logo
ಕನ್ನಡ ಸುದ್ದಿ  /  ಫೋಟೋ ಗ್ಯಾಲರಿ  /  ಯಾವ ವಯಸ್ಸಿನವರು ಪ್ರತಿದಿನ ಎಷ್ಟು ಸಮಯ ನಡೆಯಬೇಕು; ಸರಳ ವ್ಯಾಯಾಮದ ಬಗ್ಗೆ ತಜ್ಞರು ಹೇಳೋದಿಷ್ಟು

ಯಾವ ವಯಸ್ಸಿನವರು ಪ್ರತಿದಿನ ಎಷ್ಟು ಸಮಯ ನಡೆಯಬೇಕು; ಸರಳ ವ್ಯಾಯಾಮದ ಬಗ್ಗೆ ತಜ್ಞರು ಹೇಳೋದಿಷ್ಟು

Dec 03, 2024 07:14 PM IST

ಪ್ರತಿಯೊಬ್ಬರೂ ಪ್ರತಿದಿನ ನಡೆಯಬೇಕು. ಇದು ದೇಹವನ್ನು ಸದೃಢವಾಗಿರಿಸುತ್ತದೆ. ನಡಿಗೆಯು ಅತ್ಯಂತ ಸರಳ ಮತ್ತು ಎಲ್ಲರೂ ಮಾಡಬಹುದಾದ ವ್ಯಾಯಾಮವಾಗಿದೆ. ಹಾಗಿದ್ದರೆ ಪ್ರತಿದಿನ ಒಬ್ಬ ವ್ಯಕ್ತಿಯು ತನ್ನ ವಯಸ್ಸಿಗೆ ಅನುಗುಣವಾಗಿ ಎಷ್ಟು ನಿಮಿಷಗಳ ಕಾಲ ನಡೆಯಬೇಕು ಎಂಬುದನ್ನು ನೋಡೋಣ.

  • ಪ್ರತಿಯೊಬ್ಬರೂ ಪ್ರತಿದಿನ ನಡೆಯಬೇಕು. ಇದು ದೇಹವನ್ನು ಸದೃಢವಾಗಿರಿಸುತ್ತದೆ. ನಡಿಗೆಯು ಅತ್ಯಂತ ಸರಳ ಮತ್ತು ಎಲ್ಲರೂ ಮಾಡಬಹುದಾದ ವ್ಯಾಯಾಮವಾಗಿದೆ. ಹಾಗಿದ್ದರೆ ಪ್ರತಿದಿನ ಒಬ್ಬ ವ್ಯಕ್ತಿಯು ತನ್ನ ವಯಸ್ಸಿಗೆ ಅನುಗುಣವಾಗಿ ಎಷ್ಟು ನಿಮಿಷಗಳ ಕಾಲ ನಡೆಯಬೇಕು ಎಂಬುದನ್ನು ನೋಡೋಣ.
ಆಧುನಿಕ ಯುಗದ ಒತ್ತಡದ ಜೀವನದಲ್ಲಿ, ಆರೋಗ್ಯವಾಗಿರುವುದು ಅಷ್ಟು ಸುಲಭವಲ್ಲ. ಸಮಯದ ಕೊರತೆಯಿಂದಾಗಿ ಜನರು ತಮ್ಮ ಜೀವನಶೈಲಿಯತ್ತ ಹೆಚ್ಚು ಗಮನ ಹರಿಸಲು ಸಾಧ್ಯವಾಗುತ್ತಿಲ್ಲ. ಜನರು ಆರೋಗ್ಯವಾಗಿರಲು ಪ್ರತಿದಿನ ಸುಮಾರು 10,000 ಹೆಜ್ಜೆಯಾದರೂ ನಡೆಯಬೇಕು ಎಂದು ಹೇಳಲಾಗುತ್ತದೆ. ಪ್ರತಿಯೊಬ್ಬರೂ ಪ್ರತಿದಿನ ನಡೆಯಬೇಕು, ಇದು ದೇಹವನ್ನು ಸದೃಢವಾಗಿರಿಸುತ್ತದೆ. ಒಬ್ಬ ವ್ಯಕ್ತಿಯು ತನ್ನ ವಯಸ್ಸಿಗೆ ಅನುಗುಣವಾಗಿ ಎಷ್ಟು ನಿಮಿಷಗಳ ಕಾಲ ನಡೆಯಬೇಕು ಎಂದು ನೋಡೋಣ.
