logo
ಕನ್ನಡ ಸುದ್ದಿ  /  ಫೋಟೋ ಗ್ಯಾಲರಿ  /  ಪಾತ್ರೆ ತೊಳೆಯುವುದು ದೊಡ್ಡ ಕೆಲಸ ಅನ್ನೋರು ಇಲ್ಕೇಳಿ; ಮಾನಸಿಕ ಒತ್ತಡ ನಿವಾರಣೆಗೆ ಇದಕ್ಕಿಂತ ಒಳ್ಳೆಯ ಮದ್ದು ಇಲ್ಲ

ಪಾತ್ರೆ ತೊಳೆಯುವುದು ದೊಡ್ಡ ಕೆಲಸ ಅನ್ನೋರು ಇಲ್ಕೇಳಿ; ಮಾನಸಿಕ ಒತ್ತಡ ನಿವಾರಣೆಗೆ ಇದಕ್ಕಿಂತ ಒಳ್ಳೆಯ ಮದ್ದು ಇಲ್ಲ

Oct 17, 2024 05:35 PM IST

ನಿಮಗೆ ಮನೆಯಲ್ಲಿ ಪಾತ್ರೆಗಳನ್ನು ತೊಳೆಯುವ ಅಭ್ಯಾಸವಿರಬಹುದು. ಗೃಹಿಣಿಯರು ಇದು ನಿತ್ಯ ಮಾಡಬೇಕಾಗುವ ಕೆಲಸ. ಅಡುಗೆ ಮಾಡಿದ ಪಾತ್ರಗಳನ್ನು ಮನೆಯ ಯಾರಾದರೂ ತೊಳೆಯಬೇಕು. ಇದು ಆರೋಗ್ಯದ ಮೇಲೆ ವಿವಿಧ ರೀತಿ ಪ್ರಭಾವ ಬೀರಬಹುದು ಏಂಬ ಅರಿವು ನಿಮಗಿದೆಯೇ? ಮನಸ್ಸಿನ ಮೇಲೆ ಇದರಿಂದಾಗುವ ಬದಲಾವಣೆಗಳೇನು ಎಂಬ ಕುರಿತು ತಿಳಿಯಿರಿ.

  • ನಿಮಗೆ ಮನೆಯಲ್ಲಿ ಪಾತ್ರೆಗಳನ್ನು ತೊಳೆಯುವ ಅಭ್ಯಾಸವಿರಬಹುದು. ಗೃಹಿಣಿಯರು ಇದು ನಿತ್ಯ ಮಾಡಬೇಕಾಗುವ ಕೆಲಸ. ಅಡುಗೆ ಮಾಡಿದ ಪಾತ್ರಗಳನ್ನು ಮನೆಯ ಯಾರಾದರೂ ತೊಳೆಯಬೇಕು. ಇದು ಆರೋಗ್ಯದ ಮೇಲೆ ವಿವಿಧ ರೀತಿ ಪ್ರಭಾವ ಬೀರಬಹುದು ಏಂಬ ಅರಿವು ನಿಮಗಿದೆಯೇ? ಮನಸ್ಸಿನ ಮೇಲೆ ಇದರಿಂದಾಗುವ ಬದಲಾವಣೆಗಳೇನು ಎಂಬ ಕುರಿತು ತಿಳಿಯಿರಿ.
ಮನೆಯಲ್ಲಿ ಅಡುಗೆ ಪಾತ್ರೆಗಳನ್ನು ತೊಳೆಯುವುದು ಮನಸ್ಸಿನ ಮೇಲೆ ಒಂದು ರೀತಿಯ ಪರಿಣಾಮ ಬೀರುತ್ತದೆ. ಇದು ಹಲವು ಜನರಿಗೆ ತಿಳಿದಿಲ್ಲದಿರಬಹುದು. ಆ ಪ್ರಭಾವವು ಧನಾತ್ಮಕವೇ ಇಲ್ಲ ದೇಹಕ್ಕೆ ನಕಾರಾತ್ಮಕ ಪರಿಣಾಮ ಬೀರುತ್ತಾ ನೋಡೋಣ,
(1 / 8)

ಕೆಲಸದ ಒತ್ತಡದಿಂದಾಗಿ ಅನೇಕ ಜನರು ಆತಂಕ ಅಥವಾ ಮಾನಸಿಕ ಒತ್ತಡದಂಥಾ ಸಮಸ್ಯೆಗಳಿಂದ ಬಳಲುತ್ತಿದ್ದಾರೆ. ಈ ಸಮಸ್ಯೆ ಹೆಚ್ಚಾದಂತೆ, ಇದು ದೇಹದ ಮೇಲೂ ಪರಿಣಾಮ ಬೀರುತ್ತದೆ. ಈ ಸಂದರ್ಭದಲ್ಲಿ ಪಾತ್ರೆಗಳನ್ನು ತೊಳೆಯುವುದರಿಂದ ಬದಲಾವಣೆ ಸಾಧ್ಯವಿದೆ.
(2 / 8)

