logo
ಕನ್ನಡ ಸುದ್ದಿ  /  ಫೋಟೋ ಗ್ಯಾಲರಿ  /  Bakrid 2024: ಈ ಪೋಸ್ಟರ್‌ಗಳ ಮೂಲಕ ನಿಮ್ಮ ಆತ್ಮೀಯರಿಗೆ ತ್ಯಾಗ, ಬಲಿದಾನದ ಹಬ್ಬ ಬಕ್ರೀದ್‌ ಶುಭಾಶಯಗಳನ್ನು ಕೋರಿ

Bakrid 2024: ಈ ಪೋಸ್ಟರ್‌ಗಳ ಮೂಲಕ ನಿಮ್ಮ ಆತ್ಮೀಯರಿಗೆ ತ್ಯಾಗ, ಬಲಿದಾನದ ಹಬ್ಬ ಬಕ್ರೀದ್‌ ಶುಭಾಶಯಗಳನ್ನು ಕೋರಿ

Jun 12, 2024 05:28 PM IST

ಭಾರತವು ಸರ್ವಧರ್ಮ ಚಿಂತನೆಯನ್ನು ಸಾರಿದ ರಾಷ್ಟ್ರ. ಆದ್ದರಿಂದ ಇಲ್ಲಿ ಎಲ್ಲಾ ಧರ್ಮಕ್ಕೂ ಪ್ರಾಮುಖ್ಯತೆ ನೀಡಲಾಗಿದೆ. ಎಲ್ಲಾ ಧರ್ಮಗಳ ಹಬ್ಬಗಳನ್ನು ಎಲ್ಲಾ ಧರ್ಮೀಯರೊಂದಿಗೆ ಬೆರೆತು ಆಚರಿಸಲಾಗುತ್ತದೆ. 

ಮುಸ್ಲಿಂರ ಪವಿತ್ರ ಹಬ್ಬಗಳಲ್ಲಿ ಬಕ್ರೀದ್‌ ಕೂಡಾ ಒಂದು. ಈ ಬಾರಿ ಜೂನ್‌ 16 ರಂದು ಬಕ್ರೀದ್‌ ಹಬ್ಬವನ್ನು ಆಚರಿಸಲಾಗುತ್ತಿದೆ. ಬಕ್ರಿದ್‌ ಆಚರಣೆಗೆ ದೇಶಾದ್ಯಂತ ಸಕಲ ಸಿದ್ದತೆ ನಡೆಯುತ್ತಿದೆ. 
(1 / 8)

ಬಕ್ರೀದ್‌ ಹಬ್ಬವನ್ನು ಭಾರತ, ಸೌದಿ ಅರೇಬಿಯಾ, ಪಾಕಿಸ್ತಾನ, ಆಫ್ಘಾನಿಸ್ತಾನ, ಇರಾಕ್‌ ಸೇರಿದಂತೆ ವಿಶ್ವದ ಅನೇಕ ದೇಶಗಳಲ್ಲಿ ಆಚರಿಸುತ್ತಾರೆ. ಇದು ತ್ಯಾಗ ಬಲಿದಾನದ ಹಬ್ಬ ಎಂದೇ ಹೆಸರಾಗಿದೆ. 
(2 / 8)

ಈದ್‌ ಉಲ್‌ ಅಧಾ ಹಬ್ಬಕ್ಕೆ ಬಕ್ರಾ ಈದ್, ಈದ್ ಕುರ್ಬಾನ್, ಕುರ್ಬಾನ್ ಬಯಾರಾಮಿ ಎಂದೂ ಕರೆಯಲಾಗುತ್ತದೆ. ಪ್ರತಿ ವರ್ಷ ಇಸ್ಲಾಮಿಕ್ ಚಂದ್ರನ ಕ್ಯಾಲೆಂಡರ್‌ನ 12ನೇ ತಿಂಗಳ ಧು ಅಲ್ ಹಿಜ್ಜಾದ 10ನೇ ದಿನ ಈ ಹಬ್ಬವನ್ನು ಆಚರಿಸಲಾಗುತ್ತದೆ. 
(3 / 8)

