logo
ಕನ್ನಡ ಸುದ್ದಿ  /  ಫೋಟೋ ಗ್ಯಾಲರಿ  /  ಸುಷ್ಮಾ ರಾವ್‌, ರಚಿತಾ ಮಹಾಲಕ್ಷ್ಮಿ; ವೈವಾಹಿಕ ಬದುಕಿಗೆ ವಿದಾಯ ಹೇಳಿ ಒಂಟಿಯಾಗಿ ಬದುಕಬಲ್ಲೆ ಎಂದು ತೋರಿಸಿದ ಕಿರುತೆರೆ ನಟಿಯರಿವರು

ಸುಷ್ಮಾ ರಾವ್‌, ರಚಿತಾ ಮಹಾಲಕ್ಷ್ಮಿ; ವೈವಾಹಿಕ ಬದುಕಿಗೆ ವಿದಾಯ ಹೇಳಿ ಒಂಟಿಯಾಗಿ ಬದುಕಬಲ್ಲೆ ಎಂದು ತೋರಿಸಿದ ಕಿರುತೆರೆ ನಟಿಯರಿವರು

Oct 19, 2023 04:24 PM IST

ವೈವಾಹಿಕ ಬದುಕಿನಲ್ಲಿ ಏಳು ಬೀಳು ಸಹಜ. ಕಷ್ಟ ಸುಖ ಇದ್ದದ್ದೇ ಎಂದು ಕೆಲವರು ಅದರ ಜೊತೆ ಹೊಂದಿಕೊಂಡು ಹೋದರೆ ಇನ್ನೂ ಕೆಲವರು ಆ ಕಷ್ಟ ಸಹಿಸಲಾಗದೆ ಅದರಿಂದ ಹೊರ ಬರುತ್ತಾರೆ. 

ಜನ ಸಾಮಾನ್ಯರು ಮಾತ್ರವಲ್ಲ, ಸೆಲೆಬ್ರಿಟಿಗಳ ಜೀವನ ಕೂಡಾ ಇದಕ್ಕೆ ಹೊರತಾಗಿಲ್ಲ. ಕನ್ನಡ ಕಿರುತೆರೆಯ ಅನೇಕ ನಟಿಯರು ವೈವಾಹಿಕ ಬದುಕಿಗೆ ವಿದಾಯ ಹೇಳಿ ಮಕ್ಕಳೊಂದಿಗೆ ಜೀವನ ನಡೆಸುತ್ತಿದ್ದಾರೆ. ಕೆಲವರು ತಂದೆ ತಾಯಿಯೊಂದಿಗೆ ಸೆಟಲ್‌ ಆಗಿದ್ದಾರೆ. 
(1 / 11)
ಜನ ಸಾಮಾನ್ಯರು ಮಾತ್ರವಲ್ಲ, ಸೆಲೆಬ್ರಿಟಿಗಳ ಜೀವನ ಕೂಡಾ ಇದಕ್ಕೆ ಹೊರತಾಗಿಲ್ಲ. ಕನ್ನಡ ಕಿರುತೆರೆಯ ಅನೇಕ ನಟಿಯರು ವೈವಾಹಿಕ ಬದುಕಿಗೆ ವಿದಾಯ ಹೇಳಿ ಮಕ್ಕಳೊಂದಿಗೆ ಜೀವನ ನಡೆಸುತ್ತಿದ್ದಾರೆ. ಕೆಲವರು ತಂದೆ ತಾಯಿಯೊಂದಿಗೆ ಸೆಟಲ್‌ ಆಗಿದ್ದಾರೆ. (PC: Facebook, Instagram)
ಕಿರುತೆರೆ ನಟಿ ಸುಷ್ಮಾ ಕೆ ರಾವ್‌, ಸ್ಯಾಂಡಲ್‌ವುಡ್‌ ನಿರ್ದೇಶಕ ಪ್ರೀತಂ ಗುಬ್ಬಿ ಅವರನ್ನು ಮದುವೆ ಆಗಿದ್ದರು. ಆದರೆ ಈ ಜೋಡಿ ಈಗ ಡಿವೋರ್ಸ್‌ ಪಡೆದಿದೆ. ಸುಷ್ಮಾ ಭರತನಾಟ್ಯ ಕಲಾವಿದೆ. ನಿರೂಪಕಿ, ನಟಿಯಾಗಿ ಕೂಡಾ ಸೈ ಎನಿಸಿಕೊಂಡಿದ್ದಾರೆ. ಸದ್ಯಕ್ಕೆ ಅವರು ಭಾಗ್ಯಲಕ್ಷ್ಮೀ ಧಾರಾವಾಹಿಯಲ್ಲಿ ನಟಿಸುತ್ತಿದ್ದಾರೆ. 
(2 / 11)

