logo
ಕನ್ನಡ ಸುದ್ದಿ  /  ಫೋಟೋ ಗ್ಯಾಲರಿ  /  ಆರೆಂಜ್ ಕ್ಯಾಪ್ ರೇಸ್​ಗಿಳಿದ ಶತಕ ಸಿಡಿಸಿದ ಸುನಿಲ್ ನರೈನ್-ಜೋಸ್ ಬಟ್ಲರ್; ಇಲ್ಲಿದೆ ಆರೆಂಜ್-ಪರ್ಪಲ್ ಕ್ಯಾಪ್​ ಪಟ್ಟಿ

ಆರೆಂಜ್ ಕ್ಯಾಪ್ ರೇಸ್​ಗಿಳಿದ ಶತಕ ಸಿಡಿಸಿದ ಸುನಿಲ್ ನರೈನ್-ಜೋಸ್ ಬಟ್ಲರ್; ಇಲ್ಲಿದೆ ಆರೆಂಜ್-ಪರ್ಪಲ್ ಕ್ಯಾಪ್​ ಪಟ್ಟಿ

Apr 17, 2024 04:03 PM IST

IPL 2024 Orange Cap-Purple Cap : ಐಪಿಎಲ್​​ನಲ್ಲಿ ಆರೆಂಜ್ ಕ್ಯಾಪ್-ಪರ್ಪಲ್ ಕ್ಯಾಪ್ ನಡುವೆ ಪೈಪೋಟಿ ನಡೆಯುತ್ತಿದೆ. ತಲಾ ಶತಕ ಸುನಿಲ್ ನರೇನ್ ಮತ್ತು ಜೋಸ್ ಬಟ್ಲರ್​ ಕೂಡ ಆರೆಂಜ್​ ಕ್ಯಾಪ್ ರೇಸ್​ಗಿಳಿದಿದ್ದರೆ, ಯುಜ್ವೇಂದ್ರ ಚಹಲ್ ಪರ್ಪಲ್ ಕ್ಯಾಪ್ ತನ್ನಲ್ಲೇ ಉಳಿಸಿಕೊಂಡಿದ್ದಾರೆ. ಯಾರ್ಯಾರ ನಡುವೆ ಸ್ಪರ್ಧೆ ಏರ್ಪಟ್ಟಿದೆ. ಬನ್ನಿ ನೋಡೋಣ.

  • IPL 2024 Orange Cap-Purple Cap : ಐಪಿಎಲ್​​ನಲ್ಲಿ ಆರೆಂಜ್ ಕ್ಯಾಪ್-ಪರ್ಪಲ್ ಕ್ಯಾಪ್ ನಡುವೆ ಪೈಪೋಟಿ ನಡೆಯುತ್ತಿದೆ. ತಲಾ ಶತಕ ಸುನಿಲ್ ನರೇನ್ ಮತ್ತು ಜೋಸ್ ಬಟ್ಲರ್​ ಕೂಡ ಆರೆಂಜ್​ ಕ್ಯಾಪ್ ರೇಸ್​ಗಿಳಿದಿದ್ದರೆ, ಯುಜ್ವೇಂದ್ರ ಚಹಲ್ ಪರ್ಪಲ್ ಕ್ಯಾಪ್ ತನ್ನಲ್ಲೇ ಉಳಿಸಿಕೊಂಡಿದ್ದಾರೆ. ಯಾರ್ಯಾರ ನಡುವೆ ಸ್ಪರ್ಧೆ ಏರ್ಪಟ್ಟಿದೆ. ಬನ್ನಿ ನೋಡೋಣ.
ಏಪ್ರಿಲ್ 16ರಂದು ಕೋಲ್ಕತ್ತಾ ನೈಟ್ ರೈಡರ್ಸ್ ಮತ್ತು ರಾಜಸ್ಥಾನ್ ರಾಯಲ್ಸ್ ನಡುವಿನ ಪಂದ್ಯದಲ್ಲಿ ಕೆಕೆಆರ್​ ಪರ ಸುನಿಲ್ ನರೈನ್ ಮತ್ತು ಆರ್​ಆರ್​​ ಪರ ಜೋಸ್ ಬಟ್ಲರ್ ಶತಕ ಸಿಡಿಸಿ ಆರೆಂಜ್ ಕ್ಯಾಪ್ ರೇಸ್​ಗಿಳಿದಿದ್ದಾರೆ. 2024ರ ಐಪಿಎಲ್​ನ ಏಪ್ರಿಲ್ 16ರಂದು ನಡೆದ ಕೋಲ್ಕತ್ತಾ ಮತ್ತು ರಾಜಸ್ಥಾನ್​​​ ಪಂದ್ಯದ ಅಂತ್ಯಕ್ಕೆ ಪರ್ಪಲ್ ಕ್ಯಾಪ್ ಮತ್ತು ಆರೆಂಜ್ ಕ್ಯಾಪ್ ನಡುವೆ ಯಾರ ಯಾರ ನಡುವೆ ಸ್ಪರ್ಧೆ ನಡೆಯುತ್ತಿದೆ ಎಂಬುದನ್ನು ಈ ಮುಂದೆ ನೋಡೋಣ.
(1 / 12)

