logo
ಕನ್ನಡ ಸುದ್ದಿ  /  ಫೋಟೋ ಗ್ಯಾಲರಿ  /  ಧಾರವಾಡ ಜಿಲ್ಲೆಯಾದ್ಯಂತ ಎಡೆಬಿಡದೆ ಸುರಿದ ಮಳೆ; ಅವಳಿ ನಗರದಲ್ಲಿ ಎಲ್ಲೆಡೆ ನೀರು, ಮಳೆ ಅವಾಂತರದ ಫೋಟೋಸ್

ಧಾರವಾಡ ಜಿಲ್ಲೆಯಾದ್ಯಂತ ಎಡೆಬಿಡದೆ ಸುರಿದ ಮಳೆ; ಅವಳಿ ನಗರದಲ್ಲಿ ಎಲ್ಲೆಡೆ ನೀರು, ಮಳೆ ಅವಾಂತರದ ಫೋಟೋಸ್

Oct 11, 2024 11:17 AM IST

ಧಾರವಾಡ ಜಿಲ್ಲೆಯಾದ್ಯಂತ ಬುಧವಾರ ಹಾಗೂ ಗುರುವಾರ ಸುರಿದ ಭಾರಿ ಮಳೆಯಿಂದಾಗಿ ನಗರದ ಹಲವು ತಗ್ಗು ಪ್ರದೇಶಗಳಿಗೆ ನೀರು ನುಗ್ಗಿದೆ. ಅನೇಕ ಮುಖ್ಯ ರಸ್ತೆಗಳು ಕೆರೆಯಂತಾಗಿದ್ದು, ಕೆಲವೆಡೆ ಮರಗಳು ಧರೆಗುರುಳಿವೆ. ಬುಧವಾರ ಸಾಯಂಕಾಲ ಆರಂಭವಾದ ಮಳೆ,ರಾತ್ತಿ ವೇಳೆಗೆ ತುಸು ಕಡಿಮೆಯಾಗಿತ್ತು. ಗುರುವಾರ ಬೆಳಗಿನ ಜಾವದಿಂದಲೇ ರಭಸದ ಮಳೆ ಬಿದ್ದಿದೆ.

  • ಧಾರವಾಡ ಜಿಲ್ಲೆಯಾದ್ಯಂತ ಬುಧವಾರ ಹಾಗೂ ಗುರುವಾರ ಸುರಿದ ಭಾರಿ ಮಳೆಯಿಂದಾಗಿ ನಗರದ ಹಲವು ತಗ್ಗು ಪ್ರದೇಶಗಳಿಗೆ ನೀರು ನುಗ್ಗಿದೆ. ಅನೇಕ ಮುಖ್ಯ ರಸ್ತೆಗಳು ಕೆರೆಯಂತಾಗಿದ್ದು, ಕೆಲವೆಡೆ ಮರಗಳು ಧರೆಗುರುಳಿವೆ. ಬುಧವಾರ ಸಾಯಂಕಾಲ ಆರಂಭವಾದ ಮಳೆ,ರಾತ್ತಿ ವೇಳೆಗೆ ತುಸು ಕಡಿಮೆಯಾಗಿತ್ತು. ಗುರುವಾರ ಬೆಳಗಿನ ಜಾವದಿಂದಲೇ ರಭಸದ ಮಳೆ ಬಿದ್ದಿದೆ.
ಮಳೆಯಿಂದಾಗಿ ನವನಗರದ ಪಂಚಾಕ್ಷರಿ ನಗರದ ಒಂದೆರಡು ಮನೆಗಳಿಗೆ ನೀರು ನುಗ್ಗಿದೆ. ಹಳೇ ಹುಬ್ಬಳಿಯ ಗಣೇಶ ಕಾಲೊನಿ, ಆನಂದನಗರ, ಶಿಮ್ಲಾನಗರ ಹಾಗೂ ಪಿಬಿ ರಸ್ತೆ, ದಾಜಿಬಾನಪೇಟೆ, ವಿದ್ಯಾನಗರ ಇನ್ನಿತರ ಕಡೆಗಳಲ್ಲಿ ತಗ್ಗು ಪ್ರದೇಶಗಳಿಗೆ ನೀರು ನುಗ್ಗಿದೆ.
(1 / 10)

ಶ್ರೀನಗರ ಕ್ರಾಸ್ ಇನ್ನಿತರ ಕಡೆಗಳಲ್ಲಿ ಬಿಆರ್‌ಟಿಎಎಸ್ ಬಸ್ ಮಾರ್ಗದಲ್ಲಿ ಅಪಾರ ಪ್ರಮಾಣದ ನೀರು ನಿಂತದ್ದು ಕಂಡು ಬಂದಿತು. ರಾಮನಗರ, ಅಶೋಕ ನಗರದಲ್ಲಿ ಎರಡು ಮರಗಳು ನೆಲಕ್ಕುರಳಿವೆ. ಇದುವರೆಗೂ ಯಾವುದೇ ಹಾನಿ ಬಗ್ಗೆ ಇನ್ನು ವರದಿಯಾಗಿಲ್ಲ.ಜಿಲ್ಲೆಯಾದ್ಯಂತ ಹಿಂಗಾರು ಬಿತ್ತನೆಗೆ ತೊಂದರೆಯಾಗಿದೆ. 
(2 / 10)

