logo
ಕನ್ನಡ ಸುದ್ದಿ  /  ಫೋಟೋ ಗ್ಯಾಲರಿ  /  ವಿವೋ ವಿ 40ಇ ಫಸ್ಟ್ ಇಂಪ್ರೆಷನ್ ಹೇಗಿದೆ; ಸ್ಲಿಮ್ ವಿನ್ಯಾಸದ ಸ್ಮಾರ್ಟ್‌ಫೋನ್‌ ಲುಕ್‌, ಫೀಚರ್ಸ್

ವಿವೋ ವಿ 40ಇ ಫಸ್ಟ್ ಇಂಪ್ರೆಷನ್ ಹೇಗಿದೆ; ಸ್ಲಿಮ್ ವಿನ್ಯಾಸದ ಸ್ಮಾರ್ಟ್‌ಫೋನ್‌ ಲುಕ್‌, ಫೀಚರ್ಸ್

Sep 28, 2024 10:16 PM IST

Vivo V40e: ವಿವೋ ವಿ40ಇ ಬಿಡುಗಡೆಯಾಗಿದ್ದು, ಗ್ರಾಹಕರಲ್ಲಿ ಮೊದಲ ಇಂಪ್ರೆಷನ್ ಮೂಡಿಸಿದೆ. 30,000 ರೂಪಾಯಿ ಒಳಗಿನ ಈ ಹೊಸ ಸ್ಮಾರ್ಟ್ ಫೋನ್ ನಿಮ್ಮ ಮಧ್ಯಮ ಬಜೆಟ್‌ ಖರೀದಿಗೆ ಉತ್ತಮ ಆಯ್ಕೆ. ಫೋನ್‌ ಹೇಗಿದೆ, ಅದರ ವಿನ್ಯಾಸ, ಬ್ಯಾಟರಿ ಸೇರಿದಂತೆ ವಿಶೇಷಣಗಳು ಹೀಗಿವೆ.

