logo
ಕನ್ನಡ ಸುದ್ದಿ  /  ಫೋಟೋ ಗ್ಯಾಲರಿ  /  ವಿದೇಶಿಗರನ್ನ ಹಿಂದಿಕ್ಕಿದ ಭಾರತೀಯ ಆಟಗಾರರು; ಐಪಿಎಲ್ 2025 ಹರಾಜಿನಲ್ಲಿ ಅತಿ ಹೆಚ್ಚು ಮೊತ್ತಕ್ಕೆ ಬಿಕರಿಯಾದ ಟಾಪ್ 5 ಕ್ರಿಕೆಟರ್ಸ್ ಫೋಟೊಸ್

ವಿದೇಶಿಗರನ್ನ ಹಿಂದಿಕ್ಕಿದ ಭಾರತೀಯ ಆಟಗಾರರು; ಐಪಿಎಲ್ 2025 ಹರಾಜಿನಲ್ಲಿ ಅತಿ ಹೆಚ್ಚು ಮೊತ್ತಕ್ಕೆ ಬಿಕರಿಯಾದ ಟಾಪ್ 5 ಕ್ರಿಕೆಟರ್ಸ್ ಫೋಟೊಸ್

Nov 26, 2024 04:50 PM IST

ಹಿಂದಿನ ಐಪಿಎಲ್ ಹರಾಜಿನ ದಾಖಲೆಯನ್ನು ಭಾರತೀಯ ಕ್ರಿಕೆಟರ್ ಗಳು ಬ್ರೇಕ್ ಮಾಡಿದ್ದಾರೆ. 2024ರ ಹರಾಜಿನಲ್ಲಿ ಆಸ್ಟ್ರೇಲಿಯಾದ ವೇಗಿ ಮಿಚೆಲ್ ಸ್ಟಾರ್ಕ್ 24.75 ಕೋಟಿ ರೂಪಾಯಿಗೆ ಕೆಕೆಆರ್ ಖರೀಸಿತ್ತು. ಆಸೀಸ್ ನ ಮತ್ತೊಬ್ಬ ವೇಗಿ ಪ್ಯಾಟ್ ಕಮ್ಮಿನ್ಸ್ ಗೆ 20.5 ಕೋಟಿ ರೂಪಾಯಿ ನೀಡಲಾಗಿತ್ತು. ಆದರೆ 2025ರ ಹರಾಜಿನಲ್ಲಿ ಭಾರತೀಯ ಆಟಗಾರರು ಇವರ ದಾಖಲೆಯನ್ನು ಮುರಿದಿದ್ದಾರೆ.

  • ಹಿಂದಿನ ಐಪಿಎಲ್ ಹರಾಜಿನ ದಾಖಲೆಯನ್ನು ಭಾರತೀಯ ಕ್ರಿಕೆಟರ್ ಗಳು ಬ್ರೇಕ್ ಮಾಡಿದ್ದಾರೆ. 2024ರ ಹರಾಜಿನಲ್ಲಿ ಆಸ್ಟ್ರೇಲಿಯಾದ ವೇಗಿ ಮಿಚೆಲ್ ಸ್ಟಾರ್ಕ್ 24.75 ಕೋಟಿ ರೂಪಾಯಿಗೆ ಕೆಕೆಆರ್ ಖರೀಸಿತ್ತು. ಆಸೀಸ್ ನ ಮತ್ತೊಬ್ಬ ವೇಗಿ ಪ್ಯಾಟ್ ಕಮ್ಮಿನ್ಸ್ ಗೆ 20.5 ಕೋಟಿ ರೂಪಾಯಿ ನೀಡಲಾಗಿತ್ತು. ಆದರೆ 2025ರ ಹರಾಜಿನಲ್ಲಿ ಭಾರತೀಯ ಆಟಗಾರರು ಇವರ ದಾಖಲೆಯನ್ನು ಮುರಿದಿದ್ದಾರೆ.
2025ರ ಐಪಿಎಲ್ ಹರಾಜಿನಲ್ಲಿ ಅತಿ ಹೆಚ್ಚು ಮೊತ್ತವನ್ನು ಪಡೆದ ಐದು ಆಟಗಾರರು ಭಾರತದವರು ಎಂಬುದು ವಿಶೇಷ. 2024ರ ಐಪಿಎಲ್ ಹರಾಜಿನಲ್ಲಿ ವಿದೇಶಿ ಆಟಗಾರರು ಅತಿ ಹೆಚ್ಚು ಮೊತ್ತಕ್ಕೆ ಬಿಕರಿಯಾಗಿದ್ದರು. ಈ ಬಾರಿ ಭಾರತೀಯ ಆಟಗಾರರು ಕಮಾಲ್ ಮಾಡಿದ್ದಾರೆ. ಆ ಟಾಪ್ ಐವರು ಆಟಗಾರರು ಮತ್ತು ಪಡೆದಿರುವ ಮೊತ್ತದ ವಿವರ ಇಲ್ಲಿದೆ.
(1 / 9)

