logo
ಕನ್ನಡ ಸುದ್ದಿ  /  ಫೋಟೋ ಗ್ಯಾಲರಿ  /  ಐಪಿಎಲ್-2024ರಲ್ಲಿ ಅಬ್ಬರಿಸಿದ ಮೂವರ ರಿಟೇನ್​ಗೆ ಎಸ್​ಆರ್​​ಹೆಚ್ ಚಿಂತನೆ; ಪ್ಯಾಟ್ ಕಮಿನ್ಸ್​ಗಿಲ್ಲ ಅವಕಾಶ

ಐಪಿಎಲ್-2024ರಲ್ಲಿ ಅಬ್ಬರಿಸಿದ ಮೂವರ ರಿಟೇನ್​ಗೆ ಎಸ್​ಆರ್​​ಹೆಚ್ ಚಿಂತನೆ; ಪ್ಯಾಟ್ ಕಮಿನ್ಸ್​ಗಿಲ್ಲ ಅವಕಾಶ

Aug 21, 2024 05:13 PM IST

Sunrisers Hyderabad: ಐಪಿಎಲ್ 2025ರ ಮೆಗಾ ಹರಾಜಿಗೂ ಮುನ್ನ ಸನ್​ರೈಸರ್ಸ್ ಹೈದರಾಬಾದ್ ತಂಡ ಉಳಿಸಿಕೊಳ್ಳಬಹುದಾದ ಮೂವರು ಆಟಗಾರರ ಪಟ್ಟಿ ಇಲ್ಲಿದೆ ನೋಡಿ.

  • Sunrisers Hyderabad: ಐಪಿಎಲ್ 2025ರ ಮೆಗಾ ಹರಾಜಿಗೂ ಮುನ್ನ ಸನ್​ರೈಸರ್ಸ್ ಹೈದರಾಬಾದ್ ತಂಡ ಉಳಿಸಿಕೊಳ್ಳಬಹುದಾದ ಮೂವರು ಆಟಗಾರರ ಪಟ್ಟಿ ಇಲ್ಲಿದೆ ನೋಡಿ.
2024ರ ಐಪಿಎಲ್​ನಲ್ಲಿ ರನ್ನರ್​ಅಪ್​ ಆಗಿದ್ದ ಸನ್​ರೈಸರ್ಸ್ ಹೈದರಾಬಾದ್, ಮೆಗಾ ಹರಾಜಿಗೂ ಮುನ್ನ ಸಿದ್ಧತೆ ಆರಂಭಿಸಿದೆ, ಈ ಬಾರಿ ಫೈನಲ್​ನಲ್ಲಿ ಕೆಕೆಆರ್ ವಿರುದ್ಧ ಹೀನಾಯ ಸೋಲು ಕಂಡು ಎರಡನೇ ಪ್ರಶಸ್ತಿ ಗೆಲ್ಲಲು ವಿಫಲವಾಗಿತ್ತು.
(1 / 5)

ಟೂರ್ನಿಯಲ್ಲಿ ಟ್ರೋಫಿ ಗೆಲ್ಲದಿದ್ದರೂ ತನ್ನ ಅದ್ಭುತ ಆಟದ ಮೂಲಕ ಇಡೀ ಜಗತ್ತನ್ನೇ ತನ್ನ ಗಮನ ಸೆಳೆದಿತ್ತು. ಆಕ್ರಮಣಕಾರಿ ಆಟದ ಮೂಲಕ ಎದುರಾಳಿ ತಂಡಗಳಿಗೆ ನಡುಕ ಸೃಷ್ಟಿಸಿತ್ತು. ಇದೀಗ ಮೆಗಾ ಹರಾಜಿಗೂ ಮುನ್ನ ಯಾರನ್ನು ಉಳಿಸಿಕೊಳ್ಳಬೇಕು ಎಂಬ ಚರ್ಚೆ ನಡೆಸುತ್ತಿದೆ. ಇದರ ನಡುವೆ ಈ ಮೂವರನ್ನು ಉಳಿಸಿಕೊಳ್ಳಲು ನಿರ್ಧರಿಸಿದೆ ಎಂದು ವರದಿಯಾಗಿದೆ.
(2 / 5)

ಹೆನ್ರಿಚ್ ಕ್ಲಾಸೆನ್: ಈತನ ಉಳಿಸಿಕೊಳ್ಳಲು ಎಸ್​ಆರ್​ಹೆಚ್​ ಭಾರಿ ಉತ್ಸುಕ ತೋರುತ್ತಿದೆ. ಈ ಬಾರಿ ಐಪಿಎಲ್​ನಲ್ಲಿ 16 ಪಂದ್ಯಗಳ 15 ಇನ್ನಿಂಗ್ಸ್​​ಗಳಲ್ಲಿ ಕಣಕ್ಕಿಳಿದ ದಕ್ಷಿಣ ಆಫ್ರಿಕಾದ ಸ್ಟಾರ್ ಆಟಗಾರ 39.91 ಸರಾಸರಿಯಲ್ಲಿ 479 ರನ್ ಗಳಿಸಿದ್ದಾರೆ. 171.07ರ ವಿನಾಶಕಾರಿ ಸ್ಟ್ರೈಕ್ ರೇಟ್​​ನಲ್ಲಿ ರನ್ ಕಲೆ ಹಾಕಿದರು. ಟೂರ್ನಿಯಲ್ಲಿ ಒಟ್ಟು 38 ಸಿಕ್ಸರ್​ ಬಾರಿಸಿದರು. ಎಂಥಹ ಮ್ಯಾಚ್​​​ಗೆ ಬೇಕಾದರೂ ಟರ್ನಿಂಗ್ ನೀಡುವ ಸಾಮರ್ಥ್ಯ ಹೊಂದಿರುವ ಕ್ಲಾಸೆನ್​ರನ್ನು ತಂಡದಲ್ಲೇ ಇಟ್ಟುಕೊಳ್ಳಲು ಫ್ರಾಂಚೈಸಿ ಚಿಂತಿಸಿದೆ.
(3 / 5)

