logo
ಕನ್ನಡ ಸುದ್ದಿ  /  ಫೋಟೋ ಗ್ಯಾಲರಿ  /  Iphone 16: ಹೊಸ ಐಫೋನ್ 16 ಸೀರೀಸ್ ಲಾಂಚ್ ವೇಳೆ ಆಪಲ್ ಹೈಲೈಟ್ ಮಾಡದ ಪ್ರಮುಖ ಫೀಚರ್‌ಗಳಿವು

iPhone 16: ಹೊಸ ಐಫೋನ್ 16 ಸೀರೀಸ್ ಲಾಂಚ್ ವೇಳೆ ಆಪಲ್ ಹೈಲೈಟ್ ಮಾಡದ ಪ್ರಮುಖ ಫೀಚರ್‌ಗಳಿವು

Sep 15, 2024 12:57 PM IST

ಇತ್ತೀಚೆಗೆ ನಡೆದ ಆಪಲ್ ಈವೆಂಟ್ 2024ರಲ್ಲಿ ಐಫೋನ್ 16 ಸೀರೀಸ್‌ ಫೋನ್‌ಗಳನ್ನು ಲಾಂಚ್‌ ಮಾಡಲಾಯ್ತು. ಹಲವು ಹೊಸ ಫೀಚರ್‌ಗಳೊಂದಿಗೆ ಹೊಸ ಮಾದರಿ ಬರಲು ಸಜ್ಜಾಗಿದೆ. ಆದರೆ, ಈ ಫೋನ್‌ನಲ್ಲಿ ಹೆಚ್ಚು ಹೈಲೈಟ್ ಮಾಡದ ಕೆಲವೊಂದು ವೈಶಿಷ್ಟ್ಯಗಳಿವೆ.

