logo
ಕನ್ನಡ ಸುದ್ದಿ  /  ಫೋಟೋ ಗ್ಯಾಲರಿ  /  Tala Cauvery Theerthodbhava: ತಲಕಾವೇರಿ ತೀರ್ಥೋದ್ಭವದ ಮಧ್ಯರಾತ್ರಿಯಲ್ಲೂ ಭಕ್ತರು, ಚಿತ್ರ ತಾರೆಯರು, ಗಣ್ಯರ ದಂಡು

Tala Cauvery Theerthodbhava: ತಲಕಾವೇರಿ ತೀರ್ಥೋದ್ಭವದ ಮಧ್ಯರಾತ್ರಿಯಲ್ಲೂ ಭಕ್ತರು, ಚಿತ್ರ ತಾರೆಯರು, ಗಣ್ಯರ ದಂಡು

Oct 18, 2023 05:29 PM IST

ಕೊಡಗಿನವರ( Kodagu) ಆರಾಧ್ಯದೈವ ಕಾವೇರಿ. ಕೊಡಗಿನವಲ್ಲದೇ ಹೊರಗೆ ಇರುವವರೂ ತಲಕಾವೇರಿಗೆ ಬಂದು ಪೂಜೆ ಸಲ್ಲಿಸುತ್ತಾರೆ. ತೀರ್ಥೋದ್ಭವದ ಕ್ಷಣವಂತೂ ಅವರಿಗೆ ಪುಣ್ಯ ಘಳಿಗೆ. ಈ ಬಾರಿ ಮಧ್ಯರಾತ್ರಿ ಬಂದರೂ ಉತ್ಸಾಹದಲ್ಲಿ ಏನು ಕಡಿಮೆ ಇರಲಿಲ್ಲ. ಅಸಂಖ್ಯಾತ ಭಕ್ತರು, ಚಿತ್ರ ತಾರೆಯರು, ಜನಪ್ರತಿನಿಧಿಗಳು, ಗಣ್ಯರು ತಲಕಾವೇರಿಗೆ ಆಗಮಿಸಿದ್ದರು. ಈ ಕ್ಷಣಗಳು ಹೀಗಿದ್ದವು.

