logo
ಕನ್ನಡ ಸುದ್ದಿ  /  ಫೋಟೋ ಗ್ಯಾಲರಿ  /  Summer Vacation: ಬೇಸಿಗೆಯಲ್ಲಿ ಬಿಂದಾಸ್‌ ಆಗಿರಲಿ ಮಕ್ಕಳು; ಇಲ್ಲಿವೆ ಕೆಲವು ಪೇರೆಂಟಿಂಗ್‌ ಟಿಪ್ಸ್

Summer Vacation: ಬೇಸಿಗೆಯಲ್ಲಿ ಬಿಂದಾಸ್‌ ಆಗಿರಲಿ ಮಕ್ಕಳು; ಇಲ್ಲಿವೆ ಕೆಲವು ಪೇರೆಂಟಿಂಗ್‌ ಟಿಪ್ಸ್

Apr 19, 2023 03:37 PM IST

Summer Vacation: ಬೇಸಿಗೆ ರಜೆ ಆರಂಭವಾಗಿ ಕೆಲವು ದಿನಗಳು ಕಳೆದಿವೆ. ಈ ರಜೆಯಲ್ಲಿ ಮಕ್ಕಳು ಉಪಯುಕ್ತವಾಗಿ ಸಮಯ ಕಳೆಯವಂತೆ ಮಾಡಲು ಏನು ಮಾಡಬೇಕು ಎಂಬುದರ ಬಗ್ಗೆ ಪೋಷಕರು ಸಾಕಷ್ಟು ತಲೆ ಕೆಡಿಸಿಕೊಂಡಿರುತ್ತಾರೆ. ಅಂತಹ ಪೋಷಕರಿಗಾಗಿ ಇಲ್ಲಿದೆ ಕೆಲವು ಉಪಯುಕ್ತ ಸಲಹೆ.

Summer Vacation: ಬೇಸಿಗೆ ರಜೆ ಆರಂಭವಾಗಿ ಕೆಲವು ದಿನಗಳು ಕಳೆದಿವೆ. ಈ ರಜೆಯಲ್ಲಿ ಮಕ್ಕಳು ಉಪಯುಕ್ತವಾಗಿ ಸಮಯ ಕಳೆಯವಂತೆ ಮಾಡಲು ಏನು ಮಾಡಬೇಕು ಎಂಬುದರ ಬಗ್ಗೆ ಪೋಷಕರು ಸಾಕಷ್ಟು ತಲೆ ಕೆಡಿಸಿಕೊಂಡಿರುತ್ತಾರೆ. ಅಂತಹ ಪೋಷಕರಿಗಾಗಿ ಇಲ್ಲಿದೆ ಕೆಲವು ಉಪಯುಕ್ತ ಸಲಹೆ.
ಬೇಸಿಗೆ ರಜೆಯ ಸಮಯದಲ್ಲಿ ಮಕ್ಕಳನ್ನು ಕ್ರಿಯಾಶೀಲರನ್ನಾಗಿಸಿ, ರಜೆಯನ್ನು ಉಪಯುಕ್ತವಾಗಿ ಕಳೆಯುವಂತೆ ಮಾಡುವುದು ಹೇಗೆ ಎಂದು ಬಹುತೇಕ ಪೋಷಕರು ತಲೆ ಕೆಡಿಸಿಕೊಳ್ಳುತ್ತಾರೆ. ಒಂದಿಷ್ಟು ಯೋಜನೆಗಳು ಹಾಗೂ ಸೃಜನಶೀಲತೆಯ ಮೂಲಕ ಮಕ್ಕಳಲ್ಲಿ ಕೌಶಲವನ್ನು ಹೆಚ್ಚಿಸುವುದು, ಹೊಸ ವಿಷಯಗಳ ಕಲಿಕೆಯಲ್ಲಿ ಆಸಕ್ತಿ ಮೂಡುವಂತೆ ಮಾಡುವ ಜೊತೆಗೆ ರಜೆಯ ಮಜವನ್ನು ಅನುಭವಿಸುವಂತೆಯೂ ಮಾಡಬಹುದು.  ನಿರ್ದಿಷ್ಟ ಗುರಿ ಇರಿಸಿಕೊಳ್ಳುವುದು, ಹೊಸ ಚಟುವಟಿಕೆಗಳಲ್ಲಿ ತೊಡಗುವಂತೆ ಮಾಡುವುದು, ಪ್ರಮುಖ ಕೌಶಲಗಳನ್ನು ಬೆಳೆಸಿಕೊಳ್ಳುವಂತೆ ಅವರನ್ನು ಪ್ರೋತ್ಸಾಹಿಸಬಹುದು. ಭಿನ್ನ ಅನುಭವಗಳಿಗೆ ತೆರೆದುಕೊಳ್ಳುವಂತೆ ಮಾಡುವ ಮೂಲಕ ಅವರಲ್ಲಿ ಆತ್ಮವಿಶ್ವಾಸವನ್ನು ಹೆಚ್ಚಿಸುವ ಜೊತೆಗೆ ಎಲ್ಲಾ ವಿಷಯಗಳಲ್ಲೂ ಅಭಿವೃದ್ಧಿ ಸಾಧಿಸುವಂತೆ ಮಾಡಬಹುದು. 
