logo
ಕನ್ನಡ ಸುದ್ದಿ  /  Photo Gallery  /  Kollywood News Director Mani Ratnam 67th Birthday Actress Suhasini Love Story Pallavi Anupallavi Movie Director Rsm

Mani Ratnam Birthday: ನಿರ್ದೇಶಕ ಮಣಿರತ್ನಂ ಪ್ರೀತಿಯನ್ನು ನಿರಾಕರಿಸಿದ್ದ ನಟಿ ಸುಹಾಸಿನಿ: ಕಾಲಿವುಡ್‌ ಜೋಡಿಯ ಲವ್‌ ಸ್ಟೋರಿ ಓದಿ

Jun 02, 2023 05:34 PM IST

ಬಹುಭಾಷಾ ನಿರ್ದೇಶಕ ಮಣಿರತ್ನಂ ಇಂದು 67ನೇ ವಸಂತಕ್ಕೆ ಕಾಲಿಟ್ಟಿದ್ದಾರೆ. ಭಾರತೀಯ ಸಿನಿಮಾ ರಂಗಕ್ಕೆ ಸಾಕಷ್ಟು ಸೂಪರ್‌ ಹಿಟ್‌ ಸಿನಿಮಾಗಳನ್ನು ನಿರ್ದೇಶಿದ ಮಣಿರತ್ನಂಗೆ ಅಭಿಮಾನಿಗಳು, ಸಿನಿಮಾ ಗಣ್ಯರು ಶುಭ ಕೋರುತ್ತಿದ್ದಾರೆ.

ಮಣಿರತ್ನಂ ಸಿನಿಮಾ ನಿರ್ದೇಶಕನಾಗಿ ಕರಿಯರ್‌ ಆರಂಭಿಸಿದ್ದು ಕನ್ನಡ ಸಿನಿಮಾ 'ಪಲ್ಲವಿ ಅನುಪಲ್ಲವಿ' ಮೂಲಕ. ಅಲ್ಲಿಂದ ನಂತರ ಅವರು ಹಿಂತಿರುಗಿ ನೋಡಲೇ ಇಲ್ಲ. 
(1 / 9)
ಮಣಿರತ್ನಂ ಸಿನಿಮಾ ನಿರ್ದೇಶಕನಾಗಿ ಕರಿಯರ್‌ ಆರಂಭಿಸಿದ್ದು ಕನ್ನಡ ಸಿನಿಮಾ 'ಪಲ್ಲವಿ ಅನುಪಲ್ಲವಿ' ಮೂಲಕ. ಅಲ್ಲಿಂದ ನಂತರ ಅವರು ಹಿಂತಿರುಗಿ ನೋಡಲೇ ಇಲ್ಲ. (PC: Suhasini Hasan Instagram )
ಖ್ಯಾತ ನಟಿ ಸುಹಾಸಿನಿ, ಮಣಿರತ್ನಂ ಅವರ ಪತ್ನಿ. 1988 ರಲ್ಲಿ ಇಬ್ಬರೂ ಮದುವೆಯಾದರು. ಈ ದಂಪತಿಗೆ ನಂದನ್‌ ಎಂಬ ಒಬ್ಬ ಮಗ ಇದ್ದಾರೆ.  
(2 / 9)

ಇವರ ಪ್ರೀತಿ ಹಾಗೂ ಮದುವೆಗೆ ಸಂಬಂಧಿಸಿದಂತೆ ಇಂಟ್ರೆಸ್ಟಿಂಗ್‌ ವಿಚಾರವೊಂದಿದೆ. ಆಗಲೇ ಸುಹಾಸಿನಿ ಚಿತ್ರರಂಗದಲ್ಲಿ ಹೆಸರು ಮಾಡಿದ್ದರು. ಬಹುಭಾಷಾ ನಟಿಯಾಗಿ ಗುರುತಿಸಿಕೊಂಡಿದ್ದರು.
(3 / 9)

