logo
ಕನ್ನಡ ಸುದ್ದಿ  /  ಫೋಟೋ ಗ್ಯಾಲರಿ  /  International Cheetah Day 2024: ಚೀತಾಗಳಿಗೂ ಉಂಟು ಒಂದು ದಿನ; ಡಿಸೆಂಬರ್‌ 4 ಅಂತರರಾಷ್ಟ್ರೀಯ ಚೀತಾ ದಿನ, ಏನಿದರ ವಿಶೇಷ

International Cheetah Day 2024: ಚೀತಾಗಳಿಗೂ ಉಂಟು ಒಂದು ದಿನ; ಡಿಸೆಂಬರ್‌ 4 ಅಂತರರಾಷ್ಟ್ರೀಯ ಚೀತಾ ದಿನ, ಏನಿದರ ವಿಶೇಷ

Dec 04, 2024 05:17 PM IST

International Cheetah Day 2024: ಚೀತಾ ಎಂದ ತಕ್ಷಣ ನೆನಪಾಗೋದು ಅನಿಮಿಯತ ಓಟ. ಓಡುವುದರಲ್ಲಿ ಇವುಗಳನ್ನು ಮೀರಿಸುವ ಪ್ರಾಣಿ ಇಲ್ಲ. ಚೀತಾಗಳು ಭಾರತದಲ್ಲಿ ಪುನರುತ್ಥಾನ ಯೋಜನೆ ಮೂಲಕ ಪ್ರವೇಶ ಪಡೆದಿವೆ. ಚೀತಾಗಳ ಅಂತರಾಷ್ಟ್ರೀಯ ಇಂದು( ಡಿಸೆಂಬರ್‌ 4). ಅವುಗಳ ಕುರಿತಾದ ಮಾಹಿತಿಯ ಚಿತ್ರನೋಟ ಇಲ್ಲಿದೆ.

  • International Cheetah Day 2024: ಚೀತಾ ಎಂದ ತಕ್ಷಣ ನೆನಪಾಗೋದು ಅನಿಮಿಯತ ಓಟ. ಓಡುವುದರಲ್ಲಿ ಇವುಗಳನ್ನು ಮೀರಿಸುವ ಪ್ರಾಣಿ ಇಲ್ಲ. ಚೀತಾಗಳು ಭಾರತದಲ್ಲಿ ಪುನರುತ್ಥಾನ ಯೋಜನೆ ಮೂಲಕ ಪ್ರವೇಶ ಪಡೆದಿವೆ. ಚೀತಾಗಳ ಅಂತರಾಷ್ಟ್ರೀಯ ಇಂದು( ಡಿಸೆಂಬರ್‌ 4). ಅವುಗಳ ಕುರಿತಾದ ಮಾಹಿತಿಯ ಚಿತ್ರನೋಟ ಇಲ್ಲಿದೆ.
ವಿಶ್ವದಲ್ಲೇ ವೇಗವಾಗಿ ಓಡಬಲ್ಲ ಕೆಲವೇ ಪ್ರಾಣಿಗಳಲ್ಲಿ ಚೀತಾಕ್ಕೆ ಮೊದಲ ಸ್ಥಾನ. ಚಿರತೆ- ಜಾಗ್ವರ್‌ನ ವಂಶಾವಳಿಯ ಚೀತಾಗಳು ವಿಶಿಷ್ಟ ಪ್ರಾಣಿಗಳೇ.ದು ಮೂರೇ ಮೂರು ಸೆಕೆಂಡ್‌ನಲ್ಲಿ ಶೂನ್ಯದಿಂದ ಗಂಟೆಗೆ 96 ಕಿಲೋಮೀಟರ್ ವೇಗವನ್ನು ವರ್ಧಿಸಿಕೊಳ್ಳಬಲ್ಲದು
(1 / 6)