(1 / 8)
ಬೇಸಿಗೆ ರಜೆಯ ಸಮಯದಲ್ಲಿ ಮಕ್ಕಳನ್ನು ಕ್ರಿಯಾಶೀಲರನ್ನಾಗಿಸಿ, ರಜೆಯನ್ನು ಉಪಯುಕ್ತವಾಗಿ ಕಳೆಯುವಂತೆ ಮಾಡುವುದು ಹೇಗೆ ಎಂದು ಬಹುತೇಕ ಪೋಷಕರು ತಲೆ ಕೆಡಿಸಿಕೊಳ್ಳುತ್ತಾರೆ. ಒಂದಿಷ್ಟು ಯೋಜನೆಗಳು ಹಾಗೂ ಸೃಜನಶೀಲತೆಯ ಮೂಲಕ ಮಕ್ಕಳಲ್ಲಿ ಕೌಶಲವನ್ನು ಹೆಚ್ಚಿಸುವುದು, ಹೊಸ ವಿಷಯಗಳ ಕಲಿಕೆಯಲ್ಲಿ ಆಸಕ್ತಿ ಮೂಡುವಂತೆ ಮಾಡುವ ಜೊತೆಗೆ ರಜೆಯ ಮಜವನ್ನು ಅನುಭವಿಸುವಂತೆಯೂ ಮಾಡಬಹುದು.  ನಿರ್ದಿಷ್ಟ ಗುರಿ ಇರಿಸಿಕೊಳ್ಳುವುದು, ಹೊಸ ಚಟುವಟಿಕೆಗಳಲ್ಲಿ ತೊಡಗುವಂತೆ ಮಾಡುವುದು, ಪ್ರಮುಖ ಕೌಶಲಗಳನ್ನು ಬೆಳೆಸಿಕೊಳ್ಳುವಂತೆ ಅವರನ್ನು ಪ್ರೋತ್ಸಾಹಿಸಬಹುದು. ಭಿನ್ನ ಅನುಭವಗಳಿಗೆ ತೆರೆದುಕೊಳ್ಳುವಂತೆ ಮಾಡುವ ಮೂಲಕ ಅವರಲ್ಲಿ ಆತ್ಮವಿಶ್ವಾಸವನ್ನು ಹೆಚ್ಚಿಸುವ ಜೊತೆಗೆ ಎಲ್ಲಾ ವಿಷಯಗಳಲ್ಲೂ ಅಭಿವೃದ್ಧಿ ಸಾಧಿಸುವಂತೆ ಮಾಡಬಹುದು. (Pexels)
ಓದು ಓದು ಓದು: ಶಬ್ದಭಂಡಾರ, ಗ್ರಹಿಕೆ ಮತ್ತು ವಿಮರ್ಶಾತ್ಮಕ ಚಿಂತನೆಯ ಕೌಶಲಗಳನ್ನು ಸುಧಾರಿಸಲು ಓದು ಒಂದು ಉತ್ತಮ ಮಾರ್ಗವಾಗಿದೆ. ನಿಮ್ಮ ಮಕ್ಕಳ ಆಸಕ್ತಿ ಮತ್ತು ಓದುವ ಮಟ್ಟಕ್ಕೆ ಹೊಂದಿಕೆಯಾಗುವ ಪುಸ್ತಕಗಳನ್ನು ಒದಗಿಸುವ ಮೂಲಕ ಅವರಲ್ಲಿ ಓದನ್ನು ಪ್ರೋತ್ಸಾಹಿಸಿ.