ಪಾತ್ರೆ ತೊಳೆಯಲು ಹೆಚ್ಚು ದೈಹಿಕ ಶ್ರಮದ ಅಗತ್ಯವಿಲ್ಲ. ಆದರೆ ಸಮಯದ ಕೊರತೆಯಿಂದಾಗಿ ಅನೇಕ ಜನರು ಈ ಕೆಲಸ ಮಾಡಲು ಬಯಸುವುದಿಲ್ಲ. ಆದರೆ, ಪಾತ್ರೆ ತೊಳೆಯುವುದರಿಂದ ಆಗುವ ಪ್ರಯೋಜನ ಕೇಳಿದರೆ, ನೀವು ನಿಮ್ಮ ಅಭ್ಯಾಸ ಬದಲಾಯಿಸಬಹುದು.
(3 / 8)

ಒಂದು ವೇಳೆ ನಿಮಗೆ ಆತಂಕ ಮತ್ತು ಒತ್ತಡ ಹೆಚ್ಚಾದರೆ, ಪಾತ್ರೆಗಳನ್ನು ತೊಳೆಯಿರಿ ಎಂದು ವಿಜ್ಞಾನ ಹೇಳುತ್ತದೆ. ಅಮೆರಿಕದ ಫ್ಲೋರಿಡಾ ಸ್ಟೇಟ್ ಯೂನಿವರ್ಸಿಟಿಯ ಸಂಶೋಧಕರ ಗುಂಪು ನಡೆಸಿದ ಸಮೀಕ್ಷೆಯ ವರದಿಯಲ್ಲಿ ಈ ಕುರಿತು ಹೇಳಲಾಗಿದೆ.
(4 / 8)

ಫ್ಲೋರಿಡಾ ಸ್ಟೇಟ್ ಯೂನಿವರ್ಸಿಟಿಯ ಪ್ರೊಫೆಸರ್ ಆಡಮ್ ಹ್ಯಾನ್ಲೆ ಅವರ ಪ್ರಕಾರ, ಹೆಚ್ಚಿನ ಜನರು ಪಾತ್ರೆಗಳನ್ನು ತೊಳೆಯುವಾಗ ಆ ಕೆಲಸದ ಬಗ್ಗೆ ತುಂಬಾ ಗಮನ ಹರಿಸುತ್ತಾರೆ. ಇದರ ಪರಿಣಾಮವಾಗಿ, ಅವರ ಒತ್ತಡದ ವಿಷಯಗಳು ಅವರ ಆಲೋಚನೆಯಿಂದ ದೂರ ಸರಿಯುತ್ತವೆ. ಇದು ಮಾನಸಿಕ ಆರೋಗ್ಯಕ್ಕೆ ತುಂಬಾ ಒಳ್ಳೆಯದು.
(5 / 8)

ಒಟ್ಟು 51 ವಿದ್ಯಾರ್ಥಿಗಳನ್ನು ದೀರ್ಘಕಾಲ ಗಮನಿಸಿದ ನಂತರ ಸಂಶೋಧಕರು ಈ ತೀರ್ಮಾನಕ್ಕೆ ಬಂದಿದ್ದಾರೆ. ಅವರ ಪ್ರಕಾರ, ಇದು ಪ್ರತಿಯೊಬ್ಬ ವಿದ್ಯಾರ್ಥಿಯ ಮಾನಸಿಕ ಆರೋಗ್ಯದ ಮೇಲೆ ಭಾರಿ ಪರಿಣಾಮ ಬೀರಿದೆ.
(6 / 8)

ಪಾತ್ರೆಗಳನ್ನು ತೊಳೆಯುವಾಗ ಸಾಬೂನಿನ ವಾಸನೆ ಮತ್ತು ನೀರಿನ ತಾಪಮಾನವೂ ತುಂಬಾ ಉಪಯುಕ್ತವಾಗುತ್ತದೆ ಎಂದು ಪ್ರೊಫೆಸರ್ ಹ್ಯಾನ್ಲೆ ಹೇಳುತ್ತಾರೆ. ಇವು ಸುಲಭವಾಗಿ ಜನರ ಗಮನವನ್ನು ಸೆಳೆಯುತ್ತವೆ. ಪರಿಣಾಮವಾಗಿ, ಒತ್ತಡ, ಆತಂಕ ಅಥವಾ ಅವರ ಅಸಮಾಧಾನದ ಭಾವನೆಗಳು ಸುಲಭವಾಗಿ ಕಡಿಮೆಯಾಗುತ್ತವೆ. ಇದನ್ನು ಸುಮಾರು 27 ಪ್ರತಿಶತಕ್ಕೆ ಇಳಿಸಬಹುದು.
(7 / 8)

ಹೀಗಾಗಿ ಮಾನಸಿಕ ಆರೋಗ್ಯ ಸುಧಾರಣೆಗಾಗಿ ನೀವು ಪಾತ್ರೆ ತೊಳೆಯುವತ್ತ ಯೋಚಿಸಬಹುದು. ಸಾಮಾನ್ಯವಾಗಿ ಪುರುಷರು ಈ ಕೆಲಸ ಮಾಡುವುದು ಕಡಿಮೆ. ನಿಮಗೇನಾದರೂ ಮಾನಸಿಕ ಒತ್ತಡ ಹೆಚ್ಚಿದ್ದರೆ, ಇಂದಿನಿಂದ ನೀವು ಕೂಡಾ ಮನೆಯ ಪಾತ್ರೆಗಳನ್ನು ತೊಳೆಯುವತ್ತ ಗಮನ ಹರಿಸಬಹುದು.
(8 / 8)

    ಹಂಚಿಕೊಳ್ಳಲು ಲೇಖನಗಳು