logo
ಕನ್ನಡ ಸುದ್ದಿ  /  ಫೋಟೋ ಗ್ಯಾಲರಿ  /  Ipl Expensive Players: ಐಪಿಎಲ್‌ ಚರಿತ್ರೆಯಲ್ಲಿ ಕೋಟಿ ಕೋಟಿ ಲೂಟಿ ಮಾಡಿದ 10 ದುಬಾರಿ ಆಟಗಾರರು ಇವರು

IPL Expensive Players: ಐಪಿಎಲ್‌ ಚರಿತ್ರೆಯಲ್ಲಿ ಕೋಟಿ ಕೋಟಿ ಲೂಟಿ ಮಾಡಿದ 10 ದುಬಾರಿ ಆಟಗಾರರು ಇವರು

Dec 22, 2023 04:17 PM IST

Most Expensive Players in IPL History: ಐಪಿಎಲ್ 2024ರ ಮಿನಿ ಹರಾಜು ಮುಕ್ತಾಯಗೊಂಡಿದೆ. ಆಸೀಸ್​ ವೇಗಿ ಮಿಚೆಲ್ ಸ್ಟಾರ್ಕ್ (24.75 ಕೋಟಿ ರೂ.) ಐಪಿಎಲ್ ಇತಿಹಾಸದಲ್ಲಿ ಅತ್ಯಂತ ದುಬಾರಿ ಆಟಗಾರ ಎಂಬ ದಾಖಲೆ ನಿರ್ಮಿಸಿದ್ದಾರೆ. ಐಪಿಎಲ್ ಇತಿಹಾಸದಲ್ಲಿ ಟಾಪ್-10 ಅತ್ಯಂತ ದುಬಾರಿ ಆಟಗಾರರು ಯಾರು? ಇಲ್ಲಿದೆ ಪಟ್ಟಿ.

Most Expensive Players in IPL History: ಐಪಿಎಲ್ 2024ರ ಮಿನಿ ಹರಾಜು ಮುಕ್ತಾಯಗೊಂಡಿದೆ. ಆಸೀಸ್​ ವೇಗಿ ಮಿಚೆಲ್ ಸ್ಟಾರ್ಕ್ (24.75 ಕೋಟಿ ರೂ.) ಐಪಿಎಲ್ ಇತಿಹಾಸದಲ್ಲಿ ಅತ್ಯಂತ ದುಬಾರಿ ಆಟಗಾರ ಎಂಬ ದಾಖಲೆ ನಿರ್ಮಿಸಿದ್ದಾರೆ. ಐಪಿಎಲ್ ಇತಿಹಾಸದಲ್ಲಿ ಟಾಪ್-10 ಅತ್ಯಂತ ದುಬಾರಿ ಆಟಗಾರರು ಯಾರು? ಇಲ್ಲಿದೆ ಪಟ್ಟಿ.
ಐಪಿಎಲ್ 2024ಕ್ಕೆ ಆಸ್ಟ್ರೇಲಿಯಾದ ಸ್ಟಾರ್ ವೇಗಿ ಮಿಚೆಲ್ ಸ್ಟಾರ್ಕ್ ದುಬಾರಿ ಆಟಗಾರನಾಗಿ ಕಣಕ್ಕಿಳಿಯಲಿದ್ದಾರೆ. ಕೋಲ್ಕತ್ತಾ ನೈಟ್ ರೈಡರ್ಸ್ ತಂಡವು 24.75 ಕೋಟಿಗೆ ಖರೀದಿಸಿದೆ. ಸ್ಟಾರ್ಕ್ ಐಪಿಎಲ್ ಇತಿಹಾಸದಲ್ಲಿ ಅತ್ಯಮೂಲ್ಯ ಆಟಗಾರನಾಗಿ ಇತಿಹಾಸ ನಿರ್ಮಿಸಿದ್ದಾರೆ.