(1 / 7)
ಆಧುನಿಕ ಯುಗದ ಒತ್ತಡದ ಜೀವನದಲ್ಲಿ, ಆರೋಗ್ಯವಾಗಿರುವುದು ಅಷ್ಟು ಸುಲಭವಲ್ಲ. ಸಮಯದ ಕೊರತೆಯಿಂದಾಗಿ ಜನರು ತಮ್ಮ ಜೀವನಶೈಲಿಯತ್ತ ಹೆಚ್ಚು ಗಮನ ಹರಿಸಲು ಸಾಧ್ಯವಾಗುತ್ತಿಲ್ಲ. ಜನರು ಆರೋಗ್ಯವಾಗಿರಲು ಪ್ರತಿದಿನ ಸುಮಾರು 10,000 ಹೆಜ್ಜೆಯಾದರೂ ನಡೆಯಬೇಕು ಎಂದು ಹೇಳಲಾಗುತ್ತದೆ. ಪ್ರತಿಯೊಬ್ಬರೂ ಪ್ರತಿದಿನ ನಡೆಯಬೇಕು, ಇದು ದೇಹವನ್ನು ಸದೃಢವಾಗಿರಿಸುತ್ತದೆ. ಒಬ್ಬ ವ್ಯಕ್ತಿಯು ತನ್ನ ವಯಸ್ಸಿಗೆ ಅನುಗುಣವಾಗಿ ಎಷ್ಟು ನಿಮಿಷಗಳ ಕಾಲ ನಡೆಯಬೇಕು ಎಂದು ನೋಡೋಣ.(shutterstock)
ನೀವು 18ರಿಂದ 30 ವರ್ಷ ವಯಸ್ಸಿನವರಾಗಿದ್ದರೆ, ನೀವು ಪ್ರತಿದಿನ ಕನಿಷ್ಠ ಅರ್ಧ ಗಂಟೆ ನಡೆಯಬೇಕು. ಈ ವಯಸ್ಸಿನಲ್ಲಿ ತೂಕವು ಬಹಳವಾಗಿ ಬದಲಾಗುತ್ತದೆ. ಅಂತಹ ಪರಿಸ್ಥಿತಿಯಲ್ಲಿ, 30-60 ನಿಮಿಷಗಳ ಕಾಲ ನಡೆಯುವುದು ಪ್ರಯೋಜನಕಾರಿ ಎಂದು ಪರಿಗಣಿಸಲಾಗಿದೆ.
(2 / 7)
ನೀವು 18ರಿಂದ 30 ವರ್ಷ ವಯಸ್ಸಿನವರಾಗಿದ್ದರೆ, ನೀವು ಪ್ರತಿದಿನ ಕನಿಷ್ಠ ಅರ್ಧ ಗಂಟೆ ನಡೆಯಬೇಕು. ಈ ವಯಸ್ಸಿನಲ್ಲಿ ತೂಕವು ಬಹಳವಾಗಿ ಬದಲಾಗುತ್ತದೆ. ಅಂತಹ ಪರಿಸ್ಥಿತಿಯಲ್ಲಿ, 30-60 ನಿಮಿಷಗಳ ಕಾಲ ನಡೆಯುವುದು ಪ್ರಯೋಜನಕಾರಿ ಎಂದು ಪರಿಗಣಿಸಲಾಗಿದೆ.(shutterstock)
ನಿಯಮಿತ ವಾಕಿಂಗ್ ಮಾಡುವುದರಿಂದ ತೂಕ ನಿಯಂತ್ರಣದಲ್ಲಿಡುವುದು ಮಾತ್ರವಲ್ಲದೆ ಮಾನಸಿಕ ಒತ್ತಡ ಮತ್ತು ಇತರ ಅನೇಕ ಗಂಭೀರ ಕಾಯಿಲೆಗಳ ಅಪಾಯ ಕಡಿಮೆಯಾಗುತ್ತದೆ. 31ರಿಂದ 50 ವರ್ಷ ವಯಸ್ಸಿನವರಾಗಿದ್ದರೆ, ನೀವು ಪ್ರತಿದಿನ 30 ನಿಮಿಷಗಳಿಂದ 45 ನಿಮಿಷಗಳವರೆಗೆ ನಡೆಯಬೇಕು.
