logo
ಕನ್ನಡ ಸುದ್ದಿ  /  ಫೋಟೋ ಗ್ಯಾಲರಿ  /  Asian Games: ಚೈನೀಸ್‌ ತೈಪೆ ವಿರುದ್ಧ 26-25 ಅಂತರದ ರೋಚಕ ಜಯ; ಭಾರತ ಮಹಿಳಾ ಕಬಡ್ಡಿ ತಂಡಕ್ಕೆ ಚಿನ್ನ

Asian Games: ಚೈನೀಸ್‌ ತೈಪೆ ವಿರುದ್ಧ 26-25 ಅಂತರದ ರೋಚಕ ಜಯ; ಭಾರತ ಮಹಿಳಾ ಕಬಡ್ಡಿ ತಂಡಕ್ಕೆ ಚಿನ್ನ

Oct 07, 2023 12:26 PM IST

Asian Games Kabaddi: ಕಬಡ್ಡಿಯಲ್ಲಿ ಬಲಿಷ್ಠವಾಗಿರುವ ಭಾರತವು, ಏಷ್ಯನ್‌ ಗೇಮ್ಸ್‌ನಲ್ಲಿ ತನ್ನ ಪ್ರಾಬಲ್ಯ ಮುಂದುವರೆಸಿದೆ. ವನಿತೆಯರ ಕಬಡ್ಡಿ ತಂಡವು ಚಿನ್ನದ ಪದಕಕ್ಕೆ ಮುತ್ತಿಟ್ಟಿದೆ. ಫೈನಲ್‌ ಪಂದ್ಯದಲ್ಲಿ ಚೈನೀಸ್ ತೈಪೆ ವಿರುದ್ಧ ರೋಚಕ ಹಣಾಹಣಿಯ ಬಳಿಕ 26-25 ಅಂತರದಿಂದ ಗೆದ್ದ ಭಾರತವು, ಒಂದು ಅಂಕ ಅಂತರದಿಂದ ಗೆದ್ದು ಬಂಗಾರ ತನ್ನದಾಗಿಸಿಕೊಂಡಿತು.