(1 / 11)
ಐಪಿಎಲ್ 2024ಕ್ಕೆ ಆಸ್ಟ್ರೇಲಿಯಾದ ಸ್ಟಾರ್ ವೇಗಿ ಮಿಚೆಲ್ ಸ್ಟಾರ್ಕ್ ದುಬಾರಿ ಆಟಗಾರನಾಗಿ ಕಣಕ್ಕಿಳಿಯಲಿದ್ದಾರೆ. ಕೋಲ್ಕತ್ತಾ ನೈಟ್ ರೈಡರ್ಸ್ ತಂಡವು 24.75 ಕೋಟಿಗೆ ಖರೀದಿಸಿದೆ. ಸ್ಟಾರ್ಕ್ ಐಪಿಎಲ್ ಇತಿಹಾಸದಲ್ಲಿ ಅತ್ಯಮೂಲ್ಯ ಆಟಗಾರನಾಗಿ ಇತಿಹಾಸ ನಿರ್ಮಿಸಿದ್ದಾರೆ.(PTI)
2024ರ ಐಪಿಎಲ್​ಗೆ ನಡೆದ ಹರಾಜಿನಲ್ಲಿ ಆಸ್ಟ್ರೇಲಿಯಾದ ನಾಯಕ ಪ್ಯಾಟ್ ಕಮಿನ್ಸ್ ಅವರನ್ನು ಸನ್‌ರೈಸರ್ಸ್ ಹೈದರಾಬಾದ್ ತಂಡವು ರೂ.20.50 ಕೋಟಿಗೆ ಸ್ವಾಧೀನಪಡಿಸಿಕೊಂಡಿದೆ. ಐಪಿಎಲ್‌ನಲ್ಲಿ 20 ಕೋಟಿ ಗಡಿ ದಾಟಿದ ಮೊದಲ ಆಟಗಾರ ಎಂಬ ಹೆಗ್ಗಳಿಕೆಗೆ ಕಮಿನ್ಸ್ ಪಾತ್ರರಾಗಿದ್ದಾರೆ.
(2 / 11)
2024ರ ಐಪಿಎಲ್​ಗೆ ನಡೆದ ಹರಾಜಿನಲ್ಲಿ ಆಸ್ಟ್ರೇಲಿಯಾದ ನಾಯಕ ಪ್ಯಾಟ್ ಕಮಿನ್ಸ್ ಅವರನ್ನು ಸನ್‌ರೈಸರ್ಸ್ ಹೈದರಾಬಾದ್ ತಂಡವು ರೂ.20.50 ಕೋಟಿಗೆ ಸ್ವಾಧೀನಪಡಿಸಿಕೊಂಡಿದೆ. ಐಪಿಎಲ್‌ನಲ್ಲಿ 20 ಕೋಟಿ ಗಡಿ ದಾಟಿದ ಮೊದಲ ಆಟಗಾರ ಎಂಬ ಹೆಗ್ಗಳಿಕೆಗೆ ಕಮಿನ್ಸ್ ಪಾತ್ರರಾಗಿದ್ದಾರೆ.(PTI)
ಡಿಸೆಂಬರ್ 2022ರ ಹರಾಜಿನಲ್ಲಿ 2023ರ ಐಪಿಎಲ್ ಸೀಸನ್‌ಗಾಗಿ ಇಂಗ್ಲೆಂಡ್ ಆಲ್‌ರೌಂಡರ್ ಸ್ಯಾಮ್ ಕರನ್​ ಅವರನ್ನು ಪಂಜಾಬ್ ಕಿಂಗ್ಸ್ ಫ್ರಾಂಚೈಸಿ 18.5 ಕೋಟಿಗೆ ಖರೀದಿಸಿತು. ಅತಿ ಹೆಚ್ಚು ಬೆಲೆ ಪಡೆದ 3ನೇ ಆಟಗಾರ ಎನಿಸಿದ್ದಾರೆ.