ಪ್ಯಾಟೆ ಹುಡ್ಗೀರ್‌ ಹಳ್ಳಿ ಲೈಫು ಖ್ಯಾತಿಯ ರಮ್ಯಾ, ಆ ಶೋ ಆದಾಗಿನಿಂದ ಕೋಳಿ ರಮ್ಯಾ ಎಂದೇ ಫೇಮಸ್.‌ ನಟ ಶಿಶಿರ್‌ ಶಾಸ್ತ್ರಿಯನ್ನು ಮದುವೆ ಆಗಿದ್ದ ರಮ್ಯಾ ಈಗ ಡಿವೋರ್ಸ್‌ ಪಡೆದಿದ್ದಾರೆ. 
(3 / 11)

ಜ್ಯೋತಿ ರೈ ಇತ್ತೀಚೆಗೆ ಬಹಳ ಸುದ್ದಿಯಲ್ಲಿದ್ದಾರೆ. ಕನ್ನಡ ಸಿನಿಮಾ ಹಾಗೂ ಕಿರುತೆರೆಯಲ್ಲಿ ಪೋಷಕ ಪಾತ್ರಗಳಲ್ಲಿ ನಟಿಸುತ್ತಿದ್ದ ಜ್ಯೋತಿ ರೈ ಮೊದಲ ಪತಿಯಿಂದ ದೂರಾಗಿ 2ನೇ ಮದುವೆ ಆಗಿದ್ದಾರೆ. ಜ್ಯೋತಿಗೆ ಒಬ್ಬ ಮಗ ಕೂಡಾ ಇದ್ದಾನೆ. 
(4 / 11)

ಹಿರಿಯ ನಟಿ ಪದ್ಮಜಾ ರಾವ್‌ ಕೂಡಾ ಸಿಂಗಲ್‌ ಮದರ್.‌ ಅವರಿಗೆ ಸಂಜೀವ್‌ ಎಂಬ ಮಗ ಇದ್ದಾರೆ. ಪದ್ಮಜಾ ರಾವ್‌ ಸದ್ಯಕ್ಕೆ ಕಲರ್ಸ್‌ ಕನ್ನಡದಲ್ಲಿ ಪ್ರಸಾರವಾಗುತ್ತಿರುವ ಭಾಗ್ಯಲಕ್ಷ್ಮೀ ಧಾರಾವಾಹಿಯಲ್ಲಿ ಕುಸುಮಾ ಪಾತ್ರದಲ್ಲಿ ನಟಿಸುತ್ತಿದ್ದಾರೆ. 
(5 / 11)

ವಾರ್ತಾ ವಾಚಕಿ, ನನ್ನಮ್ಮ ಸೂಪರ್‌ ಸ್ಟಾರ್‌ ಮಾಜಿ ಸ್ಪರ್ಧಿ ಜಾಹ್ನವಿ ಕಾರ್ತಿಕ್‌ ಇತ್ತೀಚೆಗೆ ಡಿವೋರ್ಸ್‌ ಅರ್ಜಿ ಸಲ್ಲಿಸಿದ್ದು ಮಗನೊಂದಿಗೆ ವಾಸಿಸುತ್ತಿದ್ದಾರೆ. ಸಿನಿಮಾದಲ್ಲಿ ಕೂಡಾ ಜಾಹ್ನವಿ ನಟಿಸುತ್ತಿದ್ದಾರೆ. 
(6 / 11)

