logo
ಕನ್ನಡ ಸುದ್ದಿ  /  ಫೋಟೋ ಗ್ಯಾಲರಿ  /  ಬಾಲರಾಮನ ಪ್ರಾಣ ಪ್ರತಿಷ್ಠೆಗೆ ಕ್ಷಣಗಣನೆ; ಐತಿಹಾಸಿಕ ಸಂಭ್ರಮಕ್ಕೆ ದೇಶದಾದ್ಯಂತ ದೇಗುಲಗಳಲ್ಲಿ ಭರದ ಸಿದ್ಧತೆ; ಇಲ್ಲಿದೆ ಫೋಟೊಸ್‌

ಬಾಲರಾಮನ ಪ್ರಾಣ ಪ್ರತಿಷ್ಠೆಗೆ ಕ್ಷಣಗಣನೆ; ಐತಿಹಾಸಿಕ ಸಂಭ್ರಮಕ್ಕೆ ದೇಶದಾದ್ಯಂತ ದೇಗುಲಗಳಲ್ಲಿ ಭರದ ಸಿದ್ಧತೆ; ಇಲ್ಲಿದೆ ಫೋಟೊಸ್‌

Jan 21, 2024 08:57 PM IST

ಅಯೋಧ್ಯೆಯಲ್ಲಿ ರಾಮಮಂದಿರ ಉದ್ಘಾಟನೆಯಾಗಿ ಬಾಲರಾಮನ ಪ್ರಾಣ ಪ್ರತಿಷ್ಠಾ ಕಾರ್ಯಕ್ರಮ ನಾಳೆ (ಜ.22) ನಡೆಯಲಿದೆ. ಇಡೀ ದೇಶಕ್ಕೆ ದೇಶವೇ ಸಂಭ್ರಮದಲ್ಲಿ ತೊಡಗಿದೆ. ಈ ನಡುವೆ ದೇಶದ ವಿವಿಧ ದೇವಾಲಯಗಳಲ್ಲೂ ಪೂಜೆ ಪುನಸ್ಕಾರಗಳು ನಡೆಯತ್ತಿವೆ. ದೇಶದಾದ್ಯಂತ ದೇವಾಲಯಗಳಲ್ಲಿ ನಡೆಯುತ್ತಿರುವ ಸಿದ್ಧತೆಗಳ ಫೋಟೊಗಳು ಇಲ್ಲಿವೆ. 

