logo
ಕನ್ನಡ ಸುದ್ದಿ  /  ಫೋಟೋ ಗ್ಯಾಲರಿ  /  Asian Games: ಜಪಾನ್‌ ಮಣಿಸಿ ಚಿನ್ನ ಗೆದ್ದ ಭಾರತ ಹಾಕಿ ತಂಡ; ಪ್ಯಾರಿಸ್‌ ಒಲಿಂಪಿಕ್ಸ್‌ಗೂ ಸಿಕ್ತು ಟಿಕೆಟ್‌

Asian Games: ಜಪಾನ್‌ ಮಣಿಸಿ ಚಿನ್ನ ಗೆದ್ದ ಭಾರತ ಹಾಕಿ ತಂಡ; ಪ್ಯಾರಿಸ್‌ ಒಲಿಂಪಿಕ್ಸ್‌ಗೂ ಸಿಕ್ತು ಟಿಕೆಟ್‌

Oct 06, 2023 06:23 PM IST

India vs Japan Hockey Final: ಏಷ್ಯನ್ ಗೇಮ್ಸ್ ಪುರುಷರ ಹಾಕಿ ಪಂದ್ಯದಲ್ಲಿ ಭಾರತ ತಂಡ ಚಿನ್ನ ಗೆದ್ದಿದೆ. ಫೈನಲ್‌ ಪಂದ್ಯದಲ್ಲಿ ಜಪಾನ್ ತಂಡವನ್ನು 5-1 ಗೋಲುಗಳಿಂದ ಮಣಿಸಿದ ಭಾರತ, ಬಂಗಾರದ ಪದಕದೊಂದಿಗೆ ಪ್ಯಾರಿಸ್ ಒಲಿಂಪಿಕ್ಸ್‌ಗೆ ಅರ್ಹತೆ ಪಡೆದಿದೆ.

  • India vs Japan Hockey Final: ಏಷ್ಯನ್ ಗೇಮ್ಸ್ ಪುರುಷರ ಹಾಕಿ ಪಂದ್ಯದಲ್ಲಿ ಭಾರತ ತಂಡ ಚಿನ್ನ ಗೆದ್ದಿದೆ. ಫೈನಲ್‌ ಪಂದ್ಯದಲ್ಲಿ ಜಪಾನ್ ತಂಡವನ್ನು 5-1 ಗೋಲುಗಳಿಂದ ಮಣಿಸಿದ ಭಾರತ, ಬಂಗಾರದ ಪದಕದೊಂದಿಗೆ ಪ್ಯಾರಿಸ್ ಒಲಿಂಪಿಕ್ಸ್‌ಗೆ ಅರ್ಹತೆ ಪಡೆದಿದೆ.
ಭಾರತೀಯ ಪುರುಷರ ಹಾಕಿ ತಂಡವು ಏಷ್ಯನ್ ಗೇಮ್ಸ್‌ನಲ್ಲಿ ತಮ್ಮ ಪ್ರಾಬಲ್ಯ ಮುಂದುವರೆಸಿದೆ. ಭರ್ಜರಿ ಐದು ಗೋಲುಗಳೊಂದಿಗೆ ಫೈನಲ್‌ ಪಂದ್ಯದಲ್ಲಿ ಜಪಾನ್‌ ತಂಡವನ್ನು ಮಣಿಸಿದೆ. ಭಾರತದ ನಾಯಕ ಹರ್ಮನ್‌ಪ್ರೀತ್ ಸಿಂಗ್, ಎರಡು ಗೋಲು ಗಳಿಸಿದರು.
(1 / 10)

ಹರ್ಮನ್‌ಪ್ರೀತ್ ಸಿಂಗ್ ನೇತೃತ್ವದ ಭಾರತ ತಂಡವು  ಒಂಬತ್ತು ವರ್ಷಗಳ ನಂತರ ಏಷ್ಯನ್‌ ಗೇಮ್ಸ್‌ ಚಿನ್ನ ಗೆದ್ದಿದೆ. ಹಾಲಿ ಚಾಂಪಿಯನ್ ಜಪಾನ್‌ ತಂವನ್ನು ಭರ್ಜರಿಯಾಗಿ ಮಣಿಸಿ ಬಂಗಾರದ ಸಾಧನೆ ಮಾಡಿದೆ.
(2 / 10)