ವಿರಾಟ್ ಕೊಹ್ಲಿ ಪ್ರಸಕ್ತ ಐಪಿಎಲ್​ನಲ್ಲಿ ಅತ್ಯಧಿಕ ರನ್ ಗಳಿಸಿದ ಆಟಗಾರನಾಗಿದ್ದಾರೆ. ಇದುವರೆಗೆ ಆಡಿರುವ 7 ಪಂದ್ಯಗಳಲ್ಲಿ 2 ಅರ್ಧಶತಕ, 1 ಶತಕ ಸಹಿತ 361 ರನ್ ಗಳಿಸಿದ್ದಾರೆ.
(2 / 12)

ರಾಜಸ್ಥಾನ್ ರಾಯಲ್ಸ್​​​ ತಂಡದ ರಿಯಾನ್ ಪರಾಗ್ 7 ಪಂದ್ಯಗಳಲ್ಲಿ 3 ಹಾಫ್ ಸೆಂಚುರಿ ಸಹಿತ 318 ರನ್ ಗಳಿಸಿ 2ನೇ ಸ್ಥಾನದಲ್ಲಿದ್ದಾರೆ.
(3 / 12)

ಕೆಕೆಆರ್​​ನ ಸುನಿಲ್ ನರೈನ್ ರಾಜಸ್ಥಾನ್ ವಿರುದ್ಧ ಶತಕದೊಂದಿಗೆ ಆರೆಂಜ್ ಕ್ಯಾಪ್​​ ರೇಸ್​​​ನಲ್ಲಿ 3ನೇ ಸ್ಥಾನಕ್ಕೆ ಏರಿದ್ದಾರೆ. ಈವರೆಗೆ 6 ಪಂದ್ಯಗಳಲ್ಲಿ 1 ಶತಕ, 1 ಅರ್ಧಶತಕದ ನೆರವಿನೊಂದಿಗೆ 276 ರನ್ ಗಳಿಸಿದ್ದಾರೆ.
(4 / 12)

ರಾಜಸ್ಥಾನ್ ರಾಯಲ್ಸ್ ನಾಯಕ ಸಂಜು ಸ್ಯಾಮ್ಸನ್ 276 ರನ್ ಗಳಿಸಿ ನಾಲ್ಕನೇ ಸ್ಥಾನದಲ್ಲಿದ್ದಾರೆ. ಸಂಜು ಮತ್ತು ಸುನಿಲ್ ರನ್ ಒಂದೇ ಆಗಿದ್ದರೂ, ನರೇನ್ ಸ್ಟ್ರೈಕ್​ರೇಟ್ ಹೆಚ್ಚಾಗಿದ್ದು, ಸಂಜುಗಿಂತ ಮುಂದಾಗಿದ್ದಾರೆ.
(5 / 12)

ರೋಹಿತ್ ಶರ್ಮಾ ಆರು ಪಂದ್ಯಗಳಿಂದ 261 ರನ್ ಗಳಿಸಿ ಐದನೇ ಸ್ಥಾನದಲ್ಲಿದ್ದರೆ, ಗುಜರಾತ್ ನಾಯಕ ಶುಭ್ಮನ್ ಗಿಲ್ ಆರು ಪಂದ್ಯಗಳಿಂದ 255 ರನ್ ಗಳಿಸಿ ಆರನೇ ಸ್ಥಾನದಲ್ಲಿದ್ದಾರೆ. 
(6 / 12)

ಸನ್​​ರೈಸರ್ಸ್​ ಹೈದರಾಬಾದ್​​ ಹೆನ್ರಿಕ್ ಕ್ಲಾಸೆನ್ ಆರು ಪಂದ್ಯಗಳಿಂದ 253 ರನ್​ಗಳೊಂದಿಗೆ 7ನೇ ಸ್ಥಾನದಲ್ಲಿದ್ದರೆ, ಕೆಕೆಆರ್ ವಿರುದ್ಧ ಶತಕ ಗಳಿಸಿದ ಜೋಸ್ ಬಟ್ಲರ್ ಈಗ 250 ರನ್​​ಗಳೊಂದಿಗೆ ಎಂಟನೇ ಸ್ಥಾನದಲ್ಲಿದ್ದಾರೆ. ಚೆನ್ನೈನ ಶಿವಂ ದುಬೆ (242 ರನ್) ಒಂಬತ್ತನೇ ಸ್ಥಾನದಲ್ಲಿದ್ದರೆ, ಹೈದರಾಬಾದ್​ನ ಟ್ರಾವಿಸ್ ಹೆಡ್ (235 ರನ್) ಹತ್ತನೇ ಸ್ಥಾನದಲ್ಲಿದ್ದಾರೆ.
(7 / 12)