ಬಕ್ರೀದ್‌ ಹಬ್ಬದ ಆಚರಣೆ ಹಿಂದೆ ಒಂದು ಕಥೆ ಇದೆ. ಈ ಹಬ್ಬದ ಮಹತ್ವ ಹಾಗೂ ಇತಿಹಾಸ ಹೀಗಿದೆ. 
(4 / 8)

ಈದ್‌ ಉಲ್‌ ಅಧಾ ಸಮಯದಲ್ಲಿ ಮುಸ್ಲಿಮರು ಹಜ್‌ ಯಾತ್ರೆ ಕೈಗೊಳ್ಳುತ್ತಾರೆ. ಹಬ್ಬಕ್ಕೂ 1 ತಿಂಗಳ ಮೊದಲು ವಿಶ್ವಾದ್ಯಂತ ಮುಸ್ಲಿಂ ಬಾಂಧವರು ಪ್ರವಾದಿ ಇಬ್ರಾಹಿಂ ಹಾಗೂ ಪ್ರವಾದಿ ಇಸ್ಮಾಯಿಲ್‌ ಕಟ್ಟಿಸಿದ ಮಸೀದಿಗೆ ಭೇಟಿ ನೀಡಿ ಪ್ರಾರ್ಥನೆ ಸಲ್ಲಿಸುತ್ತಾರೆ. 
(5 / 8)

ಬಕ್ರೀದ್‌ ಹಬ್ಬದಂದು ಮುಸ್ಲಿಮರು ಹೊಸ ಬಟ್ಟೆ ಧರಿಸಿ ತಮ್ಮ ಆತ್ಮೀಯರೊಂದಿಗೆ ಸೂರ್ಯೋದಯದ ಬಳಿಕ ಮಸೀದಿ ಅಥವಾ ವಿಶಾಲ ಮೈದಾನಗಳಿಗೆ ತೆರಳಿ ಒಟ್ಟಾಗಿ ಪ್ರಾರ್ಥನೆ ಸಲ್ಲಿಸಿ ಒಬ್ಬರಿಗೊಬ್ಬರು ಹಬ್ಬದ ಶುಭಾಶಯ ಕೋರುತ್ತಾರೆ. 
(6 / 8)

ಬಕ್ರೀದ್‌ ಹಬ್ಬದ ದಿನ ಮೇಕೆ ಅಥವಾ ಕುರಿಯನ್ನು ಅಲ್ಲಾಹ್‌ಗೆ ಬಲಿ ನೀಡಿ ಅದರ ಮಾಂಸವನ್ನು 3 ಭಾಗವನ್ನಾಗಿ ಮಾಡುತ್ತಾರೆ.  ಒಂದು ಭಾಗವನ್ನು ಬಡವರಿಗೆ, ಎರಡನೇ ಭಾಗವನ್ನು ಸಂಬಂಧಿಗಳಿಗೆ ಹಂಚುತ್ತಾರೆ. ಮತ್ತೊಂದು ಭಾಗವನ್ನು ತಾವು ಮನೆಯಲ್ಲಿ ಭೋಜನ ತಯಾರಿಸಿ ಕುಟುಂಬದೊಂದಿಗೆ ಊಟ ಮಾಡುತ್ತಾರೆ. 
(7 / 8)

ಕೆಲವೊಂದು ದೇಶಗಳಲ್ಲಿ ಕುರಿ, ಮೇಕೆ ಬದಲಿಗೆ ಈದ್‌ ಉಲ್‌ ಅಧಾ ಹಬ್ಬದಂದು ಒಂಟೆಗಳನ್ನು ಬಲಿ ಕೊಡುವ ರೂಢಿ ಇದೆ. 
(8 / 8)

    ಹಂಚಿಕೊಳ್ಳಲು ಲೇಖನಗಳು