ಸುಹಾಸಿನಿ ಅವರನ್ನು ಅನೇಕ ಬಾರಿ ನೋಡಿದ್ದ ಮಣಿರತ್ನಂ ಆಕೆಗೆ ಪ್ರಪೋಸ್‌ ಮಾಡಿದ್ಧಾರೆ. ಆದರೆ ಸುಹಾಸಿನಿ ಮಾತ್ರ  ಮಣಿರತ್ನಂ ಪ್ರೀತಿಯನ್ನು ನಿರಾಕರಿಸಿದ್ದಾರೆ. 
(4 / 9)

ಪ್ರೀತಿ-ಪ್ರೇಮ ಎಂದೆಲ್ಲಾ ಸುತ್ತಾಡುವುದು ನನಗೆ ಇಷ್ಟವಿಲ್ಲ, ನನಗೆ ಇಂತಹ ರಿಲೇಶನ್‌ಶಿಪ್‌ನಲ್ಲಿ ನಂಬಿಕೆ ಇಲ್ಲ, ಏನಿದ್ದರೂ ಮದುವೆ ಮಾತ್ರ ಎಂದು ಉತ್ತರಿಸಿದ್ದಾರೆ. ನಂತರ ಮಣಿರತ್ನಂ ಸ್ವಲ್ಪವೂ ತಡ ಮಾಡದೆ ಸುಹಾಸಿನಿ ಮನೆಯವರನ್ನು ಒಪ್ಪಿಸಿ ಮದುವೆ ಆಗಿದ್ದಾರೆ. 
(5 / 9)

35 ವರ್ಷಗಳು ಈ ಜೋಡಿ ಒಟ್ಟಿಗೆ ಕಳೆದಿದ್ದಾರೆ. ಈಗಲೂ ಇವರ ನಡುವಿನ ಪ್ರೀತಿ ಮೊದಲಿನಂತೆ ಇದೆ. 
(6 / 9)

ಸಿನಿಮಾಗಳ ಬಗ್ಗೆ ಹೇಳುವುದಾದರೆ ಇತ್ತೀಚೆಗೆ ಮಣಿರತ್ನಂ ನಿರ್ದೇಶನದ ಪೊನ್ನಿಯಿನ್‌ ಸೆಲ್ವನ್‌ ಸಿನಿಮಾ ತೆರೆ ಕಂಡು ಯಶಸ್ವಿಯಾಗಿದೆ. 
(7 / 9)

ಸುಹಾಸಿನಿ ಮದುವೆ ನಂತರ ಕೂಡಾ ಸಿನಿಮಾಗಳಲ್ಲಿ ನಟಿಸುತ್ತಿದ್ದಾರೆ. ಕಳೆದ ವರ್ಷ ತೆರೆ ಕಂಡ ಮಾನ್ಸೂನ್‌ ರಾಗ ಸಿನಿಮಾದಲ್ಲಿ ಸುಹಾಸಿನಿ ನಟಿಸಿದ್ದರು. ಸದ್ಯಕ್ಕೆ ಅವರು ತೆಲುಗಿನ 'ಮಿಸ್ಟರ್‌ ಪ್ರೆಗ್ನೆಂಟ್‌' ಚಿತ್ರದಲ್ಲಿ ಬ್ಯುಸಿ ಇದ್ದಾರೆ. 
(8 / 9)

ಇನ್ನು ಮಣಿರತ್ನಂ 'ಪೊನ್ನಿಯಿನ್‌ ಸೆಲ್ವನ್'‌ ಯಶಸ್ಸಿನ ಖುಷಿಯಲ್ಲಿ ಇದ್ದು ಶೀಘ್ರದಲ್ಲೇ ಹೊಸ ಸಿನಿಮಾ ಅನೌನ್ಸ್‌ ಮಾಡಲಿದ್ದಾರೆ. 
(9 / 9)

    ಹಂಚಿಕೊಳ್ಳಲು ಲೇಖನಗಳು