(3 / 11)
ಡಿಸೆಂಬರ್ 2022ರ ಹರಾಜಿನಲ್ಲಿ 2023ರ ಐಪಿಎಲ್ ಸೀಸನ್‌ಗಾಗಿ ಇಂಗ್ಲೆಂಡ್ ಆಲ್‌ರೌಂಡರ್ ಸ್ಯಾಮ್ ಕರನ್​ ಅವರನ್ನು ಪಂಜಾಬ್ ಕಿಂಗ್ಸ್ ಫ್ರಾಂಚೈಸಿ 18.5 ಕೋಟಿಗೆ ಖರೀದಿಸಿತು. ಅತಿ ಹೆಚ್ಚು ಬೆಲೆ ಪಡೆದ 3ನೇ ಆಟಗಾರ ಎನಿಸಿದ್ದಾರೆ.(AFP)
ಆಸ್ಟ್ರೇಲಿಯಾದ ಯುವ ಆಲ್‌ರೌಂಡರ್ ಕ್ಯಾಮರೂನ್ ಗ್ರೀನ್ ಅವರನ್ನು 2023ರ ಋತುವಿಗೆ 17.5 ಕೋಟಿ ರೂಪಾಯಿ ನೀಡಿ ಮುಂಬೈ ಇಂಡಿಯನ್ಸ್ ಖರೀದಿಸಿತ್ತು. ಇದೀಗ ಅವರನ್ನು ಅಷ್ಟೇ ಮೊತ್ತಕ್ಕೆ ಆರ್​ಸಿಬಿ ಟ್ರೇಡ್ ಮಾಡಿಕೊಂಡಿದೆ.
(4 / 11)
ಆಸ್ಟ್ರೇಲಿಯಾದ ಯುವ ಆಲ್‌ರೌಂಡರ್ ಕ್ಯಾಮರೂನ್ ಗ್ರೀನ್ ಅವರನ್ನು 2023ರ ಋತುವಿಗೆ 17.5 ಕೋಟಿ ರೂಪಾಯಿ ನೀಡಿ ಮುಂಬೈ ಇಂಡಿಯನ್ಸ್ ಖರೀದಿಸಿತ್ತು. ಇದೀಗ ಅವರನ್ನು ಅಷ್ಟೇ ಮೊತ್ತಕ್ಕೆ ಆರ್​ಸಿಬಿ ಟ್ರೇಡ್ ಮಾಡಿಕೊಂಡಿದೆ.(PTI)
ಇಂಗ್ಲೆಂಡ್ ಸ್ಟಾರ್ ಆಲ್ ರೌಂಡರ್ ಬೆನ್ ಸ್ಟೋಕ್ಸ್ ಅವರನ್ನು 2023ರ ಐಪಿಎಲ್​ಗೆ ಚೆನ್ನೈ ಸೂಪರ್ ಕಿಂಗ್ಸ್ 16.25 ಕೋಟಿ ರೂಪಾಯಿಗೆ ಖರೀದಿಸಿತ್ತು. ಇದೀಗ ಅವರನ್ನು ತಂಡದಿಂದ ಕೈಬಿಟ್ಟಿದೆ.
(5 / 11)
ಇಂಗ್ಲೆಂಡ್ ಸ್ಟಾರ್ ಆಲ್ ರೌಂಡರ್ ಬೆನ್ ಸ್ಟೋಕ್ಸ್ ಅವರನ್ನು 2023ರ ಐಪಿಎಲ್​ಗೆ ಚೆನ್ನೈ ಸೂಪರ್ ಕಿಂಗ್ಸ್ 16.25 ಕೋಟಿ ರೂಪಾಯಿಗೆ ಖರೀದಿಸಿತ್ತು. ಇದೀಗ ಅವರನ್ನು ತಂಡದಿಂದ ಕೈಬಿಟ್ಟಿದೆ.(ANI)
ದಕ್ಷಿಣ ಆಫ್ರಿಕಾದ ಆಲ್​ರೌಂಡರ್​​ ಕ್ರಿಸ್ ಮಾರಿಸ್ ಅವರನ್ನು ರಾಜಸ್ಥಾನ ರಾಯಲ್ಸ್ ಫ್ರಾಂಚೈಸಿ ಐಪಿಎಲ್ 2021 ಸೀಸನ್‌ಗೆ 16.25 ಕೋಟಿ ನೀಡಿ ಖರೀದಿಸಿತ್ತು.