(2 / 8)
ಓದು ಓದು ಓದು: ಶಬ್ದಭಂಡಾರ, ಗ್ರಹಿಕೆ ಮತ್ತು ವಿಮರ್ಶಾತ್ಮಕ ಚಿಂತನೆಯ ಕೌಶಲಗಳನ್ನು ಸುಧಾರಿಸಲು ಓದು ಒಂದು ಉತ್ತಮ ಮಾರ್ಗವಾಗಿದೆ. ನಿಮ್ಮ ಮಕ್ಕಳ ಆಸಕ್ತಿ ಮತ್ತು ಓದುವ ಮಟ್ಟಕ್ಕೆ ಹೊಂದಿಕೆಯಾಗುವ ಪುಸ್ತಕಗಳನ್ನು ಒದಗಿಸುವ ಮೂಲಕ ಅವರಲ್ಲಿ ಓದನ್ನು ಪ್ರೋತ್ಸಾಹಿಸಿ.
ಸೃಜನಶೀಲತೆಯನ್ನು ಬೆಳೆಸಿ: ಸೃಜನಶೀಲತೆಯು ಅಮೂಲ್ಯವಾದ ಕೌಶಲವಾಗಿದ್ದು, ರೇಖಾಚಿತ್ರ, ಚಿತ್ರಕಲೆ, ಬರವಣಿಗೆ ಅಥವಾ ಸಂಗೀತಾಭ್ಯಾಸದಂತಹ ವಿವಿಧ ಚಟುವಟಿಕೆಗಳ ಮೂಲಕ ಮಕ್ಕಳ ಬೆಳವಣಿಗೆಗೆ ಸಹಕರಿಸಬಹುದು. ಮಕ್ಕಳಲ್ಲಿ ಸೃಜನಶೀಲತೆಯನ್ನು ಅನ್ವೇಷಿಸಲು ಅಗತ್ಯವಾದ ಪರಿಕರಗಳು ಮತ್ತು ಸಂಪನ್ಮೂಲಗಳನ್ನು ಒದಗಿಸಿ.
(3 / 8)
ಸೃಜನಶೀಲತೆಯನ್ನು ಬೆಳೆಸಿ: ಸೃಜನಶೀಲತೆಯು ಅಮೂಲ್ಯವಾದ ಕೌಶಲವಾಗಿದ್ದು, ರೇಖಾಚಿತ್ರ, ಚಿತ್ರಕಲೆ, ಬರವಣಿಗೆ ಅಥವಾ ಸಂಗೀತಾಭ್ಯಾಸದಂತಹ ವಿವಿಧ ಚಟುವಟಿಕೆಗಳ ಮೂಲಕ ಮಕ್ಕಳ ಬೆಳವಣಿಗೆಗೆ ಸಹಕರಿಸಬಹುದು. ಮಕ್ಕಳಲ್ಲಿ ಸೃಜನಶೀಲತೆಯನ್ನು ಅನ್ವೇಷಿಸಲು ಅಗತ್ಯವಾದ ಪರಿಕರಗಳು ಮತ್ತು ಸಂಪನ್ಮೂಲಗಳನ್ನು ಒದಗಿಸಿ.(Unsplash)
ಸ್ಪಷ್ಟ ಗುರಿ ಅರಿಯಿರಿ: ರಜೆ ಆರಂಭವಾಗಿ ಕೆಲವು ದಿನಗಳಷ್ಟೇ ಕಳೆದಿದೆ. ಈ ಸಮಯದಲ್ಲಿ ನಿಮ್ಮ ಮಕ್ಕಳೊಂದಿಗೆ ಕುಳಿತು ಈ ರಜೆಯಲ್ಲಿ ಅವರು ಏನನ್ನು ಸಾಧಿಸಲು ಬಯಸುತ್ತಾರೆ ಎಂಬುದನ್ನು ಕೇಳಿ ತಿಳಿಯಿರಿ. ಮಕ್ಕಳಿಗೆ ಸವಾಲು ಎನ್ನಿಸುವ ಆದರೆ ಸಾಧಿಸಬಹುದಾದ ನಿರ್ದಿಷ್ಟ ಹಾಗೂ ವಾಸ್ತವಿಕ ಗುರಿಗಳನ್ನು ಹೊಂದಿಸಲು ಸಹಾಯ ಮಾಡಿ. 