  • Asian Games Kabaddi: ಕಬಡ್ಡಿಯಲ್ಲಿ ಬಲಿಷ್ಠವಾಗಿರುವ ಭಾರತವು, ಏಷ್ಯನ್‌ ಗೇಮ್ಸ್‌ನಲ್ಲಿ ತನ್ನ ಪ್ರಾಬಲ್ಯ ಮುಂದುವರೆಸಿದೆ. ವನಿತೆಯರ ಕಬಡ್ಡಿ ತಂಡವು ಚಿನ್ನದ ಪದಕಕ್ಕೆ ಮುತ್ತಿಟ್ಟಿದೆ. ಫೈನಲ್‌ ಪಂದ್ಯದಲ್ಲಿ ಚೈನೀಸ್ ತೈಪೆ ವಿರುದ್ಧ ರೋಚಕ ಹಣಾಹಣಿಯ ಬಳಿಕ 26-25 ಅಂತರದಿಂದ ಗೆದ್ದ ಭಾರತವು, ಒಂದು ಅಂಕ ಅಂತರದಿಂದ ಗೆದ್ದು ಬಂಗಾರ ತನ್ನದಾಗಿಸಿಕೊಂಡಿತು.
ಭಾರತ ಮಹಿಳಾ ಕಬಡ್ಡಿ ತಂಡವು ಫೈನಲ್‌ನಲ್ಲಿ ಚೈನೀಸ್ ತೈಪೆಯನ್ನು 26-25 ಅಂಕಗಳಿಂದ ಸೋಲಿಸಿ ಚಿನ್ನ ಗೆದ್ದುಕೊಂಡಿತು. ಒಂದು ಹಂತದಲ್ಲಿ ಭಾರತವು ಸೋಲುವ ಭೀತಿಯಲ್ಲಿತ್ತು. ಉಭಯ ತಂಡಗಳು ಕೂಡಾ ಒತ್ತಡದಲ್ಲಿದ್ದವು. ಅಂತಿಮವಾಗಿ ಭಾರತ ಮಹಿಳಾ ತಂಡ ಗೆದ್ದು ಬೀಗಿತು.
(1 / 8)
ಭಾರತ ಮಹಿಳಾ ಕಬಡ್ಡಿ ತಂಡವು ಫೈನಲ್‌ನಲ್ಲಿ ಚೈನೀಸ್ ತೈಪೆಯನ್ನು 26-25 ಅಂಕಗಳಿಂದ ಸೋಲಿಸಿ ಚಿನ್ನ ಗೆದ್ದುಕೊಂಡಿತು. ಒಂದು ಹಂತದಲ್ಲಿ ಭಾರತವು ಸೋಲುವ ಭೀತಿಯಲ್ಲಿತ್ತು. ಉಭಯ ತಂಡಗಳು ಕೂಡಾ ಒತ್ತಡದಲ್ಲಿದ್ದವು. ಅಂತಿಮವಾಗಿ ಭಾರತ ಮಹಿಳಾ ತಂಡ ಗೆದ್ದು ಬೀಗಿತು.(PTI)
ಭಾರತವು ಚೈನೀಸ್ ತೈಪೆಯನ್ನು ಸೋಲಿಸಿ ಚಿನ್ನ ಗೆದ್ದಿತು. ಈ ಚಿನ್ನ ಭಾರತದ ಪಾಲಿಗೆ ತುಂಬಾ ವಿಶೇಷ. ಈ ಬಾರಿಯ ಏಷ್ಯನ್‌ ಗೇಮ್ಸ್‌ನಲ್ಲಿ ಭಾರತ 100ನೇ ಪದಕವಾಗಿ ಚಿನ್ನ ಗೆದ್ದುಕೊಂಡಿತು.
(2 / 8)
ಭಾರತವು ಚೈನೀಸ್ ತೈಪೆಯನ್ನು ಸೋಲಿಸಿ ಚಿನ್ನ ಗೆದ್ದಿತು. ಈ ಚಿನ್ನ ಭಾರತದ ಪಾಲಿಗೆ ತುಂಬಾ ವಿಶೇಷ. ಈ ಬಾರಿಯ ಏಷ್ಯನ್‌ ಗೇಮ್ಸ್‌ನಲ್ಲಿ ಭಾರತ 100ನೇ ಪದಕವಾಗಿ ಚಿನ್ನ ಗೆದ್ದುಕೊಂಡಿತು.(PTI)
ಉಭಯ ತಂಡಗಳ ನಡುವೆ ಗ್ರೂಪ್ ಲೀಗ್ ಹಂತದ ಪಂದ್ಯವು  34-34 ಅಂಕಗಳಿಂದ ಸಮಬಲಗೊಂಡಿತ್ತು. ಹೀಗಾಗಿ ಫೈನಲ್ ಪಂದ್ಯವು ರೋಚಕವಾಗಿರಲಿದೆ ಎಂಬ ನಿರೀಕ್ಷೆ ಇದ್ದವು. ಅದರಂತೆಯೇ ಭಾರತವು ಒಂದು ಅಂಕದಿಂದ ಗೆದ್ದಿದೆ.
(3 / 8)
ಉಭಯ ತಂಡಗಳ ನಡುವೆ ಗ್ರೂಪ್ ಲೀಗ್ ಹಂತದ ಪಂದ್ಯವು  34-34 ಅಂಕಗಳಿಂದ ಸಮಬಲಗೊಂಡಿತ್ತು. ಹೀಗಾಗಿ ಫೈನಲ್ ಪಂದ್ಯವು ರೋಚಕವಾಗಿರಲಿದೆ ಎಂಬ ನಿರೀಕ್ಷೆ ಇದ್ದವು. ಅದರಂತೆಯೇ ಭಾರತವು ಒಂದು ಅಂಕದಿಂದ ಗೆದ್ದಿದೆ.(PTI)
