logo
ಕನ್ನಡ ಸುದ್ದಿ  /  ಫೋಟೋ ಗ್ಯಾಲರಿ  /  Ipl 2023 Records: ಹ್ಯಾಟ್ರಿಕ್ ಸಾಧಕನಿಗೆ ಪರ್ಪಲ್ ಕ್ಯಾಪ್; ಧವನ್ ಅಗ್ರ ರನ್‌ ಸರದಾರ

IPL 2023 records: ಹ್ಯಾಟ್ರಿಕ್ ಸಾಧಕನಿಗೆ ಪರ್ಪಲ್ ಕ್ಯಾಪ್; ಧವನ್ ಅಗ್ರ ರನ್‌ ಸರದಾರ

Apr 10, 2023 02:19 PM IST

ಭಾನುವಾರದ ಎರಡನೇ ಪಂದ್ಯದಲ್ಲಿ ಸನ್ ರೈಸರ್ಸ್ ಹೈದರಾಬಾದ್ ವಿರುದ್ಧ ಪಂಜಾಬ್ ಕಿಂಗ್ಸ್ ಸೋತರೂ, ನಾಯಕ ಶಿಖರ್ ಧವನ್ ಅದ್ಭುತ ಪ್ರದರ್ಶನ ನೀಡಿದರು. ಅವರು 66 ಎಸೆತಗಳಲ್ಲಿ ಅಜೇಯ 99 ರನ್ ಗಳಿಸಿದರು. ಧವನ್ ಇದುವರೆಗೆ ಆಡಿದ 3 ಪಂದ್ಯಗಳಲ್ಲಿ 225 ರನ್ ಗಳಿಸಿದ್ದಾರೆ. ಹೀಗಾಗಿ ರುತುರಾಜ್ ಹಿಂದಿಕ್ಕಿ ಆರೇಂಜ್‌ ಕ್ಯಾಪ್‌ ಪಡೆದಿದ್ದಾರೆ.

  • ಭಾನುವಾರದ ಎರಡನೇ ಪಂದ್ಯದಲ್ಲಿ ಸನ್ ರೈಸರ್ಸ್ ಹೈದರಾಬಾದ್ ವಿರುದ್ಧ ಪಂಜಾಬ್ ಕಿಂಗ್ಸ್ ಸೋತರೂ, ನಾಯಕ ಶಿಖರ್ ಧವನ್ ಅದ್ಭುತ ಪ್ರದರ್ಶನ ನೀಡಿದರು. ಅವರು 66 ಎಸೆತಗಳಲ್ಲಿ ಅಜೇಯ 99 ರನ್ ಗಳಿಸಿದರು. ಧವನ್ ಇದುವರೆಗೆ ಆಡಿದ 3 ಪಂದ್ಯಗಳಲ್ಲಿ 225 ರನ್ ಗಳಿಸಿದ್ದಾರೆ. ಹೀಗಾಗಿ ರುತುರಾಜ್ ಹಿಂದಿಕ್ಕಿ ಆರೇಂಜ್‌ ಕ್ಯಾಪ್‌ ಪಡೆದಿದ್ದಾರೆ.
ಕೆಕೆಆರ್‌ ವಿರುದ್ಧದ ಪಂದ್ಯದಲ್ಲಿ ರಶೀದ್ ಖಾನ್ ಮೊದಲ ಹ್ಯಾಟ್ರಿಕ್ ವಿಕೆಟ್‌ ಪಡೆದರು. ಪಂದ್ಯದಲ್ಲಿ ಗುಜರಾತ್ ಟೈಟಾನ್ಸ್ ಸೋತರೂ, ಈ ಪಂದ್ಯದಲ್ಲಿ ರಶೀದ್ ಖಾನ್ ಪ್ರದರ್ಶನ ಗಮನ ಸೆಳೆಯಿತು. ಪಂದ್ಯದ 17ನೇ ಓವರ್ ಬೌಲ್ ಮಾಡಲು ಬಂದ ನಾಯಕ ರಶೀದ್‌; ರಸೆಲ್, ನರೈನ್ ಮತ್ತು ಶಾರ್ದೂಲ್ ಅವರನ್ನು ಔಟ್‌ ಮಾಡುವ ಮೂಲಕ ಪಂದ್ಯವನ್ನು ತಮ್ಮತ್ತ ತಿರುಗಿಸಿದರು. ಸದ್ಯ ಅವರು 3 ಪಂದ್ಯಗಳಲ್ಲಿ 8 ವಿಕೆಟ್‌ಗಳೊಂದಿಗೆ ಪರ್ಪಲ್ ಕ್ಯಾಪ್ ರೇಸ್‌ನಲ್ಲಿ ಅಗ್ರಸ್ಥಾನದಲ್ಲಿದ್ದಾರೆ. ರಶೀದ್ ಖಾನ್ ಅವರಂತೆ, ಯಜುವೇಂದ್ರ ಚಹಾಲ್ ಮತ್ತು ಮಾರ್ಕ್ ವುಡ್ ತಲಾ 8 ವಿಕೆಟ್‌ಗಳೊಂದಿಗೆ ಪಟ್ಟಿಯಲ್ಲಿ ಎರಡು ಮತ್ತು ಮೂರನೇ ಸ್ಥಾನದಲ್ಲಿದ್ದಾರೆ.
