logo
ಕನ್ನಡ ಸುದ್ದಿ  /  ಫೋಟೋ ಗ್ಯಾಲರಿ  /  Hanuman Jayanti 2024: ಕರ್ನಾಟಕದ ಪ್ರಮುಖ ಹನುಮ ದೇಗುಲ, ಬೆಂಗಳೂರು,ಮೈಸೂರು, ಶಿಕಾರಿಪುರ, ಹಂಪಿ, ನುಗ್ಗಿಕೇರಿಯಲ್ಲಿ ಆಂಜನೇಯನ ಸ್ಮರಣೆ

hanuman jayanti 2024: ಕರ್ನಾಟಕದ ಪ್ರಮುಖ ಹನುಮ ದೇಗುಲ, ಬೆಂಗಳೂರು,ಮೈಸೂರು, ಶಿಕಾರಿಪುರ, ಹಂಪಿ, ನುಗ್ಗಿಕೇರಿಯಲ್ಲಿ ಆಂಜನೇಯನ ಸ್ಮರಣೆ

Apr 23, 2024 09:05 AM IST

 ಹನುಮಾನ್‌ ಹುಟ್ಟಿದ ನಾಡು ಕರ್ನಾಟಕ. ಇಲ್ಲಿ ಸಾಕಷ್ಟು ಕಡೆ ಆಂಜನೇಯ ದೇಗುಲಗಳಿವೆ. ಇದರಲ್ಲಿ ಹತ್ತು ಪ್ರಮುಖ ದೇಗುಲಗಳ ಪಟ್ಟಿಯನ್ನು ಇಲ್ಲಿ ನೀಡಲಾಗಿದೆ. 

ಬೆಂಗಳೂರಿನ ರಾಗಿಗುಡ್ಡ ಶ್ರೀ ಪ್ರಸನ್ನ ಆಂಜನೇಯಸ್ವಾಮಿ ದೇವಸ್ಥಾನವನ್ನುರಾಗಿಗುಡ್ಡ ಆಂಜನೇಯ ದೇವಸ್ಥಾನ ಎಂದೇ ಕರೆಯಲಾಗುತ್ತದೆ. ಐದು ದಶಕದ ಹಿಂದೆ ಆರಂಭಗೊಂಡಿರುವ ದೇಗುಲವನ್ನು ಟ್ರಸ್ಟ್‌ ನಿರ್ವಹಿಸುತ್ತದೆ. ವಿಶೇಷ ಆಂಜನೇಯ ಮೂರ್ತಿ ಇಲ್ಲಿನ ಆಕರ್ಷಣೆ.
(1 / 10)

ಮೈಸೂರಿನ ನಂಜನಗೂಡು ರಸ್ತೆಯಲ್ಲಿರುವ ಗಣಪತಿ ಸಚ್ಚಿದಾನಂದ ಆಶ್ರಮದಲ್ಲಿ ನಿರ್ಮಿಸಲಾಗಿರುವ ಕಾರ್ಯಸಿದ್ದಿ ಆಂಜನೇಯ ದೇಗುಲ ಹಾಗೂ ಮೂರ್ತಿ ಇದು. 70 ಅಡಿ ಉದ್ದದ ಮೂರ್ತಿ ಇಲ್ಲಿನ ವಿಶೇಷ. ದಶಕದ ಹಿಂದೆ ಈ ದೇಗುಲ ಆರಂಭಗೊಂಡಿದೆ.
(2 / 10)

ದಾವಣಗೆರೆ ಜಿಲ್ಲೆ ಹೊನ್ನಾಳಿ ತಾಲ್ಲೂಕಿನ ಕುಂದೂರು ಗ್ರಾಮದಲ್ಲಿದೇ ಆಂಜನೇಯಸ್ವಾಮಿ ದೇಗುಲ. 600 ವರ್ಷಕ್ಕೂ ಹೆಚ್ಚು ಹಳೆಯ ದೇಗುಲವಿದು. ವ್ಯಾಸರಾಜ ನಿರ್ಮಿತ ದೇಗುಲ ಮುಜರಾಯಿ ಇಲಾಖೆ ಸುಪರ್ದಿಯಲ್ಲಿದೆ,
(3 / 10)