(4 / 8)
ಸ್ಪಷ್ಟ ಗುರಿ ಅರಿಯಿರಿ: ರಜೆ ಆರಂಭವಾಗಿ ಕೆಲವು ದಿನಗಳಷ್ಟೇ ಕಳೆದಿದೆ. ಈ ಸಮಯದಲ್ಲಿ ನಿಮ್ಮ ಮಕ್ಕಳೊಂದಿಗೆ ಕುಳಿತು ಈ ರಜೆಯಲ್ಲಿ ಅವರು ಏನನ್ನು ಸಾಧಿಸಲು ಬಯಸುತ್ತಾರೆ ಎಂಬುದನ್ನು ಕೇಳಿ ತಿಳಿಯಿರಿ. ಮಕ್ಕಳಿಗೆ ಸವಾಲು ಎನ್ನಿಸುವ ಆದರೆ ಸಾಧಿಸಬಹುದಾದ ನಿರ್ದಿಷ್ಟ ಹಾಗೂ ವಾಸ್ತವಿಕ ಗುರಿಗಳನ್ನು ಹೊಂದಿಸಲು ಸಹಾಯ ಮಾಡಿ. (Pexels/Karolina Grabowska)
ಬೇಸಿಗೆ ಶಿಬಿರಕ್ಕೆ ದಾಖಲಿಸಿ: ಹಲವು ಶಾಲೆಗಳು ಹಾಗೂ ಸಮುದಾಯ ಕೇಂದ್ರಗಳಲ್ಲಿ ಬೇಸಿಗಗೆ ಶಿಬಿರವನ್ನು ಆಯೋಜಿಸಿರುತ್ತಾರೆ. ಇಲ್ಲಿ ಕೋಡಿಂಗ್‌ ರೊಬೋಟಿಕ್ಸ್‌ನಿಂದ ಹಿಡಿದು ಕಲೆ ಹಾಗೂ ಸಂಗೀತದವರೆಗೆ ವಿವಿಧ ವಿಷಯಗಳಲ್ಲಿ ತರಬೇತಿಯನ್ನು ನೀಡಲಾಗುತ್ತದೆ. ಈ ತರಬೇತಿಯಲ್ಲಿ ಎರಡು ಅಥವಾ ಎರಡಕ್ಕಿಂತ ಹೆಚ್ಚು ತರಬೇತಿಗೆ ಮಕ್ಕಳನ್ನು ಸೇರಿಸುವುದರಿಂದ ಅವರಿಗೆ ಹೊಸ ಕೌಶಲ್ಯಗಳನ್ನು ಕಲಿಯಲು ಮತ್ತು ಹೊಸ ಸ್ನೇಹಿತರನ್ನು ಭೇಟಿ ಮಾಡಲು ಸಹಾಯ ಮಾಡಬಹುದು.
