logo
ಕನ್ನಡ ಸುದ್ದಿ  /  ಫೋಟೋ ಗ್ಯಾಲರಿ  /  ನಾನು ಸಾವಿರ ಪೇಂಟಿಂಗ್ ನೋಡಿರಬಹುದು, ನನಗೆ ಇಷ್ಟವಾದ ಪೇಂಟಿಂಗ್‌ ಅವಳ ಮುಖ; ಮಹಾಲಕ್ಷ್ಮೀಗೆ ಪತಿ ರವೀಂದರ್‌ ಆನಿವರ್ಸರಿ ಶುಭಾಶಯ‌

ನಾನು ಸಾವಿರ ಪೇಂಟಿಂಗ್ ನೋಡಿರಬಹುದು, ನನಗೆ ಇಷ್ಟವಾದ ಪೇಂಟಿಂಗ್‌ ಅವಳ ಮುಖ; ಮಹಾಲಕ್ಷ್ಮೀಗೆ ಪತಿ ರವೀಂದರ್‌ ಆನಿವರ್ಸರಿ ಶುಭಾಶಯ‌

Sep 03, 2023 01:22 PM IST

Ravindar Chandrasekaran: ತಮಿಳು ನಿರ್ಮಾಪಕ ರವೀಂದರ್‌ ಚಂದ್ರಶೇಖರನ್‌ ಮತ್ತು ಮಹಾಲಕ್ಷೀ ಸದಾ ಸುದ್ದಿಯಲ್ಲಿರುವ ಸೆಲೆಬ್ರಿಟಿ ಜೋಡಿ. ಇದೀಗ ಇದೇ ಜೋಡಿ ಮೊದಲ ವರ್ಷದ ವಿವಾಹ ವಾರ್ಷಿಕೋತ್ಸವವನ್ನು ಆಚರಿಸಿಕೊಂಡಿದೆ. ಪತ್ನಿಗೆ ಸುದೀರ್ಘ ಪತ್ರ ಬರೆದು, ಶುಭಾಶಯ ಕೋರಿದ್ದಾರೆ ಪತಿ ರವೀಂದರ್.‌

  • Ravindar Chandrasekaran: ತಮಿಳು ನಿರ್ಮಾಪಕ ರವೀಂದರ್‌ ಚಂದ್ರಶೇಖರನ್‌ ಮತ್ತು ಮಹಾಲಕ್ಷೀ ಸದಾ ಸುದ್ದಿಯಲ್ಲಿರುವ ಸೆಲೆಬ್ರಿಟಿ ಜೋಡಿ. ಇದೀಗ ಇದೇ ಜೋಡಿ ಮೊದಲ ವರ್ಷದ ವಿವಾಹ ವಾರ್ಷಿಕೋತ್ಸವವನ್ನು ಆಚರಿಸಿಕೊಂಡಿದೆ. ಪತ್ನಿಗೆ ಸುದೀರ್ಘ ಪತ್ರ ಬರೆದು, ಶುಭಾಶಯ ಕೋರಿದ್ದಾರೆ ಪತಿ ರವೀಂದರ್.‌
ಒಳ್ಳೆಯ ವಿಚಾರಕ್ಕಿಂತ ನೆಗೆಟಿವ್‌ ವಿಚಾರಕ್ಕೇ ತಮಿಳು ನಟಿ ಮಹಾಲಕ್ಷ್ಮೀ ಶಂಕರ್‌ ಮತ್ತು ರವೀಂದರ್‌ ಚಂದ್ರಶೇಖರನ್‌ ಜೋಡಿ ಹೆಚ್ಚು ಸದ್ದು ಮಾಡಿತ್ತು. ಸೋಷಿಯಲ್‌ ಮೀಡಿಯಾದಲ್ಲಿಯೂ ಇಬ್ಬರೂ ಹಾಟ್‌ ಟಾಪಿಕ್‌ ಆಗಿದ್ದರು. 
(1 / 8)

ನಾನು ಸಾವಿರ ಪೇಂಟಿಂಗ್ ನೋಡಿದ್ದೇನೆ, ನನಗೆ ಇಷ್ಟವಾದ ಪೇಂಟಿಂಗ್‌ ಅವಳ ಮುಖ ಎಂದೂ ಪತ್ನಿ ಬಗ್ಗೆ ಪ್ರೀತಿಯ ಮಾತುಗಳನ್ನು ಆಡುತ್ತಿರುತ್ತಾರೆ ರವೀಂದರ್. ಇದೀಗ ಇದೇ ಜೋಡಿ ಮೊದಲ ಮದುವೆಯ ವಾರ್ಷಿಕೋತ್ಸವವನ್ನು ಆಚರಿಸಿಕೊಂಡಿದೆ. ಪತಿ ರವೀಂದರ್‌ ಚಂದ್ರಶೇಖರನ್‌, ಪತ್ನಿ ಮಹಾಲಕ್ಷ್ಮೀಗೆ ವಿಶೇಷ ಪತ್ರದ ಮೂಲಕ ಶುಭಾಶಯ ಕೋರಿದ್ದಾರೆ. ಹೀಗಿದೆ ಆ ಪತ್ರದ ವಿವರಣೆ. 
(2 / 8)