2010 ರಲ್ಲಿ, ವನ್ಯಜೀವಿ ತಜ್ಞರಾದ ಡಾ. ಲಾರಿ ಮಾರ್ಕರ್ ಡಿಸೆಂಬರ್ 4 ಅನ್ನು ಅಂತರರಾಷ್ಟ್ರೀಯ ಚಿರತೆ ದಿನವೆಂದು ಘೋಷಿಸಿದರು. ಓರೆಗಾನ್‌ನ ವಿನ್‌ಸ್ಟನ್‌ನಲ್ಲಿರುವ ವನ್ಯಜೀವಿ ಸಫಾರಿಯಲ್ಲಿ ಡಾ.ಲಾರಿ ಸಾಕಿದ ಖಯಾಮ್ ಎಂಬ ಚಿರತೆಯ ಮರಿ ನೆನಪಿಗಾಗಿ ವಾರ್ಷಿಕ ಆಚರಣೆಯನ್ನು ಶುರು ಮಾಡಿದರು.
(2 / 6)
2010 ರಲ್ಲಿ, ವನ್ಯಜೀವಿ ತಜ್ಞರಾದ ಡಾ. ಲಾರಿ ಮಾರ್ಕರ್ ಡಿಸೆಂಬರ್ 4 ಅನ್ನು ಅಂತರರಾಷ್ಟ್ರೀಯ ಚಿರತೆ ದಿನವೆಂದು ಘೋಷಿಸಿದರು. ಓರೆಗಾನ್‌ನ ವಿನ್‌ಸ್ಟನ್‌ನಲ್ಲಿರುವ ವನ್ಯಜೀವಿ ಸಫಾರಿಯಲ್ಲಿ ಡಾ.ಲಾರಿ ಸಾಕಿದ ಖಯಾಮ್ ಎಂಬ ಚಿರತೆಯ ಮರಿ ನೆನಪಿಗಾಗಿ ವಾರ್ಷಿಕ ಆಚರಣೆಯನ್ನು ಶುರು ಮಾಡಿದರು.(Pic: Paul Goldstein)
ವಯಸ್ಕ ಚೀತಾದ ತೂಕ ಸಾಮಾನ್ಯವಾಗಿ 34 ರಿಂದ 56 ಕಿಲೋ. ಗಂಡು ಚೀತಾಗಳು ಹೆಚ್ಚು ಭಾರ. ಕೇಸರಿ ಕಂದು ಅಥವಾ ಹಳದಿ ಕಂದು ಮಿಶ್ರವರ್ಣದ ಇದರ ಚರ್ಮದ ಮೇಲೆ ಹೊಳೆಯುವ ಕಪ್ಪು ಚುಕ್ಕೆಗಳಿದ್ದು, ಇವು ಪ್ರತಿ ಚೀತಾಕ್ಕೂ ವಿಭಿನ್ನವಾಗಿರುತ್ತದೆ
(3 / 6)
ವಯಸ್ಕ ಚೀತಾದ ತೂಕ ಸಾಮಾನ್ಯವಾಗಿ 34 ರಿಂದ 56 ಕಿಲೋ. ಗಂಡು ಚೀತಾಗಳು ಹೆಚ್ಚು ಭಾರ. ಕೇಸರಿ ಕಂದು ಅಥವಾ ಹಳದಿ ಕಂದು ಮಿಶ್ರವರ್ಣದ ಇದರ ಚರ್ಮದ ಮೇಲೆ ಹೊಳೆಯುವ ಕಪ್ಪು ಚುಕ್ಕೆಗಳಿದ್ದು, ಇವು ಪ್ರತಿ ಚೀತಾಕ್ಕೂ ವಿಭಿನ್ನವಾಗಿರುತ್ತದೆ
ಉಭಯ ಕಂಗಳ ಒಳಬದಿಯಿಂದ ಬಾಯಿಯ ಹೊರಬದಿಯವರೆಗೆ ಕಪ್ಪು ಪಟ್ಟಿಗಳಿದ್ದು, ಇವು ಕಣ್ಣೀರಿನಂತೆ ಕಾಣಿಸುತ್ತವೆ. ಇವುಗಳ ಬಾಲ ದಪ್ಪ, ರೋಮಾವೃತ ಹಾಗೂ ಕಪ್ಪು ವೃತ್ತಗಳಿಂದ ಕೂಡಿದೆ. ಈ ಮೂರೂ ಜಾತಿಗಳಲ್ಲಿ ಚೀತಾಗಳು ಅತಿ ಅಳಿವಿನಂಚಿನ ಪ್ರಾಣಿಗಳು.