  • ಕೊಡಗಿನವರ( Kodagu) ಆರಾಧ್ಯದೈವ ಕಾವೇರಿ. ಕೊಡಗಿನವಲ್ಲದೇ ಹೊರಗೆ ಇರುವವರೂ ತಲಕಾವೇರಿಗೆ ಬಂದು ಪೂಜೆ ಸಲ್ಲಿಸುತ್ತಾರೆ. ತೀರ್ಥೋದ್ಭವದ ಕ್ಷಣವಂತೂ ಅವರಿಗೆ ಪುಣ್ಯ ಘಳಿಗೆ. ಈ ಬಾರಿ ಮಧ್ಯರಾತ್ರಿ ಬಂದರೂ ಉತ್ಸಾಹದಲ್ಲಿ ಏನು ಕಡಿಮೆ ಇರಲಿಲ್ಲ. ಅಸಂಖ್ಯಾತ ಭಕ್ತರು, ಚಿತ್ರ ತಾರೆಯರು, ಜನಪ್ರತಿನಿಧಿಗಳು, ಗಣ್ಯರು ತಲಕಾವೇರಿಗೆ ಆಗಮಿಸಿದ್ದರು. ಈ ಕ್ಷಣಗಳು ಹೀಗಿದ್ದವು.
ಕೊಡಗಿನ ಪ್ರಮುಖ ಉತ್ಸವಗಳಲ್ಲಿ ಒಂದಾದ ಕಾವೇರಿ ತೀರ್ಥೋದ್ಭವದ ಕ್ಷಣ. ಈ ಬಾರಿ ಇದರ ಉಸ್ತುವಾರಿ ಹೊತ್ತ ಶಾಸಕ ಎ.ಎಸ್‌.ಪೊನ್ನಣ್ಣ ಹಾಗೂ ಕೊಡಗಿನ ಗೃಹಿಣಿಯರು ಭಾಗಮಂಡಲದ ಭಂಗಡೇಶ್ವರ ದೇಗುಲದ ಮುಂದೆ ಪೂಜೆ ಸಲ್ಲಿಸಿದ ಸಂದರ್ಭ.
(1 / 6)
ಕೊಡಗಿನ ಪ್ರಮುಖ ಉತ್ಸವಗಳಲ್ಲಿ ಒಂದಾದ ಕಾವೇರಿ ತೀರ್ಥೋದ್ಭವದ ಕ್ಷಣ. ಈ ಬಾರಿ ಇದರ ಉಸ್ತುವಾರಿ ಹೊತ್ತ ಶಾಸಕ ಎ.ಎಸ್‌.ಪೊನ್ನಣ್ಣ ಹಾಗೂ ಕೊಡಗಿನ ಗೃಹಿಣಿಯರು ಭಾಗಮಂಡಲದ ಭಂಗಡೇಶ್ವರ ದೇಗುಲದ ಮುಂದೆ ಪೂಜೆ ಸಲ್ಲಿಸಿದ ಸಂದರ್ಭ.
ಕೊಡಗಿನ ತಲಕಾವೇರಿಯ ತೀರ್ಥೋದ್ಭವ ಆರಂಭಕ್ಕೂ ಮುನ್ನ ಕೊಡಗು ಜಿಲ್ಲಾ ಉಸ್ತುವಾರಿ ಸಚಿವ ಎನ್‌.ಎಸ್.ಬೋಸರಾಜು, ಸಂಸದ ಪ್ರತಾಪಸಿಂಹ, ಶಾಸಕರಾದ ಎ.ಎಸ್‌.ಪೊನ್ನಣ್ಣ, ಡಾ.ಮಂಥರ್‌ ಗೌಡ ಅವರು ಪೂಜೆ ಸಲ್ಲಿಸಿದರು.
(2 / 6)
ಕೊಡಗಿನ ತಲಕಾವೇರಿಯ ತೀರ್ಥೋದ್ಭವ ಆರಂಭಕ್ಕೂ ಮುನ್ನ ಕೊಡಗು ಜಿಲ್ಲಾ ಉಸ್ತುವಾರಿ ಸಚಿವ ಎನ್‌.ಎಸ್.ಬೋಸರಾಜು, ಸಂಸದ ಪ್ರತಾಪಸಿಂಹ, ಶಾಸಕರಾದ ಎ.ಎಸ್‌.ಪೊನ್ನಣ್ಣ, ಡಾ.ಮಂಥರ್‌ ಗೌಡ ಅವರು ಪೂಜೆ ಸಲ್ಲಿಸಿದರು.
ಕೊಡಗಿನವರೇ ಆದ ನಟ ಭುವನ್‌ ಪೊನ್ನಣ್ಣ,. ನಟಿ ಹರ್ಷಿಕಾ ಪೂಣಚ್ಛ ದಂಪತಿ ಹೊಸದಾಗಿ ಮದುವೆಯಾಗಿರುವ ಖುಷಿಯಲ್ಲಿ ತಲಕಾವೇರಿ ತೀರ್ಥೋದ್ಭವಕ್ಕೆ ಆಗಮಿಸಿದ ಕ್ಷಣ,.
(3 / 6)
ಕೊಡಗಿನವರೇ ಆದ ನಟ ಭುವನ್‌ ಪೊನ್ನಣ್ಣ,. ನಟಿ ಹರ್ಷಿಕಾ ಪೂಣಚ್ಛ ದಂಪತಿ ಹೊಸದಾಗಿ ಮದುವೆಯಾಗಿರುವ ಖುಷಿಯಲ್ಲಿ ತಲಕಾವೇರಿ ತೀರ್ಥೋದ್ಭವಕ್ಕೆ ಆಗಮಿಸಿದ ಕ್ಷಣ,.
ಕಾವೇರಿ ತೀರ್ಥೋದ್ಭವದ ಕ್ಷಣಕ್ಕಾಗಿ ಕಾಯುತ್ತಿರುವ ಸಮಯ. ಗಣ್ಯರು, ಸ್ಥಳೀಯರು ಸೇರಿದಂತೆ ಸಹಸ್ರಾರು ಭಕ್ತರು ಮಧ್ಯರಾತ್ರಿ ಅಣಿಯಾಗಿರುವುದು.
(4 / 6)
ಕಾವೇರಿ ತೀರ್ಥೋದ್ಭವದ ಕ್ಷಣಕ್ಕಾಗಿ ಕಾಯುತ್ತಿರುವ ಸಮಯ. ಗಣ್ಯರು, ಸ್ಥಳೀಯರು ಸೇರಿದಂತೆ ಸಹಸ್ರಾರು ಭಕ್ತರು ಮಧ್ಯರಾತ್ರಿ ಅಣಿಯಾಗಿರುವುದು.
ತಲಕಾವೇರಿಯಲ್ಲಿ ತೀರ್ಥೋದ್ಭವ ಇನ್ನೇನು ಆಗಬೇಕು ಎನ್ನುವ ಹೊತ್ತಿಗೆ ತೀರ್ಥ ಸ್ವೀಕರಿಸಲು ಕಾವೇರಿ ಮಾತೆಯತ್ತ ನುಗ್ಗಿ ಬರುತ್ತಿರುವ ಭಕ್ತರ ದಂಡು. ಇದು ನಿಜಕ್ಕೂ ಭಕ್ತಿಯ ಕ್ಷಣ,
(5 / 6)
ತಲಕಾವೇರಿಯಲ್ಲಿ ತೀರ್ಥೋದ್ಭವ ಇನ್ನೇನು ಆಗಬೇಕು ಎನ್ನುವ ಹೊತ್ತಿಗೆ ತೀರ್ಥ ಸ್ವೀಕರಿಸಲು ಕಾವೇರಿ ಮಾತೆಯತ್ತ ನುಗ್ಗಿ ಬರುತ್ತಿರುವ ಭಕ್ತರ ದಂಡು. ಇದು ನಿಜಕ್ಕೂ ಭಕ್ತಿಯ ಕ್ಷಣ,
ತಲಕಾವೇರಿಯ ಕಾವೇರಿ ಕುಂಡಿಕೆಯಿಂದ ಮಧ್ಯರಾತ್ರಿ ಹರಿದ ಕಾವೇರಿ. ಈ ಕ್ಷಣಕ್ಕಾಗಿಯೇ ಸಹಸ್ರಾರು ಭಕ್ತರು ತಲಕಾವೇರಿಯಲ್ಲಿ ಕಾಯುತ್ತಾರೆ. 
(6 / 6)
ತಲಕಾವೇರಿಯ ಕಾವೇರಿ ಕುಂಡಿಕೆಯಿಂದ ಮಧ್ಯರಾತ್ರಿ ಹರಿದ ಕಾವೇರಿ. ಈ ಕ್ಷಣಕ್ಕಾಗಿಯೇ ಸಹಸ್ರಾರು ಭಕ್ತರು ತಲಕಾವೇರಿಯಲ್ಲಿ ಕಾಯುತ್ತಾರೆ. (Vicky nanjappa)

    ಹಂಚಿಕೊಳ್ಳಲು ಲೇಖನಗಳು