(5 / 8)
ಬೇಸಿಗೆ ಶಿಬಿರಕ್ಕೆ ದಾಖಲಿಸಿ: ಹಲವು ಶಾಲೆಗಳು ಹಾಗೂ ಸಮುದಾಯ ಕೇಂದ್ರಗಳಲ್ಲಿ ಬೇಸಿಗಗೆ ಶಿಬಿರವನ್ನು ಆಯೋಜಿಸಿರುತ್ತಾರೆ. ಇಲ್ಲಿ ಕೋಡಿಂಗ್‌ ರೊಬೋಟಿಕ್ಸ್‌ನಿಂದ ಹಿಡಿದು ಕಲೆ ಹಾಗೂ ಸಂಗೀತದವರೆಗೆ ವಿವಿಧ ವಿಷಯಗಳಲ್ಲಿ ತರಬೇತಿಯನ್ನು ನೀಡಲಾಗುತ್ತದೆ. ಈ ತರಬೇತಿಯಲ್ಲಿ ಎರಡು ಅಥವಾ ಎರಡಕ್ಕಿಂತ ಹೆಚ್ಚು ತರಬೇತಿಗೆ ಮಕ್ಕಳನ್ನು ಸೇರಿಸುವುದರಿಂದ ಅವರಿಗೆ ಹೊಸ ಕೌಶಲ್ಯಗಳನ್ನು ಕಲಿಯಲು ಮತ್ತು ಹೊಸ ಸ್ನೇಹಿತರನ್ನು ಭೇಟಿ ಮಾಡಲು ಸಹಾಯ ಮಾಡಬಹುದು.(Pexels)
ದೈಹಿಕ ಚಟುವಟಿಕೆಯನ್ನು ಪ್ರೋತ್ಸಾಹಿಸಿ: ಬೇಸಿಗೆಯು ಹೊರಗೆ ಹೋಗಲು ಮತ್ತು ಸಕ್ರಿಯವಾಗಿರಲು ಉತ್ತಮ ಸಮಯ. ಅವರ ದೈಹಿಕ ಆರೋಗ್ಯ ಮತ್ತು ಒಟ್ಟಾರೆ ಯೋಗಕ್ಷೇಮವನ್ನು ಸುಧಾರಿಸಲು ಈಜು, ಬೈಕಿಂಗ್ ಅಥವಾ ಕ್ರೀಡೆಗಳನ್ನು ಆಡುವಂತಹ ದೈಹಿಕ ಚಟುವಟಿಕೆಗಳಲ್ಲಿ ತೊಡಗಿಸಿಕೊಳ್ಳಲು ಮಕ್ಕಳನ್ನು ಪ್ರೋತ್ಸಾಹಿಸಿ.
(6 / 8)
ದೈಹಿಕ ಚಟುವಟಿಕೆಯನ್ನು ಪ್ರೋತ್ಸಾಹಿಸಿ: ಬೇಸಿಗೆಯು ಹೊರಗೆ ಹೋಗಲು ಮತ್ತು ಸಕ್ರಿಯವಾಗಿರಲು ಉತ್ತಮ ಸಮಯ. ಅವರ ದೈಹಿಕ ಆರೋಗ್ಯ ಮತ್ತು ಒಟ್ಟಾರೆ ಯೋಗಕ್ಷೇಮವನ್ನು ಸುಧಾರಿಸಲು ಈಜು, ಬೈಕಿಂಗ್ ಅಥವಾ ಕ್ರೀಡೆಗಳನ್ನು ಆಡುವಂತಹ ದೈಹಿಕ ಚಟುವಟಿಕೆಗಳಲ್ಲಿ ತೊಡಗಿಸಿಕೊಳ್ಳಲು ಮಕ್ಕಳನ್ನು ಪ್ರೋತ್ಸಾಹಿಸಿ.(Pexels)
ಸ್ವಯಂ ಸೇವಕರನ್ನಾಗಿಸಿ: ಮಕ್ಕಳಲ್ಲಿ ಸಹಾಯ ಮನೋಭಾವ ಬೆಳೆಯಲು ಅವರನ್ನು ಸ್ವಯಂ ಸೇವಕರಾಗಲು ಪ್ರೋತ್ಸಾಹಿಸಬೇಕು. ನಿಮ್ಮ ಸಮೀಪದ ಸಮುದಾಯಕ್ಕೆ ಮಕ್ಕಳನ್ನು ಸೇರಿಸಿ. ಇದರ ಅವರಲ್ಲಿ ಸಮಾಜದ ಬಗ್ಗೆ ಸಹಾನುಭೂತಿ, ಒಲವು ಮೂಡಲು ಸಾಧ್ಯ. ಸ್ಥಳಿಯ ದತ್ತಿ ಸಂಸ್ಥೆಗಳು, ಫುಡ್‌ ಬ್ಯಾಂಕ್‌ ಅಥವಾ ಪ್ರಾಣಿಗಳ ಸ್ವಯಂಸೇವಾ ಸಂಸ್ಥೆಗಳಿಗೆ ಅವರನ್ನು ಸೇರಿಸಿ. 
