ಕೋಟಿ ರೂ. ವೆಚ್ಚ ಮಾಡಿ ಬೃಹತ್‌ ದೇಗುಲವನ್ನು ನಿರ್ಮಿಸಿ ವೈಭವದಿಂದಲೇ ಉದ್ಘಾಟನೆ ಮಾಡಲಾಗಿದೆ.
(2 / 6)

ದೇಶ ವಿದೇಶದ ವಾಸ್ತು ತಜ್ಞರು. ಎಂಜಿನಿಯರ್‌ಗಳ ತಂಡವು ಇಡೀ ಕಟ್ಟಡವನ್ನು ರೂಪಿಸಲು ವರ್ಷಗಳ ಕಾಲ ಶ್ರಮಿಸಿದೆ. ಇದರಿಂದಲೇ ವಿಶಿಷ್ಟ ದೇಗುಲ ಉದ್ಘಾಟನೆಗೊಂಡು ಜಗತ್ತಿನಲ್ಲೇ ಗಮನ ಸೆಳೆದಿದೆ.
(3 / 6)

ಆದರೆ ಇಂತಹ ರಾಮಮಂದಿರ ಅಲ್ಲಲ್ಲಿ ಸೋರುತ್ತಿರುವ ಅಂಶಗಳು ಮೊದಲ ಮಳೆಯ ವೇಳೆ ಗಮನಕ್ಕೆ ಬಂದಿದೆ. ಅದರಲ್ಲೂ ರಾಮಮಂದಿರದ ಗರ್ಭಗುಡಿಯಲ್ಲಿ ಸೋರಿಕೆ ಕಂಡು ಬಂದಿದೆ. 
(4 / 6)

ರಾಮಮಂದಿರದ ಗರ್ಭಗುಡಿಯಲ್ಲಿ ಸೋರಿಕೆ ಆಗಿ ಬಾಲರಾಮನ ವಿಗ್ರಹದ ಸುತ್ತಮುತ್ತಲೇ ನೀರು ನಿಲ್ಲುವಂತಹ ವಾತಾವರಣ ಕಂಡು ಬಂದಿದೆ. ದೇಗುಲದ ಮೇಲ್ಛಾವಣಿಯಲ್ಲಿ ನೀರು ಹರಿಯುವ ವ್ಯವಸ್ಥೆ ಸರಿಯಿಲ್ಲ ಎಂದು ಪ್ರಧಾನ ಅರ್ಚಕ ಸತ್ಯೇಂದ್ರ ದಾಸ್‌ ನೀಡಿದ ಹೇಳಿಕೆ  ವಿವಾದ ಹುಟ್ಟು ಹಾಕಿತ್ತು.
(5 / 6)

ಇದಕ್ಕೆ ಸ್ಪಷ್ಟನೆ ನೀಡಿದ ರಾಮಮಂದಿರ ನಿರ್ಮಾಣ ಸಮಿತಿ ಅಧ್ಯಕ್ಷ ನೃಪೇಂದ್ರ ಮಿಶ್ರಾ, ದೇಗುಲ ಪ್ರಧಾನ ಅರ್ಚಕರು ಹೇಳಿಕೆ ನೀಡಿದ ನಂತರ ಸ್ಥಳ ಪರಿಶೀಲಿಸಿದ್ದೇವೆ. ಛಾವಣಿಯಲ್ಲಿ ಸೋರಿಕೆ ಕಂಡು ಬಂದಿಲ್ಲ. ವಿದ್ಯುತ್‌ ತಂತಿ ಅಳವಡಿಸಲೆಂದು ಪೈಪ್‌ ಹಾಕಿದ್ದರಿಂದ ಹೀಗೆ ಆಗಿದೆ. ಎರಡನೇ ಮಹಡಿ ಕಟ್ಟಡ ನಿರ್ಮಾಣಗೊಂದರೆ ಸಮಸ್ಯೆ ಸರಿಯಾಗಬಹುದು ಎಂದು ಹೇಳಿದ್ದಾರೆ.
(6 / 6)

    ಹಂಚಿಕೊಳ್ಳಲು ಲೇಖನಗಳು