(1 / 5)
ಕೆಕೆಆರ್‌ ವಿರುದ್ಧದ ಪಂದ್ಯದಲ್ಲಿ ರಶೀದ್ ಖಾನ್ ಮೊದಲ ಹ್ಯಾಟ್ರಿಕ್ ವಿಕೆಟ್‌ ಪಡೆದರು. ಪಂದ್ಯದಲ್ಲಿ ಗುಜರಾತ್ ಟೈಟಾನ್ಸ್ ಸೋತರೂ, ಈ ಪಂದ್ಯದಲ್ಲಿ ರಶೀದ್ ಖಾನ್ ಪ್ರದರ್ಶನ ಗಮನ ಸೆಳೆಯಿತು. ಪಂದ್ಯದ 17ನೇ ಓವರ್ ಬೌಲ್ ಮಾಡಲು ಬಂದ ನಾಯಕ ರಶೀದ್‌; ರಸೆಲ್, ನರೈನ್ ಮತ್ತು ಶಾರ್ದೂಲ್ ಅವರನ್ನು ಔಟ್‌ ಮಾಡುವ ಮೂಲಕ ಪಂದ್ಯವನ್ನು ತಮ್ಮತ್ತ ತಿರುಗಿಸಿದರು. ಸದ್ಯ ಅವರು 3 ಪಂದ್ಯಗಳಲ್ಲಿ 8 ವಿಕೆಟ್‌ಗಳೊಂದಿಗೆ ಪರ್ಪಲ್ ಕ್ಯಾಪ್ ರೇಸ್‌ನಲ್ಲಿ ಅಗ್ರಸ್ಥಾನದಲ್ಲಿದ್ದಾರೆ. ರಶೀದ್ ಖಾನ್ ಅವರಂತೆ, ಯಜುವೇಂದ್ರ ಚಹಾಲ್ ಮತ್ತು ಮಾರ್ಕ್ ವುಡ್ ತಲಾ 8 ವಿಕೆಟ್‌ಗಳೊಂದಿಗೆ ಪಟ್ಟಿಯಲ್ಲಿ ಎರಡು ಮತ್ತು ಮೂರನೇ ಸ್ಥಾನದಲ್ಲಿದ್ದಾರೆ.(PTI)
ಸುನಿಲ್ ನರೈನ್ ಗುಜರಾತ್ ಟೈಟಾನ್ಸ್ ವಿರುದ್ಧ 3 ವಿಕೆಟ್‌ ಕಬಳಿಸಿ, ಮತ್ತೊಮ್ಮೆ ತಮ್ಮ ಸಾಮರ್ಥ್ಯ ಸಾಬೀತುಪಡಿಸಿದರು. ವೃದ್ಧಿಮಾನ್ ಸಹಾ, ಶುಬ್ಮನ್ ಗಿಲ್ ಮತ್ತು ಸಾಯಿ ಸುದರ್ಶನ್ ಅವರ ವಿಕೆಟ್‌ ಪಡೆದರು. ಸದ್ಯ ಅವರು ಮೂರು ಪಂದ್ಯಗಳಲ್ಲಿ ಆರು ವಿಕೆಟ್‌ಗಳೊಂದಿಗೆ ಪರ್ಪಲ್ ಕ್ಯಾಪ್ ರೇಸ್‌ನಲ್ಲಿ ಆರನೇ ಸ್ಥಾನದಲ್ಲಿದ್ದಾರೆ. ರವಿ ಬಿಷ್ಣೋಯ್ ಆರು ವಿಕೆಟ್‌ಗಳೊಂದಿಗೆ ಈ ಪಟ್ಟಿಯಲ್ಲಿ ನಾಲ್ಕನೇ ಸ್ಥಾನದಲ್ಲಿದ್ದಾರೆ. ಅಲ್ಜಾರಿ ಜೋಸೆಫ್, ಮೊಹಮ್ಮದ್ ಶಮಿ, ಅರ್ಷದೀಪ್ ಸಿಂಗ್ ತಲಾ ಆರು ವಿಕೆಟ್ ಪಡೆದು ನಂತರದ ಸ್ಥಾನದಲ್ಲಿದ್ದಾರೆ.