ಸನ್​ರೈಸರ್ಸ್ ಹೈದರಾಬಾದ್ ಆಸ್ಟ್ರೇಲಿಯಾದ ಸ್ಟಾರ್ ಆಟಗಾರ ಟ್ರಾವಿಸ್ ಹೆಡ್​ ಅವರನ್ನು ಹರಾಜಿಗೆ ಮುಂಚಿತವಾಗಿ ಉಳಿಸಿಕೊಳ್ಳುವ ಸಾಧ್ಯತೆಯಿದೆ. ಈ ಐಪಿಎಲ್​ನಲ್ಲಿ 15 ಇನ್ನಿಂಗ್ಸ್​​ಗಳಲ್ಲಿ ಟ್ರಾವಿಸ್ 40.50 ಸರಾಸರಿಯಲ್ಲಿ 567 ರನ್ ಗಳಿಸಿದ್ದಾರೆ. 1 ಶತಕ ಮತ್ತು 4 ಅರ್ಧಶತಕ ಸಿಡಿಸಿದರು. ಸಹಿತ 191.55 ಸ್ಟ್ರೈಕ್ ರೇಟ್​​ನಲ್ಲಿ ರನ್ ಗಳಿಸಿದರು. ಟೂರ್ನಿಯಲ್ಲಿ 32 ಸಿಕ್ಸರ್ ಬಾರಿಸಿದರು. ಅದ್ಭುತ ಪ್ರದರ್ಶನ ನೀಡಿ ತಂಡವನ್ನು ಫೈನಲ್​ ತನಕ ಕೊಡೊಂಯ್ದ ಹೆಡ್​ರನ್ನು ತಂಡದಲ್ಲೇ ಉಳಿಸಿಕೊಳ್ಳಲು ಫ್ರಾಂಚೈಸಿ ನಿರ್ಧರಿಸಿದೆ.
(4 / 5)

ಭಾರತದ ಯುವ ಕ್ರಿಕೆಟಿಗ ಅಭಿಷೇಕ್ ಶರ್ಮಾ ಅವರನ್ನು ಎಸ್​ಆರ್​ಹೆಚ್ ತಮ್ಮ ತಂಡದಲ್ಲೇ ಉಳಿಸಿಕೊಳ್ಳಲು ಬಯಸಿದೆ. ಈ ಐಪಿಎಲ್​ನಲ್ಲಿ ಅತ್ಯುತ್ತಮ ಪ್ರದರ್ಶನ ನೀಡಿದ ಹಿನ್ನೆಲೆ ಆತ ಭಾರತ ತಂಡಕ್ಕೂ ಆಯ್ಕೆಯಾದರು. ಈ ಸಲ ಟೂರ್ನಿಯಲ್ಲಿ 16 ಇನ್ನಿಂಗ್ಸ್​​ಗಳಲ್ಲಿ ಬ್ಯಾಟಿಂಗ್ ಮಾಡಿದ ಅಭಿಷೇಕ್ ಶರ್ಮಾ 32.26 ಸರಾಸರಿಯಲ್ಲಿ 484 ರನ್ ಗಳಿಸಿದ್ದಾರೆ. ಅವರು ಮೂರು ಅರ್ಧಶತಕ ಗಳಿಸಿದರು. ಅವರ ಸ್ಟ್ರೈಕ್ ರೇಟ್ 204.21 ಆಗಿತ್ತು. ಚೊಚ್ಚಲ ಪಂದ್ಯಾವಳಿಯಲ್ಲಿ ಅವರು ಒಟ್ಟು 42 ಸಿಕ್ಸರ್ ಗಳಿಸಿದರು. ಆದರೆ ನಾಯಕ ಪ್ಯಾಟ್ ಕಮಿನ್ಸ್ ಅವರನ್ನು ಕೈಬಿಡಲು ಫ್ರಾಂಚೈಸಿ ನಿರ್ಧರಿಸಿದೆ. ಏಕೆಂದರೆ ಅವರಿಗೆ 20.50 ಕೋಟಿ ಉಳಿಸಿಕೊಳ್ಳಲು ಬಯಸುತ್ತಿಲ್ಲ.
(5 / 5)

    ಹಂಚಿಕೊಳ್ಳಲು ಲೇಖನಗಳು