(7 / 8)
ಸ್ವಯಂ ಸೇವಕರನ್ನಾಗಿಸಿ: ಮಕ್ಕಳಲ್ಲಿ ಸಹಾಯ ಮನೋಭಾವ ಬೆಳೆಯಲು ಅವರನ್ನು ಸ್ವಯಂ ಸೇವಕರಾಗಲು ಪ್ರೋತ್ಸಾಹಿಸಬೇಕು. ನಿಮ್ಮ ಸಮೀಪದ ಸಮುದಾಯಕ್ಕೆ ಮಕ್ಕಳನ್ನು ಸೇರಿಸಿ. ಇದರ ಅವರಲ್ಲಿ ಸಮಾಜದ ಬಗ್ಗೆ ಸಹಾನುಭೂತಿ, ಒಲವು ಮೂಡಲು ಸಾಧ್ಯ. ಸ್ಥಳಿಯ ದತ್ತಿ ಸಂಸ್ಥೆಗಳು, ಫುಡ್‌ ಬ್ಯಾಂಕ್‌ ಅಥವಾ ಪ್ರಾಣಿಗಳ ಸ್ವಯಂಸೇವಾ ಸಂಸ್ಥೆಗಳಿಗೆ ಅವರನ್ನು ಸೇರಿಸಿ. (Pexels/Rodolfo Quirós)
ಸ್ಕ್ರೀನ್‌ ಟೈಮ್‌ಗೆ ಮಿತಿ ಇರಲಿ: ತಂತ್ರಜ್ಞಾನವು ಕಲಿಕೆಗೆ ಉತ್ತಮ ಸಾಧನವಾಗಿದ್ದರೂ, ಇದು ಮಕ್ಕಳ ಮಾನಸಿಕ ಮತ್ತು ದೈಹಿಕ ಆರೋಗ್ಯಕ್ಕೆ ವ್ಯಸನಕಾರಿ ಮತ್ತು ಹಾನಿಕಾರಕವಾಗಿದೆ. ಸ್ಕ್ರೀನ್‌ ಬಳಕೆಗೆ ಕಡಿವಾಣ ಹಾಕಿ. ಮಕ್ಕಳನ್ನು ಹೆಚ್ಚು ಹೆಚ್ಚು ಆಫ್‌ಲೈನ್‌ ಚಟುವಟಿಕೆಯಲ್ಲಿ ತೊಡಗುವಂತೆ ಮಾಡಿ. 
(8 / 8)
ಸ್ಕ್ರೀನ್‌ ಟೈಮ್‌ಗೆ ಮಿತಿ ಇರಲಿ: ತಂತ್ರಜ್ಞಾನವು ಕಲಿಕೆಗೆ ಉತ್ತಮ ಸಾಧನವಾಗಿದ್ದರೂ, ಇದು ಮಕ್ಕಳ ಮಾನಸಿಕ ಮತ್ತು ದೈಹಿಕ ಆರೋಗ್ಯಕ್ಕೆ ವ್ಯಸನಕಾರಿ ಮತ್ತು ಹಾನಿಕಾರಕವಾಗಿದೆ. ಸ್ಕ್ರೀನ್‌ ಬಳಕೆಗೆ ಕಡಿವಾಣ ಹಾಕಿ. ಮಕ್ಕಳನ್ನು ಹೆಚ್ಚು ಹೆಚ್ಚು ಆಫ್‌ಲೈನ್‌ ಚಟುವಟಿಕೆಯಲ್ಲಿ ತೊಡಗುವಂತೆ ಮಾಡಿ. (Pexels)

    ಹಂಚಿಕೊಳ್ಳಲು ಲೇಖನಗಳು