logo
ಕನ್ನಡ ಸುದ್ದಿ  /  ಫೋಟೋ ಗ್ಯಾಲರಿ  /  ಗಡ್ಡ ಬೆಳ್ಳಗಾದರೆ ವಯಸ್ಸಾಯ್ತು ಅಂತ ಸುಮ್ಮನಾಗ್ಬೇಡಿ; ಮನೆಯಲ್ಲೇ ನೈಸರ್ಗಿಕ ಗಡ್ಡದ ಡೈ ಮಾಡಿ ಹಚ್ಚಿ

ಗಡ್ಡ ಬೆಳ್ಳಗಾದರೆ ವಯಸ್ಸಾಯ್ತು ಅಂತ ಸುಮ್ಮನಾಗ್ಬೇಡಿ; ಮನೆಯಲ್ಲೇ ನೈಸರ್ಗಿಕ ಗಡ್ಡದ ಡೈ ಮಾಡಿ ಹಚ್ಚಿ

Sep 30, 2024 03:42 PM IST

ತಲೆಕೂದಲು ಬೆಳ್ಳಗಾದರೆ ಮಾರುಕಟ್ಟೆಯಲ್ಲಿ ಹೇರ್‌ ಡೈ ಸಿಗಯತ್ತವೆ. ಆದರೆ ಗಡ್ಡದ ಬಣ್ಣ ಕಡಿಮೆಯಾದರೆ ಅದಕ್ಕೆ ಹೇರ್‌ ಡೈ ಹಚ್ಚಲು ಆಗಲ್ಲ. ಬೂದು ಅಥವಾ ಬಿಳಿ ಗಡ್ಡ ಕೆಲವರಿಗೆ ಸಮಸ್ಯೆಯಾಗಬಹುದು. ಆದರೆ ಕೆಲವೊಂದು ನೈಸರ್ಗಿಕ ವಸ್ತುಗಳ ನೆರವಿಂದ ನಿಮ್ಮ ಗಡ್ಡವನ್ನು ಕಪ್ಪಾಗಿ ಕಾಣುವಂತೆ ಮಾಡಬಹುದು.

  • ತಲೆಕೂದಲು ಬೆಳ್ಳಗಾದರೆ ಮಾರುಕಟ್ಟೆಯಲ್ಲಿ ಹೇರ್‌ ಡೈ ಸಿಗಯತ್ತವೆ. ಆದರೆ ಗಡ್ಡದ ಬಣ್ಣ ಕಡಿಮೆಯಾದರೆ ಅದಕ್ಕೆ ಹೇರ್‌ ಡೈ ಹಚ್ಚಲು ಆಗಲ್ಲ. ಬೂದು ಅಥವಾ ಬಿಳಿ ಗಡ್ಡ ಕೆಲವರಿಗೆ ಸಮಸ್ಯೆಯಾಗಬಹುದು. ಆದರೆ ಕೆಲವೊಂದು ನೈಸರ್ಗಿಕ ವಸ್ತುಗಳ ನೆರವಿಂದ ನಿಮ್ಮ ಗಡ್ಡವನ್ನು ಕಪ್ಪಾಗಿ ಕಾಣುವಂತೆ ಮಾಡಬಹುದು.
ಬಿಳಿ ಗಡ್ಡಕ್ಕೆ ಡೈ ಅಥವಾ ಬೇರೆ ಬಣ್ಣ ಹಚ್ಚಲು ಹೋದರೆ, ಚರ್ಮಕ್ಕೆ ಹಾನಿಯಾಗುತ್ತದೆ. ಹೀಗಾಗಿ ಯಾವುದೇ ಅಡ್ಡಪರಿಣಾಮಗಳಿಲ್ಲದೆ ಬಿಳಿ ಗಡ್ಡವನ್ನು ಹೇಗೆ ಕಪ್ಪು ಮಾಡುವುದು ಎಂಬುದನ್ನು ನೋಡೋಣ.
(1 / 6)

ತೆಂಗಿನ ಎಣ್ಣೆ, ಕರಿಬೇವಿನ ಎಲೆ, ನೆಲ್ಲಿಕಾಯಿ ಮತ್ತು ಕಪ್ಪು ಎಳ್ಳನ್ನು ಬಳಸಿ ಬಿಳಿ ಗಡ್ಡವನ್ನು ಕಪ್ಪು ಮಾಡಬಹುದು. ಆ ವಿಧಾನ ಮುಂದಿದೆ.
(2 / 6)