ಹಂಪಿಯಲ್ಲಿರುವ ಯಂತ್ರೋದ್ದಾರಕ ಆಂಜನೇಯ ದೇಗುಲವಿದು, ತುಂಗಭದ್ರಾ ನದಿ ತೀರದಲ್ಲಿರುವ ಈ ಸ್ಥಳವನ್ನು ಹನುಮ ಜನುಮ ಸ್ಥಳ ಎಂದು ಕರೆಯಲಾಗುತ್ತದೆ. 
(4 / 10)

ಹಾವೇರಿ ಜಿಲ್ಲೆ ಬ್ಯಾಡಗಿ ತಾಲ್ಲೂಕಿನ ಕದರಮಂಡಲಗಿಯ ಕಾಂತೇಶ ಕೂಡ ಪ್ರಮುಖ ಆಂಜನೇಯ ದೇವಾಲಯ. ಶಿವಮೊಗ್ಗ ಹಾಗೂ ಹಾವೇರಿ ಭಾಗದಲ್ಲಿ ಕಾಂತೇಶ- ಭ್ರಾಂತೇಶ ಹಾಗೂ ಶಾಂತೇಶ ಆಂಜನೇಯ ದೇಗುಲ ಬಲು ಜನಪ್ರಿಯ.
(5 / 10)

ಶಿವಮೊಗ್ಗ ಜಿಲ್ಲೆ ಶಿಕಾರಿಪುರ ಪಟ್ಟಣದಲ್ಲಿರುವ ಭ್ರಾಂತೇಶ ದೇಗುಲವಿದು. ಇದನ್ನು ಹುಚ್ಚೂರಾಯ ಸ್ವಾಮಿ ಎಂದೂ ಕರೆಯಲಾಗುತ್ತದೆ. ಜನರ ಭ್ರಾಂತುಗಳನ್ನು ಬಿಡಿಸುವ ಶಕ್ತಿ ಈ ದೇವರಿಗಿದೆ ಎನ್ನುವ ನಂಬಿಕೆ ಭಕ್ತರಲ್ಲಿದೆ. 
(6 / 10)

ಹಾವೇರಿ ಜಿಲ್ಲೆಯ ಹಿರೇಕೇರೂರು ತಾಲ್ಲೂಕಿನ ಸಾತೇನಹಳ್ಳಿ ಗ್ರಾಮದಲ್ಲಿರುವ ಶಾಂತೇಶ ದೇಗುಲ ಶಾಂತ ಮೂರ್ತಿ. ಇದು ಕೂಡ ಹಳೆಯ ದೇಗುಲ
(7 / 10)

ರಾಮನಗರ ಜಿಲ್ಲೆಯ ಚನ್ನಪಟ್ಟಣ ತಾಲ್ಲೂಕಿನ ಕೆಂಗಲ್‌ ಗ್ರಾಮದ ಆಂಜನೇಯಸ್ವಾಮಿ ದೇಗುಲ ಪುರಾತನವಾದದ್ದು ಹಾಗೂ ಶಕ್ತಿಯುತವಾದದ್ದು.
(8 / 10)

ಬಾಗಲಕೋಟೆ ನಗರದಿಂದ ಹತ್ತು ಕಿ.ಮಿ. ದೂರದಲ್ಲಿರುವ ತುಳಸಿಗೇರಿ ಆಂಜನೇಯಸ್ವಾಮಿ ದೇಗುಲವೂ ಪುರಾತನವಾದದ್ದು. ತಿರುಪತಿಗೆ ನಂಟು ಇರುವ  ಈ ದೇಗುಲದ ಜಾತ್ರೆ ವಿಶೇಷ.
(9 / 10)

ಧಾರವಾಡ ನಗರಕ್ಕೆ ಹೊಂದಿಕೊಂಡಂತೆ ಇರುವ ನುಗ್ಗಿಕೇರಿ ಆಂಜನೇಯ ದೇವಸ್ಥಾನವಿದು. ಇಲ್ಲಿಯೂ ನಿತ್ಯ ಪೂಜೆಗಳು ನಡೆಯುತ್ತವೆ.
(10 / 10)

    ಹಂಚಿಕೊಳ್ಳಲು ಲೇಖನಗಳು