ಗುರುವಾರ ರಮ್ಯ ರೆಸಿಡೆನ್ಸಿ ಬಳಿ ರಾಷ್ಟ್ರೀಯ ಹೆದ್ದಾರಿ ೪ರಲ್ಲಿ ಸುಮಾರು 3 ಗಂಟೆವರೆಗೆ ಸಂಚಾರ ಸ್ಥಗಿತಗೊಂಡಿತ್ತು. ಕಲ್ಬುರ್ಗಿ ಚಿಂಚೋಳಿ ಜಾತ್ರಾ ವಿಶೇಷ ಬಸ್ಸು ನೀರಿನಲ್ಲಿ ಸಿಲುಕಿತಾದರೂ ಬಸ್ ನಲ್ಲಿದ್ದ ಅದರಲ್ಲಿದ್ದ 30ಕ್ಕೂ ಹೆಚ್ಚು ಜನರನ್ನು ಅಗ್ನಿ ಶಾಮಕ ದಳದ ಸಿಬ್ಬಂದಿಗಳು ಕಾಪಾಡಿದರು. 
(3 / 10)

ಗಣೇಶ ನಗರ ಧಾರವಾಡ.
(4 / 10)
ಗಣೇಶ ನಗರ ಧಾರವಾಡ.
ಸಾಧುನವರ ಎಸ್ಟೇಟ್ ಅಗ್ರಿ ಯೂನಿವರ್ಸಿಟಿ ಧಾರವಾಡ.
(5 / 10)
ಸಾಧುನವರ ಎಸ್ಟೇಟ್ ಅಗ್ರಿ ಯೂನಿವರ್ಸಿಟಿ ಧಾರವಾಡ.
ಅಗ್ರಿ ಯೂನಿವರ್ಸಿಟಿ ಸಾಧುನವರ ಎಸ್ಟೇಟ್ ಬಳಿ ಮನೆಯೊಳಗೇ ಹೋಗಲು ಪರದಾಡುತ್ತಿರುವ ಯುವಕರು.
(6 / 10)
ಅಗ್ರಿ ಯೂನಿವರ್ಸಿಟಿ ಸಾಧುನವರ ಎಸ್ಟೇಟ್ ಬಳಿ ಮನೆಯೊಳಗೇ ಹೋಗಲು ಪರದಾಡುತ್ತಿರುವ ಯುವಕರು.
ಧಾರವಾಡದ ಚಿಕ್ಕಮಲ್ಲಿಗೆವಾಡದ ಪರಿಸ್ಥಿತಿ
(7 / 10)
ಧಾರವಾಡದ ಚಿಕ್ಕಮಲ್ಲಿಗೆವಾಡದ ಪರಿಸ್ಥಿತಿ
ಜನಕಪೂರ ಬಡಾವಣೆ ಚಿಕ್ಕ ಮಲ್ಲಿಗೆವಾಡದಲ್ಲಿ ನೀರು ನಿಂತಿರುವುದು.
(8 / 10)
ಜನಕಪೂರ ಬಡಾವಣೆ ಚಿಕ್ಕ ಮಲ್ಲಿಗೆವಾಡದಲ್ಲಿ ನೀರು ನಿಂತಿರುವುದು.
ಕೋಡಿ ಹರಿದ ಕೆಲಗೇರಿ ಕೆರೆ
(9 / 10)
ಕೋಡಿ ಹರಿದ ಕೆಲಗೇರಿ ಕೆರೆ
ನವಲಗುಂದ ತಾಲೂಕಿನ ಮೊರಬ ಗ್ರಾಮದ ರೈತ ಅಶೋಕ ಕೊಟಬಾಗಿ ಅವರ ಈರುಳ್ಳಿ ಬೆಳೆಯ ಹೊಲ ಜಲಾವೃತ ದೃಶ್ಯ.
(10 / 10)
ನವಲಗುಂದ ತಾಲೂಕಿನ ಮೊರಬ ಗ್ರಾಮದ ರೈತ ಅಶೋಕ ಕೊಟಬಾಗಿ ಅವರ ಈರುಳ್ಳಿ ಬೆಳೆಯ ಹೊಲ ಜಲಾವೃತ ದೃಶ್ಯ.

    ಹಂಚಿಕೊಳ್ಳಲು ಲೇಖನಗಳು