ತೆಂಗಿನ ಎಣ್ಣೆ ಮತ್ತು ನೆಲ್ಲಿಕಾಯಿ: ಅನಾದಿಕಾಲದಿಂದಲೂ ತೆಂಗಿನ ಎಣ್ಣೆ ಮತ್ತು ನೆಲ್ಲಿಕಾಯಿಯನ್ನು ಕೂದಲಿನ ಆರೈಕೆಗೆ ಬಳಸಲಾಗುತ್ತದೆ. ಸ್ವಲ್ಪ ತೆಂಗಿನ ಎಣ್ಣೆಗೆ ಒಂದು ನೆಲ್ಲಿಕಾಯಿ ತುಂಡುಗಳನ್ನು ಹಾಕಿ 2-3 ನಿಮಿಷಗಳ ಕಾಲ ಕುದಿಸಿ. ಎಣ್ಣೆ ತಣ್ಣಗಾಗಲು ಬಿಡಿ. ತಣ್ಣಗಾದ ನಂತರ, ನಿಮ್ಮ ಗಲ್ಲದ ಮೇಲಿನ ಗಡ್ಡಕ್ಕೆ ಹಚ್ಚಿ. ಇದನ್ನು 15 ನಿಮಿಷಗಳ ಕಾಲ ಬಿಟ್ಟು ಮತ್ತು ತೊಳೆಯಿರಿ. ಕೆಲವು ದಿನಗಳನ್ನು ಬಿಟ್ಟು ಮತ್ತೆ ಹೀಗೆ ಮಾಡಿ.
(3 / 6)

ತೆಂಗಿನ ಎಣ್ಣೆ - ಕರಿಬೇವು: ಗಡ್ಡವನ್ನು ಕಪ್ಪು ಮಾಡಲು ಇದನ್ನು ಕೂಡಾ ಬಳಸಬಹುದು. ತೆಂಗಿನ ಎಣ್ಣೆಗೆ ಕರಿಬೇವಿನ ಎಲೆಗಳನ್ನು ಹಾಕಿ ಕಡಿಮೆ ಉರಿಯಲ್ಲಿ ಕೆಲಕಾಲ ಕುದಿಸಿ. ಅದು ತಣ್ಣಗಾದ ನಂತರ ಎಣ್ಣೆಯನ್ನು ಗಲ್ಲಕ್ಕೆ ಹಚ್ಚಿ. 15 ನಿಮಿಷಗಳ ಕಾಲ ಹಾಗೆ ಬಿಟ್ಟು ತೊಳೆಯಿರಿ. ನಿಯಮಿತವಾಗಿ ಇದನ್ನು ಮಾಡಿದರೆ ಗಡ್ಡವು ಕಪ್ಪಾಗುತ್ತದೆ.
(4 / 6)

ಕಪ್ಪು ಎಳ್ಳು: ಕಪ್ಪು ಎಳ್ಳಿನ ಬೀಜಗಳನ್ನು ರಾತ್ರಿಯಿಡೀ ನೀರಿನಲ್ಲಿ ನೆನೆಸಿ ಮತ್ತು ಮರುದಿನ ಪೇಸ್ಟ್ ಮಾಡಿ. ಈ ಪೇಸ್ಟ್ ಅನ್ನು ಗಲ್ಲದ ಮೇಲೆ ಹಚ್ಚಿ ಮತ್ತು ಒಣಗಿದ ನಂತರ ತೊಳೆಯಿರಿ. ಇದನ್ನು ಪುನರಾವರ್ತನೆ ಮಾಡಿದರೆ, ಗಡ್ಡ ಕಪ್ಪು ಬಣ್ಣ ಪಡೆಯುತ್ತದೆ,
(5 / 6)

ನಿಂಬೆ ರಸ, ರೋಸ್ಮರಿ ಮತ್ತು ವಿನೆಗರ್: ಒಂದು ಕಪ್ ಗೋರಂಟಿಗೆ ಒಂದು ಟೀಸ್ಪೂನ್ ಸೀಗೆಕಾಯಿ, ನಿಂಬೆ ರಸ, ವಿನೆಗರ್, 1/2 ಟೀಸ್ಪೂನ್ ತೆಂಗಿನ ಎಣ್ಣೆ ಮತ್ತು ಸ್ವಲ್ಪ ಮೊಸರು ಸೇರಿಸಿ. ಈ ಪೇಸ್ಟ್ ಅನ್ನು ನಿಮ್ಮ ಗಡ್ಡದ ಕೂದಲಿಗೆ ಹಚ್ಚಿ. ಒಣಗಿದ ನಂತರ ತೊಳೆಯಿರಿ.
(6 / 6)

    ಹಂಚಿಕೊಳ್ಳಲು ಲೇಖನಗಳು