ಕಿರುತರೆ ನಟಿ ಅಪೂರ್ವ ಶ್ರೀ ಬೆಳ್ಳಿ ತೆರೆಯಲ್ಲೂ ಗುರುತಿಸಿಕೊಂಡಿದ್ದಾರೆ. ಅವರ ಪುತ್ರಿ ಚಿಕ್ಕ ಮಗುವಾಗಿದ್ದಾಗಲೇ ಪತಿ, ಅಪೂರ್ವ ಅವರನ್ನು ಬಿಟ್ಟು ಹೋಗಿದ್ದರು. ಅಂದಿನಿಂದ ಇದುವರೆಗೂ ಅಪೂರ್ವ ಸಿಂಗಲ್‌ ಮದರ್‌ ಆಗಿ ಮಗಳನ್ನು ಬೆಳೆಸಿದ್ದಾರೆ. ಇತ್ತೀಚೆಗೆ ಕಿರುತೆರೆಯ ಸೂಪರ್‌ ಕ್ವೀನ್‌ ಕಾರ್ಯಕ್ರಮದಲ್ಲಿ ಅಮ್ಮ ಮಗಳು ಜೊತೆಯಾಗಿ ಕಾಣಿಸಿಕೊಂಡಿದ್ದರು. 
(7 / 11)

ಭಾಗ್ಯಲಕ್ಷ್ಮೀ ಧಾರಾವಾಹಿಯಲ್ಲಿ ಸುನಂದಾ ಪಾತ್ರದಲ್ಲಿ ನಟಿಸುತ್ತಿರುವ ಸುನಿತಾ ಶೆಟ್ಟಿ ವೈವಾಹಿಕ ಬದುಕಿನಿಂದ ದೂರ ಇದ್ದಾರೆ. ಪ್ರೀತಿಸಿ ಮದುವೆ ಆದ ಪತಿ ಇವನ್ನು ಬಿಟ್ಟುಹೋಗಿದ್ದಾರೆ. ಅಂದಿನಿಂದ ಸುನಿತಾ ಹಠದಿಂದ ಇಬ್ಬರು ಮಕ್ಕಳನ್ನು ಬೆಳೆಸಿ ಅವರ ಕಾಲ ಮೇಲೆ ನಿಲ್ಲುವಂತೆ ಮಾಡಿದ್ದಾರೆ. 
(8 / 11)

ನಿರೂಪಕಿ, ಬಿಗ್‌ ಬಾಸ್‌ ಮಾಜಿ ಸ್ಪರ್ಧಿ ಚೈತ್ರಾ ವಾಸುದೇವನ್‌ ಇತ್ತೀಚೆಗೆ ಡಿವೋರ್ಸ್‌ ಪಡೆದಿದ್ದಾರೆ. ಈ ವಿಚಾರವನ್ನು ಅವರೇ ತಮ್ಮ ಸೋಷಿಯಲ್‌ ಮೀಡಿಯಾದಲ್ಲಿ ಹಂಚಿಕೊಂಡಿದ್ದರು. 
(9 / 11)

ಮಜಾ ಟಾಕೀಸ್‌ ಖ್ಯಾತಿಯ ರೇಖಾ ಮೋಹನ್‌ ಸಿಂಗರ್‌ ಆಗಿ ಕೂಡಾ ಫೇಮಸ್.‌ಪತಿಯಿಂದ ದೂರಾದ ನಂತರ ಮಗಳನ್ನು ತಾವೇ ಬೆಳೆಸುತ್ತಿದ್ದಾರೆ.  ಮಗಳು ಮೇಧಿನಿ ಈಗ ಪಿಯುಸಿ ಓದುತ್ತಿದ್ದಾರೆ. 
(10 / 11)

ಸೂರ್ಯ ಕಾಂತಿ, ಸೇವಂತಿ ಧಾರಾವಾಹಿ ನಟಿ ರಚಿತಾ ಮಹಾಲಕ್ಷ್ಮಿ ಈಗ ತಮಿಳಿನಲ್ಲಿ ಬ್ಯುಸಿ ಇದ್ದಾರೆ. ತಮಿಳಿನ ಸಹನಟ ದಿನೇಶ್‌ ಗೋಪಾಲಸ್ವಾಮಿ ಕೈ ಹಿಡಿದಿದ್ದ ಈ ಚೆಲುವೆ ಈಗ ಪತಿಯಿಂದ ಬೇರೆ ವಾಸಿಸುತ್ತಿದ್ದಾರೆ. ಇತ್ತೀಚೆಗೆ ರಚಿತಾ ತಮಿಳು ಬಿಗ್‌ ಬಾಸ್‌ ಸ್ಪರ್ಧಿಯಾಗಿ ಭಾಗವಹಿಸಿದ್ದರು. 
(11 / 11)

    ಹಂಚಿಕೊಳ್ಳಲು ಲೇಖನಗಳು