(3 / 7)
ನಿಯಮಿತ ವಾಕಿಂಗ್ ಮಾಡುವುದರಿಂದ ತೂಕ ನಿಯಂತ್ರಣದಲ್ಲಿಡುವುದು ಮಾತ್ರವಲ್ಲದೆ ಮಾನಸಿಕ ಒತ್ತಡ ಮತ್ತು ಇತರ ಅನೇಕ ಗಂಭೀರ ಕಾಯಿಲೆಗಳ ಅಪಾಯ ಕಡಿಮೆಯಾಗುತ್ತದೆ. 31ರಿಂದ 50 ವರ್ಷ ವಯಸ್ಸಿನವರಾಗಿದ್ದರೆ, ನೀವು ಪ್ರತಿದಿನ 30 ನಿಮಿಷಗಳಿಂದ 45 ನಿಮಿಷಗಳವರೆಗೆ ನಡೆಯಬೇಕು.(shutterstock)
ವಯಸ್ಸಾದಂತೆ ದೇಹವನ್ನು ಸದೃಢವಾಗಿಡುವುದು ಕಷ್ಟವಾಗುತ್ತದೆ. 50 ವರ್ಷಕ್ಕಿಂತ ಮೇಲ್ಪಟ್ಟ ಜನರು ಈ ಸಮಸ್ಯೆಯಿಂದ ಬಳಲುತ್ತಾರೆ. ಮೂಳೆಗಳು ಸಹ ದುರ್ಬಲಗೊಳ್ಳಲು ಪ್ರಾರಂಭಿಸುತ್ತವೆ. ಈ ಕಾರಣಕ್ಕಾಗಿ, ಈ ವಯಸ್ಸಿನ ಜನರು ಪ್ರತಿದಿನ ಸುಮಾರು 30-40 ನಿಮಿಷಗಳ ಕಾಲ ನಡೆಯುವುದು ಬಹಳ ಮುಖ್ಯ.
(4 / 7)
ವಯಸ್ಸಾದಂತೆ ದೇಹವನ್ನು ಸದೃಢವಾಗಿಡುವುದು ಕಷ್ಟವಾಗುತ್ತದೆ. 50 ವರ್ಷಕ್ಕಿಂತ ಮೇಲ್ಪಟ್ಟ ಜನರು ಈ ಸಮಸ್ಯೆಯಿಂದ ಬಳಲುತ್ತಾರೆ. ಮೂಳೆಗಳು ಸಹ ದುರ್ಬಲಗೊಳ್ಳಲು ಪ್ರಾರಂಭಿಸುತ್ತವೆ. ಈ ಕಾರಣಕ್ಕಾಗಿ, ಈ ವಯಸ್ಸಿನ ಜನರು ಪ್ರತಿದಿನ ಸುಮಾರು 30-40 ನಿಮಿಷಗಳ ಕಾಲ ನಡೆಯುವುದು ಬಹಳ ಮುಖ್ಯ.(shutterstock)
ವಯಸ್ಸಾದ 66ರಿಂದ 75 ವರ್ಷ ವಯಸ್ಸಿನ ಹಿರಿಯರಿಗೆ 20ರಿಂದ 30 ನಿಮಿಷಗಳ ನಡಿಗೆ ಸಾಕು ಎಂದು ಪರಿಗಣಿಸಲಾಗುತ್ತದೆ. ಇದು ಅನೇಕ ಗಂಭೀರ ಕಾಯಿಲೆಗಳಿಂದ ಪರಿಹಾರವನ್ನು ನೀಡುತ್ತದೆ.