  • Vivo V40e: ವಿವೋ ವಿ40ಇ ಬಿಡುಗಡೆಯಾಗಿದ್ದು, ಗ್ರಾಹಕರಲ್ಲಿ ಮೊದಲ ಇಂಪ್ರೆಷನ್ ಮೂಡಿಸಿದೆ. 30,000 ರೂಪಾಯಿ ಒಳಗಿನ ಈ ಹೊಸ ಸ್ಮಾರ್ಟ್ ಫೋನ್ ನಿಮ್ಮ ಮಧ್ಯಮ ಬಜೆಟ್‌ ಖರೀದಿಗೆ ಉತ್ತಮ ಆಯ್ಕೆ. ಫೋನ್‌ ಹೇಗಿದೆ, ಅದರ ವಿನ್ಯಾಸ, ಬ್ಯಾಟರಿ ಸೇರಿದಂತೆ ವಿಶೇಷಣಗಳು ಹೀಗಿವೆ.
ವಿ 40 ಸರಣಿಯಲ್ಲಿ ಇತ್ತೀಚೆಗಷ್ಟೇ ಮಾರುಕಟ್ಟೆಗೆ ಲಗ್ಗೆ ಇಟ್ಟ ಫೋನ್‌ ವಿವೋ ವಿ40 ಇ. ಇದು ವಿವೋ ವಿ 40 ಸರಣಿಯನ್ನು ಹೋಲುವ ವಿನ್ಯಾಸವನ್ನೇ ಉಳಿಸಿಕೊಂಡಿದ್ದರೂ, ಫೋನ್‌ಗೆ ಬಳಸಿರುವ ಮಟೀರಿಯಲ್ ಮತ್ತು ಕ್ಯಾಮೆರಾ ಮಾಡ್ಯೂಲ್‌ನಲ್ಲಿ ವ್ಯತ್ಯಾಸಗಳಿವೆ. ವಿವೋ ವಿ 40 ಇ ಬಾಡಿ ಪ್ಲಾಸ್ಟಿಕ್‌ ಮಟೀರಿಯಲ್‌ನದ್ದು. ಹೀಗಾಗಿ ನೋಡಲು ತುಂಬಾ ಪ್ರೀಮಿಯಂ ಅನಿಸುವುದಿಲ್ಲ. ಅಲ್ಲದೆ ಕೈಯಲ್ಲಿ ಸಾಕಷ್ಟು ಜಾರುತ್ತದೆ. ಮಿಂಟ್ ಗ್ರೀನ್ ಬಣ್ಣ ಆಕರ್ಷಕವಾಗಿದೆ.
(1 / 5)
ವಿ 40 ಸರಣಿಯಲ್ಲಿ ಇತ್ತೀಚೆಗಷ್ಟೇ ಮಾರುಕಟ್ಟೆಗೆ ಲಗ್ಗೆ ಇಟ್ಟ ಫೋನ್‌ ವಿವೋ ವಿ40 ಇ. ಇದು ವಿವೋ ವಿ 40 ಸರಣಿಯನ್ನು ಹೋಲುವ ವಿನ್ಯಾಸವನ್ನೇ ಉಳಿಸಿಕೊಂಡಿದ್ದರೂ, ಫೋನ್‌ಗೆ ಬಳಸಿರುವ ಮಟೀರಿಯಲ್ ಮತ್ತು ಕ್ಯಾಮೆರಾ ಮಾಡ್ಯೂಲ್‌ನಲ್ಲಿ ವ್ಯತ್ಯಾಸಗಳಿವೆ. ವಿವೋ ವಿ 40 ಇ ಬಾಡಿ ಪ್ಲಾಸ್ಟಿಕ್‌ ಮಟೀರಿಯಲ್‌ನದ್ದು. ಹೀಗಾಗಿ ನೋಡಲು ತುಂಬಾ ಪ್ರೀಮಿಯಂ ಅನಿಸುವುದಿಲ್ಲ. ಅಲ್ಲದೆ ಕೈಯಲ್ಲಿ ಸಾಕಷ್ಟು ಜಾರುತ್ತದೆ. ಮಿಂಟ್ ಗ್ರೀನ್ ಬಣ್ಣ ಆಕರ್ಷಕವಾಗಿದೆ.(Aishwarya Panda/ HT Tech)
ವಿವೋ ವಿ 40 ಇ 6.77-ಇಂಚಿನ 3ಡಿ ಕರ್ವ್ಡ್ ಡಿಸ್‌ಪ್ಲೇ ಹೊಂದಿದೆ. ಇದು ಆಹ್ಲಾದಕರ ಮತ್ತು ಎಚ್‌ಡಿ ವೀಕ್ಷಣೆಯ ಅನುಭವ ನೀಡುತ್ತದೆ. ಈಗಿನಂತೆ, ಸ್ಮಾರ್ಟ್ಫೋನ್ 120 ಹೆರ್ಟ್ಜ್ ರಿಫ್ರೆಶ್ ರೇಟ್‌ ಹೊಂದಿದೆ.
(2 / 5)
ವಿವೋ ವಿ 40 ಇ 6.77-ಇಂಚಿನ 3ಡಿ ಕರ್ವ್ಡ್ ಡಿಸ್‌ಪ್ಲೇ ಹೊಂದಿದೆ. ಇದು ಆಹ್ಲಾದಕರ ಮತ್ತು ಎಚ್‌ಡಿ ವೀಕ್ಷಣೆಯ ಅನುಭವ ನೀಡುತ್ತದೆ. ಈಗಿನಂತೆ, ಸ್ಮಾರ್ಟ್ಫೋನ್ 120 ಹೆರ್ಟ್ಜ್ ರಿಫ್ರೆಶ್ ರೇಟ್‌ ಹೊಂದಿದೆ.(Aishwarya Panda/ HT Tech)