ಅಂತಿಮ ಕ್ಷಣಗಳಲ್ಲಿ ಪಂದ್ಯವು ರಣರೋಚಕವಾಗಿತ್ತು. 22-22, 23-23 ಮತ್ತು ನಂತರ 24-24ರಲ್ಲಿ ಸಮಬಲ ಸಾಧಿಸುತ್ತಾ ಹೋದವು. ಕೊನೆಗೂ ಭಾರತ ಒಂದು ಅಂಕದ ಮುನ್ನಡೆ ಸಾಧಿಸಿ ಸಂಭ್ರಮಾಚರಣೆ ಆರಂಭಿಸಿತು.
(4 / 8)
ಅಂತಿಮ ಕ್ಷಣಗಳಲ್ಲಿ ಪಂದ್ಯವು ರಣರೋಚಕವಾಗಿತ್ತು. 22-22, 23-23 ಮತ್ತು ನಂತರ 24-24ರಲ್ಲಿ ಸಮಬಲ ಸಾಧಿಸುತ್ತಾ ಹೋದವು. ಕೊನೆಗೂ ಭಾರತ ಒಂದು ಅಂಕದ ಮುನ್ನಡೆ ಸಾಧಿಸಿ ಸಂಭ್ರಮಾಚರಣೆ ಆರಂಭಿಸಿತು.(PTI)
India vs Chinese Taipei: 2010ರಲ್ಲಿ ಏಷ್ಯನ್ ಗೇಮ್ಸ್‌ನಲ್ಲಿ ಮಹಿಳಾ ಕಬಡ್ಡಿಯನ್ನು ಪರಿಚಯಿಸಲಾಗಿತ್ತು. ಅದಾದ ಬಳಿಕ ಕ್ರೀಡಾಕೂಟದಲ್ಲಿ ಇದು ಭಾರತಕ್ಕೆ ಮೂರನೇ ಚಿನ್ನವಾಗಿದೆ.
(5 / 8)
India vs Chinese Taipei: 2010ರಲ್ಲಿ ಏಷ್ಯನ್ ಗೇಮ್ಸ್‌ನಲ್ಲಿ ಮಹಿಳಾ ಕಬಡ್ಡಿಯನ್ನು ಪರಿಚಯಿಸಲಾಗಿತ್ತು. ಅದಾದ ಬಳಿಕ ಕ್ರೀಡಾಕೂಟದಲ್ಲಿ ಇದು ಭಾರತಕ್ಕೆ ಮೂರನೇ ಚಿನ್ನವಾಗಿದೆ.(PTI)
ಭಾರತವು 2010 ಮತ್ತು 2014 ಆವೃತ್ತಿಗಳಲ್ಲಿ ಚಿನ್ನ ಗೆದ್ದುಕೊಂಡಿತ್ತು. ಆದರೆ ಕಳೆದ ಬಾರಿ 2018ರಲ್ಲಿ ನಡೆದ ಟೂರ್ನಿಯಲ್ಲಿ ಇರಾನ್ ವಿರುದ್ಧ ಫೈನಲ್‌ನಲ್ಲಿ ಸೋತು ಬೆಳ್ಳಿಗೆ ತೃಪ್ತಿಪಟ್ಟಿತು. ಇದೀಗ ಮತ್ತೆ ತನ್ನ ಹಳೆ ಖದರ್‌ ತೋರಿಸಿದೆ.
(6 / 8)
ಭಾರತವು 2010 ಮತ್ತು 2014 ಆವೃತ್ತಿಗಳಲ್ಲಿ ಚಿನ್ನ ಗೆದ್ದುಕೊಂಡಿತ್ತು. ಆದರೆ ಕಳೆದ ಬಾರಿ 2018ರಲ್ಲಿ ನಡೆದ ಟೂರ್ನಿಯಲ್ಲಿ ಇರಾನ್ ವಿರುದ್ಧ ಫೈನಲ್‌ನಲ್ಲಿ ಸೋತು ಬೆಳ್ಳಿಗೆ ತೃಪ್ತಿಪಟ್ಟಿತು. ಇದೀಗ ಮತ್ತೆ ತನ್ನ ಹಳೆ ಖದರ್‌ ತೋರಿಸಿದೆ.(PTI)
ಕಬಡ್ಡಿಯಲ್ಲಿ ಚಿನ್ನ ಗೆದ್ದ ಬಳಿಕ ಒಟ್ಟು ನೂರು ಪದಕಗಳೊಂದಿಗೆ ಭಾರತವು ಪದಕಗಳ ಪಟ್ಟಿಯಲ್ಲಿ ನಾಲ್ಕನೇ ಸ್ಥಾನದಲ್ಲಿದೆ. ಉಜ್ಬೇಕಿಸ್ತಾನ್ ಐದನೇ ಸ್ಥಾನದಲ್ಲಿದೆ. ಚೀನಾ, ಜಪಾನ್ ಮತ್ತು ದಕ್ಷಿಣ ಕೊರಿಯಾ ಕ್ರಮವಾಗಿ ಮೊದಲ ಮೂರು ಸ್ಥಾನ ಪಡೆದಿವೆ.
(7 / 8)
ಕಬಡ್ಡಿಯಲ್ಲಿ ಚಿನ್ನ ಗೆದ್ದ ಬಳಿಕ ಒಟ್ಟು ನೂರು ಪದಕಗಳೊಂದಿಗೆ ಭಾರತವು ಪದಕಗಳ ಪಟ್ಟಿಯಲ್ಲಿ ನಾಲ್ಕನೇ ಸ್ಥಾನದಲ್ಲಿದೆ. ಉಜ್ಬೇಕಿಸ್ತಾನ್ ಐದನೇ ಸ್ಥಾನದಲ್ಲಿದೆ. ಚೀನಾ, ಜಪಾನ್ ಮತ್ತು ದಕ್ಷಿಣ ಕೊರಿಯಾ ಕ್ರಮವಾಗಿ ಮೊದಲ ಮೂರು ಸ್ಥಾನ ಪಡೆದಿವೆ.(PTI)
ಭಾರತ ವನಿತೆಯರ ಕಬಡ್ಡಿ ತಂಡ
(8 / 8)
ಭಾರತ ವನಿತೆಯರ ಕಬಡ್ಡಿ ತಂಡ(PTI)

    ಹಂಚಿಕೊಳ್ಳಲು ಲೇಖನಗಳು