(4 / 6)
ಉಭಯ ಕಂಗಳ ಒಳಬದಿಯಿಂದ ಬಾಯಿಯ ಹೊರಬದಿಯವರೆಗೆ ಕಪ್ಪು ಪಟ್ಟಿಗಳಿದ್ದು, ಇವು ಕಣ್ಣೀರಿನಂತೆ ಕಾಣಿಸುತ್ತವೆ. ಇವುಗಳ ಬಾಲ ದಪ್ಪ, ರೋಮಾವೃತ ಹಾಗೂ ಕಪ್ಪು ವೃತ್ತಗಳಿಂದ ಕೂಡಿದೆ. ಈ ಮೂರೂ ಜಾತಿಗಳಲ್ಲಿ ಚೀತಾಗಳು ಅತಿ ಅಳಿವಿನಂಚಿನ ಪ್ರಾಣಿಗಳು.
ದಶಕದ ಹಿಂದೆಯೇ ಯುಪಿಎ ಸರ್ಕಾರ  ಇದ್ದಾಗ ರೂಪಿಸಿದ್ದ ಚೀತಾ ಪುನರುತ್ಥಾನ ಯೋಜನೆಯನ್ನು ಪ್ರಧಾನಿ ನರೇಂದ್ರ ಮೋದಿ ಅನುಷ್ಠಾನಕ್ಕೆ ತಂದರು. ಮಧ್ಯಪ್ರದೇಶದ ಕುನೋ ರಾಷ್ಟ್ರೀಯ ಉದ್ಯಾನದಲ್ಲಿ ಚೀತಾಗಳ ಮರುಪರಿಚಯ ಕಾರ್ಯಕ್ರಮದಡಿ ಈಗಲೂ ಜಾರಿಯಲ್ಲಿದೆ. 
(5 / 6)
ದಶಕದ ಹಿಂದೆಯೇ ಯುಪಿಎ ಸರ್ಕಾರ  ಇದ್ದಾಗ ರೂಪಿಸಿದ್ದ ಚೀತಾ ಪುನರುತ್ಥಾನ ಯೋಜನೆಯನ್ನು ಪ್ರಧಾನಿ ನರೇಂದ್ರ ಮೋದಿ ಅನುಷ್ಠಾನಕ್ಕೆ ತಂದರು. ಮಧ್ಯಪ್ರದೇಶದ ಕುನೋ ರಾಷ್ಟ್ರೀಯ ಉದ್ಯಾನದಲ್ಲಿ ಚೀತಾಗಳ ಮರುಪರಿಚಯ ಕಾರ್ಯಕ್ರಮದಡಿ ಈಗಲೂ ಜಾರಿಯಲ್ಲಿದೆ. 
ಹುಲ್ಲುಗಾವಲು ಪ್ರದೇಶ ಮಾಯವಾದಂತೆ ಚೀತಾಗಳ ಆವಾಸ ಸ್ಥಾನವೂ ಇಲ್ಲದೇ ಅವುಗಳು ನಶಿಸಿ ಹೋಗಿದ್ದವು. ಈಗ ಎರಡು ವರ್ಷದಿಂದ ಏರಳಿತದ ನಡುವೆಯೂ ಚೀತಾಗಳನ್ನು ಉಳಿಸಿಕೊಳ್ಳುವ ಪ್ರಯತ್ನ ನಡೆದಿದೆ. ಮೈಸೂರು ಮೃಗಾಯಲಕ್ಕೆ ಬಂದರೆ ಇವುಗಳ ದರ್ಶನ ಮಾಡಬಹುದು.
(6 / 6)
ಹುಲ್ಲುಗಾವಲು ಪ್ರದೇಶ ಮಾಯವಾದಂತೆ ಚೀತಾಗಳ ಆವಾಸ ಸ್ಥಾನವೂ ಇಲ್ಲದೇ ಅವುಗಳು ನಶಿಸಿ ಹೋಗಿದ್ದವು. ಈಗ ಎರಡು ವರ್ಷದಿಂದ ಏರಳಿತದ ನಡುವೆಯೂ ಚೀತಾಗಳನ್ನು ಉಳಿಸಿಕೊಳ್ಳುವ ಪ್ರಯತ್ನ ನಡೆದಿದೆ. ಮೈಸೂರು ಮೃಗಾಯಲಕ್ಕೆ ಬಂದರೆ ಇವುಗಳ ದರ್ಶನ ಮಾಡಬಹುದು.

    ಹಂಚಿಕೊಳ್ಳಲು ಲೇಖನಗಳು