ಪರ್ಪಲ್ ಕ್ಯಾಪ್ ಪಟ್ಟಿಯಲ್ಲಿ ಆರ್​​ಆರ್​​ ಯುಜ್ವೇಂದ್ರ ಚಹಲ್ ಮಂಗಳವಾರ (ಏಪ್ರಿಲ್ 16) ಕೆಕೆಆರ್ ವಿರುದ್ಧ 1 ವಿಕೆಟ್ ಪಡೆದು ಪಟ್ಟಿಯಲ್ಲಿ ಅಗ್ರಸ್ಥಾನ ಭದ್ರಪಡಿಸಿಕೊಂಡಿದ್ದಾರೆ. ಐಪಿಎಲ್​ನಲ್ಲಿ ಚಹಲ್ ಈವರೆಗೆ 7 ಪಂದ್ಯಗಳಲ್ಲಿ 12 ವಿಕೆಟ್​ ಪಡೆದಿದ್ದಾರೆ.
(8 / 12)

ಐಪಿಎಲ್ 2024ರಲ್ಲಿ ಮುಂಬೈ ಇಂಡಿಯನ್ಸ್​ನ ಜಸ್ಪ್ರೀತ್ ಬುಮ್ರಾ ಎರಡನೇ ಅತಿ ಹೆಚ್ಚು ವಿಕೆಟ್ ಪಡೆದ ಆಟಗಾರನಾಗಿದ್ದಾರೆ. ಬುಮ್ರಾ ಇದುವರೆಗೆ 6 ಪಂದ್ಯಗಳಲ್ಲಿ 10 ವಿಕೆಟ್​ ಪಡೆದಿದ್ದಾರೆ.
(9 / 12)

ಚೆನ್ನೈ ಸೂಪರ್ ಕಿಂಗ್ಸ್​​ ವೇಗಿ ಮುಸ್ತಾಫಿಜುರ್ ರೆಹಮಾನ್ 3ನೇ ಸ್ಥಾನದಲ್ಲಿದ್ದಾರೆ. ಸಿಎಸ್​ಕೆ ಸ್ಟಾರ್ ವೇಗಿ 5 ಪಂದ್ಯಗಳಲ್ಲಿ 10 ವಿಕೆಟ್ ಪಡೆದಿದ್ದಾರೆ. ಬುಮ್ರಾ ಅವರಷ್ಟೇ ವಿಕೆಟ್​​ಗಳನ್ನು ಪಡೆದಿದ್ದರೂ ಅವರು ಎಕಾನಮಿ ರೇಟ್​​​ನಲ್ಲಿ ಹಿಂದುಳಿದಿದ್ದಾರೆ. 
(10 / 12)

ಸನ್​ರೈಸರ್ಸ್​ ಹೈದರಾಬಾದ್ ನಾಯಕ ಪ್ಯಾಟ್ ಕಮಿನ್ಸ್ 6 ಪಂದ್ಯಗಳಿಂದ 9 ವಿಕೆಟ್​ಗಳೊಂದಿಗೆ ಪರ್ಪಲ್ ಕ್ಯಾಪ್ ಪಟ್ಟಿಯಲ್ಲಿ ನಾಲ್ಕನೇ ಸ್ಥಾನದಲ್ಲಿದ್ದಾರೆ.
(11 / 12)

ಐಪಿಎಲ್ 2024ರಲ್ಲಿ ಅತಿ ಹೆಚ್ಚು ವಿಕೆಟ್ ಪಡೆದ ಬೌಲರ್​​ಗಳ ಪಟ್ಟಿಯಲ್ಲಿ ಪಂಜಾಬ್ ಕಿಂಗ್ಸ್​ ಬೌಲರ್​ ಕಗಿಸೊ ರಬಾಡ 5ನೇ ಸ್ಥಾನದಲ್ಲಿದ್ದಾರೆ. ಆರು ಪಂದ್ಯಗಳಲ್ಲಿ ಒಂಬತ್ತು ವಿಕೆಟ್​ ಪಡೆದಿದ್ದಾರೆ.
(12 / 12)

    ಹಂಚಿಕೊಳ್ಳಲು ಲೇಖನಗಳು