(2 / 5)
ಸುನಿಲ್ ನರೈನ್ ಗುಜರಾತ್ ಟೈಟಾನ್ಸ್ ವಿರುದ್ಧ 3 ವಿಕೆಟ್‌ ಕಬಳಿಸಿ, ಮತ್ತೊಮ್ಮೆ ತಮ್ಮ ಸಾಮರ್ಥ್ಯ ಸಾಬೀತುಪಡಿಸಿದರು. ವೃದ್ಧಿಮಾನ್ ಸಹಾ, ಶುಬ್ಮನ್ ಗಿಲ್ ಮತ್ತು ಸಾಯಿ ಸುದರ್ಶನ್ ಅವರ ವಿಕೆಟ್‌ ಪಡೆದರು. ಸದ್ಯ ಅವರು ಮೂರು ಪಂದ್ಯಗಳಲ್ಲಿ ಆರು ವಿಕೆಟ್‌ಗಳೊಂದಿಗೆ ಪರ್ಪಲ್ ಕ್ಯಾಪ್ ರೇಸ್‌ನಲ್ಲಿ ಆರನೇ ಸ್ಥಾನದಲ್ಲಿದ್ದಾರೆ. ರವಿ ಬಿಷ್ಣೋಯ್ ಆರು ವಿಕೆಟ್‌ಗಳೊಂದಿಗೆ ಈ ಪಟ್ಟಿಯಲ್ಲಿ ನಾಲ್ಕನೇ ಸ್ಥಾನದಲ್ಲಿದ್ದಾರೆ. ಅಲ್ಜಾರಿ ಜೋಸೆಫ್, ಮೊಹಮ್ಮದ್ ಶಮಿ, ಅರ್ಷದೀಪ್ ಸಿಂಗ್ ತಲಾ ಆರು ವಿಕೆಟ್ ಪಡೆದು ನಂತರದ ಸ್ಥಾನದಲ್ಲಿದ್ದಾರೆ.(IPL Twitter)
ಭಾನುವಾರದೆರಡನೇ ಪಂದ್ಯದಲ್ಲಿ ಸನ್‌ರೈಸರ್ಸ್ ಹೈದರಾಬಾದ್ ವಿರುದ್ಧ ಪಂಜಾಬ್ ಕಿಂಗ್ಸ್ ಸೋತಿತು. ಆದರೂ ಶಿಖರ್ ಧವನ್ ಅದ್ಭುತ ಪ್ರದರ್ಶನ ನೀಡಿದರು. ಅವರು 66 ಎಸೆತಗಳಲ್ಲಿ 150 ಸ್ಟ್ರೈಕ್ ರೇಟ್‌ನಲ್ಲಿ ಬ್ಯಾಟ್‌ ಬೀಸಿ 99 ರನ್ ಗಳಿಸಿದರು. ಈ ಆವೃತ್ತಿಯಲ್ಲಿ ಧವನ್ ಇದುವರೆಗೆ 3 ಪಂದ್ಯಗಳಲ್ಲಿ ಆಡಿ 225 ರನ್ ಗಳಿಸಿದ್ದಾರೆ. ಆ ಮೂಲಕ ಆರೆಂಜ್ ಕ್ಯಾಪ್ ರೇಸ್‌ನಲ್ಲಿದ್ದ ರುತುರಾಜ್ ಅವರನ್ನು ಹಿಂದಿಕ್ಕಿ ಮೊದಲ ಸ್ಥಾನ ಪಡೆದರು. ಸದ್ಯ ಈ ಪಟ್ಟಿಯಲ್ಲಿ ರುತುರಾಜ್ ಎರಡನೇ ಸ್ಥಾನದಲ್ಲಿದ್ದಾರೆ. 
