logo
ಕನ್ನಡ ಸುದ್ದಿ  /  ಫೋಟೋ ಗ್ಯಾಲರಿ  /  ಕಾರವಾರ: ಅದ್ಧೂರಿಯಾಗಿ ನಡೆದ ಶ್ರೀ ಶೆಜ್ಜೇಶ್ವರ ದೇವರ ಕಾರ್ತಿಕೋತ್ಸವದ ಚಿತ್ರಗಳು - Shejjeshwara Temple

ಕಾರವಾರ: ಅದ್ಧೂರಿಯಾಗಿ ನಡೆದ ಶ್ರೀ ಶೆಜ್ಜೇಶ್ವರ ದೇವರ ಕಾರ್ತಿಕೋತ್ಸವದ ಚಿತ್ರಗಳು - Shejjeshwara Temple

Nov 17, 2024 01:31 PM IST

Shree Shejjeshwara Temple in Karwar: ಕಾರವಾರ ತಾಲೂಕಿನ ಶ್ರೀಕ್ಷೇತ್ರ ಶೇಜವಾಡದ ಶ್ರೀ ಶೆಜ್ಜೇಶ್ವರ ದೇವಸ್ಥಾನದ ಕಾರ್ತಿಕ ಮಹೋತ್ಸವವು ವಿಜೃಂಭಣೆಯಿಂದ ನೆರವೇರಿದೆ.

  • Shree Shejjeshwara Temple in Karwar: ಕಾರವಾರ ತಾಲೂಕಿನ ಶ್ರೀಕ್ಷೇತ್ರ ಶೇಜವಾಡದ ಶ್ರೀ ಶೆಜ್ಜೇಶ್ವರ ದೇವಸ್ಥಾನದ ಕಾರ್ತಿಕ ಮಹೋತ್ಸವವು ವಿಜೃಂಭಣೆಯಿಂದ ನೆರವೇರಿದೆ.
ಕಾರವಾರ: ಗೋಕರ್ಣದಷ್ಟೇ ಪವಿತ್ರವಾದ ಹಾಗೂ ಶಿವನ ಆತ್ಮಲಿಂಗದ ಒಂದು ಭಾಗ ಎಂದು ಹೇಳಲಾಗುವ ಉತ್ತರ ಕನ್ನಡ ಜಿಲ್ಲೆಯ ಕಾರವಾರ ಸಮೀಪದ ಶೇಜವಾಡ ಎಂಬಲ್ಲಿರುವ ಶೆಜ್ಜೇಶ್ವರ ದೇವಸ್ಥಾನದಲ್ಲಿ ಕಾರ್ತಿಕ ಜಾತ್ರಾ ಮಹೋತ್ಸವ ಅದ್ದೂರಿಯಾಗಿ ನೆರವೇರಿತು.
(1 / 7)

ಶುಕ್ರವಾರ ನಡೆದ ಈ ಕಾರ್ತಿಕ ದೀಪೋತ್ಸವದಲ್ಲಿ ನೂರಾರು ಮಂದಿ ಭಕ್ತರು ಆಗಮಿಸಿ, ಉತ್ಸವಾದಿ ಕಾರ್ಯಕ್ರಮಗಳಲ್ಲಿ ಪಾಲ್ಗೊಂಡರು.
(2 / 7)

ಬೆಳಿಗ್ಗೆ ಶ್ರೀದೇವರ ಪಲ್ಲಕ್ಕಿ ದೇವಸ್ಥಾನದಿಂದ ಮೆರವಣಿಗೆ ಹೊರಟು ವನಕ್ಕೆ ತೆರಳಿ ವಿವಿಧ ಧಾರ್ಮಿಕ ಕೈಂಕರ್ಯಗಳು ನೆರವೇರಿದವು. 
(3 / 7)

ಮಧ್ಯಾಹ್ನ ವನಭೋಜನ ನಡೆದು ಸಂಜೆ 6 ಗಂಟೆಗೆ ಪಲ್ಲಕ್ಕಿ ದೇವಸ್ಥಾನದ ಆವರಣಕ್ಕೆ ಆಗಮಿಸಿದಾಗ ದೇವಸ್ಥಾನದ ಆವರಣದಲ್ಲಿ ನಡೆದ ದೀಪೋತ್ಸವ ನೆರೆದ ಭಕ್ತರನ್ನು ರೋಮಾಂಚನ ಗೊಳಿಸಿತು.
(4 / 7)

ಬೀದಿಯಲ್ಲಿ ಬಿಡಿಸಲಾದ ಬಗೆ ಬಗೆಯ ರಂಗೋಲಿಗಳು, ಚಿತ್ರಗಳು ವಿದ್ಯುದ್ದೀಪಗಳ ಅಲಂಕಾರ ಗಮನ ಸೆಳೆದವು.
(5 / 7)

ಶ್ರೀ ದೇವರ ಲಾಲಕಿ ಮೆರವಣಿಗೆ ಮೂಲಕ ಭಕ್ತರ ಸೇವೆ ಸ್ವೀಕರಿಸುತ್ತ ದೇವಸ್ಥಾನದ ಕೆರೆಗೆ ತೆರಳಿ ಅಲ್ಲಿ ಶ್ರೀದೇವರ ತೆಪ್ಪೋತ್ಸವ ನೆರವೇರಿತು. ಬಳಿಕ ಮರಳಿ ದೇವಸ್ಥಾನಕ್ಕೆ ಆಗಮಿಸಿ ಮಹಾಪೂಜೆಯ ಬಳಿಕ ಕಾರ್ತಿಕೋತ್ಸವ ಸಂಪನ್ನಗೊಂಡಿತು. 
(6 / 7)

 ಶ್ರೀ ಶೆಜ್ಜೇಶ್ವರ ದೇವಸ್ಥಾನ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷರು, ಉಪಾಧ್ಯಕ್ಷರು, ಸರ್ವ ಸದಸ್ಯರು, ದೇವಸ್ಥಾನ ಸಮಿತಿಯ ಅರ್ಚಕರು, ಒಳ ನೌಕರರ, ಹೊರ ನೌಕರರು ಹಾಗೂ ಊರ ನಾಗರಿಕರು ವಿಶೇಷ ಸಹಕಾರ ನೀಡಿದರು.
(7 / 7)

    ಹಂಚಿಕೊಳ್ಳಲು ಲೇಖನಗಳು