(6 / 11)
ದಕ್ಷಿಣ ಆಫ್ರಿಕಾದ ಆಲ್​ರೌಂಡರ್​​ ಕ್ರಿಸ್ ಮಾರಿಸ್ ಅವರನ್ನು ರಾಜಸ್ಥಾನ ರಾಯಲ್ಸ್ ಫ್ರಾಂಚೈಸಿ ಐಪಿಎಲ್ 2021 ಸೀಸನ್‌ಗೆ 16.25 ಕೋಟಿ ನೀಡಿ ಖರೀದಿಸಿತ್ತು.
ವೆಸ್ಟ್ ಇಂಡೀಸ್ ಸ್ಫೋಟಕ ಆಟಗಾರ ನಿಕೋಲಸ್ ಪೂರನ್ ಅವರನ್ನು 2023ರ ಐಪಿಎಲ್ ಸೀಸನ್‌ಗಾಗಿ ಲಕ್ನೋ ಸೂಪರ್‌ಜೈಂಟ್ಸ್ ತಂಡವು 16 ಕೋಟಿ ರೂಪಾಯಿಗೆ ತೆಗೆದುಕೊಂಡಿದೆ.
(7 / 11)
ವೆಸ್ಟ್ ಇಂಡೀಸ್ ಸ್ಫೋಟಕ ಆಟಗಾರ ನಿಕೋಲಸ್ ಪೂರನ್ ಅವರನ್ನು 2023ರ ಐಪಿಎಲ್ ಸೀಸನ್‌ಗಾಗಿ ಲಕ್ನೋ ಸೂಪರ್‌ಜೈಂಟ್ಸ್ ತಂಡವು 16 ಕೋಟಿ ರೂಪಾಯಿಗೆ ತೆಗೆದುಕೊಂಡಿದೆ.(AFP)
2015ರ ಐಪಿಎಲ್ ಆವೃತ್ತಿಗಾಗಿ ನಡೆದ ಹರಾಜಿನಲ್ಲಿ ಭಾರತದ ಆಲ್‌ರೌಂಡರ್ ಯುವರಾಜ್ ಸಿಂಗ್ ಅವರನ್ನು ಡೆಲ್ಲಿ ಡೇರ್‌ಡೆವಿಲ್ಸ್  (ಡೆಲ್ಲಿ ಕ್ಯಾಪಿಟಲ್ಸ್) ಫ್ರಾಂಚೈಸಿ 16 ಕೋಟಿ ರೂಪಾಯಿಗೆ ಖರೀದಿಸಿತು. ಭಾರತದ ಪರ ಅಧಿಕ ಮೊತ್ತ ಪಡೆದ ಆಟಗಾರ ಎನಿಸಿದ್ದಾರೆ.
(8 / 11)
2015ರ ಐಪಿಎಲ್ ಆವೃತ್ತಿಗಾಗಿ ನಡೆದ ಹರಾಜಿನಲ್ಲಿ ಭಾರತದ ಆಲ್‌ರೌಂಡರ್ ಯುವರಾಜ್ ಸಿಂಗ್ ಅವರನ್ನು ಡೆಲ್ಲಿ ಡೇರ್‌ಡೆವಿಲ್ಸ್  (ಡೆಲ್ಲಿ ಕ್ಯಾಪಿಟಲ್ಸ್) ಫ್ರಾಂಚೈಸಿ 16 ಕೋಟಿ ರೂಪಾಯಿಗೆ ಖರೀದಿಸಿತು. ಭಾರತದ ಪರ ಅಧಿಕ ಮೊತ್ತ ಪಡೆದ ಆಟಗಾರ ಎನಿಸಿದ್ದಾರೆ.