  • ಅಯೋಧ್ಯೆಯಲ್ಲಿ ರಾಮಮಂದಿರ ಉದ್ಘಾಟನೆಯಾಗಿ ಬಾಲರಾಮನ ಪ್ರಾಣ ಪ್ರತಿಷ್ಠಾ ಕಾರ್ಯಕ್ರಮ ನಾಳೆ (ಜ.22) ನಡೆಯಲಿದೆ. ಇಡೀ ದೇಶಕ್ಕೆ ದೇಶವೇ ಸಂಭ್ರಮದಲ್ಲಿ ತೊಡಗಿದೆ. ಈ ನಡುವೆ ದೇಶದ ವಿವಿಧ ದೇವಾಲಯಗಳಲ್ಲೂ ಪೂಜೆ ಪುನಸ್ಕಾರಗಳು ನಡೆಯತ್ತಿವೆ. ದೇಶದಾದ್ಯಂತ ದೇವಾಲಯಗಳಲ್ಲಿ ನಡೆಯುತ್ತಿರುವ ಸಿದ್ಧತೆಗಳ ಫೋಟೊಗಳು ಇಲ್ಲಿವೆ. 
ಜನವರಿ 22 ಅಂದರೆ ನಾಳೆ ಅಯೋಧ್ಯೆ ರಾಮಮಂದಿರದಲ್ಲಿ ಬಾಲರಾಮನ ಪ್ರಾಣ ಪ್ರತಿಷ್ಠೆ ಕಾರ್ಯಕ್ರಮ ನಡೆಯಲಿದೆ. ಪ್ರಧಾನಿ ನರೇಂದ್ರ ಮೋದಿ ರಾಮಮಂದಿರವನ್ನು ಲೋಕಾರ್ಪಣೆಗೊಳಿಸಲಿದ್ದಾರೆ. ಈ ಐತಿಹಾಸಿಕ ಕಾರ್ಯಕ್ರಮದಲ್ಲಿ ದೇಶ, ವಿದೇಶಗಳ ಹಲವು ಗಣ್ಯರು ಭಾಗವಹಿಸಲಿದ್ದಾರೆ. ಈ ಅದ್ಧೂರಿ ಸಮಾರಂಭಕ್ಕೆ ದೇಶದ ವಿವಿಧ ದೇವಾಲಯಗಳು ಯಾವ ರೀತಿ ತಯಾರಿ ನಡೆಸುತ್ತಿವೆ ನೋಡಿ. 
(1 / 10)
ಜನವರಿ 22 ಅಂದರೆ ನಾಳೆ ಅಯೋಧ್ಯೆ ರಾಮಮಂದಿರದಲ್ಲಿ ಬಾಲರಾಮನ ಪ್ರಾಣ ಪ್ರತಿಷ್ಠೆ ಕಾರ್ಯಕ್ರಮ ನಡೆಯಲಿದೆ. ಪ್ರಧಾನಿ ನರೇಂದ್ರ ಮೋದಿ ರಾಮಮಂದಿರವನ್ನು ಲೋಕಾರ್ಪಣೆಗೊಳಿಸಲಿದ್ದಾರೆ. ಈ ಐತಿಹಾಸಿಕ ಕಾರ್ಯಕ್ರಮದಲ್ಲಿ ದೇಶ, ವಿದೇಶಗಳ ಹಲವು ಗಣ್ಯರು ಭಾಗವಹಿಸಲಿದ್ದಾರೆ. ಈ ಅದ್ಧೂರಿ ಸಮಾರಂಭಕ್ಕೆ ದೇಶದ ವಿವಿಧ ದೇವಾಲಯಗಳು ಯಾವ ರೀತಿ ತಯಾರಿ ನಡೆಸುತ್ತಿವೆ ನೋಡಿ. (AP)
ಅಯೋಧ್ಯೆ ರಾಮಮಂದಿರ ಪ್ರತಿಷ್ಠಾಪನೆಗೆ ಲಕ್ನೋದ ಗೋಮತಿ ನಗರವು ಸಕಲ ಸಿದ್ಧತೆ ನಡೆಸಿದ್ದು, ಇಡೀ ನಗರವನ್ನು ವರ್ಣರಂಜಿತ ದೀಪಗಳಿಂದ ಅಲಂಕರಿಸಲಾಗಿದೆ. ಏರಿಯಲ್‌ ವ್ಯೂವ್‌ನಲ್ಲಿ ಈ ನಗರದ ಅಂದ ಕಾಣಿಸಿದ್ದು ಹೀಗೆ 
(2 / 10)
ಅಯೋಧ್ಯೆ ರಾಮಮಂದಿರ ಪ್ರತಿಷ್ಠಾಪನೆಗೆ ಲಕ್ನೋದ ಗೋಮತಿ ನಗರವು ಸಕಲ ಸಿದ್ಧತೆ ನಡೆಸಿದ್ದು, ಇಡೀ ನಗರವನ್ನು ವರ್ಣರಂಜಿತ ದೀಪಗಳಿಂದ ಅಲಂಕರಿಸಲಾಗಿದೆ. ಏರಿಯಲ್‌ ವ್ಯೂವ್‌ನಲ್ಲಿ ಈ ನಗರದ ಅಂದ ಕಾಣಿಸಿದ್ದು ಹೀಗೆ (HT Photo/Deepak Gupta)
ಅಯೋಧ್ಯೆಯಲ್ಲಿರುವ ಹನುಮಾನ್‌ ಗರ್ಹಿ ದೇಗುಲದಲ್ಲಿ ಶನಿವಾರ ಕಂಡು ಬಂದ ಭಕ್ತರ ದಂಡು. ಹುನುಮಾನ್‌ ಗರ್ಹಿ ಅಯೋಧ್ಯೆಯಲ್ಲಿರುವ ಪ್ರಮುಖ ದೇವಾಲಯಗಳಲ್ಲಿ ಒಂದು.  
(3 / 10)
ಅಯೋಧ್ಯೆಯಲ್ಲಿರುವ ಹನುಮಾನ್‌ ಗರ್ಹಿ ದೇಗುಲದಲ್ಲಿ ಶನಿವಾರ ಕಂಡು ಬಂದ ಭಕ್ತರ ದಂಡು. ಹುನುಮಾನ್‌ ಗರ್ಹಿ ಅಯೋಧ್ಯೆಯಲ್ಲಿರುವ ಪ್ರಮುಖ ದೇವಾಲಯಗಳಲ್ಲಿ ಒಂದು.  (ANI)