“ಹೇಗೆ ಶುರು ಮಾಡಬೇಕು, ಯಾವಾಗ ಹೇಳಬೇಕು.. ಒಂದು ವರ್ಷ ತುಂಬಾ ವೇಗವಾಗಿ ಹೋಗಿದೆ. ಅದಕ್ಕೆಲ್ಲಾ ಹೊಣೆ ಯಾರು ಗೊತ್ತಾ? ಕಳೆದ ವರ್ಷ, ನಮ್ಮ ಮದುವೆ ಆಗಿದ್ದೇ ರಾಷ್ಟ್ರದ ಬಹು ದೊಡ್ಡ ಸಮಸ್ಯೆಯಾಗಿತ್ತು. ಇದು ಹಣಕ್ಕಾಗಿ, ಈ ಸಂಬಂಧ 3 ತಿಂಗಳು ಬಾಳಿಕೆ ಬರುವುದಿಲ್ಲ, ಎಷ್ಟು ದಿನ ಈ ಸಂಬಂಧ ಮುಂದುವರಿಯಲಿದೆ.. ಎಂದು ಹೇಳಿದವರೇ ಹೆಚ್ಚು. 
(3 / 8)

ನನಗೂ ನನ್ನ ಪತ್ನಿಯ ವರ್ತನೆ ಅಚ್ಚರಿ ಎನಿಸಿತು. ನನ್ನ ಮನೆಕೆಲಸ, ಕಾಫಿ, ಅಡುಗೆ ಎಲ್ಲವನ್ನು ಮನೆ ಕೆಲಸದವರೇ ಮಾಡಬೇಕು ಎಂದುಕೊಂಡೆ. ಆದರೆ, ನನ್ನವಳು ಹಾಗೆ ಆಗಲು ಬಿಡಲಿಲ್ಲ. ಬೆಳಗ್ಗೆ ಬೇಗ ಎದ್ದು ಮನೆಯಂಗಳ ಶುಚಿಗೊಳಿಸಿ, ರಂಗೋಲಿ ಹಾಕಿ, ಕಾಫಿ ಮಾಡಿ ಕೊಡುತ್ತಾಳೆ. ಒಮ್ಮೊಮ್ಮೆ ಕೆಟ್ಟದಾದ ಅಡುಗೆ ಮಾಡಿದ್ದೂ ಇದೆ. ಬಳಿಕ ನಾವು ಸ್ವಿಗ್ಗಿ ಮತ್ತು ಜೊಮ್ಯಾಟೋ ಬಳಕೆ ಆರಂಭಿಸಿದೆವು. 
(4 / 8)

ಟಿವಿಯಲ್ಲಿ ಕಾಣುವಂತೆ ಆಕೆ ಕಾಣಿಸುವುದಿಲ್ಲ. ಅವಳಿಗೆ ಕೊಂಚ ಆಟಿಟ್ಯೂಡ್‌ ಇದೆ. ಅವಳ ಪ್ರೀತಿ ಕೊಂಚ ಒರಟು. ದುರಂಹಕಾರಿಯೂ ಹೌದು. ಆದರೆ, ನನ್ನ ಮೇಲೆ ಅತಿಯಾದ ಪ್ರೀತಿ ಬಂದಾಗ, ಆಕೆ ನೇರವಾಗಿ ಅಡುಗೆ ಮನೆಗೆ ಹೋಗುತ್ತಾಳೆ. ನನಗಾಗಿ ಏನಾದರೂ ಮಾಡಿ ತರುತ್ತಾಳೆ. 
(5 / 8)

ನಾವು ಬೇರ್ಪಟ್ಟಿದ್ದೇವೆ, ದೂರವಾಗಿದ್ದೇವೆ ಎಂದು ಯೂಟ್ಯೂಬ್‌ಗಳಲ್ಲಿ ಸುದ್ದಿಗಳು ಬಂದಾಗ, ನಾವು ಅವರೆಲ್ಲರ ಮುಂದೆ ಬಾಳಿ ಬದುಕಬೇಕು ಎಂದು ಹೇಳುತ್ತಾಳೆ.  ಅದನ್ನು ನಾವು ಸಾಬೀತುಪಡಿಸಬೇಕು ಎನ್ನುತ್ತಾಳೆ. 
(6 / 8)

ನಾನು ಅವಳ ನಿಜವಾದ ಮತ್ತು ಪ್ರಾಮಾಣಿಕ ಪ್ರೀತಿಗೆ ಅರ್ಹನಲ್ಲ. ಆದರೂ ಪರವಾಗಿಲ್ಲ ನಮ್ಮ ಜೀವನ ತುಂಬ ಸುಂದರವಾಗಿದೆ. ಸಂತೋಷದಲ್ಲಿ ನಮ್ಮನ್ನು ನಗಿಸುವ ಹುಡುಗಿ ಮತ್ತು ಸಂತೋಷದಲ್ಲಿ ನಮ್ಮನ್ನು ಅಳುವಂತೆ ಮಾಡುವ ಹುಡುಗಿ ಮಾತ್ರ ನಮಗೆ ಅತ್ಯುತ್ತಮವಾದ ಜೀವನವನ್ನು ನೀಡಬಲ್ಲಳು. 
(7 / 8)

ನನ್ನ ಬಂಗಾರ ನನ್ನ ಮಹಾಲಕ್ಷ್ಮೀ. ಒಳ್ಳೆಯ ಹೆಂಡತಿ ಆಗುವುದು ಅದು ದೇವರ ವರ ಎಂದು ಸುದೀರ್ಘವಾದ ಪತ್ರ ಬರೆದುಕೊಂಡಿದ್ದಾರೆ ರವೀಂದರ್.‌ ನಿರ್ಮಾಪಕನ ಈ ವಿಶೇಷ ದಿನಕ್ಕೆ ನೆಟ್ಟಿಗರೂ ಶುಭಾಶಯ ರವಾನಿಸುತ್ತಿದ್ದಾರೆ.
(8 / 8)

    ಹಂಚಿಕೊಳ್ಳಲು ಲೇಖನಗಳು