2020ರ ಹರಾಜಿನಲ್ಲಿ ಆಸ್ಟ್ರೇಲಿಯಾದ ಆಲ್‌ರೌಂಡರ್ ಪ್ಯಾಟ್ ಕಮಿನ್ಸ್ ಅವರನ್ನು ಕೋಲ್ಕತ್ತಾ ನೈಟ್ ರೈಡರ್ಸ್ 15.50 ಕೋಟಿ ರೂಪಾಯಿಗೆ ತೆಗೆದುಕೊಂಡಿತು. ಅವರು ಎರಡು ಬಾರಿ ದುಬಾರಿ ಆಟಗಾರ ಎನಿಸಿದ್ದಾರೆ.
(9 / 11)
2020ರ ಹರಾಜಿನಲ್ಲಿ ಆಸ್ಟ್ರೇಲಿಯಾದ ಆಲ್‌ರೌಂಡರ್ ಪ್ಯಾಟ್ ಕಮಿನ್ಸ್ ಅವರನ್ನು ಕೋಲ್ಕತ್ತಾ ನೈಟ್ ರೈಡರ್ಸ್ 15.50 ಕೋಟಿ ರೂಪಾಯಿಗೆ ತೆಗೆದುಕೊಂಡಿತು. ಅವರು ಎರಡು ಬಾರಿ ದುಬಾರಿ ಆಟಗಾರ ಎನಿಸಿದ್ದಾರೆ.(ICC Twitter)
2022ರ ಆವೃತ್ತಿಯ ಮೆಗಾ ಹರಾಜಿನಲ್ಲಿ ಭಾರತದ ಸ್ಟಾರ್ ವಿಕೆಟ್-ಕೀಪರ್ ಬ್ಯಾಟ್ಸ್‌ಮನ್ ಇಶಾನ್ ಕಿಶನ್ ಅವರನ್ನು ಮುಂಬೈ ಇಂಡಿಯನ್ಸ್ 15.25 ಕೋಟಿಗೆ ಡೀಲ್ ಕುದುರಿಸಿತ್ತು. ದುಬಾರಿ ಆಟಗಾರರ ಈ ಪಟ್ಟಿಯಲ್ಲಿ 10ನೇ ಸ್ಥಾನದಲ್ಲಿದ್ದಾರೆ.
(10 / 11)
2022ರ ಆವೃತ್ತಿಯ ಮೆಗಾ ಹರಾಜಿನಲ್ಲಿ ಭಾರತದ ಸ್ಟಾರ್ ವಿಕೆಟ್-ಕೀಪರ್ ಬ್ಯಾಟ್ಸ್‌ಮನ್ ಇಶಾನ್ ಕಿಶನ್ ಅವರನ್ನು ಮುಂಬೈ ಇಂಡಿಯನ್ಸ್ 15.25 ಕೋಟಿಗೆ ಡೀಲ್ ಕುದುರಿಸಿತ್ತು. ದುಬಾರಿ ಆಟಗಾರರ ಈ ಪಟ್ಟಿಯಲ್ಲಿ 10ನೇ ಸ್ಥಾನದಲ್ಲಿದ್ದಾರೆ.(PTI)
ಐಪಿಎಲ್ ಹರಾಜು ನಡೆದ ಸಂದರ್ಭ.
(11 / 11)
ಐಪಿಎಲ್ ಹರಾಜು ನಡೆದ ಸಂದರ್ಭ.

    ಹಂಚಿಕೊಳ್ಳಲು ಲೇಖನಗಳು