logo
ಕನ್ನಡ ಸುದ್ದಿ  /  ಫೋಟೋ ಗ್ಯಾಲರಿ  /  ಕಲ್ಯಾಣ ಕರ್ನಾಟಕ ಉತ್ಸವ; ಅಮೆರಿಕಾದಿಂದ ಬಂದ ಡಿಕೆಶಿ ಭಾಗಿ, ಹೇಗಿತ್ತು ಸಡಗರದ ಕ್ಷಣಗಳು

ಕಲ್ಯಾಣ ಕರ್ನಾಟಕ ಉತ್ಸವ; ಅಮೆರಿಕಾದಿಂದ ಬಂದ ಡಿಕೆಶಿ ಭಾಗಿ, ಹೇಗಿತ್ತು ಸಡಗರದ ಕ್ಷಣಗಳು

Sep 17, 2024 03:01 PM IST

ಕಲ್ಯಾಣ ಕರ್ನಾಟಕದ ಕೇಂದ್ರ ಸ್ಥಾನ ಕಲಬುರಗಿಯಲ್ಲಿ ಮಂಗಳವಾರ ಕಲ್ಯಾಣ ಕರ್ನಾಟಕ ಉತ್ಸವದ ಕಾರ್ಯಕ್ರಮಗಳು ಜರುಗಿದವು. ಪಥಸಂಚಲನ, ಗೌರವ ವಂದನೆ, ಮೆರವಣಿಗೆ, ಅಭಿವೃದ್ದಿ ಕಾರ್ಯಕ್ರಮಕ್ಕೆ ಚಾಲನೆಗಳೊಂದಿಗೆ ಉತ್ಸವ ನಡೆಯಿತು.

  • ಕಲ್ಯಾಣ ಕರ್ನಾಟಕದ ಕೇಂದ್ರ ಸ್ಥಾನ ಕಲಬುರಗಿಯಲ್ಲಿ ಮಂಗಳವಾರ ಕಲ್ಯಾಣ ಕರ್ನಾಟಕ ಉತ್ಸವದ ಕಾರ್ಯಕ್ರಮಗಳು ಜರುಗಿದವು. ಪಥಸಂಚಲನ, ಗೌರವ ವಂದನೆ, ಮೆರವಣಿಗೆ, ಅಭಿವೃದ್ದಿ ಕಾರ್ಯಕ್ರಮಕ್ಕೆ ಚಾಲನೆಗಳೊಂದಿಗೆ ಉತ್ಸವ ನಡೆಯಿತು.
ಅಮೆರಿಕಾ ಪ್ರವಾಸದಲ್ಲಿದ್ದ ಡಿಸಿಎಂ ಡಿ.ಕೆ.ಶಿವಕುಮಾರ್‌ ಅವರು ಮಂಗಳವಾರ ಕಲಬುರಗಿಯಲ್ಲಿ ನಡೆದ ಕಲ್ಯಾಣ ಕರ್ನಾಟಕ ಉತ್ಸವದಲ್ಲಿ ಭಾಗಿಯಾದರು. ಈ ವೇಳೆ ಸಿಎಂ ಸಿದ್ದರಾಮಯ್ಯ ಅವರೊಂದಿಗೆ ವೇದಿಕೆ ಹಂಚಿಕೊಂಡಿದ್ದು ಹೀಗೆ.
(1 / 7)

ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಕಲ್ಯಾಣ ಕರ್ನಾಟಕ ವಿಮೋಚನಾ ದಿನದ ಭಾಗವಾಗಿ ಕಲಬುರಗಿಯಲ್ಲಿ ಸರ್ದಾರ್‌ ವಲ್ಲಭಾ ಬಾಯ್‌ ಪಟೇಲ್‌ ಅವರ ಪ್ರತಿಮೆಗೆ ಮಾಲಾರ್ಪಣೆ ಮಾಡಿದರು.
(2 / 7)

ಕಲಬುರಗಿಯ ವಲ್ಲಭಾಬಾಯ್‌ ಚೌಕದಲ್ಲಿ ಸಚಿವ ಸಂಪುಟದ ಸದಸ್ಯರೊಂದಿಗೆ ಮಾಲಾರ್ಪಣೆ ಮಾಡಿ ಕಲ್ಯಾಣ ಕರ್ನಾಟಕ ಉತ್ಸವಕ್ಕೆ ಚಾಲನೆ ನೀಡಿದರು.
(3 / 7)

ಕಲಬುರಗಿಯ ಜಿಲ್ಲಾ ಕೇಂದ್ರದಲ್ಲಿ ಆಯೋಜನೆಗೊಂಡಿದ್ದ ಕಲ್ಯಾಣ ಕರ್ನಾಟಕದ ಉತ್ಸವದ ಮೆರವಣಿಗೆಯಲ್ಲಿ ಸಾಧನೆಯ ಸ್ಥಬ್ಧಚಿತ್ರಗಳು ಗಮನ ಸೆಳೆದವು.
(4 / 7)

ಕಲಬುರಗಿಯ ಜಿಲ್ಲಾ ಪೊಲೀಸ್‌ ಕವಾಯತು ಮೈದಾನದಲ್ಲಿ ನಡೆದ ಕಲ್ಯಾಣ ಕರ್ನಾಟಕ ಉತ್ಸವದ ಪಥ ಸಂಚಲನದಲ್ಲಿ ಸಿಎಂ ಸಿದ್ದರಾಮಯ್ಯ ಗೌರವ ವಂದನೆ ಸ್ವೀಕರಿಸಿದರು.
(5 / 7)

ಕಲ್ಯಾಣ ಕರ್ನಾಟಕ ಉತ್ಸವದ ಅಂಗವಾಗಿ ನಡೆದ ಪರೇಡ್‌ ನಲ್ಲಿ ಸಿಎಂ ಸಿದ್ದರಾಮಯ್ಯ ಅವರು ವಿವಿಧ ತಂಡಗಳ ಗೌರವ ವಂದನೆಯನ್ನು ಸ್ವೀಕರಿಸಿದರು.
(6 / 7)

ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು  ಕಲಬುರಗಿ ಉತ್ಸವದ ಹಿನ್ನೆಲೆಯಲ್ಲಿ ವಿವಿಧ ಅಭಿವೃದ್ದಿ ಕಾಮಗಾರಿಗೆ ಚಾಲನೆ ನೀಡಿದರು.ಕೆಕೆಆರ್‌ಟಿಸಿ ಹೊಸ್‌ ಗಳ ಸೇವೆಗೂ ಚಾಲನೆ ದೊರಕಿತು.
(7 / 7)

    ಹಂಚಿಕೊಳ್ಳಲು ಲೇಖನಗಳು