  • ಇತ್ತೀಚೆಗೆ ನಡೆದ ಆಪಲ್ ಈವೆಂಟ್ 2024ರಲ್ಲಿ ಐಫೋನ್ 16 ಸೀರೀಸ್‌ ಫೋನ್‌ಗಳನ್ನು ಲಾಂಚ್‌ ಮಾಡಲಾಯ್ತು. ಹಲವು ಹೊಸ ಫೀಚರ್‌ಗಳೊಂದಿಗೆ ಹೊಸ ಮಾದರಿ ಬರಲು ಸಜ್ಜಾಗಿದೆ. ಆದರೆ, ಈ ಫೋನ್‌ನಲ್ಲಿ ಹೆಚ್ಚು ಹೈಲೈಟ್ ಮಾಡದ ಕೆಲವೊಂದು ವೈಶಿಷ್ಟ್ಯಗಳಿವೆ.
ವೇಗದ ಮ್ಯಾಗ್‌ಸೇಫ್ ಚಾರ್ಜಿಂಗ್: ಐಫೋನ್ 16 ಸೀರೀಸ್‌ ಬಿಡುಗಡೆಯೊಂದಿಗೆ, ಕಂಪನಿಯು ಚಾರ್ಜಿಂಗ್ ಪ್ರಕ್ರಿಯೆ ವೇಗಗೊಳಿಸುವ ಪ್ರಮುಖ ವೈರ್‌ಲೆಸ್ ಚಾರ್ಜಿಂಗ್ ಅಪ್ಡೇಟ್ ಘೋಷಿಸಿತು. ಆಪಲ್ ಐಫೋನ್ 16ರಲ್ಲಿ 25 ವ್ಯಾಟ್ ವೈರ್‌ಲೆಸ್ ಚಾರ್ಜಿಂಗ್ ಮತ್ತು ಕ್ಯೂಐ2 ಚಾರ್ಜರ್‌ಗಳಿಗೆ 15 ವ್ಯಾಟ್‌ವರೆಗೆ ಚಾರ್ಜಿಂಗ್ ಘೋಷಿಸಿದೆ. ಇದು ಐಫೋನ್ 16 ಬಳಕೆದಾರರು ವೈರ್‌ಲೆಸ್ ಚಾರ್ಜ್ ಮಾಡುವಾಗ ವೇಗದ ಚಾರ್ಜಿಂಗ್ ಆನಂದಿಸಲು ಅವಕಾಶ ಮಾಡಿಕೊಡುತ್ತದೆ.
(1 / 5)
ವೇಗದ ಮ್ಯಾಗ್‌ಸೇಫ್ ಚಾರ್ಜಿಂಗ್: ಐಫೋನ್ 16 ಸೀರೀಸ್‌ ಬಿಡುಗಡೆಯೊಂದಿಗೆ, ಕಂಪನಿಯು ಚಾರ್ಜಿಂಗ್ ಪ್ರಕ್ರಿಯೆ ವೇಗಗೊಳಿಸುವ ಪ್ರಮುಖ ವೈರ್‌ಲೆಸ್ ಚಾರ್ಜಿಂಗ್ ಅಪ್ಡೇಟ್ ಘೋಷಿಸಿತು. ಆಪಲ್ ಐಫೋನ್ 16ರಲ್ಲಿ 25 ವ್ಯಾಟ್ ವೈರ್‌ಲೆಸ್ ಚಾರ್ಜಿಂಗ್ ಮತ್ತು ಕ್ಯೂಐ2 ಚಾರ್ಜರ್‌ಗಳಿಗೆ 15 ವ್ಯಾಟ್‌ವರೆಗೆ ಚಾರ್ಜಿಂಗ್ ಘೋಷಿಸಿದೆ. ಇದು ಐಫೋನ್ 16 ಬಳಕೆದಾರರು ವೈರ್‌ಲೆಸ್ ಚಾರ್ಜ್ ಮಾಡುವಾಗ ವೇಗದ ಚಾರ್ಜಿಂಗ್ ಆನಂದಿಸಲು ಅವಕಾಶ ಮಾಡಿಕೊಡುತ್ತದೆ.(Apple)
45 ವ್ಯಾಟ್ ವೈರ್ಡ್ ಚಾರ್ಜಿಂಗ್: ಐಫೋನ್ 16 ಮಾದರಿಗಳು 45 ವ್ಯಾಟ್ ಚಾರ್ಜಿಂಗ್ ಸಾಮರ್ಥ್ಯವನ್ನು ಹೊಂದಿರುತ್ತವೆ ಎಂದು ಆಪಲ್ ಬಹಿರಂಗಪಡಿಸಿದೆ. ಇದು ಚಾರ್ಜಿಂಗ್ ವೇಗವನ್ನು ಹೆಚ್ಚಿಸುತ್ತದೆ. ಇದರೊಂದಿಗೆ ಕಂಪನಿಯು ವೈರ್‌ಲೆಸ್ ಮತ್ತು ವೈರ್ಡ್ ಚಾರ್ಜಿಂಗ್ ಅಪ್ಡೇಟ್‌ಗಳನ್ನು ಘೋಷಿಸಿದೆ.
(2 / 5)
45 ವ್ಯಾಟ್ ವೈರ್ಡ್ ಚಾರ್ಜಿಂಗ್: ಐಫೋನ್ 16 ಮಾದರಿಗಳು 45 ವ್ಯಾಟ್ ಚಾರ್ಜಿಂಗ್ ಸಾಮರ್ಥ್ಯವನ್ನು ಹೊಂದಿರುತ್ತವೆ ಎಂದು ಆಪಲ್ ಬಹಿರಂಗಪಡಿಸಿದೆ. ಇದು ಚಾರ್ಜಿಂಗ್ ವೇಗವನ್ನು ಹೆಚ್ಚಿಸುತ್ತದೆ. ಇದರೊಂದಿಗೆ ಕಂಪನಿಯು ವೈರ್‌ಲೆಸ್ ಮತ್ತು ವೈರ್ಡ್ ಚಾರ್ಜಿಂಗ್ ಅಪ್ಡೇಟ್‌ಗಳನ್ನು ಘೋಷಿಸಿದೆ.(AFP)