ಕಾರ್ಯಕ್ಷಮತೆಯ ಬಗ್ಗೆ ಹೇಳುವುದಾದರೆ, ವಿವೋ ವಿ40 ಇ ಮೀಡಿಯಾಟೆಕ್ ಡೈಮೆನ್ಸಿಟಿ 7300 ಪ್ರೊಸೆಸರ್‌ನಿಂದ ನಿಯಂತ್ರಿಸಲ್ಪಡುತ್ತದೆ. ವಿಡಿಯೋ ಸ್ಕ್ರಾಲ್ ಮಾಡುವುದು, ಸಂದೇಶ ಕಳುಹಿಸುವುದು, ವಿಡಿಯೊ ನೋಡುವುದು ಮತ್ತು ಇತರ ಕಾರ್ಯಗಳನ್ನು ಸುಲಭವಾಗಿ ನಿರ್ವಹಿಸಬಹುದು.
(3 / 5)
ಕಾರ್ಯಕ್ಷಮತೆಯ ಬಗ್ಗೆ ಹೇಳುವುದಾದರೆ, ವಿವೋ ವಿ40 ಇ ಮೀಡಿಯಾಟೆಕ್ ಡೈಮೆನ್ಸಿಟಿ 7300 ಪ್ರೊಸೆಸರ್‌ನಿಂದ ನಿಯಂತ್ರಿಸಲ್ಪಡುತ್ತದೆ. ವಿಡಿಯೋ ಸ್ಕ್ರಾಲ್ ಮಾಡುವುದು, ಸಂದೇಶ ಕಳುಹಿಸುವುದು, ವಿಡಿಯೊ ನೋಡುವುದು ಮತ್ತು ಇತರ ಕಾರ್ಯಗಳನ್ನು ಸುಲಭವಾಗಿ ನಿರ್ವಹಿಸಬಹುದು.(Aishwarya Panda/ HT Tech)
ಛಾಯಾಗ್ರಹಣಕ್ಕಾಗಿ, ವಿವೋ ವಿ 40 ಇ ಡ್ಯುಯಲ್ ಕ್ಯಾಮೆರಾ ಸೆಟಪ್ ಹೊಂದಿದೆ. ಇದು ಸೋನಿ ಐಎಂಎಕ್ಸ್ 882 ಮತ್ತು 2 ಎಕ್ಸ್ ಪೋರ್ಟ್ರೇಟ್ ಮೋಡ್‌ನೊಂದಿಗೆ 50 ಎಂಪಿ ಮುಖ್ಯ ಕ್ಯಾಮೆರಾ ಮತ್ತು 8 ಎಂಪಿ ಅಲ್ಟ್ರಾವೈಡ್ ಕ್ಯಾಮೆರಾ ಒಳಗೊಂಡಿದೆ.
(4 / 5)
ಛಾಯಾಗ್ರಹಣಕ್ಕಾಗಿ, ವಿವೋ ವಿ 40 ಇ ಡ್ಯುಯಲ್ ಕ್ಯಾಮೆರಾ ಸೆಟಪ್ ಹೊಂದಿದೆ. ಇದು ಸೋನಿ ಐಎಂಎಕ್ಸ್ 882 ಮತ್ತು 2 ಎಕ್ಸ್ ಪೋರ್ಟ್ರೇಟ್ ಮೋಡ್‌ನೊಂದಿಗೆ 50 ಎಂಪಿ ಮುಖ್ಯ ಕ್ಯಾಮೆರಾ ಮತ್ತು 8 ಎಂಪಿ ಅಲ್ಟ್ರಾವೈಡ್ ಕ್ಯಾಮೆರಾ ಒಳಗೊಂಡಿದೆ.(Aishwarya Panda/ HT Tech)
ವಿವೋ ವಿ40 ಇ 5500 ಎಂಎಎಚ್ ಬ್ಯಾಟರಿಯನ್ನು ಬೆಂಬಲಿಸುತ್ತದೆ. ಇದು ಉತ್ತಮ ಬ್ಯಾಟರಿ ಬಾಳಿಕೆ ಕೊಡುತ್ತದೆ. ಕಡಿಮೆ ಮತ್ತು ಮಧ್ಯಮ ಬಳಕೆದಾರರಿಗೆ ಸ್ಮಾರ್ಟ್ಫೋನ್ ಒಂದು ದಿನಕ್ಕಿಂತ ಹೆಚ್ಚು ಕಾಲ ಚಾರ್ಜ್‌ ಬರುತ್ತದೆ. ಹೆಚ್ಚುವರಿಯಾಗಿ, 80 ವ್ಯಾಟ್ ಚಾರ್ಜರ್ ಸುಮಾರು 40ರಿಂದ 45 ನಿಮಿಷಗಳಲ್ಲಿ ಫೋನ್‌ ಚಾರ್ಜ್ ಮಾಡುತ್ತದೆ. 
(5 / 5)
ವಿವೋ ವಿ40 ಇ 5500 ಎಂಎಎಚ್ ಬ್ಯಾಟರಿಯನ್ನು ಬೆಂಬಲಿಸುತ್ತದೆ. ಇದು ಉತ್ತಮ ಬ್ಯಾಟರಿ ಬಾಳಿಕೆ ಕೊಡುತ್ತದೆ. ಕಡಿಮೆ ಮತ್ತು ಮಧ್ಯಮ ಬಳಕೆದಾರರಿಗೆ ಸ್ಮಾರ್ಟ್ಫೋನ್ ಒಂದು ದಿನಕ್ಕಿಂತ ಹೆಚ್ಚು ಕಾಲ ಚಾರ್ಜ್‌ ಬರುತ್ತದೆ. ಹೆಚ್ಚುವರಿಯಾಗಿ, 80 ವ್ಯಾಟ್ ಚಾರ್ಜರ್ ಸುಮಾರು 40ರಿಂದ 45 ನಿಮಿಷಗಳಲ್ಲಿ ಫೋನ್‌ ಚಾರ್ಜ್ ಮಾಡುತ್ತದೆ. (Aishwarya Panda/ HT Tech)

    ಹಂಚಿಕೊಳ್ಳಲು ಲೇಖನಗಳು