ಸ್ಪಿನ್ ಖ್ಯಾತಿಯ ಯುಜ್ವೇಂದ್ರ ಚಾಹಲ್ 2025ರ ಹರಾಜಿನಲ್ಲಿ ಬರೋಬ್ಬರಿ 18 ಕೋಟಿ ರೂಪಾಯಿಗೆ ಪಂಜಾಬ್ ಪಾಲಾಗಿದ್ದಾರೆ. ಆ ಮೂಲಕ ಇವರ ಈ ವರ್ಷದ ಹರಾಜಿನಲ್ಲಿ ಅತಿ ಹೆಚ್ಚು ಮೊತ್ತವನ್ನು ಪಡೆದ ಆಟಗಾರರ ಪಟ್ಟಿಯಲ್ಲಿ 4ನೇ ಸ್ಥಾನದಲ್ಲಿದ್ದಾರೆ.
(2 / 9)

2025ರ ಐಪಿಎಲ್ ಹರಾಜಿನಲ್ಲಿ ತಂಡವೊಂದಕ್ಕೆ ಬಿಕರಿಯಾದ ಮೊದಲ ಆಟಗಾರ ಅರ್ಷದೀಪ್ ಸಿಂಗ್. ಇವರನ್ನು ಪಂಜಾಬ್ 18 ಕೋಟಿ ರೂಪಾಯಿಗೆ ಖರೀದಿ ಮಾಡಿದೆ. ಅತಿ ಹೆಚ್ಚು ಮೊತ್ತ ಪಡೆದ ಈ ಸಾಲಿನ ಆಟಗಾರರ ಪಟ್ಟಿಯಲ್ಲಿ 5ನೇ ಸ್ಥಾನದಲ್ಲಿದ್ದಾರೆ.
(3 / 9)

ವೆಂಕಟೇಶ್ ಅಯ್ಯರ್ ಅವರನ್ನು ಕೋಲ್ಕತ್ತ ನೈಟ್ ರೈಡರ್ಸ್ ತಂಡ 23.75 ಕೋಟಿ ರೂಪಾಯಿಗೆ ಖರೀದಿ ಮಾಡಿದೆ. ಅತಿ ಹೆಚ್ಚು ಮೊತ್ತ ಪಡೆದ ಆಟಗಾರರ ಪಟ್ಟಿಯಲ್ಲಿ 3ನೇ ಸ್ಥಾನದಲ್ಲಿದ್ದಾರೆ. 
(4 / 9)

ಟೀಂ ಇಂಡಿಯಾದ ಮೊತ್ತಬ್ಬ ಆಟಗಾರ ಶ್ರೇಯಸ್ ಅಯ್ಯರ್ 26.75 ಕೋಟಿ ರೂಪಾಯಿಗೆ ಪಂಜಾಬ್ ಪಾಲಾಗಿದ್ದಾರೆ. 2025ನೇ ಸಾಲಿನ ಐಪಿಎಲ್ ಹರಾಜಿನಲ್ಲಿ ಅತಿ ಹೆಚ್ಚು ಮೊತ್ತಕ್ಕೆ ಬಿಕರಿಯಾದ ಅಗ್ರ ಆಟಗಾರರ ಪಟ್ಟಿಯಲ್ಲಿ 2ನೇ ಸ್ಥಾನದಲ್ಲಿದ್ದಾರೆ.
(5 / 9)

ರಿಷಭ್ ಪಂತ್ ಐಪಿಎಲ್ ಕ್ರಿಕೆಟ್ ಟೂರ್ನಿಯಲ್ಲಿ ಹೊಸ ದಾಖಲೆಯನ್ನು ಬರೆದಿದ್ದಾರೆ. ಪಂತ್ ಅವರನ್ನು ಲಕ್ನೋ ಸೂಪರ್ ಜೈಂಟ್ಸ್ ಬರೋಬ್ಬರಿ 27 ಕೋಟಿ ರೂಪಾಯಿಗೆ ಖರೀದಿ ಮಾಡಿದೆ. ಆ ಮೂಲಕ ಇವರು ಐಪಿಎಲ್ ಇತಿಹಾಸದಲ್ಲಿ ಅತಿ ಹೆಚ್ಚು ಮೊತ್ತಕ್ಕೆ ಮಾರಾಟವಾಗಿರುವ ಆಟಗಾರ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದ್ದಾರೆ. 
(6 / 9)