ಅಯೋಧ್ಯೆಯ ಶ್ರೀ ರಾಮ ಜನ್ಮಭೂಮಿ ದೇಗುಲದ ಪ್ರತಿಷ್ಠಾಪನಾ ಸಮಾರಂಭಕ್ಕೂ ಮುನ್ನ ವಿಎಚ್‌ಪಿ ಕಾರ್ಯಕರ್ತರು ಶನಿವಾರ ಪ್ರಯಾಗ್‌ರಾಜ್‌ನಲ್ಲಿ ಶ್ರೀರಾಮ ಯಾತ್ರೆ ಕೈಗೊಂಡರು. 
(4 / 10)
ಅಯೋಧ್ಯೆಯ ಶ್ರೀ ರಾಮ ಜನ್ಮಭೂಮಿ ದೇಗುಲದ ಪ್ರತಿಷ್ಠಾಪನಾ ಸಮಾರಂಭಕ್ಕೂ ಮುನ್ನ ವಿಎಚ್‌ಪಿ ಕಾರ್ಯಕರ್ತರು ಶನಿವಾರ ಪ್ರಯಾಗ್‌ರಾಜ್‌ನಲ್ಲಿ ಶ್ರೀರಾಮ ಯಾತ್ರೆ ಕೈಗೊಂಡರು. (ANI)
ಅಯೋಧ್ಯೆ ರಾಮಮಂದಿರ ಉದ್ಘಾಟನೆ ಪ್ರಯುಕ್ತ ಕುಲುವಿನಲ್ಲಿರುವ ರಾಮಭಕ್ತರು ಮೆರವಣಿಗೆ ನಡೆಸಿದರು. 
(5 / 10)
ಅಯೋಧ್ಯೆ ರಾಮಮಂದಿರ ಉದ್ಘಾಟನೆ ಪ್ರಯುಕ್ತ ಕುಲುವಿನಲ್ಲಿರುವ ರಾಮಭಕ್ತರು ಮೆರವಣಿಗೆ ನಡೆಸಿದರು. (ANI)
ರಾಮನ ದೇಗುಲ ಹಾಗೂ ರಾಮನ ಪ್ರತಿಮೆಯನ್ನು ಅಲಂಕರಿಸಿರುವ ದೃಶ್ಯವು ಮುಂಬೈನಲ್ಲಿ ಕಂಡುಬಂದಿದೆ. ರಸ್ತೆಯಲ್ಲಿ ದೇಗುಲದ ಬೆಳಕಿನ ಅಂದ ಕಂಡಿದ್ದು ಹೀಗೆ 
(6 / 10)
ರಾಮನ ದೇಗುಲ ಹಾಗೂ ರಾಮನ ಪ್ರತಿಮೆಯನ್ನು ಅಲಂಕರಿಸಿರುವ ದೃಶ್ಯವು ಮುಂಬೈನಲ್ಲಿ ಕಂಡುಬಂದಿದೆ. ರಸ್ತೆಯಲ್ಲಿ ದೇಗುಲದ ಬೆಳಕಿನ ಅಂದ ಕಂಡಿದ್ದು ಹೀಗೆ (REUTERS)
ಬಾಲರಾಮನ ಪ್ರಾಣ ಪ್ರತಿಷ್ಠೆಯ ಸಲುವಾಗಿ ನವದೆಹಲಿಯ ಜನಪಥ್‌ ಮಾರುಕಟ್ಟೆಯನ್ನು ಕೇಸರಿ ಧ್ವಜಗಳಿಂದ ಅಲಂಕರಿಸಲಾಗಿದೆ. 
(7 / 10)
ಬಾಲರಾಮನ ಪ್ರಾಣ ಪ್ರತಿಷ್ಠೆಯ ಸಲುವಾಗಿ ನವದೆಹಲಿಯ ಜನಪಥ್‌ ಮಾರುಕಟ್ಟೆಯನ್ನು ಕೇಸರಿ ಧ್ವಜಗಳಿಂದ ಅಲಂಕರಿಸಲಾಗಿದೆ. (HT Photo/Raj K Raj)
ನೋಯ್ಡಾದ ಇಸ್ಕಾನ್‌ ದೇವಾಲಯದಲ್ಲಿ ಅಲಂಕಾರಕ್ಕಾಗಿ ಹೂವಿನ ಹಾರಗಳನ್ನು ಸಿದ್ಧಪಡಿಸಲಾಗುತ್ತಿದೆ. 
(8 / 10)
ನೋಯ್ಡಾದ ಇಸ್ಕಾನ್‌ ದೇವಾಲಯದಲ್ಲಿ ಅಲಂಕಾರಕ್ಕಾಗಿ ಹೂವಿನ ಹಾರಗಳನ್ನು ಸಿದ್ಧಪಡಿಸಲಾಗುತ್ತಿದೆ. (HT Photo/Sunil Ghosh)
ಅಯೋಧ್ಯೆಯಲ್ಲಿ ರಸ್ತೆಯ ಇಕ್ಕೆಲಗಳನ್ನು ಹೂವಿನ ಮಾಲೆಗಳಿಂದ ಸಿಂಗರಿಸಲಾಗುತ್ತಿದೆ. 
(9 / 10)
ಅಯೋಧ್ಯೆಯಲ್ಲಿ ರಸ್ತೆಯ ಇಕ್ಕೆಲಗಳನ್ನು ಹೂವಿನ ಮಾಲೆಗಳಿಂದ ಸಿಂಗರಿಸಲಾಗುತ್ತಿದೆ. (AP)
ಅಯೋಧ್ಯೆ ರಾಮಮಂದಿರ ಲೋಕಾರ್ಪಣೆ, ಕ್ಷಣ ಕ್ಷಣದ ತಾಜಾ ಮಾಹಿತಿಗೆ kannada.hindustantimes.com ನೋಡಿ 
(10 / 10)
ಅಯೋಧ್ಯೆ ರಾಮಮಂದಿರ ಲೋಕಾರ್ಪಣೆ, ಕ್ಷಣ ಕ್ಷಣದ ತಾಜಾ ಮಾಹಿತಿಗೆ kannada.hindustantimes.com ನೋಡಿ 

    ಹಂಚಿಕೊಳ್ಳಲು ಲೇಖನಗಳು