ಹರ್ಮನ್‌ಪ್ರೀತ್ ಸಿಂಗ್ 32ನೇ ಮತ್ತು 59ನೇ ನಿಮಿಷಗಳಲ್ಲಿ ಪೆನಾಲ್ಟಿ ಕಾರ್ನರ್‌ಗಳ ಮೂಲಕ ಎರಡು ಗೋಲು ಗಳಿಸಿದರು. 
(3 / 10)

ಅಮಿತ್ ರೋಹಿದಾಸ್ 36ನೇ ನಿಮಿಷದಲ್ಲಿ ಗೋಲು ಬಾರಿಸಿದರೆ, ಮನ್‌ಪ್ರೀತ್ ಸಿಂಗ್ 25ನೇ ನಿಮಿಷ ಮತ್ತು ಅಭಿಷೇಕ್ 48ನೇ ನಿಮಿಷದಲ್ಲಿ ಅಂಕ ತಂದುಕೊಟ್ಟರು.
(4 / 10)

ಜಪಾನ್‌ ಪರ 51ನೇ ನಿಮಿಷದಲ್ಲಿ ಪೆನಾಲ್ಟಿ ಕಾರ್ನರ್‌ ಅವಕಾಶವನ್ನು ಸೆರೆನ್ ತನಕಾ ಗೋಲಾಗಿ ಪರಿವರ್ತಿಸಿದರು.
(5 / 10)

ಭಾರತವು ಕೊನೆಯದಾಗಿ 2014ರಲ್ಲಿ ಇಂಚಿಯಾನ್‌ನಲ್ಲಿ ನಡೆದ ಟೂರ್ನಿಯಲ್ಲಿ ಚಿನ್ನದ ಪದಕವನ್ನು ಗೆದ್ದುಕೊಂಡಿತ್ತು.‌ ಅದಕ್ಕೂ ಹಿಂದೆ 1966 ಮತ್ತು 1998ರಲ್ಲಿ ಬಂಗಾರದ ಸಾಧನೆ ಮಾಡಿತ್ತು. 
(6 / 10)

ಇದೀಗ ಕಳೆದ ಆವೃತ್ತಿಯಲ್ಲಿ ಚಿನ್ನ ಗೆದ್ದಿದ್ದ ಜಪಾನ್‌ ಮಣಿಸಿದ ಭಾರತ, ಮುಂದಿನ ವರ್ಷ ನಡೆಯಲಿರುವ ಪ್ಯಾರಿಸ್ ಒಲಿಂಪಿಕ್ಸ್‌ಗೆ ನೇರವಾಗಿ ಅರ್ಹತೆ ಗಿಟ್ಟಿಸಿಕೊಂಡಿದೆ.
(7 / 10)

ಭಾರತವು ಈ ಹಿಂದೆ 1958, 1962, 1970, 1974, 1978, 1982, 1990, 1994, 2002ರ ಆವೃತ್ತಿಗಳಲ್ಲಿ ಬೆಳ್ಳಿ ಗೆದ್ದಿದೆ.
(8 / 10)

ಸೆಮಿಫೈನಲ್‌ನಲ್ಲಿ ಭಾರತವು ದಕ್ಷಿಣ ಕೊರಿಯಾ ವಿರುದ್ಧ 5-3 ಅಂತರದಿಂದ ಗೆಲುವು ಸಾಧಿಸಿತ್ತು.
(9 / 10)
ಸೆಮಿಫೈನಲ್‌ನಲ್ಲಿ ಭಾರತವು ದಕ್ಷಿಣ ಕೊರಿಯಾ ವಿರುದ್ಧ 5-3 ಅಂತರದಿಂದ ಗೆಲುವು ಸಾಧಿಸಿತ್ತು.
ಭಾರತವು ಇದುವರೆಗೆ 12 ಬಾರಿ ಏಷ್ಯನ್ ಗೇಮ್ಸ್‌ನಲ್ಲಿ ಫೈನಲ್‌ಗೆ ಅರ್ಹತೆ ಪಡೆದಿದೆ. ಇದು ಏಷ್ಯನ್‌ ಗೇಮ್ಸ್‌ ಇತಿಹಾಸದಲ್ಲಿಯೇ ತಂಡವೊಂದರ ಅತಿ ಹೆಚ್ಚು ಫೈನಲ್. ಇದರಲ್ಲಿ ಪಾಕಿಸ್ತಾನದ ವಿರುದ್ಧ ಏಳು ಬಾರಿ ಸೋತು, ಮೂರು ಬಾರಿ ಮಾತ್ರ ಚಿನ್ನ ಗೆದ್ದಿದೆ.
(10 / 10)

    ಹಂಚಿಕೊಳ್ಳಲು ಲೇಖನಗಳು