ಇಂಗ್ಲೆಂಡ್ ತಂಡದ ಆಟಗಾರ ಜೋಸ್ ಬಟ್ಲರ್ ಅವರನ್ನು 15.75 ಕೋಟಿ ರೂಪಾಯಿ ಗುಜರಾತ್ ಟೈಟಾನ್ ಖರೀದಿ ಮಾಡಿದೆ. ಅತಿ ಹೆಚ್ಚು ಮೂತ್ತ ಪಡೆದ ಆಟಗಾರರ ಪಟ್ಟಿಯಲ್ಲಿ 6ನೇ ಸ್ಥಾನದಲ್ಲಿದ್ದಾರೆ.
(7 / 9)
ಇಂಗ್ಲೆಂಡ್ ತಂಡದ ಆಟಗಾರ ಜೋಸ್ ಬಟ್ಲರ್ ಅವರನ್ನು 15.75 ಕೋಟಿ ರೂಪಾಯಿ ಗುಜರಾತ್ ಟೈಟಾನ್ ಖರೀದಿ ಮಾಡಿದೆ. ಅತಿ ಹೆಚ್ಚು ಮೂತ್ತ ಪಡೆದ ಆಟಗಾರರ ಪಟ್ಟಿಯಲ್ಲಿ 6ನೇ ಸ್ಥಾನದಲ್ಲಿದ್ದಾರೆ.(AFP)
ಕನ್ನಡಿಗ ಕೆಎಲ್ ರಾಹುಲ್ ಅವರನ್ನು ರಾಯಲ್ ಚಾಲೆಂಜರ್ಸ್ ಬೆಂಗಳೂರು ಖರೀದಿ ಮಾಡುತ್ತೆ ಎಂಬ ನಿರೀಕ್ಷೆ ಇತ್ತು. ಆದರೆ ಆ ನಿರೀಕ್ಷೆ ಸುಳ್ಳಾಯಿತು. ಕೆಎಲ್ ರಾಹುಲ್ ಅವರನ್ನು ಡೆಲ್ಲಿ ಕ್ಯಾಪಿಟಲ್ಸ್ 14 ಕೋಟಿ ರೂಪಾಯಿಗೆ ಐಪಿಎಲ್ ಹರಾಜಿನಲ್ಲಿ ಖರೀದಿ ಮಾಡಿದೆ. ಅತಿ ಹೆಚ್ಚು ಮೊತ್ತ ಪಡೆದ ಆಟಗಾರರ ಪಟ್ಟಿಯಲ್ಲಿ ರಾಹುಲ್ 7ನೇ ಸ್ಥಾನದಲ್ಲಿದ್ದಾರೆ.
(8 / 9)
ಕನ್ನಡಿಗ ಕೆಎಲ್ ರಾಹುಲ್ ಅವರನ್ನು ರಾಯಲ್ ಚಾಲೆಂಜರ್ಸ್ ಬೆಂಗಳೂರು ಖರೀದಿ ಮಾಡುತ್ತೆ ಎಂಬ ನಿರೀಕ್ಷೆ ಇತ್ತು. ಆದರೆ ಆ ನಿರೀಕ್ಷೆ ಸುಳ್ಳಾಯಿತು. ಕೆಎಲ್ ರಾಹುಲ್ ಅವರನ್ನು ಡೆಲ್ಲಿ ಕ್ಯಾಪಿಟಲ್ಸ್ 14 ಕೋಟಿ ರೂಪಾಯಿಗೆ ಐಪಿಎಲ್ ಹರಾಜಿನಲ್ಲಿ ಖರೀದಿ ಮಾಡಿದೆ. ಅತಿ ಹೆಚ್ಚು ಮೊತ್ತ ಪಡೆದ ಆಟಗಾರರ ಪಟ್ಟಿಯಲ್ಲಿ ರಾಹುಲ್ 7ನೇ ಸ್ಥಾನದಲ್ಲಿದ್ದಾರೆ.(PTI)
ಟ್ರೆಂಟ್ ಬೋಲ್ಟ್ 12.5 ಕೋಟಿ ರೂಪಾಯಿಗೆ ಮುಂಬೈ ಇಂಡಿಯ್ಸ್ ಪಾಲಾಗಿದ್ದಾರೆ. ಅದೇ ರೀತಿಯಾಗಿ ಜೋಫ್ರಾ ಆರ್ಚರ್ 12.5 ಕೋಟಿಗೆ ರಾಜಸ್ಥಾನ ರಾಯಲ್ಸ್, ಜೋಶ್ ಹೇಜಲ್ ವುಡ್ 12.50 ಕೋಟಿ ರೂಪಾಯಿಗೆ ರಾಯಲ್ ಚಾಲೆಂಜರ್ಸ್ ಬೆಂಗಳೂರು ಪಾಲಾಗಿದ್ದಾರೆ. ಅತಿ ಹೆಚ್ಚು ಮೊತ್ತ ಪಡೆದ ಆಟಗಾರರ ಪಟ್ಟಿಯಲ್ಲಿ ಈ ಮೂವರು ಆಟಗಾರರು 8,9 ಹಾಗೂ 10 ನೇ ಸ್ಥಾನದಲ್ಲಿದ್ದಾರೆ
(9 / 9)

    ಹಂಚಿಕೊಳ್ಳಲು ಲೇಖನಗಳು