(3 / 5)
ಭಾನುವಾರದೆರಡನೇ ಪಂದ್ಯದಲ್ಲಿ ಸನ್‌ರೈಸರ್ಸ್ ಹೈದರಾಬಾದ್ ವಿರುದ್ಧ ಪಂಜಾಬ್ ಕಿಂಗ್ಸ್ ಸೋತಿತು. ಆದರೂ ಶಿಖರ್ ಧವನ್ ಅದ್ಭುತ ಪ್ರದರ್ಶನ ನೀಡಿದರು. ಅವರು 66 ಎಸೆತಗಳಲ್ಲಿ 150 ಸ್ಟ್ರೈಕ್ ರೇಟ್‌ನಲ್ಲಿ ಬ್ಯಾಟ್‌ ಬೀಸಿ 99 ರನ್ ಗಳಿಸಿದರು. ಈ ಆವೃತ್ತಿಯಲ್ಲಿ ಧವನ್ ಇದುವರೆಗೆ 3 ಪಂದ್ಯಗಳಲ್ಲಿ ಆಡಿ 225 ರನ್ ಗಳಿಸಿದ್ದಾರೆ. ಆ ಮೂಲಕ ಆರೆಂಜ್ ಕ್ಯಾಪ್ ರೇಸ್‌ನಲ್ಲಿದ್ದ ರುತುರಾಜ್ ಅವರನ್ನು ಹಿಂದಿಕ್ಕಿ ಮೊದಲ ಸ್ಥಾನ ಪಡೆದರು. ಸದ್ಯ ಈ ಪಟ್ಟಿಯಲ್ಲಿ ರುತುರಾಜ್ ಎರಡನೇ ಸ್ಥಾನದಲ್ಲಿದ್ದಾರೆ. (AFP)
ಕೋಲ್ಕತ್ತಾ ನೈಟ್ ರೈಡರ್ಸ್ ಪರ ಮ್ಯಾಚ್ ವಿನ್ನಿಂಗ್ ಸಾಧನೆ ಮಾಡಿದ ನಂತರ ರಿಂಕು ಸಿಂಗ್ ಆರೆಂಜ್ ಕ್ಯಾಪ್ ರೇಸ್‌ಗೆ ಪ್ರವೇಶಿಸಿದ್ದಾರೆ. ಅವರು 3 ಪಂದ್ಯಗಳಲ್ಲಿ 168.96ರ ಸ್ಟ್ರೈಕ್ ರೇಟ್‌ನಲ್ಲಿ 98 ರನ್ ಗಳಿಸುವ ಮೂಲಕ ಪಟ್ಟಿಯಲ್ಲಿ 14 ನೇ ಸ್ಥಾನ ತಲುಪಿದ್ದಾರೆ. ಈ ನಡುವೆ ಕೆಕೆಆರ್‌ ತಂಡದ ವೆಂಕಟೇಶ್ ಅಯ್ಯರ್ 3 ಪಂದ್ಯಗಳಲ್ಲಿ 120 ರನ್ ಗಳಿಸುವ ಮೂಲಕ ಆರೆಂಜ್ ಕ್ಯಾಪ್ ರೇಸ್‌ನಲ್ಲಿ ಎಂಟನೇ ಸ್ಥಾನಕ್ಕೆ ಲಗ್ಗೆ ಇಟ್ಟಿದ್ದಾರೆ.