(5 / 7)
ವಯಸ್ಸಾದ 66ರಿಂದ 75 ವರ್ಷ ವಯಸ್ಸಿನ ಹಿರಿಯರಿಗೆ 20ರಿಂದ 30 ನಿಮಿಷಗಳ ನಡಿಗೆ ಸಾಕು ಎಂದು ಪರಿಗಣಿಸಲಾಗುತ್ತದೆ. ಇದು ಅನೇಕ ಗಂಭೀರ ಕಾಯಿಲೆಗಳಿಂದ ಪರಿಹಾರವನ್ನು ನೀಡುತ್ತದೆ.(shutterstock)
75 ವರ್ಷಕ್ಕಿಂತ ಮೇಲ್ಪಟ್ಟವರು 15ರಿಂದ 20 ನಿಮಿಷಗಳ ಕಾಲ ನಡೆದರೆ ಒಳ್ಳೆಯದು. ನಿಮ್ಮನೆಯಲ್ಲಿ ಈ ವಯಸ್ಸಿನವರು ಇದ್ದರೆ ಅವರನ್ನು ಕನಿಷ್ಠ 15 ನಿಮಿಷಗಳ ಕಾಲ ನಡೆಸಬೇಕು, ಇದು ಅವರ ಮನಸ್ಥಿತಿ ಮತ್ತು ಜೀವನವನ್ನು ಸುಧಾರಿಸುತ್ತದೆ.
(6 / 7)
75 ವರ್ಷಕ್ಕಿಂತ ಮೇಲ್ಪಟ್ಟವರು 15ರಿಂದ 20 ನಿಮಿಷಗಳ ಕಾಲ ನಡೆದರೆ ಒಳ್ಳೆಯದು. ನಿಮ್ಮನೆಯಲ್ಲಿ ಈ ವಯಸ್ಸಿನವರು ಇದ್ದರೆ ಅವರನ್ನು ಕನಿಷ್ಠ 15 ನಿಮಿಷಗಳ ಕಾಲ ನಡೆಸಬೇಕು, ಇದು ಅವರ ಮನಸ್ಥಿತಿ ಮತ್ತು ಜೀವನವನ್ನು ಸುಧಾರಿಸುತ್ತದೆ.(shutterstock)
ವಾಕಿಂಗ್‌ನಿಂದ ಅನೇಕ ಪ್ರಯೋಜನಗಳಿವೆ. ಇದು ತೂಕವನ್ನು ಸಮತೋಲನಗೊಳಿಸುತ್ತದೆ. ಮಾನಸಿಕ ಒತ್ತಡವನ್ನು ಕಡಿಮೆ ಮಾಡಿ ಮಾನಸಿಕ ಆರೋಗ್ಯಕ್ಕೂ ಕೊಡುಗೆ ನೀಡುತ್ತದೆ. ಜೊತೆಗೆ ಮೂಳೆಗಳು ಮತ್ತು ಸ್ನಾಯುಗಳನ್ನು ಬಲಪಡಿಸುತ್ತದೆ. ನಡಿಗೆಗೆ ಸಾಧ್ಯವಾಗುವ ಎಲ್ಲಾ ಸಮಯವನ್ನು ಸದುಪಯೋಗಿಸಿ.
(7 / 7)
ವಾಕಿಂಗ್‌ನಿಂದ ಅನೇಕ ಪ್ರಯೋಜನಗಳಿವೆ. ಇದು ತೂಕವನ್ನು ಸಮತೋಲನಗೊಳಿಸುತ್ತದೆ. ಮಾನಸಿಕ ಒತ್ತಡವನ್ನು ಕಡಿಮೆ ಮಾಡಿ ಮಾನಸಿಕ ಆರೋಗ್ಯಕ್ಕೂ ಕೊಡುಗೆ ನೀಡುತ್ತದೆ. ಜೊತೆಗೆ ಮೂಳೆಗಳು ಮತ್ತು ಸ್ನಾಯುಗಳನ್ನು ಬಲಪಡಿಸುತ್ತದೆ. ನಡಿಗೆಗೆ ಸಾಧ್ಯವಾಗುವ ಎಲ್ಲಾ ಸಮಯವನ್ನು ಸದುಪಯೋಗಿಸಿ.(shutterstock)

    ಹಂಚಿಕೊಳ್ಳಲು ಲೇಖನಗಳು