ವೈ-ಫೈ 7: ಐಫೋನ್ 16 ಸರಣಿಯಲ್ಲಿ ಸಂಪರ್ಕವನ್ನು ವೈ-ಫೈ 6ಇ ನಿಂದ ವೈ-ಫೈ 7 ತಂತ್ರಜ್ಞಾನಕ್ಕೆ ನವೀಕರಿಸಿದೆ. ಇದು ಬಳಕೆದಾರರಿಗೆ ವರ್ಧಿತ ಸ್ಥಿರತೆಯೊಂದಿಗೆ ವೇಗವಾಗಿ ಡೌನ್ಲೋಡ್ ಮತ್ತು ಅಪ್ಲೋಡ್ ವೇಗವನ್ನು ಒದಗಿಸುತ್ತದೆ. ಮುಖ್ಯವಾಗಿ, ಇದು ವೈ-ಫೈ 7 ಅನ್ನು ಒಳಗೊಂಡ ಮೊದಲ ಆಪಲ್ ಸಾಧನವಾಗಿದೆ.
(3 / 5)
ವೈ-ಫೈ 7: ಐಫೋನ್ 16 ಸರಣಿಯಲ್ಲಿ ಸಂಪರ್ಕವನ್ನು ವೈ-ಫೈ 6ಇ ನಿಂದ ವೈ-ಫೈ 7 ತಂತ್ರಜ್ಞಾನಕ್ಕೆ ನವೀಕರಿಸಿದೆ. ಇದು ಬಳಕೆದಾರರಿಗೆ ವರ್ಧಿತ ಸ್ಥಿರತೆಯೊಂದಿಗೆ ವೇಗವಾಗಿ ಡೌನ್ಲೋಡ್ ಮತ್ತು ಅಪ್ಲೋಡ್ ವೇಗವನ್ನು ಒದಗಿಸುತ್ತದೆ. ಮುಖ್ಯವಾಗಿ, ಇದು ವೈ-ಫೈ 7 ಅನ್ನು ಒಳಗೊಂಡ ಮೊದಲ ಆಪಲ್ ಸಾಧನವಾಗಿದೆ.(Apple)
ಕ್ವಿಕ್‌ಟೇಕ್ ಅಪ್ಡೇಟ್‌: ಆಪಲ್ ತನ್ನ ಕ್ವಿಕ್‌ಟೇಕ್ ಅನ್ನು 60 ಎಫ್ಪಿಎಸ್ ಮತ್ತು ಡಾಲ್ಬಿ ವಿಷನ್ ಬೆಂಬಲದೊಂದಿಗೆ 1080ಪಿಕ್ಸೆಲ್‌ನಿಂದ 4ಕೆ ರೆಸಲ್ಯೂಶನ್ ವಿಡಿಯೊಗೆ ನವೀಕರಿಸಿದೆ. ಉತ್ತಮ ಗುಣಮಟ್ಟದ ವಿಡಿಯೊಗಳನ್ನು ಸೆರೆಹಿಡಿಯಲು ಡೀಫಾಲ್ಟ್ ಫೋಟೋ ಮೋಡ್‌ನಲ್ಲಿ ವಿಡಿಯೊ ಶೂಟ್‌ ಮಾಡಲು ಅವಕಾಶವಿದೆ.
(4 / 5)
ಕ್ವಿಕ್‌ಟೇಕ್ ಅಪ್ಡೇಟ್‌: ಆಪಲ್ ತನ್ನ ಕ್ವಿಕ್‌ಟೇಕ್ ಅನ್ನು 60 ಎಫ್ಪಿಎಸ್ ಮತ್ತು ಡಾಲ್ಬಿ ವಿಷನ್ ಬೆಂಬಲದೊಂದಿಗೆ 1080ಪಿಕ್ಸೆಲ್‌ನಿಂದ 4ಕೆ ರೆಸಲ್ಯೂಶನ್ ವಿಡಿಯೊಗೆ ನವೀಕರಿಸಿದೆ. ಉತ್ತಮ ಗುಣಮಟ್ಟದ ವಿಡಿಯೊಗಳನ್ನು ಸೆರೆಹಿಡಿಯಲು ಡೀಫಾಲ್ಟ್ ಫೋಟೋ ಮೋಡ್‌ನಲ್ಲಿ ವಿಡಿಯೊ ಶೂಟ್‌ ಮಾಡಲು ಅವಕಾಶವಿದೆ.(Bloomberg)
ಈ ನವೀಕರಣಗಳ ಹೊರತಾಗಿ, ಆಪಲ್ ಐಫೋನ್ 16ನಲ್ಲಿ ಹೊಸ ಎ18 ಸರಣಿ ಚಿಪ್ಸೆಟ್, ಆಪಲ್ ಇಂಟೆಲಿಜೆನ್ಸ್, ಹೊಸ ಕ್ಯಾಮೆರಾಗಳು, ಕ್ಯಾಮೆರಾ ನಿಯಂತ್ರಣ ಬಟನ್ ಮತ್ತು ಹೊಸ ವಿನ್ಯಾಸದಂತಹ ಹಲವಾರು ಅಪ್ಡೇಟ್‌ಗಳಿವೆ.
(5 / 5)
ಈ ನವೀಕರಣಗಳ ಹೊರತಾಗಿ, ಆಪಲ್ ಐಫೋನ್ 16ನಲ್ಲಿ ಹೊಸ ಎ18 ಸರಣಿ ಚಿಪ್ಸೆಟ್, ಆಪಲ್ ಇಂಟೆಲಿಜೆನ್ಸ್, ಹೊಸ ಕ್ಯಾಮೆರಾಗಳು, ಕ್ಯಾಮೆರಾ ನಿಯಂತ್ರಣ ಬಟನ್ ಮತ್ತು ಹೊಸ ವಿನ್ಯಾಸದಂತಹ ಹಲವಾರು ಅಪ್ಡೇಟ್‌ಗಳಿವೆ.(Apple)

    ಹಂಚಿಕೊಳ್ಳಲು ಲೇಖನಗಳು