logo
ಕನ್ನಡ ಸುದ್ದಿ  /  ಫೋಟೋ ಗ್ಯಾಲರಿ  /  ಬೆಂಗಳೂರಿನ ಮಾಣೆಕ್‌ ಷಾ ಪೆರೇಡ್‌ ಮೈದಾನದಲ್ಲಿ ಸ್ವಾತಂತ್ರ್ಯೋತ್ಸವ ಸಂಭ್ರಮ; ಗಮನ ಸೆಳೆದ ಪೆರೇಡ್‌, ಸಾಂಸ್ಕೃತಿಕ ಕಾರ್ಯಕ್ರಮಗಳು; ಪೋಟೊಸ್‌

ಬೆಂಗಳೂರಿನ ಮಾಣೆಕ್‌ ಷಾ ಪೆರೇಡ್‌ ಮೈದಾನದಲ್ಲಿ ಸ್ವಾತಂತ್ರ್ಯೋತ್ಸವ ಸಂಭ್ರಮ; ಗಮನ ಸೆಳೆದ ಪೆರೇಡ್‌, ಸಾಂಸ್ಕೃತಿಕ ಕಾರ್ಯಕ್ರಮಗಳು; ಪೋಟೊಸ್‌

Aug 15, 2023 11:39 AM IST

Bengaluru Independence Day Celebration: ಪ್ರತಿವರ್ಷದಂತೆ ಈ ವರ್ಷವೂ ರಾಜ್ಯ ರಾಜಧಾನಿ ಬೆಂಗಳೂರಿನ ಮಾಣೆಕ್‌ ಷಾ ಪೆರೇಡ್‌ ಮೈದಾನದಲ್ಲಿ ನಡೆದ ಸ್ವಾತಂತ್ರ್ಯೋತ್ಸವ ದಿನಾಚರಣೆ ಗಮನ ಸೆಳೆಯಿತು. ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳ ಜೊತೆಗೆ ಆಕರ್ಷಕ ಪೆರೇಡ್‌, ಮೋಟಾರ್‌ ಬೈಕ್‌ ಸಾಹಸ ಪ್ರದರ್ಶನ ಮೈ ನವಿರೇಳಿದವು.

  • Bengaluru Independence Day Celebration: ಪ್ರತಿವರ್ಷದಂತೆ ಈ ವರ್ಷವೂ ರಾಜ್ಯ ರಾಜಧಾನಿ ಬೆಂಗಳೂರಿನ ಮಾಣೆಕ್‌ ಷಾ ಪೆರೇಡ್‌ ಮೈದಾನದಲ್ಲಿ ನಡೆದ ಸ್ವಾತಂತ್ರ್ಯೋತ್ಸವ ದಿನಾಚರಣೆ ಗಮನ ಸೆಳೆಯಿತು. ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳ ಜೊತೆಗೆ ಆಕರ್ಷಕ ಪೆರೇಡ್‌, ಮೋಟಾರ್‌ ಬೈಕ್‌ ಸಾಹಸ ಪ್ರದರ್ಶನ ಮೈ ನವಿರೇಳಿದವು.
ರಾಜಧಾನಿಯಲ್ಲಿ ನಡೆದ ಸ್ವಾತಂತ್ರ್ಯೋತ್ಸವ ಕಾರ್ಯಕ್ರಮದಲ್ಲಿ ರಾಜ್ಯದ ವಿವಿಧ ಶಾಲೆಗಳ ಮಕ್ಕಳು ಸಾಂಸ್ಕೃತಿಕ ಕಾರ್ಯಕ್ರಮಗಳ ಮೂಲಕ ಗಮನ ಸೆಳೆದರು. ವೀರ ನಮನ, ವೀರಭೂಮಿ ವಿಧುರಾಶ್ವತ್ಥ ಧ್ವಜ ಸತ್ಯಾಗ್ರಹದಂತಹ ವಿಶೇಷ ಕಾರ್ಯಕ್ರಮಗಳು ನೋಡುಗರನ್ನು ರಂಜಿಸಿದವು. 
(1 / 7)

ವೀರಭೂಮಿ ವಿಧುರಾಶ್ವತ್ಥ ಧ್ವಜ ಸತ್ಯಾಗ್ರಹದ ನೃತ್ಯರೂಪಕವನ್ನು ಪ್ರಸ್ತುತಪಡಿಸುವ ಮೂಲಕ ಅಂದಿನ ಘಟನೆಯನ್ನು ನೆನಪಿಸುವಂತೆ ಮಾಡಿದ ಪುಟ್ಟ ಮಕ್ಕಳು. 
(2 / 7)

ಕೇಸರಿ, ಬಿಳಿ, ಹಸಿರು ಬಣ್ಣವನ್ನು ಮೈಗೆ ಬಳಿದುಕೊಂಡ ಮಕ್ಕಳು. ವಿಶೇಷ ಹಾಗೂ ವಿಭಿನ್ನವಾಗಿ ಸ್ವಾತಂತ್ರ್ಯೋತ್ಸವದ ಶುಭಾಶಯ ಕೋರಿದರು   
(3 / 7)

ಕೇಸರಿ ಸೀರೆ, ಪೂರ್ಣಕುಂಭವನ್ನು ಹೊತ್ತು ನಾಡದೇವತೆಯ ಮೆರವಣಿಗೆ ಮಾಡಿದ ಶಾಲಾ ಮಕ್ಕಳು ಮಾಣೆಕ್‌ ಷಾ ಪೆರೇಡ್‌ ಮೈದಾನದಲ್ಲಿ ಗಮನ ಸೆಳೆದರು. ಬಿಸಿಲಿನ ಝಳ ಮಧ್ಯೆಯೂ ನಸು ನಗುವಿನೊಂದಿಗೆ ಪೂರ್ಣಕುಂಭ ಹಿಡಿದು ಸಾಗುತ್ತಿರುವುದು ಕಂಡು ಬಂತು. 
(4 / 7)

ಧ್ವಜಾರೋಹಣದ ಬಳಿಕ ನಡೆದ ಪೊಲೀಸರು ಆಕರ್ಷಕ ಪಥಸಂಚಲನ ನಡೆಸಿದರು. ಈ ವೇಳೆ ಸಿಎಂ ಸಿದ್ದರಾಮಯ್ಯ ಸೆಲ್ಯೂಟ್‌ ಮಾಡುವ ಮೂಲಕ ಗೌರವ ಸಲ್ಲಿಸಿದರು. 
(5 / 7)

ಕಾರ್ಯಕ್ರಮದಲ್ಲಿ ಸಿಎಂ ಸಿದ್ದರಾಮಯ್ಯ, ಡಿಕೆ ಶಿವಕುಮಾರ್‌ ಸೇರಿದಂತೆ ಹಲವು ಗಣ್ಯರು ಭಾಗವಹಿಸಿದ್ದರು. 
(6 / 7)

ಸಿಎಂ ಸಿದ್ದರಾಮಯ್ಯ ಧ್ವಜಾರೋಹಣ ನೆರವೇರಿಸಿ, ಮಾತನಾಡಿದರು. 
(7 / 7)
ಸಿಎಂ ಸಿದ್ದರಾಮಯ್ಯ ಧ್ವಜಾರೋಹಣ ನೆರವೇರಿಸಿ, ಮಾತನಾಡಿದರು. 

    ಹಂಚಿಕೊಳ್ಳಲು ಲೇಖನಗಳು