(4 / 5)
ಕೋಲ್ಕತ್ತಾ ನೈಟ್ ರೈಡರ್ಸ್ ಪರ ಮ್ಯಾಚ್ ವಿನ್ನಿಂಗ್ ಸಾಧನೆ ಮಾಡಿದ ನಂತರ ರಿಂಕು ಸಿಂಗ್ ಆರೆಂಜ್ ಕ್ಯಾಪ್ ರೇಸ್‌ಗೆ ಪ್ರವೇಶಿಸಿದ್ದಾರೆ. ಅವರು 3 ಪಂದ್ಯಗಳಲ್ಲಿ 168.96ರ ಸ್ಟ್ರೈಕ್ ರೇಟ್‌ನಲ್ಲಿ 98 ರನ್ ಗಳಿಸುವ ಮೂಲಕ ಪಟ್ಟಿಯಲ್ಲಿ 14 ನೇ ಸ್ಥಾನ ತಲುಪಿದ್ದಾರೆ. ಈ ನಡುವೆ ಕೆಕೆಆರ್‌ ತಂಡದ ವೆಂಕಟೇಶ್ ಅಯ್ಯರ್ 3 ಪಂದ್ಯಗಳಲ್ಲಿ 120 ರನ್ ಗಳಿಸುವ ಮೂಲಕ ಆರೆಂಜ್ ಕ್ಯಾಪ್ ರೇಸ್‌ನಲ್ಲಿ ಎಂಟನೇ ಸ್ಥಾನಕ್ಕೆ ಲಗ್ಗೆ ಇಟ್ಟಿದ್ದಾರೆ.(KKR Twitter)
ಕೋಲ್ಕತ್ತಾ ನೈಟ್ ರೈಡರ್ಸ್ ತಂಡವು ಗುಜರಾತ್ ಟೈಟಾನ್ಸ್‌ನ ವಿಜಯ್ ರಥವನ್ನು ನಿಲ್ಲಿಸುವ ಮೂಲಕ ಲೀಗ್ ಅಂಕಪಟ್ಟಿಯಲ್ಲಿ ಎರಡನೇ ಸ್ಥಾನ ಪಡೆದುಕೊಂಡಿದೆ. ಸದ್ಯ ರಾಜಸ್ಥಾನ್ ರಾಯಲ್ಸ್ ಅಗ್ರಸ್ಥಾನದಲ್ಲಿದೆ. ರಾಜಸ್ಥಾನ, ಕೋಲ್ಕತ್ತಾ, ಗುಜರಾತ್, ಲಖನೌ, ಚೆನ್ನೈ, ಪಂಜಾಬ್ ತಲಾ 3 ಪಂದ್ಯಗಳಲ್ಲಿ 2 ಗೆದ್ದು ತಲಾ 4 ಅಂಕ ಕಲೆಹಾಕಿವೆ. ಆದರೆ, ನಿವ್ವಳ ರನ್ ರೇಟ್‌ ಆಧಾರದ ಮೇಲೆ ರಾಜಸ್ಥಾನ ಮೊದಲ ಸ್ಥಾನದಲ್ಲಿದೆ,
(5 / 5)
ಕೋಲ್ಕತ್ತಾ ನೈಟ್ ರೈಡರ್ಸ್ ತಂಡವು ಗುಜರಾತ್ ಟೈಟಾನ್ಸ್‌ನ ವಿಜಯ್ ರಥವನ್ನು ನಿಲ್ಲಿಸುವ ಮೂಲಕ ಲೀಗ್ ಅಂಕಪಟ್ಟಿಯಲ್ಲಿ ಎರಡನೇ ಸ್ಥಾನ ಪಡೆದುಕೊಂಡಿದೆ. ಸದ್ಯ ರಾಜಸ್ಥಾನ್ ರಾಯಲ್ಸ್ ಅಗ್ರಸ್ಥಾನದಲ್ಲಿದೆ. ರಾಜಸ್ಥಾನ, ಕೋಲ್ಕತ್ತಾ, ಗುಜರಾತ್, ಲಖನೌ, ಚೆನ್ನೈ, ಪಂಜಾಬ್ ತಲಾ 3 ಪಂದ್ಯಗಳಲ್ಲಿ 2 ಗೆದ್ದು ತಲಾ 4 ಅಂಕ ಕಲೆಹಾಕಿವೆ. ಆದರೆ, ನಿವ್ವಳ ರನ್ ರೇಟ್‌ ಆಧಾರದ ಮೇಲೆ ರಾಜಸ್ಥಾನ ಮೊದಲ ಸ್ಥಾನದಲ್ಲಿದೆ,(PTI)

    ಹಂಚಿಕೊಳ್ಳಲು ಲೇಖನಗಳು